Tuesday, November 1, 2022

ಹಾಸ್ಯಾಸ್ಪದ ಹಾಸ್ಯ

 ಹಾಸ್ಯ  ಹನಿಗವನಗಳು :-


1.ಅಂದು  ಕರ್ಣ  ಹೇಳಿದ್ದು, ಒಮ್ಮೆ ತೊಟ್ಟ  

ಬಾಣ  ಇನ್ನೊಮ್ಮೆ  ತೋಡಲಾರೆ. 

ಇಂದಿನ ಮಹಿಳೆ  ಹೇಳುವುದು  ಅದೇ,ಒಮ್ಮೆ  ಉಟ್ಟ  ಸೀರೆ  ಇನ್ನೊಮ್ಮೆ  ಉಡಲಾರೆ. !!!😀😀


2.ಕರ್ಣನಿಗೆ  ಕೈ  ಕೊಟ್ಟ ಶಲ್ಯ,

ಬ್ಯಾಂಕುಗಳಿಗೆ  ಕೈ ಕೊಟ್ಟ  ಮಲ್ಯ !!!!😀


3.ಏನೆಂದೇ  ಪ್ರಿಯಾ,  ನಾನು  ನಗಬೇಕೆಂದೆಯಾ? 

ನಾನು ನಗಬೇಕಾದರೆ,  ನನಗೆ 'ನಗ ' ಬೇಕು !!!


4.ಕಾದಿರುವಳು ಶಬರಿ, ಹಿಡಿದುಕೊಂಡು 

   ಡಬರಿ,  ಅದರಲ್ಲಿಷ್ಟು  ಕೊಬ್ಬರಿ !!


5.ಕ್ಯಾಶ್  ಕೌಂಟರ್ ನ  ಚೆಲುವೆಯತ್ತ 

   ಹರಿದ  ನೋಟ, 

   ಗಮನಿಸಲಿಲ್ಲ  ಅವಳು  ಕೊಟ್ಟ  ಹರಿದ 

   Nota!!


6.ಡಾಕ್ಟರ್  ಸಾಹೇಬ್ರೆ  ನಮಸ್ಕಾರ, 

   ನೀವು  ಯಮರಾಜನ  ಸಹೋದರ 

   ಯಮ  ಓಯ್ತಾನೆ  ಬರೀ  ಪ್ರಾಣ, 

   ನೀವು  ಪ್ರಾಣದ ಜೊತೆ  ಹಣ !!!


7.ಸ್ವರ್ಗಕ್  ಹೋಗ್ತರ್  ಸಜ್ಜನರು, 

   ನರಕಕ್  ಹೋಗ್ತರ್  ದುರ್ಜನರು, 

   ಎರಡೂ  ಲೋಕಕ್ ಒಬ್ಬರೇ  ಏಜೆಂಟ್ 

   ನಮ್ ಆಸ್ಪತ್ರೆ ಸರ್ಜನ್ರು !!!!😀😀


8.ಅವಳು  ಅಕಸ್ಮಾತ್ ಸಿಕ್ಕಳು, 

   ನನ್ನನ್  ನೋಡಿ ನಕ್ಕಳು, 

   ನಮಗೀಗ  ಇಬ್ಬರು  ಮಕ್ಕಳು !!!  


9.ಬೆಣ್ಣೆ ಹಾಕುತ್ತಿದ್ದಾನೆ  ತಮಿಳುನಾಡಿನ 

   ಪೆರಿಯಣ್ಣ, ಕರ್ನಾಟಕದ ಚಿನ್ನ ತಂಬಿ ಗೆ  

   ಹೆಚ್ಚು  ಸಿಗಲಿ  ಎಂದು, ಕಾವೇರಿ  ನೀರು 

   ಇನ್ನೂ ಒಂದೆರಡು  ತಂಬಿಗೆ. !!!!


10.ಫಲಿತಾಂಶ ದಲ್ಲಿ  ಯಾವಾಗಲೂ  ಹುಡುಗಿಯರೇ ಮುಂದೆ, 

ಏಕೆಂದರೆ,  ಹುಡುಗರು  ಯಾವಾಗಲೂ 

ಅವರ  ಹಿಂದೆ !!!😀


11.ನನ್ನವಳು  ಮತ್ತು  ಅವಳ ಅಳು,  ಒಂದೇ ನಾಣ್ಯದ  ಎರಡು ಮುಖಗಳು, 

ಅಳುವುದು  ಅವಳ  ಅಸ್ತ್ರ, 

ನಾನು  ಅವಳ  ಕೈ ವಸ್ತ್ರ!!!!!


12. ಹಾಸ್ಯ ಕವನ ಓದಿದಾಗ 

      ನಗೆಸಿದ್ದಕ್ಕೆ  ಚಪ್ಪಾಳೆ, 

     ಗಂಭೀರ  ಕವನ ಓದಿದಾಗ 

     ಮುಗಿಸಿದ್ದಕ್ಕೆ  ಚಪ್ಪಾಳೆ !!!!👋👋😀😀😀