Tuesday, April 26, 2011

ಆಧುನಿಕ ಭಾರತ ಇತಿಹಾಸ

ಆಧುನಿಕ ಭಾರತ ಇತಿಹಾಸ
ಭಾರತೀಯ ಪುನುರುಜ್ಜೀವನ
I. ರಾಜ ರಾಂ ಮೋಹನ್ ರಾಯ್- ಭಾರತೀಯ ಪುನುರುಜ್ಜೀವನದ ಪಿತಾಮಹಾ
ಜನನ: 1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧನಗರ್
ತಂದೆ : ರಮಾಕಾಂತ್ ರಾಯ್
ತಾಯಿ: ತಾರಿಣಿ ದೇವಿ
1814 ರಲ್ಲಿ ಅತ್ಮೀಯ ಸಭಾ ಸ್ಥಾಪನೆ ಇದು 1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಬ್ರಹ್ಮಸಮಾಜವಾಗಿ ಪರಿವರ್ತನೆಯಾಯಿತು
1829 ರ ಡಿಸೆಂಬರ್ 4 ರಂದು ಸತಿ ಪದ್ಧತಿ ನಿಷೇಧ ಈ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷ್ ರ ಗೌರ್ನರ್
ಜನರಲ್ ಆಗಿದ್ದರು ವಿಲಿಯಂ ಬೆಲ್ಯೂಕ್
ಬಿರುದುಗಳು: ಭಾರತೀಯ ಪುರುಜ್ಜೀವನದ ಪಿತಾಮಹಾ
ಭಾರತದ ರಾಷ್ಟ್ರೀಯತೆಯ ಪಿತಾಮಹಾ
ಭಾರತೀಯ ಪುರುಜ್ಜೀವನದ ಉಷಾತಾರೆ
ಅಧುನಿಕ ಬಂಗಾಳ ಗದ್ಯ ಸಾಹಿತ್ಯದ ಪಿತಾಮಹಾ
ಭಾರತೀಯ ಪತ್ರಿಕೋದ್ಯಮದ ಪ್ರವರ್ತಕ
1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಸ್ಥಾಪಿತವಾದ ಬ್ರಹ್ಮಸಮಾಜ ರಾಜ ರಾಂ ಮೋಹನ್ ರಾಯ್ ರವರ ಮರಣದ ನಂತರ
ವಿಭಜನೆಯಾಯಿತು: ದೇವೆಂದ್ರನಾಥ್ ಠಾಗೋರ್ ರವರಿಂದ ಅಧಿ ಬ್ರಹ್ಮ ಸಮಾಜ
ಕೇಶವ್ ಚಂದ್ರ ರವರಿಂದ ಭಾರತೀಯ ಬ್ರಹ್ಮ ಸಮಾಜ
2 ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ರಸ ಋಷಿ
ಮೂಲಹೆಸರು: ಮೂಲಶಂಕರ
ಜನನ: 1824 ರಲ್ಲಿ ಗುಜರಾತಿನ ತಂಕಾರ ಗ್ರಾಮ
ತಂದೆ : ಅಂಬ ಶಂಕರ ತಿವಾರಿ
ತಾಯಿ: ಅಮೃತ ಭಾಯಿ
1875ರ ಏಪ್ರಿಲ್ 10 ರಂದು ಲಾಹೋರ್ ನಲ್ಲಿ ಮೊದಲ ಆರ್ಯ ಸಮಾಜ ಸ್ಥಾಪನೆ
1877 ರಲ್ಲಿ ಮುಂಬೈನಲ್ಲಿ 2 ನೆ ಶಾಖೆ ಪ್ರಾರಂಭ
ತನ್ನ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶನ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು
ಇದು ಆರ್ಯರ ಬೈಬಲ್
ಇವರ ಇರ ಕೃತಿಗಳು : ವೇದ ಭಾಷ್ಯ ಭೂಮಿಕ, ಭಾರತ ಭಾರತೀಯರಿಗೆ
3. ಸ್ವಾಮಿ ವಿವೇಕಾನಂದ 1863 ರಿಂದ 1902
ಮೂಲ ಹೆಸರು: ನರೇಂದ್ರ ನಾಥ ದತ್ತ
ಇವರಿಗೆ ಆಧ್ಯಾತ್ಮಿಕ ದಿವ್ಯ ಪುರುಷ ಎನ್ನುವರು
ಜನನ: 1863 ಜನವರಿ 12 ರಂದು : ಇದನ್ನು ವಿಶ್ವ ಯುವಕ ದಿನವನ್ನಾಗಿ ಆಚರಿಸುತ್ತಾರೆ
ತಂದೆ ವಿಶ್ವನಾಥ ದತ್ತ
ತಾಯಿ: ಭುವನೇಷ್ವರಿ
ಇವರ ಗುರು: ರಾಮಕೃಷ್ಣ ಪರಮ ಹಂಸ
1893 ಮೇ 31 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಸಿದ್ದರು
