Showing posts with label ನನ್ನ ಸ್ವರಚಿತ ಕಿರು ಕವನಗಳು. Show all posts
Showing posts with label ನನ್ನ ಸ್ವರಚಿತ ಕಿರು ಕವನಗಳು. Show all posts

Thursday, April 17, 2014

ಬಿಡಿಸಲಾಗದ ಬೆಲೆ
ಜೀವ ಜೀವದ ನೆಲೆ
ಉತ್ತಮ ಜೀವನವೇ ಒಂದು ಕಲೆ
ಅದಮ ಜೀವನವೇ ಕೊಲೆ
ಉತ್ತಮ ಸರ್ವೊತ್ತಮರ ನೆಲೆ
ಸೃಷ್ಟಿಕರ್ತನ ಸಮಯದ ಬಲೆ

ಕೂತು ಉಣ್ಣುವವನಿಗೆ ಕುಡಿಕೆಹೊನ್ನು ಸಾಲದು
ಗಾದೆ ಮಾತು ಈಗ ಹಳೆಯದಾಯಿತು
ಕೂತು ಉಂಡರು ಸರಿ ಮನಸು ಬಸಿಯುವುದು
ತಲೆಗೆ ಹೊಳೆಯುವುದು ಒಂದು
ಮತ್ತೊಂದು ಗಾದೆ ಉದ್ಯೋಗಂ ಪುರುಷ ಲಕ್ಷಣಂ


ಅಹ್ಹಾ ನಿನ್ನ ಮಾತು
ಅದು ನಾ ಕಾಣದ ಮುತ್ತು
ಸಂಭ್ರಮಿಸಿ ಹೇಳುವೆ ಒಂದು ಮಾತು
ಅದೇ ನೀ ನನಗೆ ಅಚ್ಚು ಮೆಚ್ಚು

ಸರಿಗಮ ಎನ್ನುವುದು ಜೀವನದ ಅರ್ಥ ಮಾಡೀಸುವ ಸುಧಿನ
ಪದನಿಸ ಎನ್ನುವುದು ನಾ ನಿನಗೆ ಕೊಡುವ ಸ್ನೇಹದ ನಮನ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014

          ಕನ್ನಡ ನಾಡು
ಕೈ ಮುಗಿದು ನಮಿಸಿ ಇದು ಕನ್ನಡದ ನಾಡು
ಕವಿ ಕಲಿಗಳು ಹುಟ್ಟಿ ಬೆಳದೆ ಹೆಮ್ಮೆಯ ಕಲಿನಾಡು
ಶ್ರೀಗಂಧದ ಕಂಪುಳ್ಳ ಚೆಂದದ ಸಿರಿ ನಾಡು
ಸಿರಿವಂತಿಕೆ ಚಿನ್ನ ಬೆಳೆವ ಚಿನ್ನದ ಕರು ನಾಡು

ಕಸ್ತೂರಿಯ ಕಂಪು ನಮ್ಮ ಕನ್ನಡದ ಭಾಷೆ
          ಕೋಟಿ ಕೋಟಿ ಜನರ ಮದ್ಯೆ ಗುನುಗುವ ಈ ಭಾಷೆ
          ಶತಮಾನದ ಇತಿಹಾಸದ ಶ್ರೇಷ್ಠವಾದ ಭಾಷೆ
        ಸೀಮೆ ದಾಟಿ ಮೆರೆಯುತ್ತಿರುವ ಸಿರಿವಂತದ ಭಾಷೆ

ಜ್ನಾನಪೀಠ ಹೆಚ್ಚು ಪಡೆದ ಭಾಷೆ ನಮ್ಮ ಕನ್ನಡ
ಜ್ನಾನ ದಾಹ ಇಂಗಿಸುವ ದೇಶ ಭಾಷೆ ಕನ್ನಡ
ಜಾತಿ ಕುಲವ ಮೆಟ್ಟಿ ಮೆರೆವ ಭವ್ಯ ಭಾಷೆ ಕನ್ನಡ
ಜವರಾಯನ ಹಿಮ್ಮೆಟ್ಟಿಸುವ ಧೈರ್ಯಭಾಷೆ ಕನ್ನಡ

ಸರ್ವಜ್ನನ ಸತ್ವದ ಸಿರಿ ಸಾರ್ವಭೌಮ ನಾಡು
ಬಸವಣ್ಣನ ಬಾವೈಕ್ಯದ ಬಾಂಧವ್ಯದ ನಾಡು
ಹೆಸರಿನಲ್ಲಿ ಕರುಣೆಯುಳ್ಳ ಕನ್ನಡ ಸಿರಿ ನಾಡು
ಉಸಿರಾಯಿತು ನಮ್ಮೆಲ್ಲರ ಹೆಮ್ಮೆಯ ಕರುನಾಡು

ಕುವೆಂಪು ಕಂಡ ನಾಡು ಕರುನಾಡ ಕನ್ನಡ ನಾಡು
ನಾಕುತಂತಿ ಮೀಟುತಿರುವ ಬೇಂದ್ರೆಯ ಸಿರಿನಾಡು
ಮೂಕಜ್ಜಿಯು ಕನಸು ಕಂಡ ಕಾರಂತರ ನಾಡು
ಕನ್ನಡವೇ ಆಸ್ತಿಯೆಂದ ಮಾಸ್ತಿಯ ಮಹಾನಾಡು
ಭರತಮಾತೆ ತಿಲಕತೊಟ್ಟ ಗೋಕಾಕರ ನಾಡು
ಸಾಹಿತ್ಯದ ಸಿರಿಹೊತ್ತ ಮೂರ್ತಿಯ ಸವಿನಾಡು
ಸಮಗ್ರತೆಯ ಸಫಲವಾದ ಗಿರೀಶರ ಗಿರಿನಾಡು
ಚಂದ್ರನನ್ನೇ ಶೇಖರಿಸಿದ ಚಂದದ ಸಿರಿನಾಡು

ಕಾವೇರಿ ಹರಿಯುತ್ತಿರುವ ಪುಣ್ಯಭೂಮಿ ನಮ್ಮದು
ಕಾವಿತೊಟ್ಟ ಋಷಿಮುನಿಗಳ ಸ್ವರ್ಗ ಭೂಮಿ ನಮ್ಮದು
ದಿಟ್ಟ ದೀರ ಯೋದರಗಳ ಯೋಗ ಭೂಮಿ ನಮ್ಮದು
ದಿಕ್ಕು ದೆಸೆಗೆ ಕರುಣೆ ತೋರೋ ದಿವ್ಯ ಭೂಮಿ ನಮ್ಮದು
ಬಂಗಾರವ ಬೆಳೆಯಿತ್ತಿರುವ ಸ್ವರ್ಣ ಭೂಮಿ ನಮ್ಮದು
ಭಾವೈಕ್ಯದಿ ಮೆರೆತ್ತಿರುವ ಭವ್ಯ ಭೂಮಿ ನಮ್ಮದು
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014
ಸ್ನೇಹ ಬಂಧನಂ ಸೇತು ಬಂಧನಂ
ಸೇತು ಬಂಧನಂ ಸ್ನೇಹಬಂಧನಂ
ಸ್ನೇಹಂ ಶುಭಂ ಸ್ನೇಹಂ ಸಂಕಲ್ಪಂ
ಸ್ನೇಹ ಬ್ರಹ್ಮಂ ನಿರಂತರಂ ನಿಜಗುಣಂ
ಸ್ನೇಹಂ ನಿರಂತರಂ ಚಿರಂಜೀವಿಯಂ

ಕಣ್ಣುಮದ್ಯದ ಹುಣ್ಣು ಕಾಡುವುದಿಲ್ಲ ಎಂದಿಗೂ
ಕನ್ನಡಿಯೊಳಗಿನ ಗಂಟು ಸಿಗುವಿದಿಲ್ಲ ಎಂದಿಗೂ
ಅದರೂ ಬೇಕೆ ಬೇಕು ಕನ್ನಡಿ ದೆಹ ಸಿರಿಯ ನೋಡಲು
ಸತ್ಯವಾದ ಮಾತು ಇದು ಆತ್ಮತಿಳಿಯಲು ಬೇಕು ಸ್ನೇಹದ ನಂಟು


ದೇಹದ ಅಣು ಅಣುವಿನಲ್ಲೂ ತುಂಬಿದೆ ಮಣ್ಣು
ಕಾರಣ ದೇಹದ ಮೂಲವೇ ಮಣ್ಣು
ಮುಂದೆ ಸೇರುವುದು ದೇಹ ಇದೇ ಮಣ್ಣು
ಪಂಚಭೂತಗಳ ಪ್ರಥಮ ಮಣ್ಣು
ಪರಮ ಕಾರ್ಯಕ್ಕೆ ಬೇಕೆ ಬೇಕು ಮಣ್ಣು

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014




    ಕನ್ನಡ  ನಾಡಿನ ಚಿನ್ನದ ಬೀಡು
       ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಚಾಳುಕ್ಯ ಚೋಳರ ಯುದ್ದದ ಬೀಡು
ವಿಷ್ಣುವರ್ಧನನ ನೆಲೆಬೀಡು
ಗಂಗರ ಹೆಮ್ಮೆಯ ರಾಜದಾನಿಯಿದು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ

ಆಂದ್ರಕ್ಕೆ ಅಂಟಿದ ಅಂದದ ಬೀಡು,
ತಮಿಳುನಾಡಿಗಿದು ಹೆದ್ದಾರಿ
ನಂದಿ ದೇಗುಲದ ನಮ್ಮಯ ನಾಡು
ಕೋಲಾರಮ್ಮನ ಅಶೀರ್ವಾದಕೆ
ಸೋಮೇಶ್ವೇರನ ಸಹಾಯ ಹಸ್ತ

ಜಿಲ್ಲೆಯ ಜೀವಾಳ ಅಂತರಗಂಗೆ
    ಪಾಪವ ತೊಳೆಯುವ ಪಾವನ ಗಂಗೆ
ಮೂಡಲ ದಿಕ್ಕಿನ ಮುಳಬಾಗಿಲು
ಸಿಹಿ ಸಿಹಿ ಮಾವಿನ ಶ್ರೀನಿವಾಸ ಪುರ
ಬಂಗಾರ ಬೆಳೆವ ಬಂಗಾರುಪೇಟೆ,
ಕರಗದ ಖ್ಯಾತಿಯ ಮಾಲೂರು
  ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ

ಶಿಲ್ಪಿ ಖ್ಯಾತಿಯ ಶಿವಾರಪಟ್ಟಣ, ಶಿವ ಸಾನಿಧ್ಯದ ಕೋಟಿಲಿಂಗೇಶ್ವರ
ಕೂಗಳತೆಯಲಿಹ  ಕುರುಡುಮಲೇ ಗಣಪ
ಸುಂದರ ಲಕ್ಷ್ಮಿ ವೆಂಕಟರಮಣ ಸ್ವಾಮಿ
ಜನತೆಯ ನೆಮ್ಮದಿಗೆ ಬಾರದು ಭಂಗ
ಕಾಯುವುದು ನಮ್ಮನು ಶ್ರತಶೃಂಗ
ಕನ್ನಡ ನಾಡೀನ ಕೀರ್ತಿಯ ಬೆಳಗುವ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ

ಕನ್ನಡದಾಸ್ತಿಯ ಮಾಸ್ತಿಯ ನಾಡು
ಕವಿ ಗುಂಡಪ್ಪನ ಕಲಿ ನಾಡು
ವಿಶ್ವ ಖ್ಯಾತಿಯ ವಿಶ್ವೇಶ್ವರಯ್ಯ ಹುಟ್ಟಿದ
ಪ್ರಥಮ ಮುಖ್ಯ ಮಂತ್ರಿಯ ರೆಡ್ಡಿಯ ಜಿಲ್ಲೆ
ಹೈದರಾಲಿಯ ಜನ್ಮಸ್ಥಳವಿದು
ಸೌಂಧರ್ಯ ತಾರೆಯ ಸುಂದರ ಜಿಲ್ಲೆ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014



