Saturday, January 8, 2011

ನನ್ನ ಸ್ವರಚಿತ ಕಿರು ಕವನಗಳು

ಚೈತ್ರ
ವನ ಸಿರಿಯ ಸಿಂಗರಿಸಿ ವಸಂತ ಬಂದ
ಮರಗಿಡಕೆ ಚೈತ್ರದ ಚಿಗುರನ್ನು ತಂದ
ಪ್ರಕೃತಿಗೆ ಹಸಿರುಡುಗೆ ತೊಡಿಸುತ್ತಾ ನಿಂದ
ಬಗೆ ಬಗೆಯ ಹೂವರಳಿ ಬಾನಲ್ಲಿ ಹರಡಿಹುದು
ಬಣ್ಣದ ಚಿತ್ತಾರ ಅಲ್ಲಲ್ಲಿ ಮೂಡಿಹುದು
ಮಾಮರದ ಮರೆಯಲ್ಲಿ ಕೋಗಿಲೆಯು ಕುಳಿತಿಹುದು
ಚಿಗರನ್ನು ಸವಿಯುತ್ತ ಕೂಹು ಕೂಹು ಹಾಢಿಹುದು
ಹೊಂಗೆಯ ಮರವು ತಂಗಾಳಿ ಬೀಸಿತ್ತು
ಮಧುರ ಸಾರವನರಿಸಿ ದುಂಬಿಯು ಬಂದಿತ್ತು
ಹೊಸ ವರುಷ ಹೊಸ ಹರುಷ ಹೊಸ ಬಯಕೆ ತುಂಬಿರಲು
ಜೀವನಕೆ ಹೊಸ ಬಗೆಯ ಉತ್ಸಾಹ ಬಂದಿಹುದು
ಬೇವಿನ ಕಹಿ ನೆನಪು ಬಾಳೆಲ್ಲ ತುಂಬಿರಲು
ಹೊಸ ವರುಷ ಸಿಹಿಯಾದ ಸವಿಜೇನು ತಂದಿಹುದು


:- ಅರಹಳ್ಳಿ ಕಾವೆಂ ಶ್ರೀನಿವಾಸಮೂರ್ತಿ
ಬೆಂಗಳೂರು


ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತ್ತಿತ್ತು ಜೊಲ್ಲು


ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರಿ
ಅವಳ ಹಾಡೀ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿ ನೋಡೀ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು

ಮಿಸ್ಸ್ ಅಂದ್ರೆ ಮಿಸ್ಸ್ ಅನುರಾದ ಮಿಸ್ಸ್
ನಮ್ಮ ಸ್ಕೂಲಿಗೆಲ್ಲ ಬಾಳ ಫೇಮಸ್ಸು
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು




ನನ್ನರಸಿ
ನನ್ನರಸಿ ನನ್ನರಿಸಿ
ನಾ ಬಂದೆ ನಿನ್ನರಿಸಿ
ಹಸಿರುಡುಗೆ ಸಿಂಗರಿಸಿ
ಬಿಸಿ ಕಾಪಿ ಕಲಬೆರೆಸಿ
ನೀ ಬಂದೆ ನನ್ನವರಿಸಿ
ಸುಂದರ ಕನಸನು ನಾ ಬಯಸಿ
ಒಂಟೀ ಜೀವನ ಬದಿಗಿರಿಸಿ
ಕೈ ಇಡಿದೆ ನಾ ನಿನ್ನವರಿಸಿ
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು