Saturday, March 18, 2023
Tuesday, November 1, 2022
ಹಾಸ್ಯಾಸ್ಪದ ಹಾಸ್ಯ
ಹಾಸ್ಯ ಹನಿಗವನಗಳು :-
1.ಅಂದು ಕರ್ಣ ಹೇಳಿದ್ದು, ಒಮ್ಮೆ ತೊಟ್ಟ
ಬಾಣ ಇನ್ನೊಮ್ಮೆ ತೋಡಲಾರೆ.
ಇಂದಿನ ಮಹಿಳೆ ಹೇಳುವುದು ಅದೇ,ಒಮ್ಮೆ ಉಟ್ಟ ಸೀರೆ ಇನ್ನೊಮ್ಮೆ ಉಡಲಾರೆ. !!!😀😀
2.ಕರ್ಣನಿಗೆ ಕೈ ಕೊಟ್ಟ ಶಲ್ಯ,
ಬ್ಯಾಂಕುಗಳಿಗೆ ಕೈ ಕೊಟ್ಟ ಮಲ್ಯ !!!!😀
3.ಏನೆಂದೇ ಪ್ರಿಯಾ, ನಾನು ನಗಬೇಕೆಂದೆಯಾ?
ನಾನು ನಗಬೇಕಾದರೆ, ನನಗೆ 'ನಗ ' ಬೇಕು !!!
4.ಕಾದಿರುವಳು ಶಬರಿ, ಹಿಡಿದುಕೊಂಡು
ಡಬರಿ, ಅದರಲ್ಲಿಷ್ಟು ಕೊಬ್ಬರಿ !!
5.ಕ್ಯಾಶ್ ಕೌಂಟರ್ ನ ಚೆಲುವೆಯತ್ತ
ಹರಿದ ನೋಟ,
ಗಮನಿಸಲಿಲ್ಲ ಅವಳು ಕೊಟ್ಟ ಹರಿದ
Nota!!
6.ಡಾಕ್ಟರ್ ಸಾಹೇಬ್ರೆ ನಮಸ್ಕಾರ,
ನೀವು ಯಮರಾಜನ ಸಹೋದರ
ಯಮ ಓಯ್ತಾನೆ ಬರೀ ಪ್ರಾಣ,
ನೀವು ಪ್ರಾಣದ ಜೊತೆ ಹಣ !!!
7.ಸ್ವರ್ಗಕ್ ಹೋಗ್ತರ್ ಸಜ್ಜನರು,
ನರಕಕ್ ಹೋಗ್ತರ್ ದುರ್ಜನರು,
ಎರಡೂ ಲೋಕಕ್ ಒಬ್ಬರೇ ಏಜೆಂಟ್
ನಮ್ ಆಸ್ಪತ್ರೆ ಸರ್ಜನ್ರು !!!!😀😀
8.ಅವಳು ಅಕಸ್ಮಾತ್ ಸಿಕ್ಕಳು,
ನನ್ನನ್ ನೋಡಿ ನಕ್ಕಳು,
ನಮಗೀಗ ಇಬ್ಬರು ಮಕ್ಕಳು !!!
9.ಬೆಣ್ಣೆ ಹಾಕುತ್ತಿದ್ದಾನೆ ತಮಿಳುನಾಡಿನ
ಪೆರಿಯಣ್ಣ, ಕರ್ನಾಟಕದ ಚಿನ್ನ ತಂಬಿ ಗೆ
ಹೆಚ್ಚು ಸಿಗಲಿ ಎಂದು, ಕಾವೇರಿ ನೀರು
ಇನ್ನೂ ಒಂದೆರಡು ತಂಬಿಗೆ. !!!!
10.ಫಲಿತಾಂಶ ದಲ್ಲಿ ಯಾವಾಗಲೂ ಹುಡುಗಿಯರೇ ಮುಂದೆ,
ಏಕೆಂದರೆ, ಹುಡುಗರು ಯಾವಾಗಲೂ
ಅವರ ಹಿಂದೆ !!!😀
11.ನನ್ನವಳು ಮತ್ತು ಅವಳ ಅಳು, ಒಂದೇ ನಾಣ್ಯದ ಎರಡು ಮುಖಗಳು,
ಅಳುವುದು ಅವಳ ಅಸ್ತ್ರ,
ನಾನು ಅವಳ ಕೈ ವಸ್ತ್ರ!!!!!
12. ಹಾಸ್ಯ ಕವನ ಓದಿದಾಗ
ನಗೆಸಿದ್ದಕ್ಕೆ ಚಪ್ಪಾಳೆ,
ಗಂಭೀರ ಕವನ ಓದಿದಾಗ
ಮುಗಿಸಿದ್ದಕ್ಕೆ ಚಪ್ಪಾಳೆ !!!!👋👋😀😀😀
Sunday, October 23, 2022
Tuesday, October 4, 2022
ಜೋಕ್ಸ್ (ಹಾಸ್ಯ)
ಜೋಕ್ಸ್
********
ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ
ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.?
ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.
😂😝😜😂😝😜
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?
ಅಪ್ಪ:ಅದು ನಿಂಗೆ ಹೇಗೆ ಗೊತ್ತು?
ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..****😉😜😜😝😛😂😂😂
*ಡಾಕ್ಟರ್*: ಬನ್ನಿ ಉಮೇಶ್.. ಏನ್ ಸಮಾಚಾರ?
*ಉಮೇಶ್*: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ..
*ಡಾಕ್ಟರ್*: ಡ್ರಿಂಕ್ಸ್ ಮಾಡ್ತೀರಾ?
*ಉಮೇಶ್*: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...😜
ಹೆಂಡ್ತಿ : ರೀ ಈ ಸರಿ ವರಲಕ್ಷ್ಮಿ ಹಬ್ಬಕ್ಕೆ ಹೆಣ್ಮಕ್ಕಳಿಗೆ ಅರಿಶಿಣ ಕುಂಕುಮದ ಜೊತೆ ಇನ್ನೇನು ಕೊಡಲಿ..
ಗಂಡ : ನನ್ ನಂಬರ್ ಕೊಡು
😂😜😝😜
ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?
ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ....😀😀😀😀😀😀😀😀😀😀
ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ
ಕುರ್ ಕುರ್
ಕುರ್ ಕುರ್
ಮೊಬೈಲ್ ಟಾರ್ಚ್ ಮೂಲಕ
ನೋಡಿದಾಗ ಹತ್ತಿರದ
ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ
ಚಿಪ್ಸ್ ತಿನ್ನುತ್ತಿದ್ದ..
ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ
*ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..*
ಎಂಚಿ ಸಾವು ಮಾರೆ😃😃
ಇಬ್ಬರು ಹುಚ್ಚರು ಟೆರೇಸ್ ಮೇಲೆ ಮಲಗಿದ್ದರು.ಮಳೆ ಬರಲಾರಂಬಿಸಿತು,
ಮೊದಲ ಹುಚ್ಚ :- ನಡಿ ಕೆಳಗೆ ಹೋಗಿ ಮಲಗೋಣ, ಆಕಾಶ ತೂತಾಗಿದೆ.
(ಅಷ್ಟರಲ್ಲಿ ಆಕಾಶ ಮಿಂಚತೋಡಗಿತು)
ಎರಡನೇ ಹುಚ್ಚ :-ಇಲ್ಲೇ ಮಲಗೋ ವೆಲ್ಡಿಂಗ್ ಮಾಡೋರುಬಂದ್ರು,,,,,,,,!
😂😂😂😀😀😀
ಟೀಚರ್: 1869ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿ ಹುಟ್ಟಿದರು.
ಟೀಚರ್:very gud.. 1873ರಲ್ಲಿ ಏನಾಯ್ತು?
ವಿದ್ಯಾರ್ಥಿ: ಗಾಂಧೀಜಿಗೆ ನಾಲ್ಕು ವರ್ಷ ತುಂಬಿತು😂😂😂😂😂
ಹೆಡ್ಮಾಸ್ಟರ್ : ಐನ್ಸ್ಟೀನ್ ಯಾರು ?
ಸ್ಟೂಡೆಂಟ್: ಗೊತ್ತಿಲ್ಲ ಸರ್ .
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ , ಆಗ ಎಲ್ಲಾ ಗೊತ್ತಾಗುತ್ತೆ .
ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ?
ಹೆಡ್ಮಾಸ್ಟರ್ : ಗೊತ್ತಿಲ್ಲ .
ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ . ಆಗ ಎಲ್ಲಾ ಗೊತ್ತಾಗುತ್ತೆ😂😂😂😂
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
ಬಸ್ ಸ್ಟಾಂಡಲ್ಲಿ ಕಾಲೇಜು ಹುಡುಗಿ ksrtcಬಸ್ ಗೆ ಹತ್ತಿ ಡ್ರೈವರ್ ಹತ್ತಿರ ಸ್ಟೈಲಾಗಿ ಕೇಳುತ್ತಾಳೆ "ಈ ಡಬ್ಬ ಯಾವಗ ಹೊರಡುವುದು "
ಡ್ರೈವರ್ "ಕಸ ಎಲ್ಲಾ ತುಂಬಿದ ಮೇಲೆ "
😜😜😜😜😜😜😜
ಬಾಯ್ : ಹಲೋ📞, ಪಮ್ಮಿ ಡಾರ್ಲಿಂಗ್ 💋... ಹೇಗಿದ್ದೀಯಾ ? ..............................
ಗರ್ಲ್ : ಯಾರಿದು .
ಬಾಯ್ : ನಾನು ನಿನ್ ನ ಪ್ರಣಯಕಾಂತ!!..................
ಗರ್ಲ್ : ನೀನು ದಿವ್ಯರಾಜ್ ತಾನೆ...
ಬಾಯ್ : ಹೌದು, ನಿನಗೇಗೆ ಗೊತ್ತು ?
ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ......,??
ಬಾಯ್ : ನಿನಗೆ ಹೆಗೋತ್ತು ??
ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ....?
ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು....😱?
ಗರ್ಲ್ : ಕಚ್ಡಾ ನನ್ನ ಮಗನೇ.... ನಿನ್ನಮ್ಮ ಕಣೋ ನಾನು 😡!!..
ನೀನು ಕುಡಿದು🍺🍻 'ಪಮ್ಮಿ' ಗೆ ಅಲ್ಲ, 'ಮಮ್ಮಿ' ಗೆ ಫೋನ್ ಮಾಡಿದಿಯಾ 😂😂😉😉
ಗುಂಡ ಕುಡಿದು ಮನೆಗೆ ಬಂದ...
ಅಪ್ಪನಿಗೆ ಅನುಮಾನ ಬರದಿರಲಿ ಎಂದು ಲ್ಯಾಪ್'ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...
ಅಪ್ಪ: ಕುಡಿದು ಬಂದಿದ್ದೀಯೇನೋ?
ಗುಂಡ: ಇಲ್ಲ ಅಪ್ಪ..!
ಅಪ್ಪ: ಮತ್ತೆ ಆ ಸೂಟ್'ಕೇಸ್ ಓಪನ್ ಮಾಡಿ ಏನೋ ಓದ್ತಾ ಇದೀಯಾ..?😂😂😂😂😂😂😂😂😂😂😂😂
ಟೀಚರ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗು0ಡ : Birla Cement ಮೇಡಮ್.
ಟೀಚರ : ಯಾಕೆ.
ಗು0ಡ : ಇದರಲ್ಲೀ ಜೀವ ಇದೆ.
ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?
ಪೋಲೀಸ್ : ಏನಂತ ?
ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!
😆😆😬😁😬😆😆😬😁😬
ರಾತ್ರಿ ೨ ಗಂಟೆಗೆ ಕುಡಿದು ಬಂದ🥃ಗಂಡನನ್ನು ನೋಡಿದ ಹೆಂಡತಿ👩🏻😡 ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.
ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು🤣🤣🤣
































































