ಬರಲಾರೆ ನಾನು ಬರಲಾರೆ
ಬಂದರೂ ನಾನು ತಿರುಗಿ ನೋಡಲಾರೆ
ನೋಡೀದರೂ ಮನಸ್ಸು ಮುರಿಯಲಾರೆ
ಮುರಿದರೂ ಮೊತ್ತೆಮ್ಮೆ ಜೋಡೀಸಲಾರೆ

ಹೊತ್ತು ಕಳೆದರು ಮತ್ತೆ ಸಿಗಲು ಸಾದ್ಯವಿಲ್ಲ
ಮುತ್ತು ಕಳೆದರೆ ಸಿಗದೇ ಇರಲು ಸಾಧ್ಯವಿಲ್ಲ
ಹೊತ್ತು ಮುತ್ತುಗಳ ನಡುವೆ ತುತ್ತು ಮರೆಯದಿರು
ಕತ್ತು ಒಣಗಿ ಜೀವಕೆ ಕುತ್ತು ಬರುವುದು

ಬಾಳ ನೌಕೆಯ ಒಳಗೆ ನೀರು ಇರುವುದಿಲ್ಲ
ಬಗ್ಗಿ ನೋಡಿದರೆ ಕೆಳಗೆ ಸಾಗರ ಸಮುದ್ರವೇ ಎಲ್ಲಾ
ಎಚ್ಚರಿಕೆ ವಹಿಸಿದರೆ ಸಿಗುವುದು ದಡ
ಎಚ್ಚರ ತಪ್ಪಿದರೆ ಸೇರುವುದು ಸಾಗರ ಸಮುದ್ರದ ಬುಡ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014




ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತ್ತಿತ್ತು ಜೊಲ್ಲು

ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರಿ
ಅವಳ ಹಾಡೀ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿ ನೋಡೀ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು


ಮಿಸ್ಸ್ ಅಂದ್ರೆ ಮಿಸ್ಸ್ ಅನುರಾದ ಮಿಸ್ಸ್
ನಮ್ಮ ಸ್ಕೂಲಿಗೆಲ್ಲ ಬಾಳ ಫೇಮಸ್ಸು

:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
    ಬೆಂಗಳೂರು






ಬಾನಲಿ ಹಾರುವ ಬಣ್ಣದ ಗಿಳಿಯೇ
ಬಾಗಿಲ ಬಳಿಗೆ ನೀ ಬಾರೆ
ಅಮ್ಮನು ಕೊಟ್ಟ ಕಾಳನು ಕೊಡುವೆನು
ಹರುಷದಿ ಹತ್ತಿರ ಬಾ ಬಾರೆ
ತಮ್ಮನ ಜೊತೆಯಲ್ಲಿ ತಿಂಡಿಯ ತಿನಿಸುವೆ
ಒಮ್ಮೆಲೆ ಜಾರುತ ಬಳಿ ಬಾರೆ
ಹಸುರಿನ ರೆಕ್ಕೆಯ ಬಡಿಯುತ್ತಾ ಬಾರೆ
ಕೆಂಪನೆ ಕೊಕ್ಕನು ಸವರುತ್ತಾ ಬಾರೆ
ಬೆಳ್ಳಿಯ ಪಂಜರ ಬಳಿಯಲ್ಲಿಲ್ಲ
ಹೆದರದೆ ಹತ್ತಿರ ನೀ ಬಾರೆ
ತಿಂಡಿಯ ತಿಂದು ನೀರನು ಕುಡಿದು
ಪುರ್ರನೆ ಬಾನಿಗೆ ನೀ ಹಾರೆ
: - ಕಾವೆಂಶ್ರೀನಿವಾಸಮೂರ್ತಿ
   ಬೆಂಗಳೂರು
      ದಿನಾಂಕ : 25.03.2014




ಮೆಚ್ಚುಗೆಯ ಮಾತುಗಳು ಮುತ್ತಿನಂತಿದ್ದರೆ
ಮತ್ತು ಬರುವದು ಗೆಳತಿ ಮೈಯ ಮರೆತು

ಮಾತು ಮಾತಿನಲಿ ಹ್ರಸ್ವಸ್ವರವಿರಲು
ಜಗದಲ್ಲಿ ಜೀವನವೇ ದೀರ್ಘಸ್ವರವು

ಅದುವೇ ಮಧುರ ಮಾಧುರ್ಯದ ಸರಿಗಮ
ಅದಕ್ಕೆ ಬೇರೆ ಸಾಟಿ ಇಲ್ಲದ ಸನಿದಪ


ತಾಯಿಯಿಲ್ಲದ ಜನ್ಮ ತಬ್ಬಲಿಯಾದಂತೆ
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವನೊಬ್ಬ ನಾಮ ಹಲವಾದರು
ಪೂಜಿಸುವ ಪುಣ್ಯಕಾರ್ಯ ಪರಮ ಸದೃಶ್ಯ
ತಪ್ಪು ಮಾಡಿದವರನ್ನು ತಿದ್ದಿ ನಡೆಸುವ ದೇವರು
ತಪ್ಪು ಮಾಡದಂತೆ ಎಚ್ಚರಿಸುವ ದೇವರು
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವರಿದ್ದರೆ ಅದುವೇ ಸ್ವರ್ಗ ಸದೃಶ್ಯ


ಮೌನವೇತಕೆ ಮುತ್ತು ಹೊತ್ತು ಕಳೆಯುತಿಹುದು
ತುತ್ತು ತಿನ್ನುವ ಬಯಕೆ ಮತ್ತೆ ಬರುತಿಹದು

ಮುತ್ತು ಪೋಣಿಸುವ ಮಾತು ಸಕ್ಕರೆಯ ಸಿಹಿ
ನಕ್ಕು ನಲಿದರೆ ಬಾಳು ಹಾಲು ಜೇನಂತ ಸಿಹಿ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014


      ಅಪ್ಪ ಅಮ್ಮ
ಅಪ್ಪ ಅಮ್ಮ ಬರ್ತಾರೆ
ಗಮಗಮ ತುಪ್ಪ ತರ್ತಾರೆ
ರೊಟ್ಟಿಗೆ ಹಚ್ಚಿ ಬೆಲ್ಲದ ಜೊತೆಗೆ
ತಿನ್ನಲು ನನಗೆ ಕೊಡ್ತಾರೆ
--------------------------------
      ಅಜ್ಜಿ ತಾತ
ಅಜ್ಜಿ ತಾತ ಬರ್ತಾರೆ
ಬಜ್ಜಿ ಪಕೋಡ ತರ್ತಾರೆ
ನನಗೆ ತಿನ್ನಲು ಕೊಡ್ತಾರೆ
-------------------------
       ಚಿಕ್ಕಿ
ಚಿಕ್ಕಿ ಸಂಜೆ ಬರ್ತಾರೆ
ಚಕ್ಕುಲಿ ನನಗೆ ತರ್ತಾರೆ
ಚಾಕ್ಲೇಟ್ ತಮ್ಮಗೆ ಕೊಡ್ತಾರೆ
----------------------------
     ಅತ್ತೆ
ಅತ್ತೆ ಅತ್ತೆ ನಮ್ಮತ್ತೆ
ನನ್ನಯ ಪ್ರೀತಿಯ ಸೋದರತ್ತೆ
 ಎ. ಬಿ. ಸಿ. ಡಿ. ಬರೆಸತ್ತೆ
ಓದುವೆ ನಾನು ನಿನ್ನಂತ್ತೆ
ಸಿಹಿ ಸಿಹಿ ತಿಂಡಿಯ ಸವಿಯುತ್ತಾ
ಜೊತೆ ಜೊತೆ ಬರುವೆನು ನನ್ನತ್ತೆ
----------------------------------------
            ನನ್ನ ತಂಗಿ
ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರ್ರಿ
ಅವಳ ಹಾಡಿ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿನ ನೋಡಿ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು
-------------------------------------------
       ಹಾಲು
ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತಿತ್ತು ಜೊಲ್ಲು
-------------------------
ಮಿಸ್ಸ್
ಮಿಸ್ಸ್ ಅಂದ್ರೆ ಮಿಸ್ಸ್
ಅನುರಾಧ ಮಿಸ್ಸ್
ನಮ್ ಸ್ಕೂಲಲೆಲ್ಲಾ
ಇವರ ಫೇಮಸ್ಸು
------------------------
ಪುಟಾಣಿ ಕಂದ ಬಟಾಣಿ ತಂದ
ಮಕ್ಕಳಿಗೆಗೆಲ್ಲ ಹಂಚಿ
ತಾನೂ ತಿಂದ
---------------------
:- ಕಾವೆಂಶ್ರೀನಿವಾಸಮೂರ್ತಿ ,ಬೆಂಗಳೂರು   ದಿನಾಂಕ : 25.03.2014

Saturday, January 8, 2011

ನನ್ನ ಸ್ವರಚಿತ ಕಿರು ಕವನಗಳು

ಚೈತ್ರ
ವನ ಸಿರಿಯ ಸಿಂಗರಿಸಿ ವಸಂತ ಬಂದ
ಮರಗಿಡಕೆ ಚೈತ್ರದ ಚಿಗುರನ್ನು ತಂದ
ಪ್ರಕೃತಿಗೆ ಹಸಿರುಡುಗೆ ತೊಡಿಸುತ್ತಾ ನಿಂದ
ಬಗೆ ಬಗೆಯ ಹೂವರಳಿ ಬಾನಲ್ಲಿ ಹರಡಿಹುದು
ಬಣ್ಣದ ಚಿತ್ತಾರ ಅಲ್ಲಲ್ಲಿ ಮೂಡಿಹುದು
ಮಾಮರದ ಮರೆಯಲ್ಲಿ ಕೋಗಿಲೆಯು ಕುಳಿತಿಹುದು
ಚಿಗರನ್ನು ಸವಿಯುತ್ತ ಕೂಹು ಕೂಹು ಹಾಢಿಹುದು
ಹೊಂಗೆಯ ಮರವು ತಂಗಾಳಿ ಬೀಸಿತ್ತು
ಮಧುರ ಸಾರವನರಿಸಿ ದುಂಬಿಯು ಬಂದಿತ್ತು
ಹೊಸ ವರುಷ ಹೊಸ ಹರುಷ ಹೊಸ ಬಯಕೆ ತುಂಬಿರಲು
ಜೀವನಕೆ ಹೊಸ ಬಗೆಯ ಉತ್ಸಾಹ ಬಂದಿಹುದು
ಬೇವಿನ ಕಹಿ ನೆನಪು ಬಾಳೆಲ್ಲ ತುಂಬಿರಲು
ಹೊಸ ವರುಷ ಸಿಹಿಯಾದ ಸವಿಜೇನು ತಂದಿಹುದು


:- ಅರಹಳ್ಳಿ ಕಾವೆಂ ಶ್ರೀನಿವಾಸಮೂರ್ತಿ
ಬೆಂಗಳೂರು


ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತ್ತಿತ್ತು ಜೊಲ್ಲು


ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರಿ
ಅವಳ ಹಾಡೀ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿ ನೋಡೀ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು

ಮಿಸ್ಸ್ ಅಂದ್ರೆ ಮಿಸ್ಸ್ ಅನುರಾದ ಮಿಸ್ಸ್
ನಮ್ಮ ಸ್ಕೂಲಿಗೆಲ್ಲ ಬಾಳ ಫೇಮಸ್ಸು
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು




ನನ್ನರಸಿ
ನನ್ನರಸಿ ನನ್ನರಿಸಿ
ನಾ ಬಂದೆ ನಿನ್ನರಿಸಿ
ಹಸಿರುಡುಗೆ ಸಿಂಗರಿಸಿ
ಬಿಸಿ ಕಾಪಿ ಕಲಬೆರೆಸಿ
ನೀ ಬಂದೆ ನನ್ನವರಿಸಿ
ಸುಂದರ ಕನಸನು ನಾ ಬಯಸಿ
ಒಂಟೀ ಜೀವನ ಬದಿಗಿರಿಸಿ
ಕೈ ಇಡಿದೆ ನಾ ನಿನ್ನವರಿಸಿ
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು