Thursday, April 17, 2014

      ಅಪ್ಪ ಅಮ್ಮ
ಅಪ್ಪ ಅಮ್ಮ ಬರ್ತಾರೆ
ಗಮಗಮ ತುಪ್ಪ ತರ್ತಾರೆ
ರೊಟ್ಟಿಗೆ ಹಚ್ಚಿ ಬೆಲ್ಲದ ಜೊತೆಗೆ
ತಿನ್ನಲು ನನಗೆ ಕೊಡ್ತಾರೆ
--------------------------------
      ಅಜ್ಜಿ ತಾತ
ಅಜ್ಜಿ ತಾತ ಬರ್ತಾರೆ
ಬಜ್ಜಿ ಪಕೋಡ ತರ್ತಾರೆ
ನನಗೆ ತಿನ್ನಲು ಕೊಡ್ತಾರೆ
-------------------------
       ಚಿಕ್ಕಿ
ಚಿಕ್ಕಿ ಸಂಜೆ ಬರ್ತಾರೆ
ಚಕ್ಕುಲಿ ನನಗೆ ತರ್ತಾರೆ
ಚಾಕ್ಲೇಟ್ ತಮ್ಮಗೆ ಕೊಡ್ತಾರೆ
----------------------------
     ಅತ್ತೆ
ಅತ್ತೆ ಅತ್ತೆ ನಮ್ಮತ್ತೆ
ನನ್ನಯ ಪ್ರೀತಿಯ ಸೋದರತ್ತೆ
 ಎ. ಬಿ. ಸಿ. ಡಿ. ಬರೆಸತ್ತೆ
ಓದುವೆ ನಾನು ನಿನ್ನಂತ್ತೆ
ಸಿಹಿ ಸಿಹಿ ತಿಂಡಿಯ ಸವಿಯುತ್ತಾ
ಜೊತೆ ಜೊತೆ ಬರುವೆನು ನನ್ನತ್ತೆ
----------------------------------------
            ನನ್ನ ತಂಗಿ
ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರ್ರಿ
ಅವಳ ಹಾಡಿ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿನ ನೋಡಿ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು
-------------------------------------------
       ಹಾಲು
ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತಿತ್ತು ಜೊಲ್ಲು
-------------------------
ಮಿಸ್ಸ್
ಮಿಸ್ಸ್ ಅಂದ್ರೆ ಮಿಸ್ಸ್
ಅನುರಾಧ ಮಿಸ್ಸ್
ನಮ್ ಸ್ಕೂಲಲೆಲ್ಲಾ
ಇವರ ಫೇಮಸ್ಸು
------------------------
ಪುಟಾಣಿ ಕಂದ ಬಟಾಣಿ ತಂದ
ಮಕ್ಕಳಿಗೆಗೆಲ್ಲ ಹಂಚಿ
ತಾನೂ ತಿಂದ
---------------------
:- ಕಾವೆಂಶ್ರೀನಿವಾಸಮೂರ್ತಿ ,ಬೆಂಗಳೂರು   ದಿನಾಂಕ : 25.03.2014

Friday, August 23, 2013

ಮನೆಯಲ್ಲಿಡಬೇಕಾದ ಅದೃಷ್ಟದ ಗಿಡಗಳು

ಕೆಲವೊಂದು ಗಿಡಗಳನ್ನು ಅದೃಷ್ಟ ತರುವ ಗಿಡಗಳೆಂದು ಮನೆಯೊಳಗೆ ಇಡುತ್ತಾರೆ. ಈ ಗಿಡಗಳು ಅದೃಷ್ಟವನ್ನು ತರುತ್ತದೆ, ದುಷ್ಟ ಶಕ್ತಿಯನ್ನು ತಡೆಯುತ್ತದೆ ಎಂದು ನಂಬುವುದು ಅವರ ನಂಬಿಕೆಗೆ ಬಿಟ್ಟದ್ದು.

ಕೆಲವೊಂದು ಗಿಡಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯ ಶುದ್ಧತೆ ಹೆಚ್ಚುತ್ತದೆ ಅನ್ನುವುದು ಮಾತ್ರ ವೈಜ್ಞಾನಿಕವಾದ ಸತ್ಯ. ಉದಾಹರಣೆಗೆ ಗೋಲ್ಡನ್ ಪೋಥೋಸ್(golden pothes) ಗಿಡ ಮನೆಯಲ್ಲಿದ್ದರೆ ಅದು ಗಾಳಿಯಲ್ಲಿರುವ ರಾಸಾಯನಿಕಗಳಾದ ಫಾರ್ಮಲ್ ಡೀ ಹೈಡ್, ಬೆಂಜೀನ್ ಈ ರೀತಿಯ ವಿಷಕಾರಿ ಅಂಶಗಳನ್ನು ಹೋಗಲಾಡಿಸಿ, ಶುದ್ಧ ಗಾಳಿಯನ್ನು ನೀಡುವುದು. ಮನೆಯ ಪರಿಶುದ್ಧತೆ ಹೆಚ್ಚಿಸಿ, ಶುದ್ಧ ಗಾಳಿ ತರುವಲ್ಲಿ ಈ ಕೆಳಗಿನ ಗಿಡಗಳು ತುಂಬಾ ಸಹಕಾರಿಯಾಗಿದೆ:

ಸ್ಪೈಡರ್ ಪ್ಲಾಂಟ್(spider Plant) 

ಈ ಗಿಡ ಗಾಳಿಯಲ್ಲಿರುವ ವಿಷಕಾರಿ ಅಂಶವನ್ನು ಹೋಗಲಾಡಿಸಿ, ಮನೆಯೊಳಗೆ ಶುದ್ಧವಾದ ಗಾಳಿಯನ್ನು ಬಿಡುತ್ತದೆ. ಅದರಲ್ಲೂ ಈ ಗಿಡವನ್ನು ಅಡುಗೆ ಮನೆಯ ಸಮೀಪದಲ್ಲಿ ಇಟ್ಟರೆ ಕಾರ್ಬನ್ ಮಾನೋಕ್ಸೈಡ್ ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ.


XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX

ಫೆರ್ನ್ಸ್(ferns) 

ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನ್ನು ಉಸಿರಾಡಲು ನಿಮಗೆ ನೆರವಾಗುತ್ತದೆ.



XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX


ಐವಿ(Ivy) 

ಇದರ ಎಲೆ ವಿಷ ಪೂರಕವಾಗಿದ್ದರೂ ಈ ಎಲೆ ಗಾಳಿಯಿಂದ ಉಂಟಾಗುವ ಅಲರ್ಜಿಯನ್ನು ತಡೆಯುತ್ತದೆ. ಅಸ್ತಮಾ, ಅಲರ್ಜಿ ಸಮಸ್ಯೆ ಇರುವವರು ಈ ಗಿಡವನ್ನು ಮನೆಯ ಎದುರುಗಡೆ ನೆಡುವುದು ಒಳ್ಳೆಯದು.


XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX


ಅರೆಕಾ ಪಾಮ್(Areca palm) 

ಇದು ತುಂಬಾ ಸೆನ್ಸಿಟಿವ್ ಆದ ಗಿಡವಾಗಿದ್ದು, ಮನೆಯಲ್ಲಿ ಶುದ್ಧ ಗಾಳಿ ತುಂಬುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು. ಇದನ್ನು ವರಾಂಡದಲ್ಲಿ, ಕಾರಿಡಾರ್ ಪಕ್ಕದಲ್ಲಿ ಇಟ್ಟರೆ ಗಾಳಿಯಲ್ಲಿರುವ ಬೇಡದ ರಾಸಾಯನಿಕಗಳನ್ನು ಹೋಗಲಾಡಿಸಿ ಶುದ್ಧವಾದ ಗಾಳಿಯನ್ನು ತುಂಬುತ್ತದೆ.


XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX


ಗೋಲ್ಡನ್ ಪಾಥೋಸ್(golden pothos) 

ಇದನ್ನು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಗಿಡವೆಂದು ಮನೆಯೊಳಗೆ ಇಡುತ್ತಾರೆ. ಹೌದು ಗಾಳಿಯಲ್ಲಿರುವ ದುಷ್ಟಶಕ್ತಿಗಳಾದ ಫಾರ್ಮಲ್ ಡೀಹೈಡ್, ಬೆಂಜೀನ್, xylene ಇವುಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ.



XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX


ಲೋಳೆಸರ 

ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲ, ಹೊಟ್ಟೆ ನೋವು, ತುರಿಕೆ ಕಂಡು ಬಂದಾಗ ಸುಪರ್ ಮನೆ ಮದ್ದಾಗಿಯೂ ಕಾರ್ಯ ನಿರ್ವಹಿಸುತ್ತದೆ.



XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX



ಚೈನೀಸ್ ಎವರ್ಗ್ರೀನ್(chinese vergreen) 

ಈ ಗಿಡ ಕೂಡ ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಏನೋ ಫೆಂಗ್ ಶುಯಿ ವಾಸ್ತು ಶಾಸ್ತ್ರದಲ್ಲಿ ಈ ಗಿಡಕ್ಕೂ ಮಹತ್ವವನ್ನು ನೀಡಲಾಗಿದೆ. Show Thumbnail

XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX

ಸ್ನೇಕ್ ಪ್ಲಾಂಟ್( snake plant) 

ನೋಡಲು ಆಕರ್ಷಕವಾಗಿರುವ, ಸುಲಭವಾಗಿ ಬೆಳಸಬಹುದಾದ ಈ ಗಿಡ ಕೂಡ ಮನೆಯೊಳಗೆ ಇದ್ದರೆ ಶುದ್ಧ ಗಾಳಿಯನನ್ನು ಸೇವಿಸಬಹುದು
.

XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX


ಮಾರ್ಗ್ನೇಟ್(marginate) 

ಈ ಗಿಡ ಗಾಳಿಯಲ್ಲಿರುವ ಕಶ್ಮಲಗಳನ್ನು ಹೊರ ಹಾಕಿ, ನಮ್ಮ ಆರೊಗ್ಯಕ್ಕೆ ವೃದ್ಧಿಸುತ್ತದೆ. ಆದರೆ ನಾಯಿ ಇರುವವರು ಇದನ್ನು ಸಾಕದು ಒಳ್ಳೆಯದಲ್ಲ, ಏಕೆಂದರೆ ಈ ಗಿಡಗಳ ಗಾಳಿ ಸೋಕಿದರೆ ನಾಯಿಯ ಆರೋಗ್ಯ ಹಾಳಾಗುವುದು.


XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX



ಪೀಸ್ ಲಿಲ್ಲಿ(peace lilly) 

ನೋಡಲು ಮನಮೋಹಕವಾಗಿರುವ ಈ ಗಿಡ ಕಲ್ಮಶವಾದ ಗಾಳಿಯನ್ನು ಶುದ್ಧೀಕರಿಸುತ್ತದೆ.


XXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXXX

Sunday, August 28, 2011

ಭ್ರಷ್ಟಾಚಾರಿ ವಿರೋದಿ ಅಣ್ಣಾ ಮತ್ತು ಹೆಗಡೆ


1947 ಆಗಸ್ಟ 15 ಮಧ್ಯ ರಾತ್ರಿ ಅಖಂಡ ಭಾರತಕ್ಕೆ ಪರಕೀಯರ ಆಳ್ಬಿಕೆಯಿಂದ ಸ್ವತಂತ್ರ ಪಡೆದ ದಿನ, ಪರಕೀಯರ ದಬ್ಬಾಳಿಕೆಯಿಂದ ಬೇಸತ್ತ ಭಾರತ ಸ್ವತಂತ್ರ ಭಾರತವಾಯಿತು, ಅಲ್ಲಿಯ ತನಕ ಭಾರತದ ಮೇಲೆ ಪರಕೀಯರ ಆಕ್ರಮಣ ನಿರಂತರವಾಗಿ ನಡೆಯುತಿತ್ತು, ಭಾರತದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಂದ ವಿದೇಶಿಯರು ನಿದಾನವಾಗಿ ಇಲ್ಲೆ ನೆಲೆಯೂರಿ ನಮ್ಮನ್ನೇ ತುಳಿದು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದರು ಇದಕ್ಕೆ ಇದ್ದ ಒಂದೇ ಒಂದು ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ, ಪ್ರಾಂತ್ಯ ಪ್ರಾಂತ್ಯಗಳ ಮೇಲಿನ ಅಸಾಮಾಧಾನ ತಮ್ಮ ತಮ್ಮಲ್ಲೇ ಕಚ್ಚಾಟದ ಪ್ರತಿಫಲವೇ ಪರಕೀಯರ ಆಳ್ವಿಕೆ .
1857 ದೇಶಭಕ್ತಿಯ ಪರಮಾಧಿಯ ಕಾಲ ವಿದೇಶಿಗರ ಆಳ್ವಿಕೆಯ ವಿರುದ್ಧ ಸಿಡೆದೆದ್ದ ಭಾರತ ಪುತ್ರರು ನಿರಂಂತರವಾಗಿ ಹೋರಾಡಿ ಕೊನೆಗೆ 1947 ರ ಆಗಸ್ಟ್ 15 ರ ಮಧ್ಯ ರಾತ್ರಿ ಸ್ವತಂತ್ರ ತಂದು ಕೊಟ್ಟರು ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದರು, ಅಖಂಡ ದೇಶದೆಲ್ಲಡೆ ವಂದೇ ಮಾತರಂ, ಜೈ ಭಾರತ್ ಮಾತಾ ಕೀ ಮೊಳಗಿತು, ಅಂದಿನಿಂದ ಭಾರತ ವಿಶ್ವದೆಲ್ಲಡೆ ಶಾಂತಿ ಸಂದೇಶವನ್ನು ಮತ್ತೊಮ್ಮೆ ಸಾರಿತು, ಪ್ರಪಂಚಕ್ಕೆ ಅಹಿಂಸಾ ತತ್ವ ಹೇಳಿಕೊಟ್ಟ ಮೊಟ್ಟ ಮೊದಲ ರಾಷ್ಟ್ರವಾಯಿತು, ಅಹಿಂಸಾವಾದಿ ಮೋಹನ್ ದಾಸ್ ಕರಮಚಂದ್ ಗಾಂಧಿ ಭಾರತದ ಪಿತಾಮಹನಾಗಿ ಮಹಾತ್ಮ ರಾದರು.
65 ವರ್ಷಗಳಲ್ಲಿನ ಭಾರತದ ಸಾಧನೆ ಹಲವಾರು ಕ್ಷೇತ್ರಗಳ ಯಶಸ್ವಿ ಸಾಧಿಸಿದ್ದರು ಭ್ರಷ್ಟಾಚಾರದಲ್ಲಿ ಅತ್ಯದ್ಭುತ ಸಾದನೆ ಮಾಡಿದೆ ಎನ್ನುವುದು ಅತ್ಯಂತ ದುಃಖದ ವಿಚಾರ, ಸಾಂಪ್ರದಾಯಕ ಸಮಾಜದಲ್ಲಿನ ನಾಚಿಕೆ ವಿಷಯ, ಹಂತ ಹಂತವಾಗಿ ಭ್ರಷ್ಟಾಚಾರ ಹೆಮ್ಮರವಾಗಿ, ಪೆಡಂಭೂತವಾಗಿ ಪ್ರಜಾಪ್ರಭುತ್ವದಲ್ಲ್ಲಿ ತನ್ನ ಸ್ಥಾನವನ್ನು ಪಡೆಯಿತು, ನಮನ್ನಾಳುವ ಪ್ರಜಾಪ್ರಭುತ್ವದ ಪ್ರತಿನಿಧಿಗಳಿಂದ ಅಡಳಿತ ನಡೆಸುವ ಅಧಿಕಾರಿಗಳವರಗೆ ಸ್ವೇಚ್ಛಾರವಾಗಿ ಭ್ರಷ್ಟಾಚಾರ ರುದ್ರ ನರ್ತನ ಮಾಡಿತ್ತು,
ಭಾರತದಂತಹ ಸಂಪದ್ಭರಿತ ರಾಷ್ಟ್ರದಲ್ಲಿ ಭ್ರಷ್ಟಾಚಾರ ಅತ್ಯಂತ ಕೆಟ್ಟದಾದ ನಾಗರೀಕ ಸಮಾಜ ಬಂಧುಗಳು ನಾಚಿಕೆ ಪಡುವಂತಹ ಹೇಯ ಪದ್ದತಿಯೇ ಸರಿ, ನಮನ್ನಾಳುವ ಪ್ರತಿನಿಧಿಗಳು ತಮ್ಮ ಬುದ್ಧಿವಂತಿಕೆಯಿಂದ ಆಗಾಗ ಇದರ ಬಗ್ಗೆ ಮಾರುದ್ದದ ಭಾಷಣಗಳನ್ನು ಸಾರ್ವಜನಿಕವಾಗಿ ನೀಡಿ ತಮ್ಮ ಬುದ್ದಿವಂತಿಕೆ ಮೆರೆದರೆ ವಿನಃ ಇದರ ವಿರುದ್ದ ಪ್ರಾಮಾಣಿಕ ಹೋರಾಟ ಮಾಡಲಿಲ್ಲ
ಬಂಧುಗಳೇ ಪ್ರಕೃತಿಯ ನೈಸರ್ಗಿಕ ಸಹಜ ನಿಯಮವೊಂದಿದೆ ಯಾವುದೆ ವಸ್ತುವಾಗಲಿ, ಕ್ರಿಯೆಯಾಗಲಿ, ಪದ್ಧತಿಯಾಗಲಿ ಸೃಷ್ಠಿಯಾದ ಮೇಲೆ ನಾಶವೂ ಅಗಬೇಕು ಇದು ವೈಜ್ನಾನಿಕ ಸಿದ್ಧಾಂತವೂ ಹೌದು, ಅಂತೆಯೇ ನಮ್ಮ ಭ್ರಷ್ಟಾಚಾರವೂ ನಾವಾಗಿಯೇ ಸೃಷ್ಠಿಸಿದ್ದು ನಮ್ಮಿಂದಲೇ ನಾಶವಾಗಬೇಕು ಇದಕ್ಕೆ ಸಾಕಷ್ಟು ಅವಕಾಶಗಳು ನೀಡಿಲಾಯಿತು, ಸುಧಾರಣೆ ಮಾತ್ರ ಶೂನ್ಯ, ಕೆಲವೂ ಇಲಾಖೆಗಳಿಗೆ ಭ್ರಷ್ಟಾಚಾರದ ಪರಮಾಧಿಕಾರದ ಇಲಾಖೆ ಅಂತ ಪಟ್ಟವನ್ನು ಸಹ ಕಟ್ಟಲಾಯಿತು, ಆದರೆ ನಾಚಿಗೇಡಿನ ಅಧಿಕಾರಿಶಾಹಿ ವರ್ಗ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ಸಾರ್ವಜನಿಕವಾಗಿ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುಕೊಂಡು ಬರುತಿತ್ತು, ನೀಡಲಾದ ಅವಕಾಶಗಳೆಲ್ಲವೂ ಮುಗಿಯುತ್ತಾ ಬಂತು
ಬಂಧುಗಳೆ ಮಹಾಭಾರತದ ಒಂದು ಪ್ರಸಂಗ : ಮಹಾಭಾರತದ ಸೂತ್ರದಾರನೆನಿಸಿದ ಶ್ರೀಕೃಷ್ಣ ಪರಮಾತ್ಮ ಶಿಶುಪಾಲನಿಗೆ ನೂರು ತಪ್ಪುಗಳನ್ನು ಮನ್ನಿಸುವ ಮತ್ತು ಅದರ ನಂತರದ ತಪ್ಪಿಗೆ ತಕ್ಕ ಶಿಕ್ಷೆ ವಿಧಿಸಿವನೆಂದು ಹೇಳಿದ್ದ ಅದರಂತೆ ಶಿಶುಪಾಲನ ನೂರು ತಪ್ಪುಗಳ ನಂತರ ನೂರ ಒಂದನೇಯ ತಪ್ಪಿಗೆ ಮೃತ್ಯುವೆ ಅವನಿಗೆ ಶಿಕ್ಷೆಯಾಗಿ ಕಾದಿತ್ತು. ಶ್ರೀಕೃಷ್ಣನ ಸೋದರ ಮಾವ ಕಂಸನ ದಬ್ಭ್ಭಾಳಿಕೆ ,ನೀಚ ಕೃತ್ಯಗಳು, ಹಿಂಸಾ ಪ್ರವೃತ್ತಿಯೇ ಅವನನ್ನು ಮೃತ್ಯುವಿನೆಡೆಗೆ ನೂಕಿತು, ನಮಗೆಲ್ಲ ಗೊತ್ತಿರುವಂತೆ ದೇವರು (ಶ್ರೀ ವಿಷ್ಣು ಪರಮಾತ್ಮ) ದುಷ್ಟ ಸಂಹಾರಕ್ಕೆ ಶಿಶ್ಟರ ರಕ್ಷಣೆ ಗೆ ಭೂಮಿ ಮೇಲೆ ದಶಾವತಾರವೆತ್ತಿದ ಅನ್ನುವ ಸಂಗತಿ, ಆಗಾಗ ನಮ್ಮಲ್ಲಿ ಇದಕ್ಕೆ ಒಮ್ಮತವೂ ಇರಲಿಲ್ಲ ಕಾರಣ ಆ ದೇವರು ತನ್ನ ದಶಾವಾತರವನ್ನು ಭೂಮಿ ಮೇಲೆ ಅಂದರೆ ಅದೂ ಭಾರತದಲ್ಲೇ ಯಾಕೆ ಅವತರಿಸಬೇಕು? ನಮ್ಮ ಭರತ ಖಂಡದಲ್ಲಿ ಅಷ್ಟೊಂದು ದುಷ್ಟರಿದ್ದರೇ?, ನಾಗರಿಕ ಬಂದುಗಳೇ ಇತ್ತಿಚಿನ ನಮ್ಮ ಭಾರತ ವ್ಯವಸ್ಥೆ, ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ, ಅನೀತಿ , ಹಿಂಸೆ, ದೌರ್ಜನ್ಯ, ಭ್ರಷ್ಟಾಚಾರ, ಮೋಸ, ಧಗ, ವಂಚನೆ ಇವೆಲ್ಲವನ್ನು ನೋಡುತಿದ್ದರೆ ಆ ದೇವರು ಹತ್ತು ಅವತಾರ ಅವತರಿಸಿ ದುಷ್ಟರನ್ನು ಮಟ್ಟ ಹಾಕಿರಲು ಬಹುದು ಅನ್ನಿಸುತ್ತದೆ,
ಇಂತಹ ಭ್ರಷ್ಟ ವ್ಯಸ್ಥೆಯನ್ನು ನೋಡಲು ಆ ದೇವರನ್ನೆ ಹನ್ನೊಂದನೇ ಅವತಾರದಲ್ಲಿ ಭೂಮಿಗೆ ಇಳಿದು ಬಾ ಅಂತ ಬೇಡಿಕೊಳ್ಳುವ ಕಾಲ ಸನ್ನಿಹಿತವಾಗ್ಗಿತ್ತು ಅಂತ ಕಾಣುತ್ತೆ ಅವನ ಹನ್ನೋಂದನೆ ಅವತಾರ ಅಣ್ಣಾ ಹಜಾರೆ ಎಂದರೆ ತಪ್ಪಾಗಲಾರದು
74 ವರ್ಷದ ವಯೋವೃದ್ಧ, ಕೃಶ ದೇಹ, ಶಾಂತಿಯ ಸಂಕೇತದ ಅಪ್ಪಟ ಭಾರತೀಯ ವೇಷ ಭೂಷಣ, ತಲೆಯ ಮೇಲೆ ಪ್ರಪಂಚಕ್ಕೆ ಶಾಂತಿ, ಅಹಿಂಸಾ ಸಂದೇಶ ನೀಡಿದ ಗಾಂಧಿ ಟೋಪಿ, ಮುಖದ ಮೇಲೆ ಸಾಧನೆ ಗುರಿ ಮುಟ್ಟುವ ಆತ್ಮವಿಶ್ವಾಸದ ಮಂದಹಾಸದ ಮುಗುಳ್ನಗೆಯ ಬಿಡಿಗಾಸಿನ ದಾಸಯ್ಯನ ಒಂದೇ ಒಂದು ಕೂಗು ಭ್ರಷ್ಟ ಪ್ರಜಾಪ್ರಭುತ್ವಕ್ಕೆ ಕರೆಗಂಟೆಯಾಗಿ ಇಡೀ ಭಾರತವನ್ನೆ ತಟ್ಟಿ ಎಬ್ಬಿಸಿತು, ಭ್ರಷ್ಟಾಚಾರ ವಿರೋಧಿಗಳ ಕಿವಿಗಳಲ್ಲಿ ಅಣ್ಣಾರವರ ಕೂಗು ಪ್ರತಿದ್ವನಿಸಿತು ನರ ನಾಡಿಗಳಲ್ಲಿ ಕಂಪಿಸಿದವು, ರಾಷ್ಟ್ರದಾದ್ಯಂತ ಬೆಂಬಲ ವ್ಯಕ್ತವಾಯಿತು ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿವ ಮಟ್ಟಿಗೆ ರೋಸಿ ಹೋಗಿದ್ದ ಮುಗ್ಧ ಭಾರತೀಯರು ನಾಡಿನಾಧ್ಯಂತ ತಂಡೋಪತಂಡವಾಗಿ ರಾಷ್ಟ್ರರಾಜಧಾನಿಯತ್ತು ಧಾವಿಸಿದರು ಅಣ್ಣಾರ ಭ್ರಷ್ಟಚಾರ ವಿರೋಧಿ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ತಾವು ಅವರ ಜೊತೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು, 12 ದಿನಗಳ ಪ್ರಜಾಪ್ರತಿನಿಧಿಗಳ ನಾಟಕೀಯ ಬೆಳವಣಿಗೆ ಅಣ್ಣಾರ ಅಛಲ ನಿರ್ಧಾರದ ಮುಂದೆ ಏನು ಮಾಡಲಾಗಲಿಲ್ಲ ಒಂದು ಹಂತದಲ್ಲಿ ಬಲಪ್ರಯೋಗಕ್ಕೂ ಮುಂದಾಗಿದ್ದ ಆಡಳಿತ ಸರ್ಕಾರ ಕೊನೆಗೆ ಅಣ್ಣಾಗೆ ಸೋತು ಶರಣಾಗಿ ಮಸೂದೆ ಮಂಡನೆಯ ನಿರ್ಧಾರ ತಳೆಯಿತು.
ನಾಗರೀಕ ಬಂದುಗಳೇ! ಭಾರತದ ಅತ್ಯಂತ ಭ್ರಷ್ಟಚಾರ ರಾಜ್ಯಗಳಲ್ಲಿ ನಮ್ಮ ಕರುನಾಡು ಕರ್ನಾಟಕದ್ದು ಸಿಂಹಪಾಲು ಎನ್ನುವುದು ಅತ್ಯಂತ ಖೇದಕರ ಸಂಗತಿ, ಕರುಣೆಯುಳ್ಳ ಕನ್ನಡಿಗರು ಶಿಸ್ತು, ಸಮಯಪಾಲನೆ, ಶಾಂತಿ ಸಹನಗೆ ಹೆಸರಾದವರು ಅಂತೇಯೆ ಭ್ರಷ್ಟಾಚಾರದಲ್ಲಿ ತಾವು ಯಾರಿಗೇನು ಕಡಿಮೆಯಿಲ್ಲ ಎಂದು ತಮನ್ನು ತಾವೇ ಬೆನ್ನು ತಟ್ಟಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ರಾಷ್ಟ್ರದ ಕೆಲವೇ ಕೆಲವು ರಾಜ್ಯಗಳಲ್ಲಿರುವ ಲೋಕಾಯುಕ್ತ ಎಂಬ ಪ್ರಬಲ ಭ್ರಷ್ಟಾಚಾರ ಸಂಸ್ಥೆ ಸ್ಥಾಪಿಸಲು ಸಹ ಇದೆ ಕಾರಣ, ಲೋಕಾಯುಕ್ತರಾಗಿ ತಮ್ಮ ಶಿಸ್ತಿಗೆ ಹೆಸರಾದ ಲೋಕಾಯುಕ್ತ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಮೊಟ್ಟ ಮೊದಲ ಭಾರಿಗೆ ಭ್ರಷ್ಟ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದರೆ ಅವರ ನಂತರ ಬಂದ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಗಡೆಯವರು ಪ್ರಜಾಪ್ರತಿನಿಧಿಗಳಾದ ನಗರಸಭೆ, ಪುರಸಭೆ ಸದಸ್ಯರಿಂದ ಶಾಸಕ, ಮಂತ್ರಿಗಳಿಗೂ ತಮ್ಮ ಅಧಿಕಾರದ ಸಿಹಿ ತಿನ್ನಿಸಿದ್ದಷ್ಟೆ ಅಲ್ಲದೆ ರಾಜ್ಯದ ಪ್ರಥಮ ಪ್ರಜಾಪ್ರತಿನಿಧಿ ಮುಖ್ಯಮಂತ್ರಿಗೂ ಸಹ ಭ್ರಷ್ಟಾಚಾರದ ಬಿಸಿ ಮುಟ್ಟಿಸಿ ನ್ಯಾಯಾಲಯದ ಕಟ ಕಟೆಯಲ್ಲಿ ನಿಲ್ಲಿವಂತೆ ಮಾಡಿದರು.
ಸರಳ ಸಜ್ಜನಿಕೆಗೆ ಹೆಸರಾದ ಶ್ರೀ ಸಂತೋಷ್ ಹೆಗ್ಗಡೆಯವರು ಅಣ್ಣಾ ಹಜಾರೆಯವರ ಲೋಕಪಾಲ ಮಸೂದೆ ಹೋರ‍ಾಟದಲ್ಲಿ ಕೈ ಜೋಡಿಸಿದ್ದು ಕರ್ನಾಟಕದ ಭ್ರಷ್ಟಾಚಾರ ವಿರೋದಿಗಳಿಗೆ ಸ್ಪೂರ್ತಿದಾಯಕ 12 ದಿನಗಳ ಕಾಲ ಅಣ್ಣಾ ಹಜಾರೆಯವರಿಗೆ ಬೆಂಬಲವಾಗಿ ಉದ್ಯಾನ ನಗರಿಯ ಪ್ರೀಡಂ ಪಾರ್ಕ್ ನಲ್ಲಿ ನಿರಂತರವಾಗಿ ರಾಜ್ಯದಲ್ಲಿನ ಭ್ರಷ್ಟಚಾರ ವಿರೋಧಿಗಳಿಗೆ ಪ್ರೋತ್ಸಾಹ ನೀಡಿದ ಶ್ರೀ ಸಂತೋಷ್ ಹೆಗ್ಗಡೆಯವರು ನಿಜವಾಗಲು "ಕರ್ನಾಟಕದ ಅಣ್ಣಾ" ಎಂದರೆ ಅತಿಶಯೋಕ್ತಿಯಾಗಲಾರದು. ಶ್ರೀಮಂತಿಕೆಯ ಸುಖದ ಸುಪ್ಪತ್ತಿಗೆಯ ಕುಟುಂಬದಿಂದ ಬಂದ ಶ್ರೀ ಸಂತೋಷ್ ಹೆಗ್ಗಡೆಯವರು ನ್ಯಾಯಮೂರ್ತಿಯಾಗಿ ಅವರು ಕೈಗೊಂಡ ನಿರ್ಧಾರಗಳು, ತೀರ್ಮಾನಗಳು ಪ್ರಶಂಸನೆಗೂ ನಿಲಕದ್ದು ಎಂದರೆ ತಪ್ಪಾಗಲಾರದು, ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಮಾನ್ಯ ಶ್ರೀ ಸಂತೋಷ್ ಹೆಗ್ಗಡೆಯವರು ತಮ್ಮ ಅಧಿಕಾರವಿಲ್ಲದ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಿನಾಮೆಯನ್ನು ಸಹ ಕೊಟ್ಟಿದ್ದರು, ಭ್ರಷ್ಟ ವ್ಯವಸ್ಥೆಯನ್ನು ಭ್ರಷ್ಟಚಾರವನ್ನು ತಡೆಗಟ್ಟಲು ಈ ಮೇಲೆ ಹೇಳಿದಂತೆ ಆ ದೇವರೆ ತನ್ನ ಹನ್ನೊಂದನೆ ಅವತಾರದ ಪ್ರತಿರೂಪವಾಗಿ ಶ್ರೀ ಸಂತೋಷ್ ಹೆಗ್ಗಡೆಯವರನ್ನು ಕರುನಾಡ ಕರ್ನಾಟಕಕ್ಕೆ ಕೊಟ್ಟಿದ್ದಾರೆ ಎನ್ನಬಹುದು,
ರಾಜ ರೋಷವಾಗಿ ಭ್ರಷ್ಟಚಾರದಲ್ಲಿ ತೊಡಗಿದ್ದವರಿಗೆ ಸಿಂಹಸ್ವಪ್ನವಾಗಿದ್ದ ಶ್ರೀ ಸಂತೋಷ್ ಹೆಗ್ಗಡೆಯವರು ಅತಿರಥ ಮಹಾರಥರೆಂದು ಕರೆಯಬಹುದಾದ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನು ನಿರಾಯಾಸವಾಗಿ ಶ್ರೀ ಕೃಷ್ಣನ ಜನ್ಮಸ್ಥಾನದ ದರ್ಶನ ಮಾಡಿಸಿದ್ದಾರೆ, ಲೂಟಿಯಾಗುತಿದ್ದ ರಾಷ್ಟ್ರದ ಸಂಪತ್ತಿನ ರಕ್ಷಿಸಿದ್ದಾರೆ ಲಂಚಾವಾತರವನ್ನು ಕಡಿತಗೊಳಿಸಿದ ಕೀರ್ತಿ ಶ್ರೀ ಸಂತೋಷ್ ಹೆಗ್ಗಡೆಯವರಿಗೆ ಸಲ್ಲುತ್ತದೆ.
ನಾಗರೀಕ ಬಂಧುಗಳೆ ಅತ್ಮೀಯ ಕನ್ನಡ ಕುವರರೆ ಶ್ರೀ ಸಂತೋಷ್ ಹೆಗ್ಗಡೆಯವರು ಈ ಹೋರಾಟಕ್ಕೆ ಬೆಂಬಲವಾಗಿ ನಿಂತು ಈ ಮೂಲಕ ಅಣ್ಣಾ ಹಜಾರೆಯವರ ಪ್ರಭಲ ಲೋಕಪಾಲ ಮಸೂದೆ ಜಾರಿಗ ಬರುವವರೆಗೆ ನಿರಂತರವಾಗಿ ಹೋರಾಡಿ ಭ್ರಷ್ಟರಹಿತ, ಮೋಸರಹಿತ, ವಂಚನೆರಹಿತ, ಭವಿಷ್ಯದ ಭದ್ರ ಭಾರತ ಕಟ್ಟೋಣ

ಜೈ ಹಿಂದ್, ಜೈ ಕರ್ನಾಟಕ

ಕಾ.ವೆಂ. ಶ್ರೀನಿವಾಸಮೂರ್ತಿ
ಕೋಲಾರ

Monday, May 9, 2011

ವಿಜಯ ನಗರ ಸಾಮ್ರಾಜ್ಯ

ವಿಜಯ ನಗರ ಸಾಮ್ರಾಜ್ಯ
ಸ್ಥಾಪನೆ 1336
ಸ್ಥಾಪಿಸಿದವರು : ಹರಿಹರ ಬುಕ್ಕ
1 ಬುಕ್ಕರಾಯನ ಮಗ 2 ಕೆಂಪ್ಪಣ್ಣ ರಾಯನ ಹೆಂಡತಿ ಗಂಗಾದೇವಿ
ಇವಳು ಮಧುರ ವಿಜಯಂ ಅಥವಾ ವೀರ ಕೆಂಪರಾಯನ ಚರಿತೆ ಕೃತಿ ರಚಿಸಿದಳು
1 ನೇಯ ಬುಕ್ಕರಾಯನಿಗೆ ವೇದ ಮಾರ್ಗ ಪ್ರತಿಷ್ಠಾಪಕ ಅಥವಾ ವೇದ ಮಾರ್ಗ ಪ್ರವರ್ತಕ ಎಂಬ ಬಿರುದಿತ್ತು
ತುಂಗಭದ್ರ ನದಿಗೆ ಅಣೆಕಟ್ಟನ್ನು ನಿರ್ಮಿಸಿದ್ದನು
2 ನೇಯ ದೇವರಾಯಾ/ಪ್ರೌಡದೇವರಾಯ: ಇವನ ಬಿರುದು:
ಅಭಿನವ ವೀರ ದೇವರಾಯ, ಗಜಬೆಂಟೆಗಾರ,
ಇವನು ಸಂಗಮ ವಂಶದ ಶ್ರೇಷ್ಠ ಅರಸನು
ಈತನ ದಂಡ ನಾಯಕ : ಲಕ್ಷ್ಮಣ ದಂಡೇಶ
ಇವನು ಸಿಲೋನ್(ಶ್ರೀಲಂಕ)ದ ಮೇಲೆ ದಾಳಿ ಮಾಡಿ ಗೆದ್ದರಿಂದ ಇವನಿಗೆ ದಕ್ಷಿಣ ಸಮುದ್ರಾದಿಪತಿ ಎಂದು ಹೆಸರು
2 ನೇಯ ದೇವರಾಯ ತನ್ನ ಸಿಂಹಾಸನದ ಪಕ್ಕದಲ್ಲಿ ಮುಸ್ಲಿಂ ರ ಪವಿತ್ರ ಗ್ರಂಥ ಖುರಾನ್ ಇಟ್ಟಿದ್ದ
ಆಸ್ಥಾನ ಕವಿಗಳು ಚಾಮರಸ ಮತ್ತು ಕುಮಾರವ್ಯಾಸ(ಗದುಗಿನ ಭಾರತ/ ಕರ್ಣಾಟಕ ಭಾರತ ಕಥಾಮಂಜರಿ)
ಚೀನಾದ ಯಾತ್ರಿಕ ಅಬ್ದುಲ್ ರಜಾಕ್ 1443 ರಲ್ಲಿ ಇವನ ಅಸ್ಥಾನಕ್ಕೆ ಬೇಟಿ ನೀಡಿದ್ದ
ಕೃಷ್ಣದೇವರಾಯ: ವಿಜಯನಗರ ಸಾಮ್ರಾಜ್ಯದ ಪ್ರಸಿದ್ದ ಅರಸ
ಬಹುಮನಿ ಸುಲ್ತಾನ್ ಅರಸ 2 ನೇಯ ಮಹ್ಮದ್ ಶಾ ನನ್ನು ಅವನ ಮಂತ್ರಿಯ ಬಂಧನದಿಂದ ಬಿಡಿಸಿದ್ದಕ್ಕೆ ಇವನಿಗೆ
ರಾಜ ಪ್ರತಿಷ್ಠಾಪನ ಎಂಬ ಬಿರುದು ಇತ್ತು
ಪುತ್ತೂರಿನಲ್ಲಿ ವಿಜಯ ಮಹೇಂದ್ರನನ್ನು ಗೆದ್ದು ವಿಜಯ ಸ್ಥಂಭ ನೆಡಿಸಿದ್ದನು
ಒರಿಸ್ಸಾದ ಅರಸ ಪ್ರತಾಪ ರುದ್ರನ ಮೇಲೆ ದಾಳಿ ಮಾಡಿ ಶಾಂತಿ ಒಪ್ಪಂದದ ಜೊತೆಗೆ ಅವನ ಮಗಳಾದ ಜಗನ್ಮೋಹಿನಿಯನ್ನು ಮಧುವೆಯಾದನು
ಕೃತಿಗಳು
ಅಮುಕ್ತ ಮೌಲ್ಯದಾ ತೆಲುಗು ಭಾಷೆಯಲ್ಲಿ
ವಿಷ್ಣು ಚಿತ್ತಿಯಮು
ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜ ಕವಿಗಳಿದ್ದರು
ಅಲ್ಲಸಾನಿ ಪೆದ್ದನ್ನ - ಆಂದ್ರ ಕವಿ ಪಿತಾಮಹ
ನಂದಿ ತಿಮ್ಮಣ್ನ
ರಾಮಭದ್ರ
ದುರ್ಜಿಬಿ
ಮಲ್ಲಣ್ಣ
ಸೂರಣ್ಣ
ರಾಜಭೂಷ
ತೆನಾಲು ರಾಮಕೃಷ್ಣ
ಮಹಾ ಕವಿ ತಿಮ್ಮಣ ಇವನ ಕೃತಿ ಪಾರಿಜಾತ ಪಹರಣಮು
ರಾಮರಾಯ/ಅಳಿಯಾ ರಾಮರಾಯ
ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ 1565 ಜನವರಿ 23 ರಲ್ಲಿ ನಡೆಯಿತು
ವಿಜಯನಗರದ ಕೊನೆಯ ಅರಸನ : 3 ನೇಯ ರಂಗ ರಾಯ
1646 ರಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಯಿತು
ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ
ಕ್ರ ಸಂ ಹೆಸರು ದೇಶ ವರ್ಷ ಅರಸ
ನಿಕಲೋ ಕೊಂತಿ ಇಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ

ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ
ನಿಕೆಟಿನ್ ರಷ್ಯದ 1470 ರಲ್ಲಿ ವಿರೂಪಾಕ್ಷ ಅರಸನ
ಬಾರ್ಬೋಸ ಪೋರ್ಚುಗಲ್ 1514 – 1516 ರಲ್ಲಿ ಕೃಷ್ಣದೇವರಾಯನ
ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ
ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯ
ವಿಜಯನಗರ ಸಾಮ್ರಾಜ್ಯ
ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1.

1 ನೇ ಹರಿಹರ - 1336 – 13562.
1 ನೇ ಬುಕ್ಕ - 1356 – ೧೩೭೭
3. 2ನೇ ಹರಿಹರ - 1377 – ೧೪೦೪
4. 1 ನೇ ವಿರುಪಾಕ್ಷಾ - 1404 – ೧೪೦೫
5.2ನೇ ಬುಕ್ಕ - 1405 – ೧೪೦೬
6. 1 ನೇ ದೇವರಾಯ - 1406 – ೧೪೨೨
7. ರಾಮಚಂದ್ರ - 1422 – ೧೪೨೨
8. ವೀರ ವಿಜಯ - 1422 – ೧೪೨೪
9.2 ನೇ ದೇವರಾಯ ( ಫ್ರೌಢ ದೇವರಾಯ ) – 1424 – ೧೪೪೬
೧೦ ಮಲ್ಲಿಕಾರ್ಜುನ - 1466 – ೧೪೬೫
11. 2 ನೇ ವಿರೂಪಾಕ್ಷ - 1465 ೧೪೮೫
12. ಫ್ರೌಢದೇವರಾಯ - ೧೪೮೫
ಸಾಳ್ವ ವಂಶ
13.ಸಾಳುವ ನರಸಿಂಹ - 1485 – ೧೪೯೧
14 ತಿಮ್ಮ ಭೂಪ - ೧೪೯೧
15. 2 ನೇ ನರಸಿಂಹ - 1491 – ೧೫೦೩ ತುಳುವ ವಂಶ
16. ವೀರ ನರಸಿಂಹ - ೧೫೦೩ – ೧೫೦೫
17.2 ನೇ ನರಸಿಂಹ - 1050 – ೧೫೦೯
18. ಕೃಷ್ಮದೇವರಾಯ - ೧೫೦೯ – ೧೫೨೯
19. ಅಚ್ಚುತ ರಾಯ - 1529 – ೧೫೪೨
20. 1 ನೇ ವೆಂಕಟರಾಯ - ೧೫೪೨
21. ಸದಾಶಿವರಾಯ - 1542 – 1570ಸಂಗಮ ವಂಶ
22. ತಿರುಮಲ ರಾಯ -
23. 1 ನೇ ವೆಂಕಟರಾಯ
24. ಶ್ರೀರಂಗರಾಯ
25. 2 ನೇ ವೆಂಕಟಾದ್ರಿ
26. 2 ನೇ ಶ್ರೀರಂಗ
27. ರಾಮದೇವ ( ಮಂತ್ರಿ ವಿಚ್ಚಮ ನಾಯಕ )
.28. 3 ನೇ ವೆಂಕಟ ರಾಯ
29. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ
30. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
31. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
32. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
33. ಬಾರ್ಬೋಸ ಪೋರ್ಚುಗಲ್ ದೇಶದವ 1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
34. ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
35. ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ
ಹುಟ್ಟಿಗೆ ಕಾರಣವಾದ ಅಂಶ

36. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ ಭಂಗವುಂಟುಮಾಡಿದ್ದು
37. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
38. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್ ವಿಫಲವಾಗಿದ್ದು
39. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ ವಾತಾವರಣ ಉಂಟಾಗಿದ್ದು .ರಾಜಕೀಯ ಇತಿಹಾಸವಿಜಯ ನಗರವನ್ನಾಳಿದ ವಂಶಗಳು
40. ಸಂಗಮ ವಂಶ 1336 – ೧೪೮೫ - ರಾಜಧಾನಿ ಹಂಪಿ
41. ಸಾಳುವ ವಂಶ ೧೪೮೫ – 1505 ರಾಜಧಾನಿ ಹಂಪಿ
42. ತುಳುವ ವಂಶ 1505 – 1570 ರಾಜಧಾನಿ ಹಂಪಿ , ಪೆನುಗೊಂಡ
43. ಅರವೀಡು ವಂಶ 1570 – 1646 - ರಾಜಧಾನಿ ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರಿ
44. ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದವರು - ಸಂಗಮನ ಮಕ್ಕಳಾದ - ಹರಿಹರ ಮತ್ತು ಬುಕ್ಕರು
45. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು - ಕ್ರಿ.ಶ.೧೩೩೬
46. ಬಹಮನಿ ಸಾಮ್ರಾಜ್ಯ ಅಸ್ತತ್ವಕ್ಕೆ ಬಂದಿದ್ದು - ಕ್ರಿ.ಶ - 1347 ರಲ್ಲಿ
47. ವಿಜಯನಗರ ಅರಸುರುಗಳಲ್ಲಿ ಅತ್ಯಂತ ಸಮರ್ಥನಾದ ಅರಸ - ಕೃಷ್ಮದೇವರಾಯ
48. ಕೃಷ್ಮದೇವರಾಯನ ನಿಷ್ಠಾವಂತ ಪ್ರಧಾನಿ - ತಿಮ್ಮರಸ
49. " ಯವನ ರಾಜ್ಯ ಪ್ರತಿಷ್ಠಾನ ಚಾರ್ಯ ’ ಎಂಬ ಬಿರುದನ್ನು ಕೃಷ್ಣದೇವರಾಯ ಪಡೆದನು
50. ಕೃಷ್ಣದೇವರಾಯನ ವಿರುದ್ದ ಜಿಹಾದ್ ಯುದ್ದವನ್ನು ಸಾರಿದವನು - ಬೀದರ್ ನ ಬಹಮನಿ ಸುಲ್ತಾನ ಮಹಮ್ಮದ್ ಷಾ ಹಾಗೂ ಇಜಾಪುರಾದ್ ಸುಲ್ತಾನನಾದ .ಯೂಸುಫ್ ಆದಿಲ್ ಷಾ
51. ಈ ಧರ್ಮಯುದ್ದ ನಡೆದ ಪ್ರದೇಶ - ಕೋವಿಲ್ ಕೊಂಡ
52. ವಿಜಯನಗರ ಕೃಷ್ಣದೇವರಾಯನ ವಿರುದ್ದ ಹೋರಾಡಿದ ಉಮ್ಮತ್ತೂರಿನ ಪಾಳೆಗಾರ - ಗಂಗರಾಜ
53. ಗಂಗರಾಜನಿಂದ ವಶಪಡಿಸಿಕೊಂಡ ಪ್ರದೇಶ - ಶ್ರೀರಂಗ ಪಟ್ಟಣ್ಣ ಹಾಗೂ ಶಿವನ ಸಮುದ್ರ
54. ಕೃಷ್ಣದೇವರಾಯನನ್ನ ಎದುರಿಸಿದ ಒರಿಸ್ಸಾದ ದೊರೆ - ಪ್ರತಾಪರುದ್ರ
55. ಪೊರ್ಚುಗೀಸರೊಡನೆ ಉತ್ತಮವಾಗಿ ಸಂಬಂಧ ಹೊಂದಿದ್ದ ವಿಜಯನಗರದ ದೊರೆ - ಕೃಷ್ಣದೇವರಾಯ
56. ಕೃಷ್ಣದೇವರಾಯ ಸಾವನ್ನು ಕಂಡುಕೊಂಡಿದ್ದು - ಕ್ರಿ.ಶ.1529 ರಲ್ಲಿ
57. ತುಂಗಭದ್ರೆ ನದಿಗೆ ಅಡ್ಡಲಾಗಿ ಅಣಿಕಟ್ಟನ್ನು ನಿರ್ಮಿಸಿದ ವಿಜಯನಗರ ್ರಸ - ಕೃಷ್ಣದೇವರಾಯ
58. ಕೃಷ್ಣದೇವರಾಯ ತೋಡಿಸಿದ ಕಾಲುವೆ - ಕೊಡಗಲ್ ಹಾಗೂ ಬಸವಣ್ಣ ಕಾಲುವೆ
59. ಅಮುಕ್ತ ಮೌಲ್ಯದ ಕೃತಿಯ ಕರ್ತೃ - ಕೃಷ್ಣದೇವರಾಯ
60. ಅಮುಕ್ತ ಮೌಲ್ಯದ ಕತಿಯು - ತೆಲುಗು ಭಾಷೆಯಲ್ಲಿದೆ
61. ಅಮುಕ್ತ ಮೌಲ್ಯದ ಇನ್ನೋಂದು ಹೆಸರು - ವಿಷ್ಣುಚಿತ್ತಿಯಮು
62. ಕೃಷ್ಣದೇವರಾಯ ಆಸ್ಥಾನದಲ್ಲಿದ ಕವಿಗಳಿಗೆ - ಅಷ್ಟದಿಗ್ಗಜರು ಎಂದು ಕರೆಯವುರು
63. ಮನುಚರಿತಮು ಕೃತಿಯ ಕರ್ತೃ - ಅಲ್ಲಸಾನಿ ಪೆದ್ದಣ್ಣ
64. ಆಂದ್ರಾಕವಿತಾ ಪಿತಾಮಹಾ - ಎಂಬ ಬಿರುದನ್ನು ಹೊಂದಿದ್ದ ಕವಿ - ಅಲ್ಲಾಸಾನಿ ಪೆದ್ದಣ್ಣ
65. ನಂದಿ ತಿಮ್ಮಣ್ಮ ನ ಕೃತಿ - ಪಾರಿಜಾತಹರಣಮು
66. ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ - ಹಜಾರ ರಾಮಸ್ವಾಮಿ ಹಾಗೂ ವಿಠಲ ಸ್ವಾಮಿ ದೇವಲಾಯ
67. ಮಹಾನವಮಿ ದಿಬ್ಬ ಅಥವಾ ಸಿಂಹಾಸನ ವೇದಿಕೆ ್ಥಾವ ವಿಜಯಲಯ ನಿರ್ಮಿಸಿದವರು - ಕೃಷ್ಣದೇವರಾಯ
68. ತನ್ನ ತಾಯಿ ನಾಗಲೆಯ ಸ್ಮರಮಾರ್ಥವಾಗಿ ನಿರ್ಮಿಸಿದ ನಗರ - ನಾಗಲಾಪುರ
69. ಕೃಷ್ಣದೇವರಾಯ ನಂತರ ಅಧಿಕಾರಕ್ಕೆ ಬಂದವರು - ಅಚ್ಚುತರಾಯ
70. ಅಚ್ಚುತನ ವಿರೋಧಿ - ಅಳಿಯ ರಾಮರಾಯಅಳಿಯ ರಾಮರಾಯ
71. ಈತನ ಮಂತ್ರಿ - ತಿರುಮಲ
72. ಈತನ ಸೇನಾಧಿಕಾರಿ - ವೆಂಕಟಾದ್ರಿ
73. ತಾಳಿಕೋಟೆ ಯುದ್ದ ಗತಿಸಿದ ವರ್ಷ - ಕ್ರಿ.ಶ 1565 ರಲ್ಲಿ
74. ಯುದ್ದ ನಡೆದಿದ್ದು - ಷಾಹಿ ಮನೆತನ ಹಾಗೂ ವಿಜಯನಗರಕ್ಕೆ
75. ತಾಳಿಕೋಟೆ ಯುದ್ದದಲ್ಲಿ ವಿಜಯ ನಗರದ ಮನೆತನ ಸೋಲಲು ಕಾರಣ ಪ್ರಮುಖ ಕಾರಣ - ಸೈನಿಕ ಕಾರಣ
76. ತಾಳಿಕೋಟೆ ಯುದ್ದದ ನಂತರ ತಿರುಮಲನು ಪಲಾಯನ ಮಾಡಿದ್ದು - ಚಂದ್ರಗಿರಿಗೆ
77. " A forgotten Empire " ಅಥವಾ " ಮರೆತು ಹೋದ ಸಾಮ್ರಾಜ್ಯ " ಕೃತಿಯ ಕರ್ತೃ - Robert ಸೀವೆಲ್
78. ಹಂಪಿಯಲ್ಲಿ ಹುಲಿ ಹಾಗೂ ಇತರ ಕಾಡು ಪ್ರಾಣಿಗಳು ವಾಸಿಸುತ್ತಿದ್ದವು ಎಂಬ ಹೇಳಿಕೆಯನ್ನು ನೀಡಿದವರು - ಿಟಲಿಯ ಪ್ರವಾಸಿ ಫೆಡ್ರಿಕ್
79. ತುಳುವ ವಂಶದ ಆಳ್ವಿಕೆ ಅಂತ್ಯವಾಗಿದ್ದು - ಕ್ರಿ.ಶ. 1570 ರಲ್ಲಿ ಸದಾಶಿವ ರಾಯನನ್ನ ಕೊಲೆ ಮಾಡುವುದರೊಂದಿಗೆ ಅಂತ್ಯ ಕಂಡಿತು
80. ಹಂಪೆಯು ಈ ನದಿಯ ದಂಡೆಯ ಮೇಲಿದೆ - ತುಂಗಾ ಭದ್ರ
81. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ - ಹಂಪೆ
82. ಈ ರಾಜ್ಯದ ರಾಜ ಲಾಂಛನ - ವರಾಹ
83. ಹರಿಹರ ಹಾಗೂ ಬುಕ್ಕರು ತಂದೆ ಈ ರಾಜನ ಆಸ್ಥಾನದಲ್ಲಿದ್ದರು - ಕಂಪಲಯರಾಜ ್ಥವಾ ಕಂಪಿಲರಾಯ
84. ಕುಮಾರ ರಾಮನ ಕೃತಿಯ ಕರ್ತೃ - ನಂಜುಂಡಸಂಗಮ ವಂಶ
85. ಸಂಗಮ ವಂಶದ ಮೊದಲ ದೊರೆ - ಹರಿಹರ
86. ಇವನ ರಾಜಧಾನಿ - ಆನೆಗೊಂದಿ
87. ಹರಿಹರನ ಬಿರುದುದಗಳು - ಪೂರ್ವ ಪಶ್ಚಿಮ ಸಮುದ್ರಾದೇಶ್ವರ , ಭಾಷೆಗೆ ತಪ್ಪದ ರಾಯರ ಗಂಡ ರಾಜ ಪರಮೇಶ್ವರ , ಅರಿರಾಯ ವಿಭಾಡ , ಹಾಗೂ ವೇದಾಮಾರ್ಗ ಸ್ಥಾಪನ ಚಾರ್ಯ
88. ಮಥುರಾ ವಿಜಯಂ ಅಥವಾ ಕಂಪಣರಾಯ ವಿಜಯಂ ಕೃತಿಯ ಕ್ರತೃ - ಬುಕ್ಕರಾಯನ ಪತ್ನಿ - ಗಂಗಾಂಬಿಕೆ
89. ವೇದಾಮಾರ್ಗ ಪ್ರವರ್ತಕ ಎಂಬ ಬಿರುದನ್ನು ಹೊಂದಿದ್ದ ದೊರೆ - 1 ನೇ ಬುಕ್ಕರಾಯ
90. ಕರ್ನಾಟಕ ವಿದ್ಯಾ ವಿಲಾಸ ಬಿರುದಿನ ಕರ್ತೃ - 2 ನೇ ಹರಿಹರ
91. 1 ನೇ ದೇವರಾಯನ ಆಸ್ಥಾನಕ್ಕೆ ಾಗಮಿಸಿದ್ದ ವಿದೇಶಿ ಯಾತ್ರಿಕ - ನಿಕೋಲೋ ಕೊಂತಿ
92. 2 ನೇ ದೇವರಾಯನ ಮತ್ತೊಂದು ಬಿರುದು - ಗಜಬೇಂಟೆಕಾರ
93. ಈತನ ಆಸ್ಥಾನಕ್ಕೆ ಪರ್ಶಿಯಾದ ರಾಯಭಾರಿ - ಅಬ್ದುಲ್ ರಜಾಕ್
94. ಈತನ ಆಸ್ಥಾನ ಕವಿ - ಕುಮಾರ ವ್ಯಾಸಸಾಳುವ ವಂಶ
95. ಈ ಸಂತತಿಯ ಸ್ಥಾಪಕ - ಸಾಳುವ ನರಸಿಂಹತುಳುವ ವಂಶ
96. ತುಳುವ ವಂಶವನ್ನು ಆರಂಬಿಸಿದವರು - ವೀರನರಸಿಂಹ
97. ಕೃಷ್ಣದೇವರಾಯನ ಕಾಲವನ್ನು ದಕ್ಷಿಣ ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು ಕರೆಯಲಾಗಿದೆ
98. ಕೃಷ್ಣದೇವರಾಯನ ಪ್ರಧಾನ ಮಂತ್ರಿ - ಸಾಳ್ವ ತಿಮ್ಮರಸ
99. ದಕ್ಷಿಣ ಸಮುದ್ರಾಪತಿ ಎಂದು ಬಿರುದು ಹೊಂದಿದವರು - ಕೃಷ್ಣದೇವರಾಯನ
100. ಕೃಷ್ಣದೇವರಾಯನ ದಕ್ಷಿಣ ಸಮುದ್ರಾಪತಿ ಎಂಬ ಬಿರುದನ್ನ ಶ್ರೀಲಂಕಾದ ವೀರಬಾಹುವನ್ನ ಸೋಲಿಸಿ ಪಡೆದನುಪ್ರಮುಖ ಕೃತಿಗಳು
101. ಅಮುಕ್ತಮೌಲ್ಯದ ( ತೆಲುಗು ) ಜಾಂಬವತಿ ಕಲ್ಯಾಣ ( ಸಂಸ್ಕೃತ ) - ಇದರ ಕರ್ತೃ - ಕೃಷ್ಣದೇವರಾಯನ
102. ಕರ್ನಾಟಕ ಕೃಷ್ಣರಾಯ ಭಾರತ ಕಥಾ ಮಂಜರಿಯ ಕರ್ತೃ - ತಿಮ್ಮಣ್ಣ ಕವಿಅರವೀಡು ಸಂತತಿ
103. ಈ ಸಂತತಿಯ ಆರಂಬಿಕ ದೊರೆ - ತಿರುಮಲ104. ರಾಜಧಾನಿ - ಪೆನುಗೊಂಡ
105. ವಿಜಯನಗರ ಕೊನೆಯ ಅರಸ - 3 ನೇ ಶ್ರೀರಂಗರಾಯ
106. ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದು - 1681 ರಲ್ಲಿ
107. ಹಕ್ಕ ಬುಕ್ಕರು - ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನದಲ್ಲಿದ್ದರು
108. ವಿದ್ಯಾರಣ್ಯರ ಮೊದಲ ಹೆಸರು - ಮಾಧವ ( ಸಾಮ್ರಾಜ್ಯ ಸ್ಥಾಪಿಸಲು ಮಾರ್ಗದರ್ಶಕರು 1386 ಕಲ್ಲಿ ಕಾಲವಾದರು )109. ಹರಿಹರ - ಹೊಯ್ಸಳರ ಮಾಂಡಲಿಕ
110. ಬಹಮನಿ ಸಾಮ್ರಾಜ್ಯದ ಸ್ಥಾಪಕ - ಅಲ್ಲಾವುದ್ದಿನ್ ಹಸನ್ ಬಹಮನ್ ಷಾ
111. ತಾಳಿಕೋಟೆ ಕದನದ ಇನ್ನೋಂದು ಹೆಸರು - ರಕ್ಕಸತಂಗಡಿ 1565 ಜನವರಿ ೨೩
112. ವಿಜಯನಗರ ರಾಜಧಾನಿಯ ಈಗಿನ ಹೆಸರು - ಹಂಪೆ
113. ಗದುಗಿನ ನಾರಾಯಣಪ್ಪ ಎಂದು ಕುಮಾರವ್ಯಾಸನನ್ನ ಕರೆಯಲಾಗಿದೆ
114. ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದು ಪೋರ್ಚುಗೀಸ್ ರಾಯಭಾರಿ - ಅಲ್ಬುಕರ್ಕ್
115. " ಹಿಂದೂ ರಾಯ ಸುತ್ತಾಣ " ಎಂಬುದು ವಿಜಯ ನಗರ ಅರಸರ ವಿಶಿಷ್ಟ ಬಿರುದು .
116. ಈ ರಾಜವಂಶದ ಕುಲದೇವರು - ಶ್ರೀವಿರೂಪಾಕ್ಷ
117. ದಕ್ಷಿಮ ಬಾರತವನ್ನಾಳಿತ ಅರಸರಲ್ಲಿಯೂ ಶ್ರೇಷ್ಠ ಅರಸ - ಕೃಷ್ಣದೇವರಾಯ .
118. ಕೃಷ್ಣದೇವರಾಯನಿಗೆ " ಕನ್ನಡ ರಾಜ್ಯ ರಮಾರಮಣ " ಎಂಬ ಬಿರುದಿತ್ತು
119. ವಿಜಯ ನಗರದ ಪ್ರಾಚೀನ ರಾಜಧಾನಿ - ಆನೆಗೊಂಡಿ
120. ವಿಜಯನಗರ ಎಂಬ ಹೆಸರಿನಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಿದ ಕೀರ್ತಿ - ಬುಕ್ಕರಾಯನಿಗೆ ಸಲ್ಲುತ್ತದೆ .
121. ವಿಜಯನಗರ ದೇವಾಲಯಗಳಲ್ಲರುವ ಹೆಬ್ಬಾಗಿಲಿನ ಎತ್ತರವಾದ ಗೋಪುರಗಳನ್ನು - ರಾಯಗೋಪುರ ಎಂದು ಕರೆಯುವರು .
122. ಖುರಾನಿನ ಪ್ರತಿಗಳನ್ನು ತನ್ನ ಆಸ್ಥಾನದ ಎತ್ತರವಾದ ಪೀಠದ ಮೇಲೆ ಇರಿಸಿದ್ದ ಅರಸ - 2ನೇ ದೇವರಾಯ
123. ಹಕ್ಕಬುಕ್ಕರಿಗೆ ಸಾಮ್ರಾಜ್ಯ ಸ್ಥಾಪನೆಗೆ ಅಶೀರ್ವದಿಸಿದ ಗುರುಗಳ ಹೆಸರು - ಕಾಶೀ ವಿಲಾಪ ಕ್ರಿಯಾ ಶಕ್ತಿ ಯತಿಗಳು
124. ವಿಜಯನಗರ ಪ್ರಸ್ತುತ - ಬಳ್ಳಾರಿ ಜಿಲ್ಲೆಯಲ್ಲಿದೆ
125. 2 ನೇ ದೇವರಾಯನ ದಂಡ ನಾಯಕ - ಲಕ್ಕಣ ದಂಡೇಶ
126. ಲಕ್ಕಣ ದಂಡೇಶನ ಕೃತಿ - ಶಿತತ್ವ ಚಿಂತಾಮಣಿ
127. ಕರ್ನಾಟಕ ಭಾರತಿ ಕಥಾಮಂಜರಿಯ ಕರ್ತೃ - ಕುಮಾರವ್ಯಾಸ
128. ಕೃಷ್ಣದೇವರಾಯನ ಮಾತ ಪಿತೃಗಳು - ನರಸನಾಯಕ ಹಾಗೂ ನಾಗಲಾಂಬಿಕೆ
129. ತುಳುವ ವಂಶದ ಕೊನೆಯ ಅರಸ - ಸದಾಶಿವರಾಯ
130. ಅರವೀಡು ಸಂತತಿಯ ಕೊನೆಯ ಅರಸ - 3 ನೇ ಶ್ರೀರಂಗವಿಜಯ ನಗರದ ಆಡಳಿತ
131. ವಿಜಯನಗರದ ಪ್ರಾಂತ್ಯಧಿಕಾರಿಗಳಿಗೆ ಇದ್ದ ಪದನಾಮ - ನಾಯಕರ್
132. ಗ್ರಾಮ ಸಭೆಯ ಆಡಳಿತ - ಆಯಗಾರರು
133. ವಿಜಯನಗರ ಅರಸರು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಾಗಿ " ಬೆಮಚುಕಲ್ಲು " ಬಳಸಿದ್ದಾರೆ
134. ವಿಜಯನಗರ ಸಾಮ್ರಾಜ್ಯದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥನನ್ನು - ಸಂಪ್ರತಿ ಎಂದು ಕರೆಯುತ್ತಿದ್ದರು
135. ವಿಜಯ ನಗರ ಸಾಮ್ರಾಜ್ಯದ ನಾಣ್ಯಗಳು - ಹೊನ್ನು , ಪಗೋಡ , ಗದ್ಯಾಣ , ಹಗ , ವೀಸ , ಕಾಸು, ಮತ್ತು ಜೀತಲ್
136. ದಸರಾ - ಇವರ ರಾಷ್ಟೀಯ ಹಬ್ಬಲಾಗಿತ್ತು
137. ವಿಜಯನಗರ ಅರಸರ ಸಾಹಿತ್ಯಕ ಪ್ರಗತಿಯನ್ನು - " classical Age " ಎಂದು ಕರೆಯುವರು
138. ಜೈಮಿನಿ ಭಾರತ ಕೃತಿಯ ಕರ್ತೃ - ಲಕ್ಷ್ಮೀಶ
139. ತೊರವೆ ರಾಮಾಯಣದ ಕರ್ತೃ - ನರಹರಿ
140. ಮೊಹಿನಿ ತರಂಗಿನಿ ಯ ಕರ್ತೃ - ಕನಕದಾಸ
141. ಶೈವರ ಅಜಂತಾ - ಎಂದು ಕರೆಯಲ್ಪಡುವ ದೇವಾಲಯ - ಲೇಪಾಕ್ಷಿ
142. ಕರ್ನಾಟಕ ಸಂಗೀತದ ಪಿತಾಮಹಾ - ಪುರಂದರದಾಸರು
143. ವಿಜಯನಗರದ ಪ್ರಾಂತಿಯ ಆಡಳಿತದ ವಿಬಾಗಗಳು - ಮಂಡಲ ಮತ್ತು ಅಮರ ನಾಯಕ
144. ಮಹಾನಾಡು ಪ್ರಭು - ಜಿಲ್ಲಾಧಿಕಾರಿ
145. ಪಟ್ಟಣದ ಮುಖ್ಯಸ್ಥ - ಪಟ್ಟಣ ಸ್ವಾಮಿ
146. ಆಯಗಾರರು - ಗ್ರಾಮದ ಸೇವಕ
147. ಗ್ರಾಮದ ಮುಖಂಡ - ಗೌಡ ಅಥಾವ ರೆಡ್ಡಿ
148. ತಳಾರಿ - ಪೊಲೀಸ್ ಕಾರ್ಯವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ
149. ಅಗ್ರಹಾರದ ಆಡಳಿತವನ್ನು ನೋಡಿಕೊಳ್ಳುವವರು - ಮಹಾಜನ ಸಭೆ
150. ರಾಯರೇಖಾ ಪದ್ದತಿ - ಭೂಮಿಯನ್ನ ಅಳತೆ ಮಾಡುವ ಪದ್ದತಿ
151. ಕ್ರಿಸ್ತ ಪುರಾಣ ಕೃತಿಯ ಕರ್ತೃ - ಥಾಮಸ್ ಸ್ಟೀಫನ್
152. ಪುರಂದರ ದಾಸರು ಹುಟ್ಟಿದ್ದು - ಮಹಾರಾಷ್ಟ್ರದ ಪುರಂದರ ಗಡದಲ್ಲಿ 1484 ರಲ್ಲಿ ಜನಿಸಿದರು
153. ಪುರಂದರ ದಾಸರ ತಂದೆ ವರದಪ್ಪ ನಾಯಕ ತಾಯಿ - ಸರಸ್ವತಿ ಬಾಯಿ ಅಥಾವ ಲಕ್ಷ್ಮೀ ಬಾಯಿ
154. ಪುರಂದರ ದಾಸರು ಇವರ ಮೊದಲ ಹೆಸರು - ಶ್ರೀನಿವಾಸ ನಾಯಕ ಅಥಾವ ಕೃಷ್ಣಪ್ಪ ನಾಯಕ
155. ಪುರಂದರ ದಾಸರು ಇವರಿಗೆ ಪುರಂದರ ಎಂದು ಎಂದು ನಾಮಕರಣ ಮಾಡಿದವರು - ವ್ಯಾಸರಾಯರು
156. ಈಸ ಬೇಕು ಇದ್ದು ಜಯಿಸ ಬೇಕು - ಈ ಹೇಳಿಕೆಯನ್ನ ನೀಡಿದವರು - ಪುರಂದರ ದಾಸರು
157. ಪುರಂದರ ದಾಸರು ಅಂಕಿತ - ಪುರಂದರ ವಿಠಲಕನಕದಾಸರು
158. ಕನಕದಾಸರು ಹುಟ್ಟಿದ್ದು - ದಾರವಾಡ ಜಿಲ್ಲೆಯ ಬಾಡಾದಲ್ಲಿ
159. ಮಾತಾ ಪಿತೃಗಳು - ಬಚ್ಚಮ ಮತ್ತು ಬೀರಪ್ಪ
160. ಇವರ ಅಂಕಿತ - ಕಾಗಿನೆಲೆ ಆದಿಕೇಶವ
161. ಪ್ರಸಿದ್ದ ಕೃತಿ - ರಾಮ ದ್ಯಾನ ಚರಿತೆ162. ಸಂಗೀತ ಸಾರಂ ಕೃತಿಯ ಕರ್ತೃ - ವಿದ್ಯಾರಣ್ಯರು
163. ಭಾರತ ಇತಿಹಾಸದಲ್ಲಿ ಕವಯಿತ್ರಿಯೊಬ್ಬಳು ಬರೆದ ಪ್ರಪ್ರಥಮ ಸಂಸ್ಕೃತ ಇತಿಹಾಸ ಕೃತಿ - ಮಥುರಾ ವಿಜಯಂ
164. ವೀರ ಕಂಪಣ್ಣರಾಯ ಚರಿತ ಬರೆದವರು - ಗಂಗಾದೇವಿ
165. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ - ಲೇಪಾಕ್ಷಿಯ ಏಕಶೀಲೆಯ ನಂದಿ
166. ಲೇಪಾಕ್ಷಿಯ ವೀರಭದ್ರ ದೇವಾಲಯದ ಕರ್ತೃ - ವಿರೂಪಣ್ಣ
167. ವಿರೂಪಣ್ಣ ಈತ ಕೃಷ್ಣದೇವರಾಯನ - ಕೋಶಾಧಿಕಾರಿ
168. ಮಹಾಮಂಡಳೇಶ್ವರ - ಪ್ರಾಂತ್ಯಾಧಿಕಾರಿ
169. ಒಡೆಹ ಅಥವಾ ನಾಯಕ - ಇವರ ಬಿರುದು
170. ವೇದಾ ಪ್ರಕಾಶ ಕೃತಿಯ ಕರ್ತೃ - ಸಾಯಣ್ಣ

Thursday, April 28, 2011

ಮಾದರಿ ಪ್ರಶ್ನೆಗಳು

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?


- ಮಲ್ಲಬೈರೆಗೌಡ.


2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?


- ಟಿಪ್ಪು ಸುಲ್ತಾನ್.


3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?


- ಚಿತ್ರದುರ್ಗ.


4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?


- ಕೃಷ್ಣದೇವರಾಯ.


5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?


- ಪಂಪಾನದಿ.


6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?


- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.


7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?


- ಹೈದರಾಲಿ.


8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?


- ಶ್ರೀರಂಗ ಪಟ್ಟಣದ ಪಾಲಹಳ್ಳಿ.


9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?


- ಕಲಾಸಿಪಾಳ್ಯ.


10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?


- ಕೆಂಗಲ್ ಹನುಮಂತಯ್ಯ.


11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?


- 7


12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?


- "ಸರ್. ಮಿರ್ಜಾ ಇಸ್ಮಾಯಿಲ್"


13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?


- ರಾಮಕೃಷ್ಣ ಹೆಗ್ಗಡೆ.


14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?


- ದೇವನಹಳ್ಳಿ (ದೇವನದೊಡ್ಡಿ)


15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?


- ವಿಜಯನಗರ ಸಾಮ್ರಾಜ್ಯ.


16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?


ತಿರುಮಲಯ್ಯ.


17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?


- ಶ್ರೀರಂಗ ಪಟ್ಟಣದ ಕೋಟೆ.


18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?


- ಶಿವಮೊಗ್ಗ ಜಿಲ್ಲೆಯ ಮತ್ತೂರ್.


19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?


- ಶಿರಸಿಯ ಮಾರಿಕಾಂಬ ಜಾತ್ರೆ.


20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?


- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)


21) ರಾಯಚೂರಿನ ಮೊದಲ ಹೆಸರೇನು?


- ಮಾನ್ಯಖೇಟ.


22) ಕನ್ನಡದ ಮೊದಲ ಕೃತಿ ಯಾವುದು?


- ಕವಿರಾಜ ಮಾರ್ಗ


23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.


ಹಂಪೆ.


24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?


- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.


25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?


- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?


- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?


- ಮುಳ್ಳಯ್ಯನ ಗಿರಿ.


28) ಮೈಸೂರು ಅರಮನೆಯ ಹೆಸರೇನು?


- ಅಂಬಾವಿಲಾಸ ಅರಮನೆ.


29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?


- ಬಾಬಾ ಬುಡನ್ ಸಾಹೇಬ.


30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?


- ದಾವಣಗೆರೆ.


31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?


- ಆಗುಂಬೆ.


32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?


ಬೆಂಗಳೂರು ನಗರ ಜಿಲ್ಲೆ.


33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?


- ಹಲ್ಮಿಡಿ ಶಾಸನ.


34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?


- ನೀಲಕಂಠ ಪಕ್ಷಿ.


35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?


- ಕೆ.ಸಿ.ರೆಡ್ಡಿ.


36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?


- ಶ್ರೀ ಜಯಚಾಮರಾಜ ಒಡೆಯರು.


37) ಕರ್ನಾಟಕದ ಮೊದಲ ಕವಯತ್ರಿ ಯಾರು?


- ಅಕ್ಕಮಹಾದೇವಿ.


38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?


- ವಡ್ಡರಾದನೆ.


39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?


- ಮೈಸೂರು ವಿಶ್ವವಿಧ್ಯಾನಿಲಯ.


40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?


- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"


41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?


- ಪುರಂದರ ದಾಸರು.


42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?


- ರಾಯಚೂರು ಜಿಲ್ಲೆ.


43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?


- ರಾಮನಗರ.


44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?


- ಮಂಡ್ಯ ಜಿಲ್ಲೆ.


45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?


- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-


ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?


- ಗರಗ,


48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?


- ಕೊಡಗು.


49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?


- ಲಿಂಗನಮಕ್ಕಿ ಅಣೆಕಟ್ಟು.


50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?


- ಕುವೆಂಪು.
51) ವಿಶ್ವದ ಅತಿ ದೊಡ್ಡ ನಗರ ಯಾವುದು?


ನ್ಯೂಯಾರ್ಕ್ ನಗರ.


52) ಲಿಬರ್ಟಿ ಪ್ರತಿಮೆ ಯಾವದ ದೇಶದಲ್ಲಿದೆ?


- ಅಮೇರಿಕಾ


53) ಭಾರತದ ದಕ್ಷಿಣ ಭಾಗದ ತುತ್ತ ತುದಿ ಯಾವುದು?


- ಇಂದಿರಾ ಪಾಯಿಂಟ್.


54) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು ವಿಧ್ಯುತ್ ಸ್ಥಾವರ ಯಾವುದು?


- ಕೈಗಾ ಅಣು ವಿಧ್ಯುತ್ ಸ್ಥಾವರ.


55) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು ವಿಧ್ಯುತ್ ಸ್ತಾವರವಿದೆ?


- ಚಿತ್ರ ದುರ್ಗಾ.


56) ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು?


- ಬೆಳಗಾಂ.


57) ಮೈಸೂರು ಅರಮನೆಯ ವಿನ್ಯಾಸವನ್ನು ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆ. ಅ ಕಟ್ಟಡ ಯಾವುದು?


ಲೀಲಾ ಪ್ಯಾಲೇಸ್.


58) "ಷೋ ಮೇಕರ್ ಲೆವಿ ೯" ಧೂಮಕೆತುವನ್ನು ಕಂಡು ಹಿಡಿದವರು ಯಾರು?


- ಷೋ ಮೇಕರ್ ಲೆವಿ ೯


.59) "ತಾಜ್ ಮಹಲ್" ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ಆ ದೇವಾಲಯ ಯಾವುದು?


- "ತೇಜೋ ಮಹಾಲಯ"


60) ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು?


- ಶ್ರೀ ರಂಗ ಪಟ್ಟಣ.


61) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ "ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.


- ಶಿಕಾರಿಪುರದ ಮರುಗದ ಗ್ರಾಮ.


62) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು?


- ಚಾಮರಾಜ ನಗರ.


63) ವೈಧ್ಯಕೀಯ ಕ್ಷೇತ್ರದ ಪಿತಮಹಾಯ ಯಾರು?


- ಸುಶ್ರುತ.


64) ಅತಿ ವೇಗವಾಗಿ ಜನಸಂಖ್ಯಾ ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು?


- ಭಾರತ.


65) ಭವಿಷ್ಯದ ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ?


- ಚಂದ್ರ.


66) ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು?


- ಸಂಸ್ಕೃತ.


67) "ಇಗೋ ಕನ್ನಡ" ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು?


- ಪ್ರೊ. ಜಿ.ವೆಂಕಟಸುಬ್ಬಯ್ಯ.


68) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?


- "ಕರ್ನಾಟಕ ರತ್ನ ಸಿಂಹಾಸನ".


69) "ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು?


- ಛತ್ರಪತಿ ಶಿವಾಜಿ.


70) ವಿಶ್ವದ ಅತಿ ಎತ್ತರವಾದ ಎರಡನೆಯ ಶಿಖರ ಯಾವುದು?


- ಕೆ೨


71) ವಿಶ್ವದ ಅತಿ ಎತ್ತರವಾದ ೩ ನೆ ಶಿಖರ ಯಾವುದು?


- ಕಾಂಚನಚುಂಗ.


72) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?


- ಜಮ್ಮು-ಕಾಶ್ಮೀರ.


73) ಅಗಾಗ ಭೂಮಿಯಲ್ಲಿ ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ?


- 17 ಜ್ಯೋತಿರ್ವರ್ಷ.


74) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ ದೊರೆಯುತ್ತದೆ?


- ಅಂಡಮಾನ್ ಮತ್ತು ನಿಕೊಬಾರ್.


75) "ಶಾಸ್ತ್ರೀಯ ಭಾಷೆ"ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?


ಚೆನ್ನುಡಿ"
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು?


- ಚಿರತೆ.


77) ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?


- ನವಿಲು.


78) ಭಾರತೀಯರು ಯಾವ ದೇಶಕ್ಕೆ ಪ್ರಯಾಣಿಸಲು "ಪಾಸ್ ಪೋರ್ಟ್ ಮತ್ತು ವೀಸಾ"ದ ಅಗತ್ಯವಿಲ್ಲ?


- ನೇಪಾಳ


79) ಕನ್ನಡದ ಮೊದಲ ವಾಕಿ ಚಿತ್ರ ಯಾವುದು?


- ಸತಿ ಸುಲೋಚನ.


80)ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?


- ಸಿಪಿಯು (ಸೆಂಟ್ರಲ್ ಪ್ರಾಸೆಸ್ಸಿಂಗ್ ಯುನಿಟ್)


81) ಭಾರತ ಷೇರು ಮಾರುಕಟ್ಟೆ ಯಾವ ರಾಜ್ಯದಲ್ಲಿದೆ.


- ಮಹಾರಾಷ್ಟ್ರ.


82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು?-


Lt. ಶ್ರೀ ಪಿಂಗಲಿ ವೆಂಕಯ್ಯ.


83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು?


- ನೈಲ್ ನದಿ.


84) ವಿಶ್ವದಲ್ಲೇ ಅತಿ ಉದ್ದವಾದ ಹೆದ್ದಾರಿ ಯಾವುದು?


- ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)


85) ಭಾರತದಲ್ಲಿರುವ ಮರುಭೂಮಿ ಯಾವುದು?


- ಥಾರ್ ಮರುಭೂಮಿ.


86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು?


- ಸಹರ ಮರುಭೂಮಿ.


87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?


- ಬ್ರೆಜಿಲ


88) "ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು?


- ಡುರಾಂಡ್ ಲೈನ್.


89) ಭೂಮಿಯಲ್ಲಿ ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?


- ಸೈಬಿರಿಯಾದ ವೆರ್ಕೊಯನ್ಸ್ಕ್.


90) ಜಪಾನಿಯರು ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ?


- ನಿಪ್ಪೋನ್.


91) ಮೊಟ್ಟ ಮೊದಲು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು?


- ಇಂಗ್ಲೆಂಡ್.


92) "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?


- ನೆಲ್ಸನ್ ಮಂಡೇಲಾ.


93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು?


- ಥೈಲ್ಯಾಂಡ್.


94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು?


- ಸಲ್ತೋ ಏಂಜೆಲ್ ಜಲಪಾತ.


95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು?


- ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.


96) ವಿಶ್ವದ ಅತಿ ದೊಡ್ಡ "ವಸ್ತುಸಂಗ್ರಹಾಲ"ಯ ಯಾವುದು?


- ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತು ಸಂಗ್ರಹಾಲಯ)


97) ವಿಶ್ವದ ಅತಿ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?


- ಕಿಂಗ್ ಕಾಲಿದ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)


98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು?


- ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.


99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು?


- ಒಶಿಂಜು ಟುನೆಲ್.


100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ?


- ಲಂಡನ್.
101) ಭಾರತದ ರಾಜಧಾನಿ ಯಾವುದು?


- ದೆಹಲಿ


102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?


- ಹಾಸನ.


103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?


- ದಾರವಾಡ.


104) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ?


- ಬಳ್ಳಾರಿ.


105) "ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು?


-ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.


106) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?


- ದಿ ಗ್ರಾಂಡ್ ಅಶೋಕ.


107) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?


- ರಂಗನತಿಟ್ಟು.


108) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?


- ಹೊಯ್ಸಳ.


107) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?


- ಬೆಂಗಳೂರು ಮತ್ತು ಯಲಹಂಕ.


108) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?


- ಕರ್ನಾಟಕ.


109) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?


- ಮೇಲುಕೋಟೆ.


110) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?


- ಕೃಷ್ಣರಾಜ ಸಾಗರ


111) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು?


- ಶ್ರೀ ರಂಗಪಟ್ಟಣದ ಕೋಟೆ.


112) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?


- ಮಧುಗಿರಿ.


113) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?


- ರಾಷ್ಟ್ರಕೂಟರ ಸಾಮ್ರಾಜ್ಯ.


114) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು?


- ಶ್ರೀ ಕೃಷ್ಣ ದೇವಾರಾಯ.


115) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?


- ಒಂದನೇ ಹರಿಹರ (ಹಕ್ಕ ಮಹಾಶಯ)


116) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?


- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?


117) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?


- ಹೊನ್ನಪ್ಪ ಭಾಗವತರ್.


118) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?


- ಪ್ರತಿಭಾದೇವಿ ಸಿಂಗ್ ಪಾಟಿಲ್.


119) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ


- ೨೨೪


120) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?


- ಸಕ್ರೆ ಬೈಲು.


121) ಮೈಸೂರು ಅರಮನೆಯ ವಿನ್ಯಾಸಕ ಯಾರು?


- ಹೆನ್ರಿ ಇರ್ವಿನ್.


122) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?


- ಚೆನ್ನೈ.


123) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ?


- ಕೆಂಪು ಭವನ, (ಲಾಲ್ ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು?


- ರೈಟಾ ಸಹೋದರರು.


125) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?


- ಅಕ್ಟೋಬರ್ ೧ನೇಯಾ 1854


126) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?


- ಜೂಲಿಯಸ್ ಸಿಜ್ಹಲ್.


127) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?


- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦


128) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?


- ೩೦


129) ಕನ್ನಡದ ಮೊದಲ ಸಾಹಿತಿ ಯಾರು?


- ಗಂಗರ ಕಾಲದ "ಧ್ರುವನೀತ ಚಾವುಂಡರಾಯ".


1೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?


- ಕದಂಬ ಸಾಮ್ರಾಜ್ಯ.


131) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.


- ಉತ್ತರ ಕನ್ನಡ ಜಿಲ್ಲೆ.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?


- ಹಳೇಬೀಡು.


133) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?


- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"


134) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?


- ಆಲೂರು ವೆಂಕಟರಾಯರು.


135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?


- ಬೀದರ್.


136) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?


- ನೀಲ್ ಆರ್ಮ್ ಸ್ಟ್ರಾಂಗ್.


137) ದೂರವಾಣಿಯನ್ನು ಕಂಡುಹಿಡಿದವರು ಯಾರು?


- ಗ್ರಾಂಬೆಲ್


138) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?


- ಥಾಮಸ್ ಅಲ್ವ ಎಡಿಸನ್


139) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?


- ಮಾರ್ಕೋನಿ.


140) "ನಿತ್ಯೋತ್ಸವ"ವನ್ನು ಕರೆದವರು ಯಾರು?


- ಕೆ. ಎಸ್ ನಿಸಾರ್ ಅಹಮದ್.


141) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?


- ಭಾರತ.


142) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?


- ಕೌಶಿಕ ಅನಂತಸುಬ್ಬರಾಯರು.


143) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?


- ಗಜಶಾಸ್ತ್ರ.


144) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?


- ಲೋಕೋಪಕಾರ.


145) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?


- ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.


146) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?


- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ.


147) ಕ್ರಿ.ಶ.1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕವನ್ನು ಬರೆದವರು ಯಾರು?


- ರಟ್ಟಕವಿ ಎಂಬ ಕೃಷಿ ವಿಜ್ಞಾನಿ.


148) ಮಹಾರಾಷ್ಟ್ರದಲ್ಲಿ ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನೂ ಏನೆಂದು ಕರೆಯುತಾರೆ?


- "ಹೇಮಾಡಪಂತೀ" ಗುಡಿಗಳು.
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ?


- ತುಳು



150. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು?



-1857





Tuesday, April 26, 2011

ಆಧುನಿಕ ಭಾರತ ಇತಿಹಾಸ

ಆಧುನಿಕ ಭಾರತ ಇತಿಹಾಸ
ಭಾರತೀಯ ಪುನುರುಜ್ಜೀವನ
I. ರಾಜ ರಾಂ ಮೋಹನ್ ರಾಯ್- ಭಾರತೀಯ ಪುನುರುಜ್ಜೀವನದ ಪಿತಾಮಹಾ
ಜನನ: 1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧನಗರ್
ತಂದೆ : ರಮಾಕಾಂತ್ ರಾಯ್
ತಾಯಿ: ತಾರಿಣಿ ದೇವಿ
1814 ರಲ್ಲಿ ಅತ್ಮೀಯ ಸಭಾ ಸ್ಥಾಪನೆ ಇದು 1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಬ್ರಹ್ಮಸಮಾಜವಾಗಿ ಪರಿವರ್ತನೆಯಾಯಿತು
1829 ರ ಡಿಸೆಂಬರ್ 4 ರಂದು ಸತಿ ಪದ್ಧತಿ ನಿಷೇಧ ಈ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷ್ ರ ಗೌರ್ನರ್
ಜನರಲ್ ಆಗಿದ್ದರು ವಿಲಿಯಂ ಬೆಲ್ಯೂಕ್
ಬಿರುದುಗಳು: ಭಾರತೀಯ ಪುರುಜ್ಜೀವನದ ಪಿತಾಮಹಾ
ಭಾರತದ ರಾಷ್ಟ್ರೀಯತೆಯ ಪಿತಾಮಹಾ
ಭಾರತೀಯ ಪುರುಜ್ಜೀವನದ ಉಷಾತಾರೆ
ಅಧುನಿಕ ಬಂಗಾಳ ಗದ್ಯ ಸಾಹಿತ್ಯದ ಪಿತಾಮಹಾ
ಭಾರತೀಯ ಪತ್ರಿಕೋದ್ಯಮದ ಪ್ರವರ್ತಕ
1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಸ್ಥಾಪಿತವಾದ ಬ್ರಹ್ಮಸಮಾಜ ರಾಜ ರಾಂ ಮೋಹನ್ ರಾಯ್ ರವರ ಮರಣದ ನಂತರ
ವಿಭಜನೆಯಾಯಿತು: ದೇವೆಂದ್ರನಾಥ್ ಠಾಗೋರ್ ರವರಿಂದ ಅಧಿ ಬ್ರಹ್ಮ ಸಮಾಜ
ಕೇಶವ್ ಚಂದ್ರ ರವರಿಂದ ಭಾರತೀಯ ಬ್ರಹ್ಮ ಸಮಾಜ
2 ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ರಸ ಋಷಿ
ಮೂಲಹೆಸರು: ಮೂಲಶಂಕರ
ಜನನ: 1824 ರಲ್ಲಿ ಗುಜರಾತಿನ ತಂಕಾರ ಗ್ರಾಮ
ತಂದೆ : ಅಂಬ ಶಂಕರ ತಿವಾರಿ
ತಾಯಿ: ಅಮೃತ ಭಾಯಿ
1875ರ ಏಪ್ರಿಲ್ 10 ರಂದು ಲಾಹೋರ್ ನಲ್ಲಿ ಮೊದಲ ಆರ್ಯ ಸಮಾಜ ಸ್ಥಾಪನೆ
1877 ರಲ್ಲಿ ಮುಂಬೈನಲ್ಲಿ 2 ನೆ ಶಾಖೆ ಪ್ರಾರಂಭ
ತನ್ನ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶನ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು
ಇದು ಆರ್ಯರ ಬೈಬಲ್
ಇವರ ಇರ ಕೃತಿಗಳು : ವೇದ ಭಾಷ್ಯ ಭೂಮಿಕ, ಭಾರತ ಭಾರತೀಯರಿಗೆ
3. ಸ್ವಾಮಿ ವಿವೇಕಾನಂದ 1863 ರಿಂದ 1902
ಮೂಲ ಹೆಸರು: ನರೇಂದ್ರ ನಾಥ ದತ್ತ
ಇವರಿಗೆ ಆಧ್ಯಾತ್ಮಿಕ ದಿವ್ಯ ಪುರುಷ ಎನ್ನುವರು
ಜನನ: 1863 ಜನವರಿ 12 ರಂದು : ಇದನ್ನು ವಿಶ್ವ ಯುವಕ ದಿನವನ್ನಾಗಿ ಆಚರಿಸುತ್ತಾರೆ
ತಂದೆ ವಿಶ್ವನಾಥ ದತ್ತ
ತಾಯಿ: ಭುವನೇಷ್ವರಿ
ಇವರ ಗುರು: ರಾಮಕೃಷ್ಣ ಪರಮ ಹಂಸ
1893 ಮೇ 31 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಸಿದ್ದರು
1897 ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ : ರಾಮಕೃಷ್ಣ ಮಿಷಿನ್ ಸ್ಥಾಪನೆ
ಸಂದೇಶ: ಯುವಕರೇ ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ
ಜನರ ಸೇವೆಯೇ ಜನರ್ಧಾನ ಸೇವೆ
ಪತ್ರಿಕೆಗಳು: ಪ್ರಭುಧ್ದ್ ಭಾರತ, ಉದ್ಬೋದನ
ಬಿರುದು: ವೇದಾಂತ ಕೇಸರಿ
4. ಸರ್ ಸೈಯದ್ ಅಹ್ಮದ್ ಖಾನ್ 1817 ರಿಂದ 1898
ಮುಸ್ಲಿಂ ಸಮುದಾಯದ ಉದ್ಧಾರಕ್ಕೆ ಅಲಿಘಡ್ ಚಳುವಳಿ ಪ್ರಾರಂಬಿಸಿದರು
ಅಂಜುಮಾನ್ ಸೇವಾ ಸಂಘ ಸ್ಥಾಪಸಿದರು
ಇವರು ಮುಸ್ಲಿಂ ಧರ್ಮದ ವೃದ್ಧ ಪಿತಾಮಹಾ
1875 ರಲ್ಲಿ ಅಲೀಘಡ್ ದಲ್ಲಿ ಓರಿಯಂಟಲ್ ಕಾಲೇಜ್ ಸ್ಥಾಪನೆ
ಮುಂದೆ ಇದು ಅಲೀಘಡ್ ವಿಶ್ವ ವಿದ್ಯಾಲಯವಾಯಿತು
1888 ರಲ್ಲಿ ಇವರಿಗೆ " ನೈಟ್ ಹುಡ್" ಪ್ರಶಸ್ತಿ ನೀಡಲಾಯಿತು
ಪತ್ರಿಕೆಗಳು: ತಹಜಿಲ್-ಉಲ್-ಅಖ್ಲಾಕ್
5.ಡಾ. ಅನಿಬೆಸೆಂಟ್
ಕಾಲ: 1846 ರಿಂದ 1933
ಇವರು ಐರೀಷ್ ಮಹಿಳೆ
1846 ರಲ್ಲಿ ಐರ್ಲ್ಯಾಂಡಿನಲ್ಲಿ ಜನನ
1893 ರಲ್ಲಿ ಥಿಯೋಸಾಪಿಕಲ್ ಸೊಸೈಟಿಯ ಸದಸ್ಯರಾಗಿ ಭಾರತಕ್ಕೆ ಬಂದರು
1907 ರಲ್ಲಿ ಇದರ ಅಧ್ಯಕ್ಷರಾದರು
ಕಾಂಗ್ರೇಸ್ಸಿನ ಪ್ರಥಮ ಮಹಿಳಾ ಅದ್ಯಕ್ಶೆ ಇವರು
1916 ರಲ್ಲಿ ಚನೈನ ಅಡಿಯಾರ್ ನಲ್ಲಿ ಹೋಂರೂಲ್ ಚಳುವಳಿ ಸ್ಥಾಪಿಸಿದರು
ಪತ್ರಿಕೆ: ಇಂಡಿಯಾ ಪತ್ರಿಕೆ ಆರಂಭಿಸಿದರು
ಕಾಂಗ್ರೇಸ್ಸಿನ ಪ್ರಥಮ ಭಾರತೀಯ ಮಹಿಳೆ : ಶ್ರೀಮತಿ ಸರೋಜಿನಿ ದೇವಿ ನಾಯ್ಡು
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (INC-INDIAN NATIONAL CONGRESS) ಸ್ಥಾಪನೆ
1885 ರಲ್ಲಿ ಮುಂಬೈನಲ್ಲಿ ಎ. ಓ. ಹ್ಯೂಂ. (A O HUME) ರಿಂದ ಸ್ಥಾಪನೆ
ಅಧಿವೇಶನ
ವರ್ಷ
ಸ್ಥಳ
ಅದ್ಯಕ್ಷರು
ಪ್ರಥಮ
1885 ಡಿಸೆಂಬರ್ 28 ರಿಂದ 30
ಮುಂಬೈ
WC ಬ್ಯಾನರ್ಜಿ
ದ್ವಿತೀಯಾ
1886
ಕಲ್ಕತ್ತಾ
ದಾದಾ ಬಾಯಿ ನವರೋಜಿ
ತೃತೀಯಾ
1887
ಮದ್ರಾಸ್
ಬದ್ರುದ್ದೀನ್ ತಯಾಬ್ಜಿ
4 ನೇಯದು
1888
ಅಲಹಾಬಾದ್
ಜಾರ್ಜ್ ಯುಲೆ

1907
ಸೂರತ್
ರಾಸ್ ಬಿಹಾರಿ ಬೋಷ್
ಕಾಂಗ್ರೇಸ್ ಸ್ಥಾಪನೆ ಉದ್ದೇಶ
1. ಭಾರತದಲ್ಲಿ ಬ್ರಿಟೀಶರ ಆಡಳಿತಕ್ಕೆ ಒತ್ತಾಯಿಸುವುದು
2. ಭಾರತೀಯರಲ್ಲಿ ಜಾಗೃತಿ ಮೂಡಿಸುವುದು
3.ಬ್ರಿಟೀಶರ ಆಡಳಿತದಲ್ಲಿ ಭಾರತೀಯರು ಹೆಚ್ಚು ಹೆಚ್ಚು ಪಾಲ್ಗೊಳ್ಳೂವಂತೆ ಒತ್ತಾಯಿಸುವುದು
4.ಸಂವಿಧಾನದ ಸುದಾರಣೆಗೆ ಒತ್ತಾಯಿಸುವುದು
5.ವಿದೇಶದಲ್ಲಿ ಭಾರತೀಯರ ಹಿತವನ್ನು ಕಾಪಾಡುವುದು
6.ಭಾರತೀಯರ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು
7.ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವುದು.

ಮಂದಗಾಮಿಗಳು : 1885 ರಿಂದ 1905
ಸಂವಿಧಾನಾತ್ಮಕ ಹೋರಾಟದಲ್ಲಿ ನಂಬಿಕೆಯಿಟ್ಟು ಶಾಂತಿಯುತವಾಗಿ ಪ್ರತಿಭಟನೆ ಮಾಡುವರು
ನಾಯಕರಗಳು: ದಾದಬಾಯಿ ನವರೋಜಿ, ಗೋಪಾಲ್ ಕೃಷ್ಣ ಗೋಖಲೆ, ಮೆಹ್ತಾ, WC ಬ್ಯಾನರ್ಜಿ, ಬದ್ರುದ್ದೀನ್ ತಯಾಬ್ಜಿ, ಸುರೇಂದ್ರನಾಥ್ ಬ್ಯಾನರ್ಜಿ, M G ರಾನಡೆ,
ಬ್ರಿಟೀಶ್ ಸರ್ಕಾರದ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ತೋರಿಸಿಕೊಟ್ಟವರು "ದಾದ ಬಾಯಿ ನವರೋಜಿ "
ತನ್ನ ಕೃತಿಯಾದ Poverty and un-British rule in India ದಲ್ಲಿ
1905 ರಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ವಿದೇಶದಲ್ಲಿನ ಭಾರತೀಯರ ರಕ್ಷಣೆಗಾಗಿ ಸರ್ವೆಂಟ್ ಆಪ್ ಇಂಡಿಯಾ ಸ್ಥಾಪಿಸಿದರು
1885 ರಲ್ಲಿ INC ಸ್ಥಾಪನೆಯಾದಾಗ ಬ್ರಿಟೀಶ್ ವೈಸ್ ರಾಯ್ ಯಾಗಿದ್ದವರು ಲಾರ್ಡ್ ಡಫ್ರೀನ್
ತೀವ್ರಗಾಮಿಗಳು 1905 ರಿಂದ 1919 :
ಮಂದಗಾಮಿಗಳು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದಗ ತೀವ್ರಗಾಮಿಗಳು ಹುಟ್ಟುಕೊಂಡರು
ಇವರು ವಿಚಾರದಲ್ಲಿ ತೀವ್ರತೆಯನ್ನು ಹೊಂದಿದ್ದವರು,
ನಾಯಕರುಗಳು: ಲಾಲ್ ಬಾಲ್ ಪಾಲ್
ಲಾಲ ಲಜಪತ್ ರಾಯ್, ಬಾಲಗಂಗಾಧರನಾಥ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್ ಮತ್ತು ಅರವಿಂದ್ ಘೋಷ್
1905 ರಲ್ಲಿ ಬಂಗಾಲದ ವಿಭಜನೆಯಾಯಿತು: ಮಾಡಿದವರು ಲಾರ್ಡ್ ಕರ್ಜನ್ 1911 ರಲ್ಲಿ ಬಾಂಗ್ಲ ಒಗ್ಗೂಡಿಸಲಾಯಿತು.
ಭಾಲಗಂಗಾದರ ನಾಥ್ ತಿಲಕ್: ಇವರು ಲೋಕಮಾನ್ಯ ತಿಲಕರೆಂದು ಪ್ರಸಿದ್ದಿಯಾಗಿದ್ದರು
ಜನನ: 1856 ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಕಲ್ ಎಂಬಲ್ಲಿ
ಘೋಷಣೆ: "ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು"
ಪತ್ರಿಕೆಗಳು : ಮರಾಠಿ ಭಾಷೆಯ ಕೇಸರಿ ಮತ್ತು ಆಂಗ್ಲ ಭಾಷೆಯ ಮಾರಾಠ
ವಂಗ ಭಂಗ ಚಳುವಳಿಯನ್ನು ಸ್ಥಾಪಿಸಿದರು
1906 ರಲ್ಲಿ ಅಘಾಖಾನ್ ರವರಿಂದ ಡಾಕಾ ಮುಸ್ಲಿಂ ಲೀಗ್ ಸ್ಥಾಪನೆ
1916 ರಲ್ಲಿ ಹೋಂ ರೂಲ್ ಚಳುವಳಿ ಸ್ಥಾಪನೆ
ಲಾಲ ಲಜಪತ್ ರಾಯ್ ರು UNHAPPY ಕೃತಿಯನ್ನು ರಚಿಸಿದರು
ಗಾಂಧಿ ಯುಗ 1919 ರಿಂದ 1947:
ಇದರ ನಾಯಕರು ಮಹಾತ್ಮ ಗಾಂಧಿಜೀ
ಜನನ: 1869 ಅಕ್ಟೋಬರ್ 2 ರಂದು ಇದನ್ನು ವಿಶ್ವ ಅಹಿಂಸಾ ದಿನವನ್ನಾಗಿ ಅಚರಿಸುತ್ತಾರೆ.
ತಂದೆ: ಕರಮಚಂದ ಗಾಂಧಿ ತಾಯಿ: ಪುತಳೀ ಬಾಯಿ
1893 ರಲ್ಲಿ ಬಾಂಬೆ ದಾದ ಅಬ್ದುಲ್ಲಾ ಕಂಪನಿಯ ದಾವೆಯ ಮೊಖದ್ದಮ್ಮೆಯನ್ನು ಹೂಡಲು ಆಫ್ರೀಕಾಕಕ್ಕೆ ಹೋದರು
1915 ರಲ್ಲಿ ಭಾರತಕ್ಕೆ ಮರಳಿದರು ಆಗ ಗುಜರಾತ್ ನಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು ಉಪ್ಪುನ ಸತ್ಯಾಗ್ರಹವನ್ನು ಸಹಾ ಇಲ್ಲೇ ಪ್ರಾರಂಬಿಸಿದರು.
ದಕ್ಷಿಣ ಆಫ್ರೀಕಾದಲ್ಲಿ ನೀಟಾಲ್ ಇಂಡೀಯಾ ಎಂಬ ಪತ್ರಿಕೆ ಸ್ಥಾಪಿಸಿದರು
ಪತ್ರಿಕೆಗಳು END INDIA, ನವಜೀವನ
ಇವರ ಆತ್ಮಕಥನ: My experiment with Truth
1919 ರ ಪೆಬ್ರವರಿ 19 ರಂದು ರೌಲತ್ ಕಾಯಿದೆ ಜಾರಿಗೆ ಬಂತು
1919 ಏಪ್ರಿಲ್ 13 ರಂದು ಪಂಜಾಬ್ ನ ಜಲಿಯನ್ ವಾಲಾ ಬಾಗ್ ಹತ್ಯಕಾಂಡ ನಡೆಯಿತು.
ಇದೊಂದು ಅವಮಾನವೀಯ ಘಟನೆ, ಮೇಲ್ಕಂಡ ದಿನಾಂಕದಂದು ಪಂಜಾಬ್ ನ ಜಲಿಯನ್ ವಾಲ್ ಬಾಗ್ ಎಂಬ ಸ್ಥಳದಲ್ಲಿ ಜನರು ಸೇರಿ ಸಭೆ ನಡೆಸುತಿದ್ದರು ಈ ಸಭೆಯಲ್ಲಿ ಸ್ವಾಭಿಮಾನಿ ಭಾರತೀಯರೆಲ್ಲರು ಭಾಗವಹಿಸಿದ್ದರು, ಸಭೆ ಸೇರಿದ್ದ ಸ್ಥಳವೂ ಒಂದು ವಿಶಾಲವಾದ ಅಂಗಳವಾಗಿದ್ದು ಕೇವಲ ಒಂದೇ ಒಂದು ಪ್ರವೇಶ ದ್ವಾರವಿರುತ್ತದೆ ಆಗ ಅದನ್ನು ಗಮನಿಸಿದ ಬ್ರಿಟೀಶ್ ಸೇನಾನಿ ಜನರಲ್ ಡಯರ್ ಎಲ್ಲರ ಮೇಲೆ 1650 ಗುಂಡು ಹಾರಿಸುತ್ತಾನೆ ಈ ಘಟನೆಯಲ್ಲಿ 379 ಜನರು ಸತ್ತು 1208 ಜನ ಗಾಯಗೊಳ್ಳುತ್ತಾರೆ
ಖಿಲಾಪತ್ ಚಳುವಳಿ : 1919 ರಿಂದ 1923::: ಟರ್ಕಿಯಾ ಇಬ್ಬರು ಸಹೋದರರಾದ ಮಹ್ಮದ್ ಅಲಿ ಮತ್ತು ಶೌಕತ್ ಅಲಿ ಎಂಬುವುವರು ತಮ್ಮ ಚಳುವಳಿಗೆ ಮಹಾತ್ಮ ಗಾಂಧೀಜಿಯವರ ಸಹಾಯವನ್ನು ಪಡೆದುಕೊಳ್ಳುತಾರೆ ಇದನ್ನೆ ಖಿಲಾಪತ್ ಚಳುವಳಿ ಎನ್ನುತ್ತೇವೆ.
1923 ದೇಶಬಂಧು ಎಂದು ಖ್ಯಾತಿ ಪಡೆದ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು ರವರು ಸೇರಿ "ಸ್ವರಾಜ್" ಪಕ್ಷವನ್ನು ಸ್ಥಾಪಿಸಿದರು
ಆದರೆ 1926 ರಲ್ಲಿ ಚಿತ್ತರಂಜನ್ ದಾಸ್ ರವರ ಮರಣದ ನಂತರ ಇದೂ ಸಹ ಹಂತ್ಯವಾಯಿತು.
ಸೈಮನ್ ಕಮೀಷನ್: 1927 ರಲ್ಲಿ ಸೈಮನ್ ಆಯೋಗ(ಕಮೀಷನ್) ಭಾರತಕ್ಕೆ ಬಂದಾಗ ದೇಶದಾದ್ಯಂತ ವಿರೋಧಿಸಲಾಯಿತು. ಆಗ ನಡೆದ ಪೋಲಿಸರ ಲಾಠಿ ಚಾರ್ಜ್ ನಲ್ಲಿ ತೀವ್ರಗಾಮಿ ನಾಯಕರಲ್ಲೊಬ್ಬರಾದ ಲಾಲ ಲಜಪತ್ ರಾಯರು ಹತ್ಯವಾದರು
ಲಾಹೋರ್ ಕಾಂಗ್ರೇಸ್ಸು: 1929-1930: 1930 ಜನವರಿ 26 ರಂದು ಲಾಹೋರ್ ಅಧಿವೇಷನದಲ್ಲಿ "ಸ್ವರಾಜ್ಯ ಘೋಷಣೆ"ಯಾಯಿತು
ಅಸಹಕಾರ ಚಳುವಳಿ : 1920 ರಿಂದ 1922:: ಮಹಾತ್ಮ ಗಾಂಧೀಜಿಯವರು ಬ್ರಿಟೀಶ್ ಸರ್ಕಾರದ ವಿರುದ್ದ ಅಸಹಕಾರ ಚಳುವಳಿಯನ್ನು ಸಾರಿದ್ದರು ಆದರೆ 1922 ಪೆಬ್ರವರಿ 15 ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಗ್ರಾಮದಲ್ಲಿ ಭಾರತೀಯ ಸತ್ಯಾಗ್ರಹಿಗಳು ಪ್ರತಿಭಟನೆಯಲ್ಲಿ ಅಲ್ಲಿನ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಆಗ ಅದರಲ್ಲು 23 ಜನ ಪೋಲೀಸರು ಸಜೀವ ದಹನ ವಾದರು, ಅಹಿಂಸೆಯ ಮೂಲ ಮಂತ್ರದಿಂದ ಪ್ರತಿಭಟಿಸುತ್ತಿದ್ದ ಮಹಾತ್ಮ ಗಾಂಧೀಜಿಯವರಿಗೆ ಇದರಿಂದ ಬೇಸರವಾಗಿ ಅಸಹಕಾರ ಚಳುವಳಿಯನ್ನು ವಾಪಸ್ಸು ಪಡೆಯಲಾಯಿತು.
ಮಹಾತ್ಮ ಗಾಂಧೀಜಿಯವರು 1917 ರಲ್ಲಿ ಮೊಟ್ಟಮೊದಲ ಭಾರಿಗೆ ಚಂಪಾರಣ್ಯ ಎಂಬ ಸ್ಥಳದಲ್ಲಿ ಸತ್ರ್ಯಾಗ್ರಹದಲ್ಲಿ ಪಾಲ್ಗೊಂಡ್ಡರು
1918 ರಲ್ಲಿ ಗುಜರಾತ್ ನ ಖೇಡದಲ್ಲಿಯೂ ಸಹ ರೈತರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು
ಕಾನೂನು ಬಾಹಿರ ಚಳುವಳಿ :1930 ರಿಂದ 1934
ಉಪ್ಪಿನ ಸತ್ಯಾಗ್ರಹ
ಮಹಾತ್ಮ ಗಾಂಧೀಜಿಯವರು 1930 ರ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ದಂಡಿ ಮಾರ್ಗವಾಗಿ ಉಪ್ಪಿನ ಸತ್ಯಾಗ್ರಹ ಕೈಗೊಂಡರು
ಈ ಸತ್ಯಾಗ್ರಹದಲ್ಲಿ 78 ಜನ ಸತ್ಯಾಗ್ರಹಿಗಳಿದ್ದು ಮಹಾತ್ಮ ಗಾಂಧೀಜಿಯವರು ಅತ್ಯಂತ ಹಿರಿಯ ವ್ಯಕ್ತಿಯಾದರೆ
ಕರ್ನಾಟಕದ ಮೈಲಾರ ಮಹದೇವಪ್ಪ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು ಆಗ ಅವರ ವಯಸ್ಸು ಕೇವಲ 18
1930 ರ ಏಪ್ರಿಲ್ 30 ರಂದು ದಂಡಿ ತಲುಪಿದ ಸತ್ಯಾಗ್ರಹಿಗಳು ಒಂದು ಇಡಿ ಉಪ್ಪನ್ನು ತಯಾರಿಸಿ ರೂ 1600/- ಕ್ಕೆ ಅದನ್ನು ಹಾರಾಜು ಹಾಕಿ ಅದರ ಹಣವನ್ನು
ತಮ್ಮ ಸತ್ಯಾಗ್ರಹಿಗಳ ಹುಂಡಿಗೆ ಹಾಕಿದರು
ಭಾಗವಹಿಸಿದ ಇತರೆ ಸತ್ಯಾಗ್ರಹಿಗಳು ವಿಜಯ ಲಕ್ಷ್ಮಿ ಪಂಡಿತ್ ( ವಿಶ್ವ ಸಂಸ್ಥೆಯ ಪ್ರಥಮ ಮಹಿಳಾ ಭಾರತದ ಪ್ರತಿನಿಧಿ) , ಸರ್ದಾರ್ ವಲ್ಲಭ ಬಾಯ್ ಪಟೇಲ್ (ಉಕ್ಕಿನ ಮನುಷ್ಯ),
ಮೋತಿಲಾಲ್ ನೆಹರು ರವರ ಪತ್ನಿ ಸ್ವರೂಪ ರಾಣಿ, ಜವಹರಲಾಲ್ ನೆಹರು ( ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ) ಅವರ ಹೆಂಡತಿ ಕಮಲಾದೆವಿ ನೆಹರು,
ಮದನ್ ಗೋಪಾಲ್ ಮಾಳವೀಯಾ, KM ಮುನ್ಷಿ ಮತ್ತು ವಿಟ್ಠಲ ಭಾಯ್ ಪಟೇಲ್
ಕರನಿರಾಕರಣ ಚಳುವಳಿ:
1928 ರಲ್ಲಿ ಗುಜರಾತ್ ನ ಖೇಡ ಮತ್ತು ಬಾರ್ಡೋಲಿಯಲ್ಲಿ ನಡೆಯಿತು ಇದರ ನಾಯಕರು :ಮಹಾತ್ಮ ಗಾಂಧಿಜೀ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್
ಗಾಂಧಿ ಇರ್ವಿನ್ ಒಪ್ಪಂದ:
1931 ರ ಮಾರ್ಚ್ 5 ರಂದು ನಡೆಯಿತು ಇದರ ಮದ್ಯಸ್ಥಿಕೆ ವಹಿಸಿದ್ದವರು ಜಯಕರ್ ಮತ್ತು ಸಪ್ರೂ
ದುಂಡು ಮೇಜಿನ ಸಮ್ಮೇಳನ
ಸಮ್ಮೇಳನ
ಅವಧಿ
ನಡೆದ ಸ್ಥಳ
ಭಾರತದ ಪ್ರತಿನಿಧಿಗಳು
ಉದ್ದೇಶ
ಅಧ್ಯಕ್ಷರು
ರಿಂದ
ರವರಗೆ
ಮೊದಲನೇಯ
16 ನೇ ನವಂಬರ್
1930
19 ನೇ ಜನವರಿ
1931
ಇಂಗ್ಲೇಂಡ್
ಇದರಲ್ಲಿ 89 ಪ್ರತಿನಿಧಿಗಳು ಭಾಗವಹಿಸಿದ್ದರು ಭಾರತದಿಂದ ಡಾ ಬಿ. ಆರ್. ಅಂಬೇಡ್ಕರ್ ಮತ್ತು ಮೈಸೂರು ಸಂಸ್ಥಾನದ ದಿವಾನ ಸರ್ ಮಿರ್ಜಾ ಇಸ್ಮಾಯ್ಲಿ
RYM DONALD
ಎರಡನೇಯದು
7 ನೇ ಸೆಪ್ಟಂಬರ್
1931
1 ನೇ ಡಿಸಂಬರ್ 1931
ಇಂಗ್ಲೆಂಡ್
ಮೊದಲ ಭಾರಿಗೆ ಕಾಂಗ್ರೇಸ್ಸಿನ ಏಕೈಕ ಪ್ರತಿನಿಧಿಯಾಗಿ ಮಹಾತ್ಮ ಗಾಂಧೀಜು ಭಾಗವಹಿಸಿದರು
ಮುಸ್ಲಿಂ ಸಮುದಾಯದ ಪ್ರತಿನಿಧಿ: ಮಹ್ಮದ್ ಇಕ್ಬಾಲ್, ಕೈಗಾರಿಕೋದ್ಯಮದ ಪ್ರತಿನಿಧಿ: ಜಿ.ಡಿ. ಬಿರ್ಲಾ ಹಿಂದುಗಳ ಪರವಾಗಿ ಸರೋಜಿನಿ ದೇವಿ ನಾಯ್ಡು ಮತ್ತು ಮದನ್ ಮೋಹನ್ ಮಾಳವಿಯಾ
RYAM DONALD
3 ನೇಯದು
17 ನೇ ನವಂಬರ್
1932
24 ನೇ ಡಿಸೆಂಬರ್
1932
ಇಂಗ್ಲೆಂಡ್
ಎರಡನೇಯ ಸಮ್ಮೇಳನದಲ್ಲಿ ಮಹ್ಮದ್ ಅಲಿ ಜಿನ್ನ ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಅದೇ ರೀತಿ ಡಾ. ಬಿ ಅರ್ ಅಂಬೇಡ್ಕರ್ ತಮ್ಮ ನಿಮ್ನ ವರ್ಗದವರಿಗೆ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಇದರಿಂದ ಬೇಸತ್ತ ಮಹಾತ್ಮ ಗಾಂಧೀಜಿರವರು ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿ ಭಾರತಕ್ಕೆ ಬಂದರು ಮತ್ತು ಮಹಾರಷ್ಟ್ರದ
ಪೂನಾದಲ್ಲಿನ ಎರವಾಡ ಜೈಲ್ ನಲ್ಲಿ ಇದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು, ಅದಕ್ಕಾಗಿ ಪ್ರಮುಖ ನಾಯಕರಗಳು
ಡಾ,ಅಂಬೇಡ್ಕರ್ ರವರ ಮನವೊಲಿಸಿ ತಮ್ಮ ನಿರ್ದಾರವನ್ನು ಕೈ ಬಿಡಲು ಕೇಳೀಕೊಂಡ ನಂತರ ದಿನಾಂಕ 24ನೇಯ ಸೆಪ್ಟಂಬರ್ 1932
ರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಪೂನಾ ಒಪ್ಪಂದವಾಯಿತು.
ಕ್ಲಿಪ್ತ್ ಆಯೋಗ:
1942 ರಲ್ಲಿ ನಡೆಯಿತು
ಚಲೇಜಾವ್ ಚಳುವಳಿ:
1942 ರಲ್ಲಿ ನಡೆಯಿತು ಆಗ ಗಾಂಧೀಜಿಯವರು ಭಾರತದ ಜನತೆಗೆ ಮಾಡು ಇಲ್ಲವೇ ಮಡಿ ( DO OR DIE) ಎಂದು ಸಂದೇಶ ಕೊಟ್ಟರು
ಈ ಚಳುವಳಿಯ ನಾಯಕರು ಜಯಪ್ರಕಾಶ್ ನಾರಾಯಣ್
ಮೌಂಟ್ ಬ್ಯಾಟನ್ ಆಯೋಗ:
ಇವರು ಸ್ವಂತಂತ್ರ ಭಾರತದ ಮೊದಲ ಗೌರ್ನರ್ ಜನರಲ್, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೊಳಿಸಿದ ಗೌರ್ನರ್
ಸ್ವತಂತ್ರ ಭಾರತದ ಮೊದಲ ಭಾರತೀಯ ಗೌರ್ನರ್ ಜನರಲ್ ಸಿ. ರಾಜಗೋಪಾಲ ಚಾರಿ
ಬಂಗಾಳದ ಮೊದಲ ಗೌರ್ನರ್ - ರಾಬರ್ಟ್ ಕ್ಲೈವ್ 1757 ರಿಂದ 1760
ಬಂಗಾಳದ ಕೊನೆಯ ಗೌರ್ನರ್ - ವಾರ್ನ್ ಹೇಸ್ಟಿಂಗ್ಸ್ 1772 ರಿಂದ 1774
ಬಂಗಾಳದ ಮೊದಲ ಗೌರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್ 1774 ರಿಂದ 1785
ಬಂಗಾಳದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1823 ರಿಂದ 1833
(ಇವರ ಕಾಲದಲ್ಲಿ ಭಾರತದಲ್ಲಿ ಭಾಲಗಂಗಾಧರ್ ತಿಲಕ್ ರಿಂದ ಸತಿ ಸಹಗಮನ ಪದ್ಧತಿ ನಿರ್ಮೂಲವಾಯಿತು)
ಭಾರತದ ಮೊದಲ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1833 ರಿಂದ 1835
ಭಾರತದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ಕ್ಯಾನಿಂಗ್ 1856 ರಿಂದ 1858
ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್ - 1858 ರಿಂದ 1862
ಭಾರತದ ಕೊನೆಯ ವೈಸರಾಯ್ - ಲಾರ್ಡ್ ಮೌಂಟ್ ಬ್ಯಾಟನ್ ಇವರು ಬ್ರಿಟೀಶ್ ಸಾಮ್ರಾಜ್ಯದ ಕೊನೆಯ ಮತ್ತು
ಸ್ವತಂತ್ರ ಭಾರತದ ಮೊದಲ ವಿದೇಶಿ ಗೌರ್ನರ್ ಜನರಲ್
2ನೇಯ ಮಹಾಯುದ್ದದ ಸಂದರ್ಭದಲ್ಲಿ ಜಪಾನಿನಲಿ ಕೆಳಕಂಡ ಸ್ಥಳಗಳಲ್ಲಿ ಬಾಂಬ್ ಹಾಕಲಾಯಿತು
1945 ಆಗಸ್ಟ್ 6 ರಂದು ಹಿರೋಶಿಮಾ
1945 ಆಗಸ್ಟ್ 9 ರಂದು ನಾಗಸಾಕಿ
ಬಾಂಬ್ ಹೆಸರು : ಲಿಟ್ಲ್ ಬಾಯ್ ( littl boy)
1882 ರಲ್ಲಿ ವಿಶ್ವದಲ್ಲಿ ಪ್ರಪ್ರಥಮವಾಗಿ ಮೇಡಂ ಬ್ಲವಾಟಿ ಮತ್ತು ಕರ್ನಲ್ ಓಲ್ಕಾಟ್
ಥಿಯೋಸಾಪಿಕಲ್ ಸೊಸೈಟಿ ಸ್ಥಾಪಿಸಿದರು ( ಕನ್ನಡದಲ್ಲಿ ದಿವ್ಯಾ ಸಭಾ)
ಖಾಯಂ ಜಮೀನ್ದಾರಿ ಪದ್ಧತಿ:
1793 ರ ಮಾರ್ಚ್ 22 ರಂದು ಕಾರ್ನ್ವಾಲೀಸ್ ಬಂಗಾಳದಲ್ಲಿ ಸ್ಥಾಪಿಸಿದನು
ರೈತವಾರಿ ಪದ್ಧತಿ:
1820 ರಲ್ಲಿ ಮೊದಲು ಮದ್ರಾಸಿನಲ್ಲಿ ಮತ್ತು ನಂತರ ಮುಂಬೈ ನಲ್ಲಿ
ಥಾಮಸ್ ಮನ್ರೋ ಸ್ಥಾಪಿಸಿದ
ಕ್ರಾಂತಿ ಕಾರಿಗಳು:
ವಾಸುದೇವ ಬಲವಂತ್ ಫಡ್ಕೆ:
ಇವನು ಕ್ರಾಂತಿಯುಗದ ಪ್ರವರ್ತಕ ಎನ್ನುತ್ತಾರೆ, ಇವನು ಪೂನಾದಲ್ಲಿ ಜನಿಸಿದ
ವಿ ಡಿ ಸಾವರ್ಕರ್:
ಪೂರ್ಣ ಹೆಸರು ವಿನಾಯಕ ದಾಮದೋರ ಸಾವರ್ಕರ್
ಜನನ: ಮಹಾರಷ್ಟ್ರದಲ್ಲಿ
1857 ರ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ಕರೆದನು
1904 ರಲ್ಲಿ ಲಂಡನ್ ನಲ್ಲಿ ಅಭಿನವ ಭಾರತ ಎಂಬ ಗುಪ್ತ ಸಂಘವನ್ನು ಸ್ಥಾಪಿಸಿದನು
ಇನ್ಕ್ವಿಲಾಬ್ ಪತ್ರಿಕೆಯನ್ನು ಮೊದಲಿಗೆ ಹೊರಡಿಸಿದನು
ಮ್ಯಾಜಿನಿ ಎಂಬ ಪುಸ್ತಕವನ್ನು ಬರೆದು ಕ್ರಾಂತಿಕಾರಿಗೆಳಿಗೆ ಹಂಚಿದನು
ಕ್ರಾಂತಿಕಾರಿಗಳಲ್ಲಿ ಅತಿ ಹೆಚ್ಚು (ದೀರ್ಘ) ಕಾಲ ಜೈಲು ಶಿಕ್ಷೆ ಅನುಭವಿಸಿದವರಲ್ಲಿ ಇವರೇ ಮೊದಲಿಗರು
ಮದನ್ ಲಾಲ್ ಧಿಂಗ್ರಾ:
1909 ರಲ್ಲಿ ಕರ್ಜನ್ ಮೈಲ್ ಎಂಬುವವರನ್ನು ಗುಂಡಿಟ್ಟು ಕೊಂದರು
1909 ಅಗಸ್ಟ್ 17 ರಂದು ಗಲ್ಲುಗೇರಿಸಲಾಯಿತು
ಚಾಪೆಕರ್ ಸಹೋದರರು:
1897 ರ ಜನವರಿ 22 ರಂದು ಬಂಗಾಳದ ಪ್ಲೇಗ್ ಅಧಿಕಾರಿಯನ್ನು ಗುಂಡಿಟ್ಟೂ ಕೊಂದರು
ಇವರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು
ಬರೀಂದ್ರ ಕುಮಾರ್ ಘೊಷ್:
ಯುಗಾಂತರ ಪತ್ರಿಕೆ ಮತ್ತು ಭವಾನಿ ಮಂದಿರ ಪುಸ್ತಕವನ್ನು ಪ್ರಕಟಿಸಿದರು
ರಾಶ್ ಬಿಹಾರಿ ಬೋಸ್:
1912 ಡಿಸೆಂಬರ್ 23 ವೈಸ್ ರಾಯ್ ಲಾರ್ಡ್ ಹಾರ್ಡಿಂಜ್ ರ ಮೇಲೆ ಬಾಂಬ್ ದಾಳಿ
1942 ರಲ್ಲಿ ಬ್ಯಾಂಕಾಕ್ ನಲ್ಲಿ ಇಂಡಿಯಾ ಇಂಡಿಪೆಂಡೆಂಟ್ ಸ್ಥಾಪನೆ
ಲಾಲ್ ಹರ್ ದಯಾಳ್;
ಪಂಜಾಬಿನ ಕ್ರಾಂತಿಕಾರಿ , ಹರ್ದ್ ಚಳುವಳಿಯ ಸ್ಥಾಪಕ
1911 ರಲ್ಲಿ ಹರ್ದ್ ಪತ್ರಿಕೆಯ ಸ್ಥಾಪನೆ ಮತ್ತು ಪ್ರಕಟನೆ
ರಾಂ ವಿನಾಬ್ ಬಿಸ್ಮಿಲ್ಲಾ:
ಶಹಾ ಪುರದ ಕ್ರಾಂತಿಕಾರಿ ಮತ್ತು ಕಾಕೋರಿ (1925 ರಲ್ಲಿ ಲಕ್ನೋ ರೈಲನ್ನು ಸರಪಲಿ ಎಳೆದು ನಿಲಿಸಿದ)ಪ್ರಕರಣದ ರುವಾರಿ
ಅಝಾದ್ ಚಂದ್ರಶೇಖರ್:
1912ಡಿಸೆಂಬರ್ 26 ರಂದು ಬ್ರೀಟೀಶ್ ರ ವಿರುದ್ದ ದ ದಂಗೆಯಲ್ಲಿ ಬ್ರೀಟೀಶ್ ಅಧಿಕಾರಿ ಮೇಲೆ ಕಲ್ಲೆಸೆದರು
ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಸಂಘದ ಸದಸ್ಯ
ಲಾಲಲಜಪತ್ ರಾಯ್:
1928 ರಲ್ಲಿ ಕಾನ್ಫುರದಲ್ಲಿ ಹಿಂದುಸ್ಥಾನ್ ರಿಪಬ್ಲಿಕ ಅಸೋಸಿಯೇಷನ್ ಸ್ಥಾಪನೆ
ಭಗತ್ ಸಿಂಗ್ :
ಪಂಜಾಬ್ ನ ಪುರುಷ ಸಿಂಹ ಮತ್ತು ಕ್ರಾಂತಿ ಕಾರಿ ಕಿಡಿ
ನವಜಾತ ಭಾರತ ಸಭಾದ ಸ್ಥಾಪಕ
1928 ಡಿಸೆಂಬರ್ 17 ರಮ್ದು ಸ್ಯಾಂಡರ್ ನನ್ನು ಗುಂಡಿಟ್ಟು ಕೊಂದನು
ಇನ್ಕ್ವಿಲಾಬ್ ಜಿಂದಾಬಾದ್ ( ಕ್ರಾಂರಿ ಚಿರಾಯುವಾಗಲಿ ) ಎಂದು ಘೋಷಣೆ ಮಾಡಿದನು
1931 ಮಾರ್ಚ್ 31 ರಂದು ರಾಜ್ ಗುರು ರವರ ಜೊತೆ ಇವರನ್ನು ಲಹೋರ್ ನಲ್ಲಿ ಗಲ್ಲಿಗೇರಿಸಲಾಯಿತು
ಸುಭಾಷ್ ಚಂದ್ರ ಬೋಸ್ :
ಕ್ರಾಂತಿಕರಿಗಳಲ್ಲಿ ಶ್ರೇಷ್ಠರು ಮತ್ತು " ನೇತಾಜಿ"
1897 ರಲ್ಲಿ ಒರಿಸ್ಸಾದ ಕಟಕ್ ನಲ್ಲಿ ಜನನ
ತಂದೆ: ಜಾನಕಿನಾಥ ಬೋಸ್
ತಾಯಿ: ಪ್ರಭಾವತಿ
INA ( Indian National Army) ಸ್ಥಾಪಕರು
1943 ರಲ್ಲಿ ಸಿಂಗಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ ಸ್ಥಾಪಕದು
1938 ರ ಹರಿಪುರ ಮತ್ತು 1939ರ ಪ್ರಥಮ ಕಾಂಗ್ರೇಸ್ ಅಧ್ಯಕ್ಷರು
ಘೋಷಣೆ: ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಕೊಡುತ್ತೇನೆ
1992 ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಯಿತು

Sunday, April 24, 2011

ಶಿರಡಿ, ಸತ್ಯ ನಂತರ ಪ್ರೇಮ ಸಾಯಿಬಾಬಾ

ಸಾಯಿಬಾಬಾ


ಸತ್ಯ ಸಾಯಿಬಾಬ ಯುಗ ಇಂದಿಗೆ(ಏ.24,2011) ಅಂತ್ಯಗೊಂಡಿದೆ. ಸಾಯಿಬಾಬಾ ಅವರ ಸಾಮಾಜಿಕ ಸೇವೆಗೆ ಇಡೀ ವಿಶ್ವವೇ ತಲೆದೂಗಿದೆ. ಜಗತ್ತಿನಾದ್ಯಂತ ಇರುವ ಸುಮಾರು 6 ಮಿಲಿಯನ್ ಗೂ ಅಧಿಕ ಭಕ್ತಾದಿಗಳಿಗೆ ಬಾಬಾರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಆದರೆ, ಬಾಬಾಗೆ ಸಾವಿಲ್ಲ. ಆತ್ಮ ಅವಿನಾಶಿ, ಬಾಬಾ ಯೋಗ ನಿದ್ರೆಯಲ್ಲಿದ್ದಾರೆ. 96ನೇ ಹುಟ್ಟುಹಬ್ಬದ ದಿನದಂದು ಪುನಃ ದರ್ಶನ ನೀಡುತ್ತಾರೆ. ಸಾಯಿಬಾಬಾ ಅವತಾರ ಮುಗಿದಿಲ್ಲ ಮತ್ತೆ ಆರಂಭವಾಗುತ್ತದೆ. ಪ್ರೇಮ ಸಾಯಿಯಾಗಿ ಗೋಚರಿಸಲಿದ್ದಾರೆ ಎಂಬ ನಂಬಿಕೆ ಬಲವಾಗಿ ಭಕ್ತರ ಮನಸಲ್ಲಿ ಬೇರೂರಿದೆ.


96 ವಸಂತಗಳನ್ನು ಕಳೆದ ನಂತರ ಇಹಲೋಕ ತ್ಯಜಿಸುತ್ತೇನೆ. ನಂತರ ಕರ್ನಾಟಕದ ಮಂಡ್ಯಜಿಲ್ಲೆಯ ಗುಣಪರ್ತಿಯಲ್ಲಿ ಪ್ರೇಮ ಸಾಯಿಯಾಗಿ ನಿಮ್ಮ ಮುಂದೆ ಬರುತ್ತೇನೆ. 2023ರ ತನಕ ನನಗಾಗಿ ಕಾಯುತ್ತಿರಿ ಎಂದು ಸ್ವತಃ ಸಾಯಿಬಾಬಾ ಒಮ್ಮೆ ಹೇಳಿದ್ದರು.


ಬಾಬಾ ಇಚ್ಛಾಮರಣಿಯೇ?: ಹೌದು ಎನ್ನುತ್ತದೆ ಭಕ್ತ ಸಮೂಹ. ನನಗೆ ಬೇಕೆನಿಸಿದಾಗ ಈ ದೇಹ ತ್ಯಾಗ ಮಾಡುತ್ತೇನೆ. ಆದರೂ 96 ವರ್ಷ ಯಾವುದೇ ಮಾರಣಾಂತಿಕ ಕಾಯಿಲೆ ನನ್ನನ್ನು ಬಾಧಿಸದು, 96 ವರ್ಷ ನಿಮ್ಮೊಡನಿರುತ್ತೇನೆ ಎಂದಿದ್ದರು ಆದರೆ, 86 ವರ್ಷಕ್ಕೆ ಅವತಾರ ಮುಗಿಸಿರುವುದು ಸ್ವಲ್ಪ ಗೊಂದಲ ಉಂಟಾಗಿದೆ. ಮಾನವರನ್ನು ಬಾಧಿಸುವ ಕಾಯಿಲೆಯನ್ನು ತಮ್ಮ ದೇಹದಲ್ಲಿ ಆವರಿಸಿಕೊಂಡು ಬಾಬಾ ಯೋಗ ನಿದ್ರೆಗೆ ತೆರಳಿದ್ದಾರೆ. ಅವರೇ ಹೇಳಿದಂತೆ ಆತ್ಮಕ್ಕೆ ಸಾವಿಲ್ಲ. ಬಾಬಾ ಭಕ್ತರನ್ನು ಕೈಬಿಡುವುದಿಲ್ಲ. ಮತ್ತೆ ಅವತರಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ.


ಮಂಡ್ಯ ಕಡೆ ಎಲ್ಲರ ಕಣ್ಣು: ಮಂಡ್ಯದ ಪುಟ್ಟ ಗ್ರಾಮ ಗುಣಪರ್ತಿ ಮೇಲೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಶಿರಡಿ ಸಾಯಿಬಾಬಾ ಪರಂಪರೆಯ ಕೊನೆಯ ಅವತಾರವಾದ ಪ್ರೇಮ ಸಾಯಿಬಾಬಾ 2023ರ ಹೊತ್ತಿಗೆ ಪ್ರಕಟವಾಗುತ್ತೇನೆ ಎಂದು ಬಾಬಾ ಹೇಳಿದ್ದರು. ಪ್ರೇಮ ಸಾಯಿಬಾಬಾರ ತಾಯಿಯಾಗಿ ಕಸ್ತೂರಿ ಎಂಬ ಹೆಣ್ಣು ಮಗಳು ಕಾಣಿಸಿಕೊಳ್ಳಲಿದ್ದಾರೆ ಎಂದು 2008ರಲ್ಲಿ ಬಾಬಾ ಅಶ್ರಮದಿಂದ ಸುದ್ದಿ ಹೊರ ಬಿದ್ದಿತ್ತು. ಜಾನ್ ಹಿಸ್ಲಾಪ್ ಎಂಬ ಸಾಯಿಬಾಬಾ ಭಕ್ತ ಪ್ರೇಮ ಸಾಯಿಬಾಬಾ ಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.


ಬಾಬಾರ ಪವಾಡಗಳನ್ನು ನಂಬುವ ಭಕ್ತರಿಗೆ, ಅವರ ಸಾಮಾಜಿಕ ಸೇವೆಯನ್ನು ಮೆಚ್ಚುವ ಜನರಿಗೆ, ಮಾನಸಿಕ ಬೆಂಬಲ ಲಾಭ ಪಡೆಯುತ್ತಿದ್ದ ಕ್ರಿಕೆಟ್ಟಿಗರಿಗೆ, ಆಧುನಿಕ ಭಗೀರಥನಂತೆ ಕಂಡ ಬರದ ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಾಬಾ ಎಂಬ ವಿಸ್ಮಯ ಜೀವ ಎಂದಿಗೂ ಶಾಶ್ವತ.