Wednesday, December 30, 2015

ತಿರುಮಲ ತಿರುಪತಿ ಶ್ರೀ ವೆಂಟೇಶ್ವರ ಸ್ವಾಮಿ ಸನ್ನಿದಿಯ 11 ಸತ್ಯಗಳು

ತಿರುಮಲ ತಿರುಪತಿ ಶ್ರೀ ವೆಂಟೇಶ್ವರ ಸ್ವಾಮಿ ಸನ್ನಿದಿಯ ಸತ್ಯಗಳು

1) ದೇವಸ್ಥಾನದ ಪ್ರಾರಂಭದಲ್ಲಿ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯವರ ತಲೆಯ ಮೇಲೆ ಅನಂತಾಳ್ವಾರ್ ಹೊಡೆದ ಗಾಯ ಇರುತ್ತದೆ,
   ಚಿಕ್ಕಮಗುವಿನ ರೂಪದಲ್ಲಿ ಇದ್ದ ಸ್ವಾಮಿಯವರನ್ನು ಆ ರಾಡಿನಲ್ಲಿ ಹೊಡೆದಿದ್ದರಿಂದ ಸ್ವಾಮಿಯವರ ಗಡ್ಡದ ಮೇಲೆ ಗಾಯವಾಗಿ ರಕ್ತ ಬರುತ್ತದೆ,
  ಆಗಲಿಂದ ಸ್ವಾಮಿಯವರ ಗಡ್ಡದ ಮೇಲೆ ಗಂಧವನ್ನು ಹಚ್ಚುವುದು ಸಂಪ್ರದಾಯವಾಗಿದೆ.

2) ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ತಲೆ ಕೂದಲು ಜುಟ್ಟು (ನಿಜವಾದ ಕೂದಲು) ಇರುತ್ತದೆ. ಈ ಕೂದಲು ಯಾವಾಗಲೂ ಚಿಕ್ಕೆ ಹಿಡಿಯುವುದಿಲ್ಲ ಅಂತಾರೆ.

3)ತಿರುಮಲ ದೇವಸ್ಥಾನದಿಂದ 23 ಕಿ.ಮೀ ದೂರದಲ್ಲಿ ಒಂದು ಗ್ರಾಮ ಇರುತ್ತದೆ. ಆ ಗ್ರಾಮಸ್ಥರಿಗೆ ಬಿಟ್ಟು ಬೇರೆಯವರಿಗೆ ಆ ಗ್ರಾಮದ ಒಳಗಡೆ ಪ್ರವೇಶವಿಲ್ಲ. ಆ ಗ್ರಾಮಸ್ಥರು ತುಂಬಾ ಪದ್ಧತಿಯಿಂದ ಇರುತ್ತಾರೆ. ಅಲ್ಲಿಂದಲೇ ಸ್ವಾಮಿಯವರಿಗೆ ಹೂವು ತರುತ್ತಾರೆ. ಅಲ್ಲೇ ಇರುವ ತೋಟದಿಂದ ಆ ಹೂವುಗಳನ್ನು ತರುತ್ತಾರೆ. ಗರ್ಭಗುಡಿಯಲ್ಲಿ ಇರುವ ಪ್ರತಿಯೊಂದು ಆ ಗ್ರಾಮದಿಂದಲೇ ಬರುತ್ತದೆ.(ಹಾಲು,ತುಪ್ಪ,ಹೂವು,ಇತ್ಯಾದಿ...,)

4) ಸ್ವಾಮಿಯವರು ಗರ್ಭ ಗುಡಿಯ ಮದ್ಯ ಭಾಗದಲ್ಲಿ ಇರುವಂತೆ ಕಾಣಿಸುತ್ತಾರೆ. ಆದರೆ ನಿಜವಾಗಿ ಸ್ವಾಮಿಯು ಗರ್ಭಗುಡಿಯ ಬಲಗಡೆಯ ಕಾರ್ನರ್ ನಲ್ಲಿ ಇರುತ್ತಾರೆ. ಆಚೆಕಡೆಯಿಂದ ಗಮನಿಸಿದರೆ ಈ ವಿಷಯ ನಮಗೆ ತಿಳಿಯತ್ತದೆ.

5)  ಸ್ವಾಮಿಯವರಿಗೆ ಪ್ರತಿದಿನ ಕೆಳಗೆ ಪಂಚೆ, ಮೇಲೆ ಸೀರೆಯಿಂದ ಅಲಂಕರಿಸುತ್ತಾರೆ. ಸುಮಾರು 50 ಸಾವಿರ ಖರೀದಿ ಮಾಡುವ ಸೇವೆ ಇರುತ್ತದೆ. ಆ ಸೇವೆಯಲ್ಲಿ ಪಾಲ್ಗೊಂಡ ದಂಪತಿಗಳಿಗೆ ಸೀರೆಯನ್ನು ಸ್ತ್ರೀಯರಿಗೆ, ಪಂಚೆಯನ್ನು ಪುರುಷರಿಗೆ ಕೊಡುತ್ತಾರೆ. ಇದು ಸೇವೆಗೆ ತುಂಬಾ ಕಡಿಮೆ ಟಿಕೆಟ್ಟುಗಳನ್ನು ಮಾರುತ್ತಾರೆ.

6)  ಗರ್ಭಗುಡಿಯ ಸ್ವಾಮಿಯಿಂದ ತೆಗೆದ ಹೂವು ಎಂದಿಗೂ ಆಚೆಕಡೆ ತರುವುದಿಲ್ಲ. ಸ್ವಾಮಿಯವರ ಹಿಂದೆ ಜಲಪಾತ ಇರುತ್ತದೆ. ಅರ್ಚಕರು ಹಿಂದೆ ನೋಡದೆ ಹೂಗಳನ್ನು ಜಲಪಾತದಲ್ಲಿ ಎಸೆಯುತ್ತಾರೆ.

7) ಸ್ವಾಮಿಯವರ ಬೆನ್ನಿನ ಮೇಲಿನ ನೀರನ್ನು ಎಷ್ಟು ಸಾರಿ ಒರೆಸಿದರೂ ಆ ನೀರು ಹಾಗೆ ಇರುತ್ತದೆ. ಹಾಗೆ ಅಲ್ಲಿ ಕಿವಿ ಇಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ.

8) ಸ್ವಾಮಿಯವರ ಎದೆಯ ಮೇಲೆ ಲಷ್ಕ್ಮಿದೇವಿ ಇರುತ್ತಾರೆ, ಪ್ರತೀ ಗುರುವಾರ ನಿಜರೂಪ ದರ್ಶನದ ವೇಳೆಯಲ್ಲಿ ಸ್ವಾಮಿಯವರಿಗೆ ಛಂಧನದಿಂದ ಅಲಂಕರಿಸುತ್ತರೆ. ಅದು ತೆಗೆದುಹಾಕುವಾಗ ಲಷ್ಕ್ಮಿದೇವಿಯ ಅಚ್ಚು ಹಾಗೆ ಬರುತ್ತದೆ. ಅದನ್ನು ಮಾರುತ್ತಾರೆ.

9)   ಸತ್ತ ಮೇಲೆ ಹಿಂದೆ ನೋಡದೆ ಹೇಗೆ ಸುಡುತ್ತಾರೊ, ಹಾಗೆ ಸ್ವಾಮಿಯವರಿಂದ ತೆಗೆದುಹಾಕಿದ.ಹೂಗಳನ್ನು ಮತ್ತು ಎಲ್ಲಾ ಪದಾರ್ಥಗಳನ್ನು ಅದೇ ತರಹ ಹಿಂದೆ ತಿರುಗಿ ನೋಡದೆ ಸ್ವಾಮಿಯವರ ಹಿಂದೆ ಎಸೆಯುತ್ತಾರೆ, ಆ ದಿನವೆಲ್ಲಾ ಸ್ವಾಮಿಯವರ ಹಿಂದಗಡೆ ನೋಡುವುದಿಲ್ಲ ಎನ್ನುತ್ತಾರೆ. ಆ ಹೂಗಳು ಮತ್ತು ಪದಾರ್ಥಗಳು ಎಲ್ಲಾ ಕೂಡ ತಿರುಪತಿಯಿಂದ 20 ಕಿ.ಮೀ ದೂರದಲ್ಲಿರುವ ವೆರ್ಚೆಡು (ಕಾಲಹಸ್ತಿಗೆ ಹೋಗುವ ದಾರಿಯಲ್ಲಿ) ಹತ್ತಿರ ತೇಲುತ್ತದೆ.

10)  ಸ್ವಾಮಿಯವರ ಮುಂದೆ ಬೆಳಗುವ ದೀಪಗಳು ಅವು ಎಷ್ಟು ವರ್ಷಗಳಿಂದ ಬೆಳಗುತ್ತಿವೆಯೋ ಕೂಡ ಯಾರಿಗೂ ಹತ್ತಿಕ್ಕಿ.

11)    1800 ರಲ್ಲಿ ದೇವಸ್ಥಾನವನ್ನು ಹನ್ನೆರಡು ವರ್ಷಗಳ ಕಾಲ ಮುಚ್ಚಲಾಗಿತ್ತಂತೆ. ಯಾರೋ ಒಂದು ದಿನ 12 ಮಂದಿಯನ್ನು ದೇವಸ್ಥಾನದ ಹತ್ತಿರ ತಪ್ಪು ಮಾಡಿದರೆಂದು ಬುದ್ಧಿ ಹೇಳಿ ಹೊಡೆದು ಗೋಡೆಗೆ ನೇತಾಡಿಸಿದರಂತೆ. ಆ ಸಮಯದಲ್ಲಿ ವಿಮಾನ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆಂದು ಹೇಳುತ್ತಾರೆ.

ಕಾವೆO ಶ್ರೀನಿವಾಸಮೂರ್ತಿ

Monday, June 22, 2015

ಪ್ರಾತಃ ಕಾಲದಲ್ಲಿ ಚಮತ್ಕಾರಿ ಲಿಂಬೆ ನೀರಿನ ಸೇವನೆ


ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್, ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್ ಸಿ ಮತ್ತು ರೋಗದ ವಿರುದ್ಧ ಹೋರಾಡುವ ಸತ್ವಗಳನ್ನು ಒಳಗೊಂಡಿದೆ. ಶುದ್ಧವಾದ ಲಿಂಬೆ ನೀರಿನಿಂದ ಹಲವಾರು ಪ್ರಯೋಜನಗಳಿವೆ 


lemon ಗೆ ಚಿತ್ರದ ಫಲಿತಾಂಶ

1. ಜೀರ್ಣಕ್ರಿಯೆ 
              ದೇಹದಲ್ಲಿರುವ ವಿಷಕಾರಿ ಅಂಶವನ್ನು ಲಿಂಬೆ ನೀರು ಹೊರಹಾಕುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೋಗಲಾಡಿಸಲು ಲಿಂಬೆ ನೀರು ಅಗತ್ಯ. ಕ್ಯಾನ್ಸರ್ ರೋಗಿಗಳಲ್ಲಿ ಕರುಳಿನ ಸಮಸ್ಯೆಗಳು ಸುಧಾರಣೆಗೊಳ್ಳಲು ವೈದ್ಯರು ಲಿಂಬೆ ನೀರನ್ನು ಸೂಚಿಸುತ್ತಾರೆ.


2.ಸ್ವಚ್ಛಕಾರಿ 
         ಮೂತ್ರವನ್ನು ನಿರ್ಬಂಧಿಸುವ ವಿಷಕಾರಿ ಅಂಶಗಳನ್ನು ಲಿಂಬೆ ನೀರು ಹೊರದೂಡುತ್ತದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸುವುದು ದೇಹದಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚು ಮಾಡುತ್ತದೆ.

3.ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 
          ಲಿಂಬೆ ವಿಟಮಿನ್ ಸಿ ಮತ್ತು ಪೊಟಾಶಿಯಂ ಸತ್ವಗಳಿಂದ ಕೂಡಿದ್ದು ಮೆದುಳು ಹಾಗೂ ನರ ರಚನೆಗಳನ್ನು ಸದೃಢಗೊಳಿಸುತ್ತದೆ. ವಿಟಮಿನ್ ಸಿ ಯನ್ನು ಅಸ್ತಮಾ ಮತ್ತು ಇತರ ಉಸಿರಾಟ ತೊಂದರೆಗಳ ನಿವಾರಣೆಗೆ ಔಷಧವಾಗಿದೆ. ಲಿಂಬೆ ನೀರನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿರುವ ಅಸಿಡಿಟಿ ದೂರಾಗುತ್ತದೆ.

4.ಶುದ್ಧ ತ್ವಚೆ 
       ತ್ವಚೆಯಲ್ಲಿರುವ ನೆರಿಗೆ ಮೊಡವೆಗಳನ್ನು ಹೋಗಲಾಡಿಸಲು ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಯೋಕ್ಸಿಡೆಂಟ್ ಸಹಕಾರಿಯಾಗಿದೆ. ಇದು ತ್ವಚೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಿ ತ್ವಚೆಯನ್ನು ಶುಭ್ರಗೊಳಿಸುತ್ತದೆ.

5.ಮೂಡ್ ಅನ್ನು ಸರಿಪಡಿಸುತ್ತದೆ 
            ಒತ್ತಡಗಳನ್ನು ದೂರಮಾಡುವ ಶಕ್ತಿ ಲಿಂಬೆ ನೀರಿಗಿದೆ ಎಂಬುದು ನಿಮಗೆ ತಿಳಿದಿದೆಯೇ? ಜೀರ್ಣಕ್ರಿಯೆಯನ್ನು ಸುಧಾರಿಸುವ ಅಂಶ ಲಿಂಬೆ ನೀರಿಗಿದೆ ಇದರಿಂದ ನಮ್ಮ ದೇಹಕ್ಕೆ ಶಕ್ತಿ ಉಂಟಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

6.ತೂಕ ಇಳಿಸಲು ಸಹಕಾರಿ 
            ಲಿಂಬೆ ನೀರನ್ನು ಜೇನಿನೊಂದಿಗೆ ಮಿಶ್ರ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿದು ಸುಂದರ ಕಾಯ ನಿಮ್ಮದಾಗುತ್ತದೆ.

7.ನಿರ್ವಶೀಕರಣ 
         ಲಿಂಬೆ ಡಯೆಟ್ ದೇಹವನ್ನು ನಿರ್ವಶೀಕರಣಗೊಳಿಸಿ ದೇಹದ ಹಾನಿಕಾರಕ ವಿಷ ಅಂಶಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
8.ಜಠರ ಶುದ್ಧೀಕರಣ 
       ಜಠರದ ನಿರ್ವಶೀಕರಣ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗುವಂತಹ ಪ್ರೋಟೀನ್ ಮತ್ತು ಬಯೋ ಕೆಮಿಕಲ್ಸ್‌ಗಳನ್ನು ಉತ್ಪಾದಿಸುತ್ತದೆ. ಪ್ರಾತಃ ಕಾಲದಲ್ಲಿ ಲಿಂಬೆಯುಕ್ತ ನೀರನ್ನು ಸೇವಿಸುವುದರಿಂದ ಎಂಜೀಮ್‌ಗಳ ಉತ್ಪಾದನೆ ಹೆಚ್ಚಾಗುತ್ತದೆ. ನೈಸರ್ಗಿಕ ಪಥ್ಯಾಹಾರವಾಗಿರುವ ಇದು, ಕಿಡ್ನಿಯನ್ನು ಸ್ವಚ್ಛವಾಗಿಡುವಲ್ಲಿ ನೆರವಾಗುವ ಮೂತ್ರವಿಸರ್ಜನೆಯನ್ನು ಹೆಚ್ಚಿಸಿ, ಸೋಂಕುಗಳಿಂದ ಕಿಡ್ನಿಯನ್ನು ರಕ್ಷಿಸುತ್ತದೆ.

9.ಉಸಿರಾಟ ಸಮಸ್ಯೆಗಳನ್ನು ನಿವಾರಿಸುತ್ತದೆ 
         ಕೆಮ್ಮನ್ನು ನಿವಾರಿಸುವುದು ಮಾತ್ರವಲ್ಲದೆ ಲಿಂಬೆ ನೀರು ಅಸ್ತಮಾ ಮತ್ತು ಅಲರ್ಜಿಗಳಿಂದ ಬಳಲುವವರನ್ನು ಸಂರಕ್ಷಿಸುತ್ತದೆ.

10.ಹೊಳೆಯುವ ತ್ವಚೆ 
         ಲಿಂಬೆ ಹೊಟ್ಟೆಯನ್ನು ಸ್ವಚ್ಛವಾಗಿಸಿ ಮತ್ತು ನಿರ್ವಶೀಕರಣಗೊಳಿಸಿದ್ದರ ಪರಿಣಾಮ ನಿಮ್ಮ ತ್ವಚೆಯಲ್ಲಿ ಉಂಟಾಗುತ್ತದೆ.

11.ಮುಪ್ಪು ನಿವಾರಕ 
          ಬೆಳಗ್ಗಿನ ಸಮಯದಲ್ಲಿ ಲಿಂಬೆ ನೀರನ್ನು ಕುಡಿಯುವುದರಿಂದ ಉಂಟಾಗುವ ಇನ್ನೊಂದು ಆರೋಗ್ಯಕಾರಿ ಪ್ರಯೋಜನ ಇದಾಗಿದೆ. ಲಿಂಬೆಯಲ್ಲಿರುವ ಸಿಟ್ರಿಕ್ ಕಪ್ಪು ವರ್ತುಲಗಳನ್ನು ಮಾತ್ರ ಹೋಗಲಾಡಿಸದೆ ಮೊಡವೆಯನ್ನು ನಿವಾರಿಸುತ್ತದೆ.

12.ಬಾಯಿಯ ಸ್ವಚ್ಛತೆ ಕೆಟ್ಟ ಉಸಿರಾಟ 
        ಹಲ್ಲು ನೋವು ಮತ್ತು ದಂತಕ್ಷಯಿಸುವಿಕೆಯನ್ನು ನಿವಾರಿಸಿ ಬಾಯಿಯನ್ನು ಸ್ವಚ್ಛವಾಗಿಸುತ್ತದೆ

13.ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ 
               ಗರ್ಭಿಣಿ ಸ್ತ್ರೀಯರು ಬೆಳ್ಳಂಬೆಳಗ್ಗೆ ಲಿಂಬೆ ನೀರನ್ನು ಸೇವಿಸುವುದು ವಾಕರಿಕೆ ಮತ್ತು ಬೆಳಗಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

14.ಕರುಳನ್ನು ಸ್ವಚ್ಛವಾಗಿಸುತ್ತದೆ 
         ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

15.ದುಗ್ಧರಸ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ 
           ಲಿಂಬೆ ನೀರು ಮೂತ್ರಜನಕಾಂಗದ ಆಯಾಸವನ್ನು ಪರಿಹರಿಸಿ ನಿರ್ಜಲೀಕರಣವನ್ನು ನಿವಾರಿಸುತ್ತದೆ. ಒತ್ತಡ, ಮಲಬದ್ಧತೆ, ವಿಷಕಾರಿ ಅಂಶಗಳ ಸಂಗ್ರಹಣೆಯನ್ನು ತಪ್ಪಿಸಲು, ಲಿಂಬೆ ನೀರನ್ನು ಸೇವಿಸಿ.

16.ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ 
          ಲಿಂಬೆಯಲ್ಲಿರುವ ಸಿಟ್ರಸ್ ಅಂಶ ದೇಹವನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ. ಇದು ವಿಟಮಿನ್ ಸಿ ಭರಿತವಾಗಿದ್ದು ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ.

17.ಪುದಿನ ಮತ್ತು ಲಿಂಬೆ 
         ಪುದಿನ ಬರಿಯ ಸುವಾಸನಾ ವಸ್ತುವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮಹತ್ವದ ಸೊಪ್ಪು. ಇದನ್ನು ಜ್ಯೂಸ್ ಮಾಡಿ ಇದಕ್ಕೆ ಲಿಂಬೆ ಹಣ್ಣಿನ ಹನಿಗಳನ್ನು ಹಾಕಿ ಜ್ಯೂಸ್ ಅನ್ನು ತಯಾರಿಸಬಹುದು. ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಉಪ್ಪು ಹಾಕಿದರೆ ರುಚಿಗೂ ಬಹಳ ಹಿತಕರ.

18.ಜೀರ್ಣಕ್ರಿಯೆಗೆ 
         ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಲಿಂಬೆ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಲಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ನಿಮ್ಮ ದೇಹವು ಆರೋಗ್ಯಕಾರಿ ಆಗಿರುವುದರ ಜೊತೆಗೆ ಜೀರ್ಣಕ್ರಿಯೆಗೂ ಉತ್ತಮವಾಗಿರುತ್ತದೆ

19.ಕರುಳನ್ನು ಸ್ವಚ್ಛಗೊಳಿಸುವ ಹಣ್ಣು 
        ಕರುಳನ್ನು ಸ್ವಚ್ಛಗೊಳಿಸುವ ಲಿಂಬೆ ಆಗಿದ್ದು ಇದು ತೊಂದರೆಕಾರಿ ಕೀಟಾಣುಗಳನ್ನು ನಾಶಪಡಿಸುತ್ತದೆ.

20.ಜಠರವನ್ನು ಕಾಪಾಡುತ್ತದೆ 
        ಲಿಂಬೆ ಹಣ್ಣು ಕರುಳನ್ನು ಸ್ವಚ್ಛಗೊಳಿಸುವುದರೊಂದಿಗೆ ಜಠರವನ್ನು ಕಾಪಾಡುತ್ತದೆ.

21.ಫೈಬರ್ ಮತ್ತು ಇತರ ಆರೋಗ್ಯಕರವಾದ ಹಣ್ಣು 
         ಫೈಬರ್ ಮತ್ತು ಇತರ ಆರೋಗ್ಯಕರ ವಿಟಮಿನ್ ಲಿಂಬೆ ಹಣ್ಣಿನಲ್ಲಿ ಅಧಿಕವಾಗಿದ್ದು, ನಿಯಮಿತವಾಗಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.

22.ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ 
         ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.

23.ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ 
        ತುಟಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ನಿಂಬೆರಸ ತುಂಬಾ ಪ್ರಯೋಜನಕಾರಿ. ನಿಂಬೆ ಹಣ್ಣನ್ನು ಕತ್ತರಿಸಿ ಅದರ ತುಂಡನ್ನು ತುಟಿಗೆ 3-4 ನಿಮಿಷ ಉಜ್ಜಬೇಕು. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆದು ಲಿಪ್ ಬಾಮ್ ಹಚ್ಚ ಬೇಕು.

24.ತೂಕ ಇಳಿಕೆಗಾಗಿ ಲಿಂಬೆ ಚಹಾ 
          ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ. ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಲಿಂಬೆ ಚಹಾ ಉತ್ತಮ ಪಾತ್ರ ನಿರ್ವಹಿಸುತ್ತದೆ. ಲಿಂಬೆ ಚಹಾ ನಿಮ್ಮ ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ.

Wednesday, October 1, 2014

ನಿಮಗೆ ಗೊತ್ತಿಲ್ಲದ ರಾಮಾಯಣದ 10 ರಹಸ್ಯಗಳು

ನಿಮಗೆ ಗೊತ್ತಿಲ್ಲದ ರಾಮಾಯಣದ 10 ರಹಸ್ಯಗಳು



ರಾವಣನ ಸಾವಿಗೆ ಪಾರ್ವತಿ ಕಾರಣ!
ರಾವಣನ ಸಾವಿಗೆ ಪಾರ್ವತಿ ಕಾರಣ!

ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ. ಆದರೆ, ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ. ಅದಕ್ಕೆ ಮೂಲ ಕಾರಣ ಪಾರ್ವತಿಯ ಶಾಪ. ಈಶ್ವರ ರಾವಣನ ತಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ. ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ. ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ. ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡ ಆಕೆ, ನಿನಗೆ ಹೆಂಗಸಿನಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.



ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು?

ಭಾರತ-ಶ್ರೀಲಂಕಾ ನಡುವೆ ಇರುವ ರಾಮಸೇತು ಒಡೆಯಲು ಎರಡು ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ! ಸೇತುವೆಯನ್ನು ಕಟ್ಟಿದ್ದು ಕಪಿಸೈನ್ಯ ಎಂಬುದು ಕೂಡ ಪೂರ್ತಿ ನಿಜವಲ್ಲ. ಅದನ್ನು ನಿರ್ಮಿಸಿದ್ದು ರಾಮನ ಅಂತಃಶಕ್ತಿ. ಇಲ್ಲವಾದರೆ, ಯಾರಾದರೂ ಮಂಗಗಳನ್ನಿಟ್ಟುಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಲು ಸಾಧ್ಯವೇ? ವಾಲ್ಮೀಕಿಗೆ ರಾಮನನ್ನು ಪವಾಡಪುರುಷನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿ (ಪುರುಷೋತ್ತಮ) ಜನರಿಗೆ ಆದರ್ಶವಾಗಿ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಹಾಗಾಗಿ ಕಪಿಗಳ ನೆರವಿನಿಂದ ರಾಮ ಸೇತುವೆ ಕಟ್ಟಿದ ಎಂಬಂತೆ ಬಿಂಬಿಸಿದರು.




ವನವಾಸಕ್ಕೆ ಹೋದಾಗ ರಾಮನಿಗೆ 27 ವರ್ಷ

ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ. ಆದರೆ ಅವನು ಖಾಲಿ ಕೈಲಿ ಹೋಗಬೇಕೆಂದು ಕೈಕೇಯಿ ತಾಕೀತು ಮಾಡಿದಳು. ಅದಕ್ಕೂ ಮುನ್ನವೇ, ಅರಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ರಾಮ ನಿರ್ಧರಿಸಿದ್ದ. ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುವಸ್ತ್ರ ಉಟ್ಟುಕೊಳ್ಳಲೂ ಅವನು ಸೂಚಿಸಿದ್ದ.




ರಾಮ ಶಿವಧನುಸ್ಸನ್ನು ಮುರಿಯಲಿಲ್ಲ!

ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕತೆ ಚಾಲ್ತಿಯಲ್ಲಿದೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ. ಶಿವನ ಧನುಸ್ಸನ್ನು ಹೆದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ. ಇದೊಂದು ರೋಚಕ ಕತೆಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.



ರಾಮಾಯಣದ ಪ್ರಕಾರ ದೇವರು ಕೇವಲ 33

ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (ಮೂರು ಕೋಟಿ) ದೇವರು, ಮೂವತ್ತಮೂರು ಕೋಟಿ ದೇವರು ಎಂದೆಲ್ಲ ಹೇಳಲಾಗುತ್ತದೆ. ಸರಿಯಾಗಿ ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ. ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಮಾತ್ರ. ರಾಮಾಯಣದ ಅರಣ್ಯಕಾಂಡದಲ್ಲಿ ಇದರ ಉಲ್ಲೇಖವಿದೆ.




ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ

ಮದುವೆಯಾಗಿ ಬಹಳ ವರ್ಷಗಳವರೆಗೂ ದಶರಥ ರಾಜನಿಗೆ ಮಕ್ಕಳಿರಲಿಲ್ಲ. ಮೂವರು ಹೆಂಡಿರಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಿರಲಿಲ್ಲ. ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು. 'ನನ್ನ ನಂತರ ಅಯೋಧ್ಯೆಯ ಕತೆಯೇನು?' ಆಗ ಪುತ್ರಕಾಮೇಷ್ಠಿ ಯಾಗ ಮಾಡಿದ. ರಾಮ ಹುಟ್ಟಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರು ಹುಟ್ಟಿದರು.




ಲಂಕೆ ನಿಜವಾಗಿ ರಾವಣನದ್ದಲ್ಲ

ಲಂಕೆಗೆ ರಾವಣನ ಲಂಕೆ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಬೇರನದು. ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ನಂ.1 ಶ್ರೀಮಂತ ಕುಬೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣ. ಅವನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತು. ಕುಬೇರ ಅಷ್ಟೇನೂ ಪರಾಕ್ರಮಿಯಲ್ಲ. ಆದರೆ ರಾವಣ ಭಯಂಕರ ಶಕ್ತಿವಂತ. ಅಣ್ಣನನ್ನೇ ಸೋಲಿಸಿ ಲಂಕೆಯನ್ನು ಗೆದ್ದು ತಾನು ಆಳತೊಡಗಿದ.




ಶಿವ ರಾವಣನಿಗೆ ವರ ಕೊಟ್ಟ, ಶಿವನ ಶಿಷ್ಯ ಶಾಪ ಕೊಟ್ಟ!

ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರಾಗುತ್ತಿರಲಿಲ್ಲ. ಆದರೆ ತಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನು ಕಡೆಗಣಿಸುವ ಶಕ್ತಿ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ. ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು. ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ. ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ. ಅದರಿಂದ ಸಿಟ್ಟುಗೊಂಡ ನಂದಿ, ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ. ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.



ಅಪ್ಪನ ಮೇಲೇ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ

ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದೂ ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ, ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ. ಆಲಕ್ಷ್ಮಣನಿಗೆ ಸಮಾಧಾನ ಮಾಡಿದ.



ಸೀತೆಗಾಗಿ ಇಂದ್ರ ಪಾಯಸ ತಂದಿದ್ದ!

ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲೇ ಇಂದ್ರ ಅಲ್ಲಿಗೆ ಹೋಗಿದ್ದ. ಸೀತೆಯ ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ಗೊತ್ತಾಯಿತು. ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು, ತನ್ನ ಮಂತ್ರಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.


-ತ್ರಿಮೂರ್ತಿ



(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)

Thursday, April 17, 2014

ಹುಡುಗ ಹುಡುಗಿಗೆ ಸ್ನೇಹವಾಯಿತು..
ಎಸ್ಸೆಮ್ಮೆಸ್ ಗಳ ಸಾಗರವೇ ಹರಿಯಿತು..
ಪ್ರೀತಿಸಿಕೊಂಡರು. ಇಬ್ಬರ ನಂಬರ್ ಬ್ಯುಸಿಯಾಯಿತು..
ಮದುವೆಯಾದರು.. ಇವಾಗ ಇಬ್ಬರ ಮೊಬೈಲ್ ನಲ್ಲಿ currency ಇಲ್ಲವಂತೆ
-----------------------------------------------------------------------------------
"ನೀ ಹೇಗಿದ್ದರೂ ನಂಗೆ ಇಷ್ಟ ಕಣೆ" ಅನ್ನುತ್ತಿದ್ದ ಗಂಡ.. ಇವಾಗ "ನಿಮ್ಮಮ್ಮ ಡುಮ್ಮಿ ಆಗಿಬಿಟ್ಟಿದಾಳೆ" ಅಂಥಾ ಮಗಳ ಎದುರು ಮೂದಲಿಸ್ತಾ ಇದಾನೆ...
-----------------
ಅಹಿಂಸಾವಾದಿ ಸುಬ್ಬಾ ಶಾಸ್ತ್ರಿಗಳು, ತಮಗೆ ತೊಂದರೆ ನೀಡುತ್ತಿದ್ದ ಸೊಳ್ಳೆಗಳನ್ನು ಒಂದೊಂದನ್ನೇ ಹಿಡಿದು, ಹಿಸುಕಿ, ಸಾಯಿಸಿ ಸಂಭ್ರಮಿಸಿದರು
------------------
1) ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//

ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ
ಫೇಲ್ ಆದ
ಕಾರಣ,
ಅವಳು ಯಾರೋ
ಪ್ರತಿಭಾ ಅಂತಾ!!!
--------------
2) ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//

ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..

ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!
------------
3) ಪ್ರೀತಿಸುವ ಮೊದಲು
ಪ್ರೀತಿಯ ಆಳ ನೋಡು.. //ವ್ಹಾ ವ್ಹಾ//

ಪ್ರೀತಿಸುವ ಮೊದಲು ಪ್ರೀತಿಯ
ಆಳ ನೋಡು..

ನಂಬಿಕೆ ಬರದಿದ್ರೆ,
ಮುಂಗಾರು ಮಳೆ FILM ನೋಡು..
-------------------------------
ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ

ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..

ಮರ್ಯಾದೆಯಿಂದ ತಂದುಕೊಡು...!!
------------------------------
5) ನುಡಿದರೆ,
ಮುತ್ತಿನ
ಹಾರದಂತಿರಬೇಕು //ವ್ಹಾ ವ್ಹಾ//

ನುಡಿದರೆ,
ಮುತ್ತಿನ
ಹಾರದಂತಿರಬೇಕು.

ಕುಡಿದರೆ,
ಮನೆಯವರಿಗೆ
ಅನುಮಾನ ಬಾರದಂತಿರಬೇಕು...
---------------------------------
ಹೃದಯದ ಗಾಯಕ್ಕೆ
ಇಲ್ಲಾ
ಮುಲಾಮ್ //ವ್ಹಾ ವ್ಹಾ//

ಹೃದಯದ ಗಾಯಕ್ಕೆ
ಇಲ್ಲಾ ಮುಲಾಮ್....

ಅದಕ್ಕೆ
ಮದುವೆ ಆಗಲಿಲ್ಲಾ
'ಅಬ್ದುಲ್ ಕಲಾಮ್'
-------------------------------
8) ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ /ವಾ..ವಾ../

ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ.....

ಅದೇ ಕಲ್ಲಿನಿಂದ
ಶಿಲ್ಪಿಯನ್ನು ಕೆತ್ತಿದರೆ,
ಕೊಲೆ...../ವಾ..ವಾ.//
----------------------------------
9) ನನ್ನ ಮೊಟ್ಟ ಮೊದಲ ಹುಡುಗಿ ನಿಶಾ
ಹತ್ತಿಸಿದಳು ತಲೆಗೆ ಅವಳದೇ ನಶಾ..

ಕೈಕೊಟ್ಟಾನ ನನ್ನ ಪಾಲಿಗೆ ಉಳಿದದ್ದು ವಿಷ!!
ಆದರೆ, ಈಗ ನಾನು ಬದುಕಿರಲು ಕಾರಣ,
ಅವಳ ತಂಗಿ ಉಷಾ!!!


10)ಮಗುವಿನ ನಗು
ಸತ್ತವರನ್ನು ಬದುಕಿಸುತ್ತೆ /ವಾ.ವಾ/
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ,
ಕಾಲೇಜ್ ಕನ್ಯೆಯ ನಗು
ಬದುಕಿರುವವರನ್ನೂ ಸಾಯಿಸುತ್ತೆ,, /ವಾ..ವಾ//

Moral:- ಕೂಸ್ ನ ನಂಬಿದ್ರೂ.. ಪೀಸ್ ನ ನಂಬಬಾರದು.

ಕೈ ಕೆಸರಾದರೆ.....


ಕೈ ತೊಳ್ಕೊ..

ಅಷ್ಟು ಗೊತ್ತಾಗಲ್ವ..?? ಅದನ್ನು
ನನ್ ಮೆಸೇಜ್ ನೋಡೇ ತಿಳ್ಕೊಬೇಕಾ?
ನಿಂಗೆ ಯಾವಾಗ ಬುದ್ಧಿ ಬರುತ್ತೋ.. ಆ ಪರಮಾತ್ಮನಿಗೇ ಗೊತ್ತು.
-----------------------------------------------------------------------
ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,
-------------------------------------
ಪಿನ್ ಚುಚ್ಚಿದರೆ ರಕ್ತ ಯಾಕೆ ಬರುತ್ತೆ????


ಯಾರು ಚುಚ್ಚಿದರು ಅಂತಾ ನೋಡೋಕೆ ಬರುತ್ತೆ..
--------------------------------------------------
ಮುಂಗಾರು ಮಳೆ ಬಂದಿದೆ..
ನಿಂಗೆ ತುಂಬಾ ಖುಶಿ ಅಲ್ವಾ..?
ಮಳೆ ಬರುವಾಗ ಹೊರಗೆ ಹೋಗಬೇಕು, ನೀರಲ್ಲಿ ಆಡಬೇಕು, ಕುಣೀಬೇಕು
ಅಂತೆಲ್ಲಾ ಅನ್ಸುತ್ತೆ ಅಲ್ವಾ....???
ಎಲ್ಲಾ ಕಪ್ಪೆಗೂ ಹೀಗೇ ಆಗುತ್ತೆ...


ಕಾಡು ಬೆಳೆಸಿ, ನಾಡು ಉಳಿಸಿ
ನೀರು ಉಳಿಸಿ, ಬೆಳೆ ಬೆಳೆಸಿ
ಮೆಸೇಜ್ ಕಳಿಸಿ, Friendship ಬೆಳೆಸಿ,. ಇಲ್ಲಾ ಅಂದ್ರೆ,
ತಲೆ ಬೋಳಿಸಿ, ಕೊಬ್ರಿ ಎಣ್ಣೆ ಉಳಿಸಿ.

ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು
ನೀನೇ ನನ್ನ ಟಾಟಾ ಬಿರ್ಲಾ.. /ವಾ..ವಾ../
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಲು
ನೀನೇ ನನ್ನ ಟಾಟಾ ಬಿರ್ಲಾ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು
ಟಾಟಾ ಬರ್ಲಾ.... /ವಾ..ವಾ/
---------------------------------------
ಕಳಬೇಡ ಕೊಲಬೇಡ
CALL ಮಾಡಲು ಮರೀಬೇಡ,
MISS CALL ಕೊಡಬೇಡ
SMS ಕಳಿಸಲು ಮರಿಬೇಡ..
ಇದೇ ನನ್ನ ಸುದ್ದಿ
ಬರಲಿ ನಿಂಗೆ ಒಳ್ಳೆ ಬುದ್ಧಿ
ಮೊಬೈಲ್ ಸಂಗಮದೇವಾ....
-----------------------------------
18)ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ...
ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ..
ಅವಳ ಇನ್ನೊಂದು ಕಣ್ಣು
ಆ ಕಣ್ಣನ್ನೇ ನೋಡುತ್ತಿದ್ದು....
-----------------------------
LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು" /ವಾ..ವಾ//

LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು"

LOVE ಮಾಡಿ
ಕೈ ಕೊಟ್ರೆ..... "ನಿಮ್ಹಾನ್ಸು" /ವಾ..ವಾ//
-----------------------------
5)ರೋಗಿ:- ಸಾರ್ ನೆನ್ನೆಯಿಂದ ತುಂಬಾ ಹೊಟ್ಟೆ ನೂವು ಸಾರ್..
ವೈದ್ಯ:- ಗ್ಯಾಸ್ ಇದೆಯಾ...??
ರೋಗಿ:- ಇಲ್ಲಾ ಸಾರ್.. ಬುಕ್ ಮಾಡಿ ಹದಿನೈದು ದಿನ ಆಯ್ತು.. ಇನ್ನೂ ಬಂದಿಲ್ಲಾ.
------------------------------------------
ತುಟಿಯಿಂದ ಸ್ಪರ್ಶಿಸಿದ ಆ ಅನುಭವ ಇನ್ನೂ ಇದೆ.
ಕಣ್ಣುಗಳಲ್ಲಿ ಬಂದ ನೀರು ಇನ್ನೂ ಇದೆ,
ಉಸಿರಿನಲ್ಲಿ ಬಂದ ಬೆಂಕಿ ಇನ್ನೂ ಇದೆ...
ಯಾಕೆ ಹೇಳಿ..????
ತಿಂದಿದ್ದು ಹಸಿ ಹಸಿ ಮೆಣಸಿನಕಾಯಿ..!!!
------------
10) ಇದನ್ನು ಕಳಿಸಿದವರು:-
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ...!!
------------
ಒಮ್ಮೆ ಸರ್ದಾರ್ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ.. "ಮನೇಲಿ ಇವತ್ತು ಯಾರೂ ಇರಲ್ಲಾ.. ಸರಿಯಾಗಿ ಹತ್ತು ಗಂಟೆಗೆ ಮನೆಗೆ ಬಾ"
ಅವಳು ತನ್ನ ತಂದೆ ತಾಯಿಯ ಕಣ್ಣು ತಪ್ಪಿಸಿ ಕಷ್ಟಪಟ್ಟು ಅವನ ಮನೆಗೆ ಬಂದು ನೋಡಿದಳು.. ಅವನು ಹೇಳಿದ್ದು ನಿಜವಾಗಿತ್ತು..
ಅವರ ಮನೆಯಲ್ಲಿ ಯಾರೂ ಇರಲಿಲ್ಲಾ.. ಮನೆಗೆ ಬೀಗ ಹಾಕಿತ್ತು.
--------------------------
12)ಇದನ್ನು ಕಳಿಸಿದವರು:-

ಇಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಅಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಆದರೆ, ಅವಳಪ್ಪ ಹೇಳಿದ
ಇದೇ ನಿಂಗೆ "ಲಾಸ್ಟ್ ವಾರ್ನಿಂಗ್"
--------------
ತ್ರಿಕಾಲ ಸತ್ಯ:-
ಒಬ್ಬಳು ಹುಡುಗಿ ರಸ್ತೆ ದಾಟುವಾಗ, ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಹುಶಾರಾಗಿ ಹೋಗಿ"
ಆದರೆ, ಒಬ್ಬ ಹುಡುಗ ರಸ್ತೆ ದಾಟುವಾಗ ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಯಾಕೋ ಲೋಫರ್..!! ಸಾಯೋಕೆ ನನ್ನ ಗಾಡೀನೇ ಬೇಕಾ ನಿಂಗೆ..??
-----------
ಅವಳು ನನ್ನ ತಿರುಗಿ ನೋಡಿದಳು
ನಾನೂ ಅವಳ ತಿರುಗಿ ನೋಡಿದೆ,
ಅವಳು ಮತ್ತೆ ತಿರುಗಿ ನೋಡಿದಳು
ನಾನೂ ಮತ್ತೆ ತಿರುಗಿ ನೋಡಿದೆ..
ಯಾಕೆಂದರೆ,
ಇಬ್ಬರಿಗೂ INTERNAL EXAM ನಲ್ಲಿ
ಉತ್ತರ ಗೊತ್ತಿರಲಿಲ್ಲಾ...

---------
ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ..
ಹೊಟ್ಟೆ ಎಲ್ಲಾ ಉರುದೋಯ್ತು... /ವಾ..ವಾ//
---------------
18)ಇದನ್ನು ಕಳಿಸಿದವರು :- ಜ್ಞಾನಮೂರ್ತಿ (ಭಕ್ತ)(ಬೆಂಗಳೂರು)

ಆಂಗ್ಲ ಭಾಷೆಯಲ್ಲಿ:- GOOD NIGHT
ಹಿಂದಿ ಭಾಷೆಯಲ್ಲಿ:- SHUBHA RAATHRI
ಉರ್ದು ಭಾಷೆಯಲ್ಲಿ:- SHABBA KHAIR
ಜರ್ಮನ್ ಭಾಷೆಯಲ್ಲಿ:- GUTEN NIGHT
ಸ್ಪ್ಯಾನಿಶ್ ಭಾಷೆಯಲ್ಲಿ:- VILLA VE DURE


ನನ್ನ ಸ್ಟೈಲ್:- " ಬಿದ್ಕ ಹೋಗಲೇ...."
------------------
ನೀವು ನಿಮ್ಮದೇ ಆದ ಸ್ಟೈಲ್ ನಲ್ಲಿ ಮಾತನಾಡಿರಿ
ನಿಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡಿರಿ..
ನಿಮ್ಮದೇ ಆದ ದಾರಿಯಲ್ಲಿ ನಡೆಯಿರಿ.....

ಆಗ ಜನರು ಹೇಳುವರು..

"ಗೂಬೆ ಮುಂಡೇದು.. ಯಾರ್ ಮಾತೂ ಕೇಳಲ್ಲಾ...."
------------------
ಸರ್ದಾರ್:- ಏನಮ್ಮಾ, ನಿನ್ನ ಗಂಡ ಚನ್ನಾಗಿದಾನಾ??
ಅವಳು:- ಏನ್ ಸ್ವಾಮಿ, ಏಕವಚನದಲ್ಲಿ ಮಾತಾಡುಸ್ತೀರಲ್ಲಾ...

ಸರ್ದಾರ್:- ಓಹ್.. ಏನಮ್ಮಾ, ನಿನ್ನ ಗಂಡಂದ್ರು ಚನ್ನಾಗಿದಾರಾ??
---------------
೧೪) ಇದನ್ನು ಕಳಿಸಿದವರು:-

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ /ವಾಹ್..ವಾಹ್/

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ....

Mosquito ಗೆ
ಬ್ಲಡ್ ಕೊಟ್ರೆ,
ಚಿಕನ್ ಗುನ್ಯಾ,,,, /ವಾಹ್ ವಾಹ್.../

--------------
ಪೋಲೀಸ್ ಪೇದೆ:- ನೆನ್ನೆ ಜೈಲಿನಲ್ಲಿ ಕೈದಿಗಳು ರಾಮಾಯಣ ನಾಟಕ ಮಾಡಿದರು.
ಜೈಲರ್:- ಅದಕ್ಕೇನೀಗಾ???
ಪೋಲೀಸ್ ಪೇದೆ:- ನೆನ್ನೆ ಸಂಜೀವಿನಿ ತರಕೆ ಹೋದ ಹನುಮಂತ ಇನ್ನೂ ಬಂದಿಲ್ಲಾ..
------------
SENT ಮೆಸೇಜ್‍ನ ಅರ್ಥ


ತಿಮ್ಮ : ಲೋ, ಈ SENT Message ಅಂದ್ರೆ ಏನೋ ?

ಪುಂಡ : ಅಹಾ ತೋರಿಸಿದ್ಯಲ್ಲಾ ನಿನ್ನ ಬುದ್ದಿವಂತಿಕೆಯನ್ನ !

SENT Message ಅಂದ್ರೆ 'ಸುಗಂಧವಾದ ಮೆಸ್ಸೇಜ್' ಅಂತ !!
------
ಅಮಲಾವೃತ ಕೀಚಕ ಕ೦ಟಕ ಪಾತಕ
ನೀಚ ಕಿರಾತಕ ಘಾತುಕನು
ಅಮಲಾಧಿತ ಲೋಚನ ಲೋಟಪತೆ
ವಿಜಯ್ ಮಲ್ಯ ಖೊಡೆ ಕೃತ ತೈಲಪತೆ

ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು
ನಿನ್ನ ಲಿವರಿಗೆ ಪವರಿಗೆ ಡೇ೦ಜರಿದು
ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡು ಕಣೋ
ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ

ಉಗಿತೀನ್ ಒದಿತೀನ್ ಹೊಡಿತೀನ್ ಬಡಿತೀನ್
ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ
ಪ್ರತಿ ನೈಟು ನೀ ಟೈಟು ದಿನಾ ಬರಿ ಫೈಟು
ಇದ್ಯಾರದು ಫೇಟು ಇದೇನು ವ್ಯಥೆ

ಪಾಪಿಷ್ಟ ಅನಿಷ್ಟ ಕನಿಷ್ಟ ನೀ ದುಷ್ಟ
ನೀ ಕಷ್ಟ ನೀ ಭ್ರಷ್ಟ ಸ್ಯಾಡಿಷ್ಟ ಕಣೋ
ನಿನ್ನ ವೈಫಿಗೆ ಲೈಫಿಗೆ ಚೊ೦ಬು ಕಣೋ
ನಿನ್ನ ಕೊನೆಯ ಸವಾರಿಗೆ ಬೊ೦ಬು ಕಣೋ

ನಿನಗ೦ ಸುಲಭ೦ ಸುಕೃತ೦ ಸರಸ೦
ಸತಿಗು೦ ಸುತಗು೦ ಸ್ವಗೃಹ೦ ನರಕ೦
ಸತತ೦ ಕಲಹ೦ ನಿರುತ೦ ವಿರಸ೦
ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸ೦ ಟ್ರಬಲ್ ಸ೦

ಶೂರಾದಿಶೂರ೦ ಬೀರಾದಿಬೀರ೦ ಪೂರಾ ಶರೀರ೦
ಬರೀ ರ೦ ಬರೀ ರ೦
ಸೋಡಾ ದಿ ಪಾನ೦ ಸಿಗರೇಟು ಧೂಮ೦ ಶ೦ಖಾದಿ ವಾದ್ಯ೦
ಬಬ೦ ಬ೦ ಬಬ೦ ಬ೦

ದಿನಾ ಸ೦ಕಟೇಶ೦ ನೋ ಆಸ್ಕರ್ ನೊ ಟೆಲ್ಲರ್
ಭಯ೦ಭೀತಿ ಜೀರೋ ನೊ ಯ೦ಗರ್ ನೋ ಯಲ್ಡರ್
ಬಡಕ್ಕೊ೦ಡೆ ಮಗನೇ ಲಿಮಿಟ್ಟೋ ಲಿಮಿಟ್ಟು
ಕೇಳಲಿಲ್ಲ ಈಗ ವಾಮಿಟ್ಟೋ ವಾಮಿಟ್ಟು

ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಬಿದ್ದಿರುವೆ ಯಾಕೆ ಎದ್ದೇಳೊ ಪಾಪಿ ನಿನಗೆ ಇದೇ ಸುಪ್ರಭಾತ೦


೨. ಆಫೀಸಿಗೆ ಹೋಗುವಾಗ ಜಿಮ್ಮಿ ಯಾವಾಗಲೂ ತನ್ನ ಹ್ಯಾಂಡ್ ಬ್ಯಾಗಿನಲ್ಲಿ ತನ್ನ ಪತ್ನಿ ಸಿಮ್ಮಿಯ ಫೋಟೋ ಇಟ್ಟುಕೊಂಡು ಹೊಗುವುದನ್ನು ಗಮನಿಸಿದ ಸಿಮ್ಮಿ ಆತನ ಬಳಿ ಕೇಳಿದಳಂತೆ . ರೀ ಯಾಕ್ರೀ ನೀವು ದಿನಾಲು ನನ್ನ ಫೋಟೋ ಆಫೀಸಿಗೆ ತಗೊಂಡು ಹೋಗ್ತೀರಾ ?
ಇಲ್ಲ ಕಣೆ ಯಾವುದೇ ರೀತಿಯ ಕಷ್ಟ ಬಂದಾಗ ನಿನ್ನ ಫೋಟೋ ತೆಗೆದು ನೋಡುತ್ತೇನೆ . ನನಗೆ ಸಮಾಧಾನವಾಗುತ್ತದೆ ಎಂದನಂತೆ . ಸಂತಸಗೊಂಡ ಸಿಮ್ಮಿ ನೋಡಿ ನಾನು ಅಷ್ಟು ಗ್ರೇಟ್ ಆಲ್ವಾ . ಥ್ಯಾಂಕ್ಯೂ ರೀ ಅಂದಳಂತೆ .
ಜಿಮ್ಮಿ ಅಲ್ಲ ಕಣೆ ಕಷ್ಟ ಬಂದಾಗ ನಿನ್ನ ಫೋಟೋ ನೋಡಿ ಇಷ್ಟು ದೊಡ್ಡ ಕಷ್ಟ ನಾನು ಅನುಭವಿಸುತ್ತಿದ್ದೇನೆ . ಅದರ ಮುಂದೆ ಈ ಕಷ್ಟ ಯಾವ ಲೆಕ್ಕ ಎಂದು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ ಎಂದನಂತೆ .

ಸೆಂಡ್ ಆಫ್ ಕಮಿಟಿ... ರಿಸೆಪ್ಷನ್ ಕಮಿಟಿ ಆದಾಗ...

ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರು, ತಮ್ಮ ಸಾವಿನ ಬಳಿಕ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು, ತಮ್ಮ ಅಂಗಾಂಗಗಳನ್ನು ಹೇಗೆ ದಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ತಾವೇ ನಿರ್ಧರಿಸಿ ತಮ್ಮ ಆತ್ಮೀಯರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿದ್ದರು.

ಆದರೆ, ಡಾ.ಎಚ್.ನರಸಿಂಹಯ್ಯ ಅವರಿಗೆ ಮೊದಲೇ ಸಮಿತಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಆಗ ಎಚ್.ಎನ್. ಹೇಳಿದ್ದು ಏನು ಗೊತ್ತೆ... ಅಲ್ಲ ಇವರನ್ನು ಸೆಂಡ್‌ಆಫ್ ಕಮಿಟಿಗೆ ಮೆಂಬರ್ ಮಾಡಿದ್ರೆ, ನನಗಿಂತ ಮೊದಲೇ ಮೇಲೆ ಹೋಗಿ, ರಿಸೆಪ್‌ಷನ್ ಕಮಿಟಿ ರಚನೆ ಮಾಡಿದ್ದಾರೆ...

(ಈ ಘಟನೆ ಸ್ಮರಿಸಿಕೊಂಡವರು, ಡಾ. ಮಹೇಶ್ ಜೋಶಿ, ಹಿರಿಯ ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು)


ಜೋಕಿನ ಜೋಕು

ಗುಂಡನ ಬಾಸ್ ಗೆ ಜೋಕು ಹೇಳುವ ಚಪಲ. ಆದರೆ ಅವರಿಗೆ ಗೊತ್ತಿದ್ದು ಒಂದೇ ಒಂದು ಕೆಟ್ಟ ಜೋಕು. ಪದೇಪದೇ ಅದನ್ನೇ ಹೇಳುತ್ತಿದ್ದರು. ಆದರೂ ಗುಂಡ ಗಹಗಹಿಸಿ ನಗುತ್ತಿದ್ದ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಗುಂಡನನ್ನು  ಪಕ್ಕಕ್ಕೆ ಕರೆದು ಕೇಳಿದ್ರು. ಎನ್ ಸಾರ್  ಅಷ್ಟು ಜೋರಾಗಿ ನಕ್ತಾ ಇದ್ದೀರಿ. ಆ ಜೋಕು ಕೇಳಿದ್ರೆ ನಗೂನೇ ಬರಲ್ಲ? ಜೊತೆಗೆ ಅವನು ಹೇಳಿದ ಜೋಕೇ ಹೇಳ್ತಾ ಇದ್ದಾನೆ ಆದ್ರೂ  ನೀವು ನಕ್ತಾನೇ ಇದ್ದೀರಿ ಏಕೆ ಎಂದು ಪ್ರಶ್ನಿಸಿದರು.

ಗುಂಡ ಹೇಳಿದ ಏನ್ ಮಾಡ್ಲಿ ಸ್ವಾಮಿ, ಅವರು ನನ್ನ ಬಾಸ್. ನಾನು ಈಗ ನಗದೇ ಇದ್ರೆ ಅವರು ಮತ್ತೆ ಅದೇ ಜೋಕನ್ನು ಇನ್ನೂ ನಾಲ್ಕಾರು ಸಾರಿ ಹೇಳ್ತಾರೆ ಅದಕ್ಕೆ ವಿಧಿ ಇಲ್ಲದೆ ನಕ್ತಾನೇ ಇರ್ತೀನಿ.


ಪುಸ್ತಕ ಓದಿ ಸೊಸೆ ಮಾಡಿದ ಅಡುಗೆ...

ಮದುವೆಯಾಗಿ ಮನೆ ತುಂಬಿಸಿಕೊಂಡ ಸಾಫ್ಟ್‌ವೇರ್ ಸೊಸೆಗೆ ಅಡಿಗೆ ಮಾಡಕ್ಕೆ ಬರಲ್ಲ ಅಂತ ಅತ್ತೆ ದಿನಾ ದೂರುತ್ತಿದ್ರು. ಕೊನೆಗೊಂಡು ದಿನ ಸೊಸೆ ಒಂದು ಅಡುಗೆ ಪುಸ್ತಕ ತಂದು. ಅಡುಗೆ ಮಾಡಲು ಆರಂಭಿಸಿದಳು. ಚಪಾತಿ ಹಿಟ್ಟು ಕಲೆಸಿ, ಅದರ ಮೇಲೆ ದೇವರ ಗೂಡಲ್ಲಿದ್ದ ಗಂಟೆ ತೆಗೆದು ಇಟ್ಟಳು.

ಇದರಿಂದ ಸಿಡಿಮಿಡಿಗೊಂಡ ಅತ್ತೆ ಕೇಳಿದ್ರು. ಏನಮ್ಮ ದೇವರ ಪೂಜೆಗೆ ಬಾರಿಸೋ ಗಂಟೆನ ತೆಗೆದು ಚಪಾತಿ ಹಿಟ್ಟಿನ ಮೇಲೆಕೆ ಇಟ್ಟೆ. ನಿಮಗೆ ಒಂಚೂರೂ ಮಡಿ, ಮೈಲಿಗೆ ಇಲ್ಲ.

ಸೊಸೆ ಅಷ್ಟೇ ನಯವಾಗಿ ಉತ್ತರಕೊಟ್ಲು. ಪುಸ್ತಕದಲ್ಲಿ ಚಪಾತಿ ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ ಬರೆದಿದ್ದಾರೆ ಗೊತ್ತಾ....


ಅದಕ್ಕೆಲ್ಲಾ ಹೆದರಲ್ಲ

೭೫ ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ. ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ ೨೧ ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ.

ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!!! ತಾತ ಉತ್ತರ ಕೊಟ್ಟ ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಕ್ತೀನಿ.


ಅಮ್ಮನಿಗೆ ಮಗಳ ಸಜೆಷನ್

ಖ್ಯಾತ ಚಿತ್ರನಟಿಯೊಬ್ಬಳು ಸತತ ಹದಿನೆಂಟನೇ ಬಾರಿ ತನ್ನ ೧೮ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಈ ಶುಭ ಸಂದರ್ಭದಲ್ಲಿ ಆಕೆಯ ೧೮ ವರ್ಷದ ಮಗಳೊಂದು ಸಜೆಷನ್ ಕೊಟ್ಲು. ಮಮ್ಮಿ ಆಟ್‌ಲೀಸ್ಟ್ ನನಗಿಂತ ಒಂಬತ್ತು ತಿಂಗಳಾದ್ರೂ ನಿನ್ನ ವಯಸ್ಸು ಜಾಸ್ತಿ ಹೇಳು....


ಅರೇಂಜ್ ಲೋಕಲಿ...

ಅದೊಂದು ಹಳ್ಳಿಯ ಬ್ಯಾಂಕ್, ಸ್ಟಾಫ್ ಸಂಖ್ಯೆ ಕಡಿಮೆ. ಯಾರಾದರೂ ರಜೆ ಹೋದರೆ, ಬದಲಿ ವ್ಯವಸ್ಥೆ ಮಾಡುವುದು ವಾಡಿಕೆ. ಒಮ್ಮೆ ಒಬ್ಬ ಉದ್ಯೋಗಿಯ ಹೆಂಡತಿ ಕಾಯಿಲೆ ಮಲಗಿದರು. ಇಂಗ್ಲಿಷ್ ಅಷ್ಟಾಗಿ ಬಾರದ ಆತ ಕೂಡಲೆ ಹೆಡ್ ಆಫೀಸ್‌ಗೆ ಹೀಗೆ ಟೆಲಿಗ್ರಾಂ ಕೊಟ್ಟ... ಸಾರ್ ಮೈ ವೈಫ್ ಈಸ್ ಇಲ್. ಪ್ಲೀಸ್ ಅರೇಂಜ್ ಸಬ್‌ಸ್ಟಿಟ್ಯೂಟ್.. ಹೆಡ್ ಆಫೀಸ್‌ನಿಂದ ಟೆಲಿಗ್ರಾಂ ರಿಪ್ಲೆ ಬಂತು... ಅದರಲ್ಲಿ ಹೀಗೆ ಬರೆದಿತ್ತು... ಸಾರಿ... ಯು.. ಪ್ಲೀಸ್ ಅರೇಂಜ್ ಲೋಕಲಿ...


ಎಲ್ಲಾ ಬಿಡ್ತೀನಿ

ಗುಂಡಾ ಒಂದೇ ಹುಡುಗೀನ ೫ ವರ್ಷದಿಂದ ಪ್ರೀತಿಸ್ತಾ ಇದ್ದ. ಕೊನೆಗೂ ಇಬ್ರೂ ಮದುವೆ ಆಗೋ ನಿರ್ಧಾರ ಮಾಡಿದ್ರು. ಆ ಹುಡುಗಿ ಕೇಳಿದ್ಲು. ನಾನು ನಿನ್ನ ಮದುವೆ ಆಗಕ್ಕೆ ಸಿದ್ಧ ಆದರೆ ನೀನು ಸಿಗರೇಟ್ ಸೇದೋದು ಬಿಡ್ತೀಯಾ? ಗುಂಡ ಓಕೆ ಎಂದ. ಕುಡಿಯೋದೂ ಬಿಡ್ತಾಯಾ ? ಗುಂಡ ವಿ ಇಲ್ಲದೆ ಸರಿ ಎಂದ. ಇಸ್ಪೀಟ್ ಆಡೋದು? ಖಂಡಿತಾ ಬಿಡ್ತೀನಿ ಅಂದ ಗುಂಡ. ಹುಡುಗಿ ಮತ್ತೆ ಕೇಳಿದ್ಲು ನನ್ನ ಮದುವೆ ಆಗಕ್ಕೆ ನೀನು ಇನ್ನೂ ಏನೇನು ಬಿಡ್ತೀಯಾ ? ಗುಂಡ ಹೇಳ್ದ ಮದ್ವೆ ಆಗೋ ಯೋಚನೇನೇ ಬಿಟ್ಟು ಬಡ್ತೀನಿ.



ಮಾರಾಟ

ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ?

ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್‌ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ.



ಈಗೆಷ್ಟೋ ಪರವಾಗಿಲ್ಲ

ಏಕೋಪಾಧ್ಯಾಯ ಶಾಲೆಗೆ ಇನ್‌ಸ್ಪೆಕ್ಟರ್ ಬಂದಿದ್ರು. ಆಗ ಆರನೇ ಕ್ಲಾಸಲ್ಲಿ ಗಣಿತ ಪಾಠ ನಡೀತಿತ್ತು. ಇನ್‌ಸ್ಪೆಕ್ಟರ್ ಕೇಳಿದ್ರು ಏನ್ರೀ ಮೇಸ್ಟ್ರೇ ಹೇಗೆ ಪಾಠ ಮಾಡಿದ್ದೀರಿ. ಮೇಸ್ಟ್ರಂದ್ರು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ ಸಾರ್. ಬೇಕಾದ್ರೆ ನೀವೇ ಪರೀಕ್ಷೆ ಮಾಡಿ..

ಓಕೆ. ಎಂದ ಇನ್‌ಸ್ಪೆಕ್ಟರ್ ಒಬ್ಬ ಹುಡುಗನ್ನ ಕೇಳಿದ್ರು ನಾಲ್ಕ ನಾಲ್ಕಿ ಎಷ್ಟು.? ಹುಡುಗ ಹೇಳಿದ ೧೬೦೦ ಸಾರ್. ಗಾಬರಿ ಆದ ಇನ್‌ಸ್ಪೆಕ್ಟರ್ ಮತ್ತೊಬ್ಬ ಹುಡುಗನ್ನ ಕೇಳಿದ್ರು ಎಂಟೆಂಟ್ನಿ ಎಷ್ಟೋ ? ಅವ ಹೇಳ್ದ ೬೪,೦೦೦ ಸಾರ್. ಸಿಟ್ಟಾದ ಇನ್‌ಸ್ಪೆಕ್ಟರ್ ಕೇಳಿದ್ರು ಇದೇ ಏನ್ರೀ ಮೇಸ್ಟ್ರೇ ನೀವು ಮಕ್ಳಿಗೆ ಹೇಳಿಕೊಟ್ಟಿರೋದು. ಎಲ್ಲಾ ಸಾವಿರಗಟ್ಲೇ ಹೇಳ್ತಾರಲ್ರೀ.

ಸಮಾಧಾನದಿಂದ ಮೇಸ್ಟ್ರು ಹೇಳಿದ್ರು. ಈಗೆಷ್ಟೋ ಪರವಾಗಿಲ್ಲ ಸಾರ್ ನಾನು ಬಂದ ಹೊಸದ್ರಲ್ಲಿ ಲಕ್ಷಗಟ್ಲೆ ಹೇಳ್ತಿದ್ರು. ನಾನು ಸಾವಿರಕ್ಕೆ ಇಳ್ಸಿದೀನಿ.

ನಾಟಕಕ್ಕೆ ಬರಲು ಕಾರಣ

ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು.  ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಿಂದೇ ಪರ್ವಾಗಿಲ್ಲ..

ಇಬ್ಬರು ಸ್ನೇಹಿತರು ಮಾತಾಡ್ತಾ ಇದ್ರು. ಒಬ್ಬ ಹೇಳ್ದಾ ನೋಡಯ್ಯಾ ಮೊನ್ನೆ ನಾನೂ ನನ್ನ ಹೆಂಡತಿ ಮನೆಗೆ ಬರೋವಾಗ ಸಣ್ಣ ಕಲ್ಲೊಂದು ನನ್ನ ಹೆಂಡತಿ ಕಣ್ಣಿಗೆ ಬಿತ್ತು. ಅದನ್ನ ತೆಗೆಸಕ್ಕೆ ಡಾಕ್ಟ್ರಗೆ ೧೦೦ ರುಪಾಯಿ ಖರ್ಚಾಯ್ತು.ಎರಡನೆಯವ ಹೇಳಿದ ನಿಂದೇ ಪರ್ವಾಗಿಲ್ಲ. ನಿನ್ನ ಹೆಂಡ್ತಿ ಕಣ್ಣಿಗೆ ಕಲ್ಲು ಬಿತ್ತು. ಆದರೆ, ನನ್ನ ಹೆಂಡತಿ ಕಣ್ಣಿಗೆ ರೇಷ್ಮೆ ಸೀರೆ ಬಿತ್ತು. ಅದನ್ನು ತೆಗಸಿಕೊಡಕ್ಕೆ ೫೦೦೦ ಖರ್ಚಾಯ್ತು.

ಯಾರನ್ನೂ ಮುಟ್ಟಲ್ಲ

ಗುಂಡ ಕಟಕಟೆಯಲ್ಲಿ ಸಾಕ್ಷಿ ಹೇಳಲು ಬಂದು ನಿಂತಿದ್ದ. ವಕೀಲರು ಕೋರ್ಟ್‌ನಲ್ಲಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ ಪ್ರಮಾಣ ಮಾಡು ಎಂದರು.

ಕೂಡಲೆ ಗುಂಡ ಹೇಳಿದ. ಬೇಡ ಸ್ವಾಮಿ. ಖಂಡಿತ ಬೇಡ. ನಾನು ಯಾರನ್ನೂ ಮುಟ್ಟಲ್ಲ. ಕಳೆದ ವರ್ಷ ಗೊತ್ತಿಲ್ದೆ ಆ ಲಕ್ಷ್ಮೀನ ಮುಟ್ಟಿ, ಪಂಚಾಯ್ತಿಲಿ ಛಡಿ ಏಟು ತಿಂದಿದ್ದೆ. ಇಲ್ಲಿ ನಾನು ಯಾವ ಗೀತನ್ನೂ ಮುಟ್ಟಲ್ಲ , ನನ್ನ ಬಿಟ್ಟು ಬಿಡಿ, ನಾನು ಹಳ್ಳಿಗೆ ಹೋಗ್ತೀನಿ ಅಂದ.

ನೆಂಟಸ್ಥನ

ಮೀನನ್ನ, ಕನಕ ಕೇಳಿದ್ಲು. ಆ ಕೊನೆ ಮನೆಗೆ ಹೊಸದಾಗಿ ಬಂದಿದ್ದಾರಲ್ಲ ಅವರು ನಿಮಗೆ ನೆಂಟ್ರಾಗಬೇಕಂತೆ ಹೇಗೆ? ಮೀನಾ ಹೇಳಿದ್ಲು... ಓ ಅದ. ಅವರ ಮನೆ ನಾಯಿ ಟಾಮೀನೂ, ನಮ್ಮನೆ ನಾಯಿ ಬ್ರೌನಿನೂ ಅವಳಿ ಜವಳಿ.

ಮನುಷ್ಯನ ಆಯಸ್ಸು - ಏಷ್ಟು - ಏನು?

ಸೃಷ್ಟಿಕರ್ತನಾದ ಬ್ರಹ್ಮದೇವ, ಸೃಷ್ಟಿ ಕಾರ್ಯ ಆರಂಭಿಸಿದ ಹೊಸತರಲ್ಲಿ ಮನುಷ್ಯನಿಗೆ, ಕತ್ತೆಗೆ, ನಾಯಿಗೆ ಹಾಗೂ ಗೂಬೆಗೆ ೪೦- ೪೦ ವರ್ಷ ವಯಸ್ಸು ನಿಗ ಮಾಡಿದನಂತೆ, ಗಾಬರಿಗೊಂಡ ಈ ಮೂರು ಪ್ರಾಣಿಗಳು ಬ್ರಹ್ಮನ ಬಳಗೆ ಡೆಲಿಗೇಷನ್ ಹೋಗಿ, ತಂದೆಯೇ ಮನುಷ್ಯನಿಗೆ ಮಾತು ಹೇಳಿಕೊಟ್ಟಿರುವೆ, ಬುದ್ಧಿ ಕೊಟ್ಟಿರುವೆ ಅವನಿಗೂ ನಮಗೂ ೪೦ -೪೦ ವರ್ಷ ವಯಸ್ಸು ಕೊಟ್ಟರೆ, ಅವನು ನಮ್ಮನ್ನು ಶೋಷಿಸುತ್ತಾನೆ. ದಯಮಾಡಿ ನಮ್ಮ ಅರ್ಧ ಆಯಸ್ಸು ಕಡಿಮೆ ಮಾಡು ಎಂದು ಕೋರಿದವಂತೆ.

ಬ್ರಹ್ಮ ಆಗಬಹುದು. ಆದರೆ ನಿಮ್ಮ ಅರ್ಧ ಆಯಸ್ಸನ್ನು ಮನುಷ್ಯ ತೆಗೆದುಕೊಂಡರೆ ಮಾತ್ರ ಅದು ಸಾಧ್ಯ ಎಂದನಂತೆ. ಪ್ರಾಣಿಗಳೆಲ್ಲ ಮನುಷ್ಯನನ್ನು ಕೋರಿದವಂತೆ.ಮನುಷ್ಯ ಓಕೆ ಎಂದ.

ಅಂದಿನಿಂದ ಕತ್ತೆ, ನಾಯಿ, ಗೂಬೆಗೆ ೨೦ ವರ್ಷವಷ್ಟೇ ಆಯಸ್ಸು. ಮನುಷ್ಯನಿಗೆ ನೂರು. ಅದಕ್ಕೆ ಮನುಷ್ಯ ೪೦ ವರ್ಷ ಮನುಷ್ಯನಾಗೇ ಬದುಕುತ್ತಾನೆ. ೪೦ರಿಂದ ೬೦ ವರ್ಷ ಕತ್ತೆಯದು, ಅದಕ್ಕೆ ಮನೆ ಕಟ್ಟಬೇಕು, ಮಗಳ ಮದುವೆ ಮಾಡಬೇಕು ಎಂದು ಕತ್ತೆಯಂತೆ ದುಡಿಯುತ್ತಾನೆ. ೬೦ರಿಂದ ೮೦ತ್ತು ನಾಯಿಯ ವಯಸ್ಸು, ರಿಟೈರ್ ಬೇರೆ ಆಗಿರುತ್ತಾನೆ, ಮಾಡಲು ಕೆಲಸ ಇಲ್ಲ ಹೀಗಾಗಿ ನಾಯಿಯಂತೆ ಅಲೆಯುತ್ತಾನೆ. ಇನ್ನು ೮೦ರಿಂದ ೧೦೦ ಗೂಬೆಯ ವಯಸ್ಸು, ಕೈಲಾಗದೆ ಮೂಲೆಯಲ್ಲಿ ಗೂಬೆಯಂತೆ ಕುಳಿತಿರುತ್ತಾನಂತೆ.

ಸ್ನೇಹಿತರು

ಖಾಸಗಿ ಟಿ.ವಿ ಚಾನೆಲ್‌ನಲ್ಲಿ ಕೋಟ್ಯಪತಿಯೊಬ್ಬರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಸಂದರ್ಶಕರು ಕೇಳಿದರು. ಬಡವರಾಗಿದ್ದ ನೀವು ಈಗ ಶ್ರೀಮಂತರಾಗಿದ್ದೀರಿ. ನೀವು ಬಡವರಾಗಿದ್ದಾಗ ಇದ್ದ ನಿಮ್ಮ ಹಳೆ ಸ್ನೇಹಿತರು, ಈಗ ಬಂದು ತೊಂದರೆ ಕೊಡುವುದಿಲ್ಲವೇ? ಶ್ರೀಮಂತ ಉತ್ತರಿಸಿದ. ಇಲ್ಲ. ನಾನು ಬಡವನಾಗಿದ್ದಾಗ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ.

ದೀರ್ಘಸೇವೆಯ ರಹಸ್ಯ

ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ.

ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೇಲಸ ಮಾಡ್ತಾ ಇರೋದು.
ಗುಂಡನ ಲಾಜಿಕ್ಕು...

ಗುಂಡ ಕನ್ನಡಕದಂಗಡಿಗೆ ಹೋದ. ಅಂಗಡಿಯವ ಹೇಳಿದ. ನೋಡಿ ಈ ಕನ್ನಡಕ ಹಾಕ್ಕೊಳ್ಳಿ ನೀವು ಏನು ಬೇಕಾದರೂ ಓದಬಹುದು. ಗುಂಡ ಕೇಳಿದ ಈ ಕನ್ನಡಕ ಹಾಕ್ಕೊಂಡ್ರೆ ಇಂಗ್ಲಿಷ್ ಓದಬಹುದಾ? ಅಂಗಡಿಯವ ಹೇಳಿದ, ಇಂಗ್ಲಿಷೇನು, ತೆಲುಗು, ತಮಿಳು, ಕನ್ನಡ ಯಾವ ಭಾಷೆ ಬೇಕಾದ್ರೂ ಓದಬಹುದು. ಗುಂಡ ಹೇಳಿದ ಅಯ್ಯೋ ದೇವ್ರೆ... ಈ ಕನ್ನಡಕ ಹಾಕ್ಕೊಂಡ್ರೆ ಅಷ್ಟೊಂದು ಭಾಷೆ ಓದಬಹುದಾ? ಹಾಗಾದ್ರೆ ನನಗೆ 6 ಕನ್ನಡಕ ಕೊಡಿ, ನಮ್ಮನೇಲಿ ಯಾರಿಗೂ ಓದಕ್ಕೆ, ಬರೆಯಕ್ಕೆ ಬರಕ್ಕಿಲ್ಲ....

ನಗಲು ಅವಕಾಶವನ್ನೇ ಕೊಡಲ್ಲ

ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್‌ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ.

ಕಪ್ಪಗೆ ಮಾಡು...

ಎಪ್ಪತ್ತು ವರ್ಷದ ಬೊಕ್ಕುತಲೆಯ ಬೋಡ ತೈಲ ಕಂಪನಿಯೊಂದರ ಹೊಸ ಕೇಶತೈಲ ಬಳಸಿದ. ಆತನ ತಲೆಯಲ್ಲಿ ನಾಲ್ಕು ಬಿಳಿ ಕೂದಲು ಮೊಳೆತೇ ಬಿಟ್ಟವು. ಬಹಳ ಸಂತೋಷದಿಂದ ನಾಲ್ಕು ಕೂದಲಿನ ಬೋಡ.. ಕಟ್ಟಿಂಗ್‌ಷಾಪ್‌ಗೆ ಹೋದ. ಈ ಬೋಡನ ನೋಡಿ ನಗು ತಡೆಯಲಾರದ ಕಟಿಂಗ್‌ಷಾಪ್ ಮಾಲಿಕ ಕೇಳ್ದ. ಏನ್ ತಾತಾ ನಾನು ಕೂದಲು ಎಣಿಸಬೇಕೋ ಅಥವಾ ಹೇರ್ ಸೆಟ್ಟಿಂಗ್ ಮಾಡಬೇಕೋ... ತಾತ ಹೇಳಿದ... ಎರಡೂ ಬೇಡ.. ನನ್ನ ಕೂದಲಿಗೆ ಡೈ ಮಾಡು.

ರೋಗಿಗಳ ಬಳಿಯೆಲ್ಲಾ ಒಂದೇ ಕಾದಂಬರಿ..

ಸಾಹಿತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ವಾರ್ಡಿನಲ್ಲಿ ಎಲ್ಲ ರೋಗಿಗಳ ಪಕ್ಕದಲ್ಲೂ ಇವರು ಬರೆದ ಕಾದಂಬರಿ ಇತ್ತು. ಇದನ್ನು ನೋಡಿ, ತೀವ್ರ ಆನಂದಗೊಂಡ ಸಾಹಿತಿ ವೈದ್ಯರನ್ನು ಕೇಳಿದರು. ಏನ್‌ಸಾರ್ ಈ ಆಸ್ಪತ್ರೇಲಿ ಎಲ್ಲರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದೆಯೇ.. ವೈದ್ಯರು ಹೇಳಿದರು. ಅದರ ಗುಟ್ಟೇ ಬೇರೆ. ಇವರೆಲ್ಲಾ ನಿದ್ದೇ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್‌ಲೆಟ್ ಕೊಟ್ರು ಇವರಿಗೆ ನಿದ್ದೇನೆ ಬರ್ತಿರಲಿಲ್ಲ. ಈ ಕಾದಂಬರಿ ಕೊಟ್ವಿ ನೋಡಿ ಎಲ್ಲರೂ ಐದೇ ನಿಮಿಷಕ್ಕೆ ನಿದ್ದೇ ಮಾಡ್ತಾರೆ...

ವೆರಿ ಅಕೇಶನಲಿ

ಹೈಫೈ ಹುಡುಗಿಯೊಬ್ಬಳು ಕಾಲೇಜಿಗೆ ಸೇರಲು ಅಪ್ಲಿಕೇಷನ್ ಭರ್ತಿ ಮಾಡುತ್ತಿದ್ದಳು. ನೇಮ್, ಅಡ್ರೆಸ್ ಫಿಲ್ ಮಾಡಿದ ಬಳಿಕ sex ಎಂದಿದ್ದ ಕಾಲಂನಲ್ಲಿ ಏನು ಬರೆಯಬೇಕು ಎಂದು ಯೋಚಿಸಿ, ಯೋಚಿಸಿ ಕೊನೆಗೆ ಹೀಗೆ ಬರೆದಳು. ವೆರಿ ಅಕೇಶನಲಿ.

ಅಭ್ಯಾಸಬಲ

ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.

ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ  ಕೆಳಗೆ ಇಳಿದು  ಸ್ವಲ್ಪ ದೂರ ತಳ್ಳಿ..  ಎಂಜಿನ್ ಆಫ್ ಆಗಿದೆ

ಪೆದ್ದ ಗುಂಡನ ತರ್ಕ

ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ.

ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್‌ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದುಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.

ಬಿಡಿಸಲಾಗದ ಬೆಲೆ
ಜೀವ ಜೀವದ ನೆಲೆ
ಉತ್ತಮ ಜೀವನವೇ ಒಂದು ಕಲೆ
ಅದಮ ಜೀವನವೇ ಕೊಲೆ
ಉತ್ತಮ ಸರ್ವೊತ್ತಮರ ನೆಲೆ
ಸೃಷ್ಟಿಕರ್ತನ ಸಮಯದ ಬಲೆ

ಕೂತು ಉಣ್ಣುವವನಿಗೆ ಕುಡಿಕೆಹೊನ್ನು ಸಾಲದು
ಗಾದೆ ಮಾತು ಈಗ ಹಳೆಯದಾಯಿತು
ಕೂತು ಉಂಡರು ಸರಿ ಮನಸು ಬಸಿಯುವುದು
ತಲೆಗೆ ಹೊಳೆಯುವುದು ಒಂದು
ಮತ್ತೊಂದು ಗಾದೆ ಉದ್ಯೋಗಂ ಪುರುಷ ಲಕ್ಷಣಂ


ಅಹ್ಹಾ ನಿನ್ನ ಮಾತು
ಅದು ನಾ ಕಾಣದ ಮುತ್ತು
ಸಂಭ್ರಮಿಸಿ ಹೇಳುವೆ ಒಂದು ಮಾತು
ಅದೇ ನೀ ನನಗೆ ಅಚ್ಚು ಮೆಚ್ಚು

ಸರಿಗಮ ಎನ್ನುವುದು ಜೀವನದ ಅರ್ಥ ಮಾಡೀಸುವ ಸುಧಿನ
ಪದನಿಸ ಎನ್ನುವುದು ನಾ ನಿನಗೆ ಕೊಡುವ ಸ್ನೇಹದ ನಮನ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014

          ಕನ್ನಡ ನಾಡು
ಕೈ ಮುಗಿದು ನಮಿಸಿ ಇದು ಕನ್ನಡದ ನಾಡು
ಕವಿ ಕಲಿಗಳು ಹುಟ್ಟಿ ಬೆಳದೆ ಹೆಮ್ಮೆಯ ಕಲಿನಾಡು
ಶ್ರೀಗಂಧದ ಕಂಪುಳ್ಳ ಚೆಂದದ ಸಿರಿ ನಾಡು
ಸಿರಿವಂತಿಕೆ ಚಿನ್ನ ಬೆಳೆವ ಚಿನ್ನದ ಕರು ನಾಡು

ಕಸ್ತೂರಿಯ ಕಂಪು ನಮ್ಮ ಕನ್ನಡದ ಭಾಷೆ
          ಕೋಟಿ ಕೋಟಿ ಜನರ ಮದ್ಯೆ ಗುನುಗುವ ಈ ಭಾಷೆ
          ಶತಮಾನದ ಇತಿಹಾಸದ ಶ್ರೇಷ್ಠವಾದ ಭಾಷೆ
        ಸೀಮೆ ದಾಟಿ ಮೆರೆಯುತ್ತಿರುವ ಸಿರಿವಂತದ ಭಾಷೆ

ಜ್ನಾನಪೀಠ ಹೆಚ್ಚು ಪಡೆದ ಭಾಷೆ ನಮ್ಮ ಕನ್ನಡ
ಜ್ನಾನ ದಾಹ ಇಂಗಿಸುವ ದೇಶ ಭಾಷೆ ಕನ್ನಡ
ಜಾತಿ ಕುಲವ ಮೆಟ್ಟಿ ಮೆರೆವ ಭವ್ಯ ಭಾಷೆ ಕನ್ನಡ
ಜವರಾಯನ ಹಿಮ್ಮೆಟ್ಟಿಸುವ ಧೈರ್ಯಭಾಷೆ ಕನ್ನಡ

ಸರ್ವಜ್ನನ ಸತ್ವದ ಸಿರಿ ಸಾರ್ವಭೌಮ ನಾಡು
ಬಸವಣ್ಣನ ಬಾವೈಕ್ಯದ ಬಾಂಧವ್ಯದ ನಾಡು
ಹೆಸರಿನಲ್ಲಿ ಕರುಣೆಯುಳ್ಳ ಕನ್ನಡ ಸಿರಿ ನಾಡು
ಉಸಿರಾಯಿತು ನಮ್ಮೆಲ್ಲರ ಹೆಮ್ಮೆಯ ಕರುನಾಡು

ಕುವೆಂಪು ಕಂಡ ನಾಡು ಕರುನಾಡ ಕನ್ನಡ ನಾಡು
ನಾಕುತಂತಿ ಮೀಟುತಿರುವ ಬೇಂದ್ರೆಯ ಸಿರಿನಾಡು
ಮೂಕಜ್ಜಿಯು ಕನಸು ಕಂಡ ಕಾರಂತರ ನಾಡು
ಕನ್ನಡವೇ ಆಸ್ತಿಯೆಂದ ಮಾಸ್ತಿಯ ಮಹಾನಾಡು
ಭರತಮಾತೆ ತಿಲಕತೊಟ್ಟ ಗೋಕಾಕರ ನಾಡು
ಸಾಹಿತ್ಯದ ಸಿರಿಹೊತ್ತ ಮೂರ್ತಿಯ ಸವಿನಾಡು
ಸಮಗ್ರತೆಯ ಸಫಲವಾದ ಗಿರೀಶರ ಗಿರಿನಾಡು
ಚಂದ್ರನನ್ನೇ ಶೇಖರಿಸಿದ ಚಂದದ ಸಿರಿನಾಡು

ಕಾವೇರಿ ಹರಿಯುತ್ತಿರುವ ಪುಣ್ಯಭೂಮಿ ನಮ್ಮದು
ಕಾವಿತೊಟ್ಟ ಋಷಿಮುನಿಗಳ ಸ್ವರ್ಗ ಭೂಮಿ ನಮ್ಮದು
ದಿಟ್ಟ ದೀರ ಯೋದರಗಳ ಯೋಗ ಭೂಮಿ ನಮ್ಮದು
ದಿಕ್ಕು ದೆಸೆಗೆ ಕರುಣೆ ತೋರೋ ದಿವ್ಯ ಭೂಮಿ ನಮ್ಮದು
ಬಂಗಾರವ ಬೆಳೆಯಿತ್ತಿರುವ ಸ್ವರ್ಣ ಭೂಮಿ ನಮ್ಮದು
ಭಾವೈಕ್ಯದಿ ಮೆರೆತ್ತಿರುವ ಭವ್ಯ ಭೂಮಿ ನಮ್ಮದು
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014
ಸ್ನೇಹ ಬಂಧನಂ ಸೇತು ಬಂಧನಂ
ಸೇತು ಬಂಧನಂ ಸ್ನೇಹಬಂಧನಂ
ಸ್ನೇಹಂ ಶುಭಂ ಸ್ನೇಹಂ ಸಂಕಲ್ಪಂ
ಸ್ನೇಹ ಬ್ರಹ್ಮಂ ನಿರಂತರಂ ನಿಜಗುಣಂ
ಸ್ನೇಹಂ ನಿರಂತರಂ ಚಿರಂಜೀವಿಯಂ

ಕಣ್ಣುಮದ್ಯದ ಹುಣ್ಣು ಕಾಡುವುದಿಲ್ಲ ಎಂದಿಗೂ
ಕನ್ನಡಿಯೊಳಗಿನ ಗಂಟು ಸಿಗುವಿದಿಲ್ಲ ಎಂದಿಗೂ
ಅದರೂ ಬೇಕೆ ಬೇಕು ಕನ್ನಡಿ ದೆಹ ಸಿರಿಯ ನೋಡಲು
ಸತ್ಯವಾದ ಮಾತು ಇದು ಆತ್ಮತಿಳಿಯಲು ಬೇಕು ಸ್ನೇಹದ ನಂಟು


ದೇಹದ ಅಣು ಅಣುವಿನಲ್ಲೂ ತುಂಬಿದೆ ಮಣ್ಣು
ಕಾರಣ ದೇಹದ ಮೂಲವೇ ಮಣ್ಣು
ಮುಂದೆ ಸೇರುವುದು ದೇಹ ಇದೇ ಮಣ್ಣು
ಪಂಚಭೂತಗಳ ಪ್ರಥಮ ಮಣ್ಣು
ಪರಮ ಕಾರ್ಯಕ್ಕೆ ಬೇಕೆ ಬೇಕು ಮಣ್ಣು

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014