1897 ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ : ರಾಮಕೃಷ್ಣ ಮಿಷಿನ್ ಸ್ಥಾಪನೆ
ಸಂದೇಶ: ಯುವಕರೇ ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ
ಜನರ ಸೇವೆಯೇ ಜನರ್ಧಾನ ಸೇವೆ
ಪತ್ರಿಕೆಗಳು: ಪ್ರಭುಧ್ದ್ ಭಾರತ, ಉದ್ಬೋದನ
ಬಿರುದು: ವೇದಾಂತ ಕೇಸರಿ
4. ಸರ್ ಸೈಯದ್ ಅಹ್ಮದ್ ಖಾನ್ 1817 ರಿಂದ 1898
ಮುಸ್ಲಿಂ ಸಮುದಾಯದ ಉದ್ಧಾರಕ್ಕೆ ಅಲಿಘಡ್ ಚಳುವಳಿ ಪ್ರಾರಂಬಿಸಿದರು
ಅಂಜುಮಾನ್ ಸೇವಾ ಸಂಘ ಸ್ಥಾಪಸಿದರು
ಇವರು ಮುಸ್ಲಿಂ ಧರ್ಮದ ವೃದ್ಧ ಪಿತಾಮಹಾ
1875 ರಲ್ಲಿ ಅಲೀಘಡ್ ದಲ್ಲಿ ಓರಿಯಂಟಲ್ ಕಾಲೇಜ್ ಸ್ಥಾಪನೆ
ಮುಂದೆ ಇದು ಅಲೀಘಡ್ ವಿಶ್ವ ವಿದ್ಯಾಲಯವಾಯಿತು
1888 ರಲ್ಲಿ ಇವರಿಗೆ " ನೈಟ್ ಹುಡ್" ಪ್ರಶಸ್ತಿ ನೀಡಲಾಯಿತು
ಪತ್ರಿಕೆಗಳು: ತಹಜಿಲ್-ಉಲ್-ಅಖ್ಲಾಕ್
5.ಡಾ. ಅನಿಬೆಸೆಂಟ್
ಕಾಲ: 1846 ರಿಂದ 1933
ಇವರು ಐರೀಷ್ ಮಹಿಳೆ
1846 ರಲ್ಲಿ ಐರ್ಲ್ಯಾಂಡಿನಲ್ಲಿ ಜನನ
1893 ರಲ್ಲಿ ಥಿಯೋಸಾಪಿಕಲ್ ಸೊಸೈಟಿಯ ಸದಸ್ಯರಾಗಿ ಭಾರತಕ್ಕೆ ಬಂದರು
1907 ರಲ್ಲಿ ಇದರ ಅಧ್ಯಕ್ಷರಾದರು
ಕಾಂಗ್ರೇಸ್ಸಿನ ಪ್ರಥಮ ಮಹಿಳಾ ಅದ್ಯಕ್ಶೆ ಇವರು
1916 ರಲ್ಲಿ ಚನೈನ ಅಡಿಯಾರ್ ನಲ್ಲಿ ಹೋಂರೂಲ್ ಚಳುವಳಿ ಸ್ಥಾಪಿಸಿದರು
ಪತ್ರಿಕೆ: ಇಂಡಿಯಾ ಪತ್ರಿಕೆ ಆರಂಭಿಸಿದರು
ಕಾಂಗ್ರೇಸ್ಸಿನ ಪ್ರಥಮ ಭಾರತೀಯ ಮಹಿಳೆ : ಶ್ರೀಮತಿ ಸರೋಜಿನಿ ದೇವಿ ನಾಯ್ಡು
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (INC-INDIAN NATIONAL CONGRESS) ಸ್ಥಾಪನೆ
1885 ರಲ್ಲಿ ಮುಂಬೈನಲ್ಲಿ ಎ. ಓ. ಹ್ಯೂಂ. (A O HUME) ರಿಂದ ಸ್ಥಾಪನೆ
ಅಧಿವೇಶನ
ವರ್ಷ
ಸ್ಥಳ
ಅದ್ಯಕ್ಷರು
ಪ್ರಥಮ
1885 ಡಿಸೆಂಬರ್ 28 ರಿಂದ 30
ಮುಂಬೈ
WC ಬ್ಯಾನರ್ಜಿ
ದ್ವಿತೀಯಾ
1886
ಕಲ್ಕತ್ತಾ
ದಾದಾ ಬಾಯಿ ನವರೋಜಿ
ತೃತೀಯಾ
1887
ಮದ್ರಾಸ್
ಬದ್ರುದ್ದೀನ್ ತಯಾಬ್ಜಿ
4 ನೇಯದು
1888
ಅಲಹಾಬಾದ್
ಜಾರ್ಜ್ ಯುಲೆ

1907
ಸೂರತ್
ರಾಸ್ ಬಿಹಾರಿ ಬೋಷ್
ಕಾಂಗ್ರೇಸ್ ಸ್ಥಾಪನೆ ಉದ್ದೇಶ
1. ಭಾರತದಲ್ಲಿ ಬ್ರಿಟೀಶರ ಆಡಳಿತಕ್ಕೆ ಒತ್ತಾಯಿಸುವುದು
2. ಭಾರತೀಯರಲ್ಲಿ ಜಾಗೃತಿ ಮೂಡಿಸುವುದು
3.ಬ್ರಿಟೀಶರ ಆಡಳಿತದಲ್ಲಿ ಭಾರತೀಯರು ಹೆಚ್ಚು ಹೆಚ್ಚು ಪಾಲ್ಗೊಳ್ಳೂವಂತೆ ಒತ್ತಾಯಿಸುವುದು
4.ಸಂವಿಧಾನದ ಸುದಾರಣೆಗೆ ಒತ್ತಾಯಿಸುವುದು
5.ವಿದೇಶದಲ್ಲಿ ಭಾರತೀಯರ ಹಿತವನ್ನು ಕಾಪಾಡುವುದು
6.ಭಾರತೀಯರ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು
7.ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವುದು.

ಮಂದಗಾಮಿಗಳು : 1885 ರಿಂದ 1905
ಸಂವಿಧಾನಾತ್ಮಕ ಹೋರಾಟದಲ್ಲಿ ನಂಬಿಕೆಯಿಟ್ಟು ಶಾಂತಿಯುತವಾಗಿ ಪ್ರತಿಭಟನೆ ಮಾಡುವರು
ನಾಯಕರಗಳು: ದಾದಬಾಯಿ ನವರೋಜಿ, ಗೋಪಾಲ್ ಕೃಷ್ಣ ಗೋಖಲೆ, ಮೆಹ್ತಾ, WC ಬ್ಯಾನರ್ಜಿ, ಬದ್ರುದ್ದೀನ್ ತಯಾಬ್ಜಿ, ಸುರೇಂದ್ರನಾಥ್ ಬ್ಯಾನರ್ಜಿ, M G ರಾನಡೆ,
ಬ್ರಿಟೀಶ್ ಸರ್ಕಾರದ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ತೋರಿಸಿಕೊಟ್ಟವರು "ದಾದ ಬಾಯಿ ನವರೋಜಿ "
ತನ್ನ ಕೃತಿಯಾದ Poverty and un-British rule in India ದಲ್ಲಿ
1905 ರಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ವಿದೇಶದಲ್ಲಿನ ಭಾರತೀಯರ ರಕ್ಷಣೆಗಾಗಿ ಸರ್ವೆಂಟ್ ಆಪ್ ಇಂಡಿಯಾ ಸ್ಥಾಪಿಸಿದರು
1885 ರಲ್ಲಿ INC ಸ್ಥಾಪನೆಯಾದಾಗ ಬ್ರಿಟೀಶ್ ವೈಸ್ ರಾಯ್ ಯಾಗಿದ್ದವರು ಲಾರ್ಡ್ ಡಫ್ರೀನ್
ತೀವ್ರಗಾಮಿಗಳು 1905 ರಿಂದ 1919 :
ಮಂದಗಾಮಿಗಳು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದಗ ತೀವ್ರಗಾಮಿಗಳು ಹುಟ್ಟುಕೊಂಡರು
ಇವರು ವಿಚಾರದಲ್ಲಿ ತೀವ್ರತೆಯನ್ನು ಹೊಂದಿದ್ದವರು,
ನಾಯಕರುಗಳು: ಲಾಲ್ ಬಾಲ್ ಪಾಲ್
ಲಾಲ ಲಜಪತ್ ರಾಯ್, ಬಾಲಗಂಗಾಧರನಾಥ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್ ಮತ್ತು ಅರವಿಂದ್ ಘೋಷ್
1905 ರಲ್ಲಿ ಬಂಗಾಲದ ವಿಭಜನೆಯಾಯಿತು: ಮಾಡಿದವರು ಲಾರ್ಡ್ ಕರ್ಜನ್ 1911 ರಲ್ಲಿ ಬಾಂಗ್ಲ ಒಗ್ಗೂಡಿಸಲಾಯಿತು.
ಭಾಲಗಂಗಾದರ ನಾಥ್ ತಿಲಕ್: ಇವರು ಲೋಕಮಾನ್ಯ ತಿಲಕರೆಂದು ಪ್ರಸಿದ್ದಿಯಾಗಿದ್ದರು
ಜನನ: 1856 ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಕಲ್ ಎಂಬಲ್ಲಿ
ಘೋಷಣೆ: "ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು"
ಪತ್ರಿಕೆಗಳು : ಮರಾಠಿ ಭಾಷೆಯ ಕೇಸರಿ ಮತ್ತು ಆಂಗ್ಲ ಭಾಷೆಯ ಮಾರಾಠ
ವಂಗ ಭಂಗ ಚಳುವಳಿಯನ್ನು ಸ್ಥಾಪಿಸಿದರು
1906 ರಲ್ಲಿ ಅಘಾಖಾನ್ ರವರಿಂದ ಡಾಕಾ ಮುಸ್ಲಿಂ ಲೀಗ್ ಸ್ಥಾಪನೆ
1916 ರಲ್ಲಿ ಹೋಂ ರೂಲ್ ಚಳುವಳಿ ಸ್ಥಾಪನೆ
ಲಾಲ ಲಜಪತ್ ರಾಯ್ ರು UNHAPPY ಕೃತಿಯನ್ನು ರಚಿಸಿದರು
ಗಾಂಧಿ ಯುಗ 1919 ರಿಂದ 1947:
ಇದರ ನಾಯಕರು ಮಹಾತ್ಮ ಗಾಂಧಿಜೀ
ಜನನ: 1869 ಅಕ್ಟೋಬರ್ 2 ರಂದು ಇದನ್ನು ವಿಶ್ವ ಅಹಿಂಸಾ ದಿನವನ್ನಾಗಿ ಅಚರಿಸುತ್ತಾರೆ.
ತಂದೆ: ಕರಮಚಂದ ಗಾಂಧಿ ತಾಯಿ: ಪುತಳೀ ಬಾಯಿ
1893 ರಲ್ಲಿ ಬಾಂಬೆ ದಾದ ಅಬ್ದುಲ್ಲಾ ಕಂಪನಿಯ ದಾವೆಯ ಮೊಖದ್ದಮ್ಮೆಯನ್ನು ಹೂಡಲು ಆಫ್ರೀಕಾಕಕ್ಕೆ ಹೋದರು
1915 ರಲ್ಲಿ ಭಾರತಕ್ಕೆ ಮರಳಿದರು ಆಗ ಗುಜರಾತ್ ನಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು ಉಪ್ಪುನ ಸತ್ಯಾಗ್ರಹವನ್ನು ಸಹಾ ಇಲ್ಲೇ ಪ್ರಾರಂಬಿಸಿದರು.
ದಕ್ಷಿಣ ಆಫ್ರೀಕಾದಲ್ಲಿ ನೀಟಾಲ್ ಇಂಡೀಯಾ ಎಂಬ ಪತ್ರಿಕೆ ಸ್ಥಾಪಿಸಿದರು
ಪತ್ರಿಕೆಗಳು END INDIA, ನವಜೀವನ
ಇವರ ಆತ್ಮಕಥನ: My experiment with Truth
1919 ರ ಪೆಬ್ರವರಿ 19 ರಂದು ರೌಲತ್ ಕಾಯಿದೆ ಜಾರಿಗೆ ಬಂತು
1919 ಏಪ್ರಿಲ್ 13 ರಂದು ಪಂಜಾಬ್ ನ ಜಲಿಯನ್ ವಾಲಾ ಬಾಗ್ ಹತ್ಯಕಾಂಡ ನಡೆಯಿತು.
ಇದೊಂದು ಅವಮಾನವೀಯ ಘಟನೆ, ಮೇಲ್ಕಂಡ ದಿನಾಂಕದಂದು ಪಂಜಾಬ್ ನ ಜಲಿಯನ್ ವಾಲ್ ಬಾಗ್ ಎಂಬ ಸ್ಥಳದಲ್ಲಿ ಜನರು ಸೇರಿ ಸಭೆ ನಡೆಸುತಿದ್ದರು ಈ ಸಭೆಯಲ್ಲಿ ಸ್ವಾಭಿಮಾನಿ ಭಾರತೀಯರೆಲ್ಲರು ಭಾಗವಹಿಸಿದ್ದರು, ಸಭೆ ಸೇರಿದ್ದ ಸ್ಥಳವೂ ಒಂದು ವಿಶಾಲವಾದ ಅಂಗಳವಾಗಿದ್ದು ಕೇವಲ ಒಂದೇ ಒಂದು ಪ್ರವೇಶ ದ್ವಾರವಿರುತ್ತದೆ ಆಗ ಅದನ್ನು ಗಮನಿಸಿದ ಬ್ರಿಟೀಶ್ ಸೇನಾನಿ ಜನರಲ್ ಡಯರ್ ಎಲ್ಲರ ಮೇಲೆ 1650 ಗುಂಡು ಹಾರಿಸುತ್ತಾನೆ ಈ ಘಟನೆಯಲ್ಲಿ 379 ಜನರು ಸತ್ತು 1208 ಜನ ಗಾಯಗೊಳ್ಳುತ್ತಾರೆ
ಖಿಲಾಪತ್ ಚಳುವಳಿ : 1919 ರಿಂದ 1923::: ಟರ್ಕಿಯಾ ಇಬ್ಬರು ಸಹೋದರರಾದ ಮಹ್ಮದ್ ಅಲಿ ಮತ್ತು ಶೌಕತ್ ಅಲಿ ಎಂಬುವುವರು ತಮ್ಮ ಚಳುವಳಿಗೆ ಮಹಾತ್ಮ ಗಾಂಧೀಜಿಯವರ ಸಹಾಯವನ್ನು ಪಡೆದುಕೊಳ್ಳುತಾರೆ ಇದನ್ನೆ ಖಿಲಾಪತ್ ಚಳುವಳಿ ಎನ್ನುತ್ತೇವೆ.
1923 ದೇಶಬಂಧು ಎಂದು ಖ್ಯಾತಿ ಪಡೆದ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು ರವರು ಸೇರಿ "ಸ್ವರಾಜ್" ಪಕ್ಷವನ್ನು ಸ್ಥಾಪಿಸಿದರು
ಆದರೆ 1926 ರಲ್ಲಿ ಚಿತ್ತರಂಜನ್ ದಾಸ್ ರವರ ಮರಣದ ನಂತರ ಇದೂ ಸಹ ಹಂತ್ಯವಾಯಿತು.
ಸೈಮನ್ ಕಮೀಷನ್: 1927 ರಲ್ಲಿ ಸೈಮನ್ ಆಯೋಗ(ಕಮೀಷನ್) ಭಾರತಕ್ಕೆ ಬಂದಾಗ ದೇಶದಾದ್ಯಂತ ವಿರೋಧಿಸಲಾಯಿತು. ಆಗ ನಡೆದ ಪೋಲಿಸರ ಲಾಠಿ ಚಾರ್ಜ್ ನಲ್ಲಿ ತೀವ್ರಗಾಮಿ ನಾಯಕರಲ್ಲೊಬ್ಬರಾದ ಲಾಲ ಲಜಪತ್ ರಾಯರು ಹತ್ಯವಾದರು
ಲಾಹೋರ್ ಕಾಂಗ್ರೇಸ್ಸು: 1929-1930: 1930 ಜನವರಿ 26 ರಂದು ಲಾಹೋರ್ ಅಧಿವೇಷನದಲ್ಲಿ "ಸ್ವರಾಜ್ಯ ಘೋಷಣೆ"ಯಾಯಿತು
ಅಸಹಕಾರ ಚಳುವಳಿ : 1920 ರಿಂದ 1922:: ಮಹಾತ್ಮ ಗಾಂಧೀಜಿಯವರು ಬ್ರಿಟೀಶ್ ಸರ್ಕಾರದ ವಿರುದ್ದ ಅಸಹಕಾರ ಚಳುವಳಿಯನ್ನು ಸಾರಿದ್ದರು ಆದರೆ 1922 ಪೆಬ್ರವರಿ 15 ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಗ್ರಾಮದಲ್ಲಿ ಭಾರತೀಯ ಸತ್ಯಾಗ್ರಹಿಗಳು ಪ್ರತಿಭಟನೆಯಲ್ಲಿ ಅಲ್ಲಿನ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಆಗ ಅದರಲ್ಲು 23 ಜನ ಪೋಲೀಸರು ಸಜೀವ ದಹನ ವಾದರು, ಅಹಿಂಸೆಯ ಮೂಲ ಮಂತ್ರದಿಂದ ಪ್ರತಿಭಟಿಸುತ್ತಿದ್ದ ಮಹಾತ್ಮ ಗಾಂಧೀಜಿಯವರಿಗೆ ಇದರಿಂದ ಬೇಸರವಾಗಿ ಅಸಹಕಾರ ಚಳುವಳಿಯನ್ನು ವಾಪಸ್ಸು ಪಡೆಯಲಾಯಿತು.
ಮಹಾತ್ಮ ಗಾಂಧೀಜಿಯವರು 1917 ರಲ್ಲಿ ಮೊಟ್ಟಮೊದಲ ಭಾರಿಗೆ ಚಂಪಾರಣ್ಯ ಎಂಬ ಸ್ಥಳದಲ್ಲಿ ಸತ್ರ್ಯಾಗ್ರಹದಲ್ಲಿ ಪಾಲ್ಗೊಂಡ್ಡರು
1918 ರಲ್ಲಿ ಗುಜರಾತ್ ನ ಖೇಡದಲ್ಲಿಯೂ ಸಹ ರೈತರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು
ಕಾನೂನು ಬಾಹಿರ ಚಳುವಳಿ :1930 ರಿಂದ 1934
ಉಪ್ಪಿನ ಸತ್ಯಾಗ್ರಹ
ಮಹಾತ್ಮ ಗಾಂಧೀಜಿಯವರು 1930 ರ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ದಂಡಿ ಮಾರ್ಗವಾಗಿ ಉಪ್ಪಿನ ಸತ್ಯಾಗ್ರಹ ಕೈಗೊಂಡರು
ಈ ಸತ್ಯಾಗ್ರಹದಲ್ಲಿ 78 ಜನ ಸತ್ಯಾಗ್ರಹಿಗಳಿದ್ದು ಮಹಾತ್ಮ ಗಾಂಧೀಜಿಯವರು ಅತ್ಯಂತ ಹಿರಿಯ ವ್ಯಕ್ತಿಯಾದರೆ
ಕರ್ನಾಟಕದ ಮೈಲಾರ ಮಹದೇವಪ್ಪ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು ಆಗ ಅವರ ವಯಸ್ಸು ಕೇವಲ 18
1930 ರ ಏಪ್ರಿಲ್ 30 ರಂದು ದಂಡಿ ತಲುಪಿದ ಸತ್ಯಾಗ್ರಹಿಗಳು ಒಂದು ಇಡಿ ಉಪ್ಪನ್ನು ತಯಾರಿಸಿ ರೂ 1600/- ಕ್ಕೆ ಅದನ್ನು ಹಾರಾಜು ಹಾಕಿ ಅದರ ಹಣವನ್ನು
ತಮ್ಮ ಸತ್ಯಾಗ್ರಹಿಗಳ ಹುಂಡಿಗೆ ಹಾಕಿದರು
ಭಾಗವಹಿಸಿದ ಇತರೆ ಸತ್ಯಾಗ್ರಹಿಗಳು ವಿಜಯ ಲಕ್ಷ್ಮಿ ಪಂಡಿತ್ ( ವಿಶ್ವ ಸಂಸ್ಥೆಯ ಪ್ರಥಮ ಮಹಿಳಾ ಭಾರತದ ಪ್ರತಿನಿಧಿ) , ಸರ್ದಾರ್ ವಲ್ಲಭ ಬಾಯ್ ಪಟೇಲ್ (ಉಕ್ಕಿನ ಮನುಷ್ಯ),
ಮೋತಿಲಾಲ್ ನೆಹರು ರವರ ಪತ್ನಿ ಸ್ವರೂಪ ರಾಣಿ, ಜವಹರಲಾಲ್ ನೆಹರು ( ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ) ಅವರ ಹೆಂಡತಿ ಕಮಲಾದೆವಿ ನೆಹರು,
ಮದನ್ ಗೋಪಾಲ್ ಮಾಳವೀಯಾ, KM ಮುನ್ಷಿ ಮತ್ತು ವಿಟ್ಠಲ ಭಾಯ್ ಪಟೇಲ್
ಕರನಿರಾಕರಣ ಚಳುವಳಿ:
1928 ರಲ್ಲಿ ಗುಜರಾತ್ ನ ಖೇಡ ಮತ್ತು ಬಾರ್ಡೋಲಿಯಲ್ಲಿ ನಡೆಯಿತು ಇದರ ನಾಯಕರು :ಮಹಾತ್ಮ ಗಾಂಧಿಜೀ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್
ಗಾಂಧಿ ಇರ್ವಿನ್ ಒಪ್ಪಂದ:
1931 ರ ಮಾರ್ಚ್ 5 ರಂದು ನಡೆಯಿತು ಇದರ ಮದ್ಯಸ್ಥಿಕೆ ವಹಿಸಿದ್ದವರು ಜಯಕರ್ ಮತ್ತು ಸಪ್ರೂ
ದುಂಡು ಮೇಜಿನ ಸಮ್ಮೇಳನ
ಸಮ್ಮೇಳನ
ಅವಧಿ
ನಡೆದ ಸ್ಥಳ
ಭಾರತದ ಪ್ರತಿನಿಧಿಗಳು
ಉದ್ದೇಶ
ಅಧ್ಯಕ್ಷರು
ರಿಂದ
ರವರಗೆ
ಮೊದಲನೇಯ
16 ನೇ ನವಂಬರ್
1930
19 ನೇ ಜನವರಿ
1931
ಇಂಗ್ಲೇಂಡ್
ಇದರಲ್ಲಿ 89 ಪ್ರತಿನಿಧಿಗಳು ಭಾಗವಹಿಸಿದ್ದರು ಭಾರತದಿಂದ ಡಾ ಬಿ. ಆರ್. ಅಂಬೇಡ್ಕರ್ ಮತ್ತು ಮೈಸೂರು ಸಂಸ್ಥಾನದ ದಿವಾನ ಸರ್ ಮಿರ್ಜಾ ಇಸ್ಮಾಯ್ಲಿ
RYM DONALD
ಎರಡನೇಯದು
7 ನೇ ಸೆಪ್ಟಂಬರ್
1931
1 ನೇ ಡಿಸಂಬರ್ 1931
ಇಂಗ್ಲೆಂಡ್
ಮೊದಲ ಭಾರಿಗೆ ಕಾಂಗ್ರೇಸ್ಸಿನ ಏಕೈಕ ಪ್ರತಿನಿಧಿಯಾಗಿ ಮಹಾತ್ಮ ಗಾಂಧೀಜು ಭಾಗವಹಿಸಿದರು
ಮುಸ್ಲಿಂ ಸಮುದಾಯದ ಪ್ರತಿನಿಧಿ: ಮಹ್ಮದ್ ಇಕ್ಬಾಲ್, ಕೈಗಾರಿಕೋದ್ಯಮದ ಪ್ರತಿನಿಧಿ: ಜಿ.ಡಿ. ಬಿರ್ಲಾ ಹಿಂದುಗಳ ಪರವಾಗಿ ಸರೋಜಿನಿ ದೇವಿ ನಾಯ್ಡು ಮತ್ತು ಮದನ್ ಮೋಹನ್ ಮಾಳವಿಯಾ
RYAM DONALD
3 ನೇಯದು
17 ನೇ ನವಂಬರ್
1932
24 ನೇ ಡಿಸೆಂಬರ್
1932
ಇಂಗ್ಲೆಂಡ್
ಎರಡನೇಯ ಸಮ್ಮೇಳನದಲ್ಲಿ ಮಹ್ಮದ್ ಅಲಿ ಜಿನ್ನ ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಅದೇ ರೀತಿ ಡಾ. ಬಿ ಅರ್ ಅಂಬೇಡ್ಕರ್ ತಮ್ಮ ನಿಮ್ನ ವರ್ಗದವರಿಗೆ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಇದರಿಂದ ಬೇಸತ್ತ ಮಹಾತ್ಮ ಗಾಂಧೀಜಿರವರು ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿ ಭಾರತಕ್ಕೆ ಬಂದರು ಮತ್ತು ಮಹಾರಷ್ಟ್ರದ
ಪೂನಾದಲ್ಲಿನ ಎರವಾಡ ಜೈಲ್ ನಲ್ಲಿ ಇದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು, ಅದಕ್ಕಾಗಿ ಪ್ರಮುಖ ನಾಯಕರಗಳು
ಡಾ,ಅಂಬೇಡ್ಕರ್ ರವರ ಮನವೊಲಿಸಿ ತಮ್ಮ ನಿರ್ದಾರವನ್ನು ಕೈ ಬಿಡಲು ಕೇಳೀಕೊಂಡ ನಂತರ ದಿನಾಂಕ 24ನೇಯ ಸೆಪ್ಟಂಬರ್ 1932
ರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಪೂನಾ ಒಪ್ಪಂದವಾಯಿತು.
ಕ್ಲಿಪ್ತ್ ಆಯೋಗ:
1942 ರಲ್ಲಿ ನಡೆಯಿತು
ಚಲೇಜಾವ್ ಚಳುವಳಿ:
1942 ರಲ್ಲಿ ನಡೆಯಿತು ಆಗ ಗಾಂಧೀಜಿಯವರು ಭಾರತದ ಜನತೆಗೆ ಮಾಡು ಇಲ್ಲವೇ ಮಡಿ ( DO OR DIE) ಎಂದು ಸಂದೇಶ ಕೊಟ್ಟರು
ಈ ಚಳುವಳಿಯ ನಾಯಕರು ಜಯಪ್ರಕಾಶ್ ನಾರಾಯಣ್
ಮೌಂಟ್ ಬ್ಯಾಟನ್ ಆಯೋಗ:
ಇವರು ಸ್ವಂತಂತ್ರ ಭಾರತದ ಮೊದಲ ಗೌರ್ನರ್ ಜನರಲ್, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೊಳಿಸಿದ ಗೌರ್ನರ್
ಸ್ವತಂತ್ರ ಭಾರತದ ಮೊದಲ ಭಾರತೀಯ ಗೌರ್ನರ್ ಜನರಲ್ ಸಿ. ರಾಜಗೋಪಾಲ ಚಾರಿ
ಬಂಗಾಳದ ಮೊದಲ ಗೌರ್ನರ್ - ರಾಬರ್ಟ್ ಕ್ಲೈವ್ 1757 ರಿಂದ 1760
ಬಂಗಾಳದ ಕೊನೆಯ ಗೌರ್ನರ್ - ವಾರ್ನ್ ಹೇಸ್ಟಿಂಗ್ಸ್ 1772 ರಿಂದ 1774
ಬಂಗಾಳದ ಮೊದಲ ಗೌರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್ 1774 ರಿಂದ 1785
ಬಂಗಾಳದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1823 ರಿಂದ 1833
(ಇವರ ಕಾಲದಲ್ಲಿ ಭಾರತದಲ್ಲಿ ಭಾಲಗಂಗಾಧರ್ ತಿಲಕ್ ರಿಂದ ಸತಿ ಸಹಗಮನ ಪದ್ಧತಿ ನಿರ್ಮೂಲವಾಯಿತು)
ಭಾರತದ ಮೊದಲ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1833 ರಿಂದ 1835
ಭಾರತದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ಕ್ಯಾನಿಂಗ್ 1856 ರಿಂದ 1858
ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್ - 1858 ರಿಂದ 1862
ಭಾರತದ ಕೊನೆಯ ವೈಸರಾಯ್ - ಲಾರ್ಡ್ ಮೌಂಟ್ ಬ್ಯಾಟನ್ ಇವರು ಬ್ರಿಟೀಶ್ ಸಾಮ್ರಾಜ್ಯದ ಕೊನೆಯ ಮತ್ತು
ಸ್ವತಂತ್ರ ಭಾರತದ ಮೊದಲ ವಿದೇಶಿ ಗೌರ್ನರ್ ಜನರಲ್
2ನೇಯ ಮಹಾಯುದ್ದದ ಸಂದರ್ಭದಲ್ಲಿ ಜಪಾನಿನಲಿ ಕೆಳಕಂಡ ಸ್ಥಳಗಳಲ್ಲಿ ಬಾಂಬ್ ಹಾಕಲಾಯಿತು
1945 ಆಗಸ್ಟ್ 6 ರಂದು ಹಿರೋಶಿಮಾ
1945 ಆಗಸ್ಟ್ 9 ರಂದು ನಾಗಸಾಕಿ
ಬಾಂಬ್ ಹೆಸರು : ಲಿಟ್ಲ್ ಬಾಯ್ ( littl boy)
1882 ರಲ್ಲಿ ವಿಶ್ವದಲ್ಲಿ ಪ್ರಪ್ರಥಮವಾಗಿ ಮೇಡಂ ಬ್ಲವಾಟಿ ಮತ್ತು ಕರ್ನಲ್ ಓಲ್ಕಾಟ್
ಥಿಯೋಸಾಪಿಕಲ್ ಸೊಸೈಟಿ ಸ್ಥಾಪಿಸಿದರು ( ಕನ್ನಡದಲ್ಲಿ ದಿವ್ಯಾ ಸಭಾ)
ಖಾಯಂ ಜಮೀನ್ದಾರಿ ಪದ್ಧತಿ:
1793 ರ ಮಾರ್ಚ್ 22 ರಂದು ಕಾರ್ನ್ವಾಲೀಸ್ ಬಂಗಾಳದಲ್ಲಿ ಸ್ಥಾಪಿಸಿದನು
ರೈತವಾರಿ ಪದ್ಧತಿ:
1820 ರಲ್ಲಿ ಮೊದಲು ಮದ್ರಾಸಿನಲ್ಲಿ ಮತ್ತು ನಂತರ ಮುಂಬೈ ನಲ್ಲಿ
ಥಾಮಸ್ ಮನ್ರೋ ಸ್ಥಾಪಿಸಿದ
ಕ್ರಾಂತಿ ಕಾರಿಗಳು:
ವಾಸುದೇವ ಬಲವಂತ್ ಫಡ್ಕೆ:
ಇವನು ಕ್ರಾಂತಿಯುಗದ ಪ್ರವರ್ತಕ ಎನ್ನುತ್ತಾರೆ, ಇವನು ಪೂನಾದಲ್ಲಿ ಜನಿಸಿದ
ವಿ ಡಿ ಸಾವರ್ಕರ್:
ಪೂರ್ಣ ಹೆಸರು ವಿನಾಯಕ ದಾಮದೋರ ಸಾವರ್ಕರ್
ಜನನ: ಮಹಾರಷ್ಟ್ರದಲ್ಲಿ
1857 ರ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ಕರೆದನು
1904 ರಲ್ಲಿ ಲಂಡನ್ ನಲ್ಲಿ ಅಭಿನವ ಭಾರತ ಎಂಬ ಗುಪ್ತ ಸಂಘವನ್ನು ಸ್ಥಾಪಿಸಿದನು
ಇನ್ಕ್ವಿಲಾಬ್ ಪತ್ರಿಕೆಯನ್ನು ಮೊದಲಿಗೆ ಹೊರಡಿಸಿದನು
ಮ್ಯಾಜಿನಿ ಎಂಬ ಪುಸ್ತಕವನ್ನು ಬರೆದು ಕ್ರಾಂತಿಕಾರಿಗೆಳಿಗೆ ಹಂಚಿದನು
ಕ್ರಾಂತಿಕಾರಿಗಳಲ್ಲಿ ಅತಿ ಹೆಚ್ಚು (ದೀರ್ಘ) ಕಾಲ ಜೈಲು ಶಿಕ್ಷೆ ಅನುಭವಿಸಿದವರಲ್ಲಿ ಇವರೇ ಮೊದಲಿಗರು
ಮದನ್ ಲಾಲ್ ಧಿಂಗ್ರಾ:
1909 ರಲ್ಲಿ ಕರ್ಜನ್ ಮೈಲ್ ಎಂಬುವವರನ್ನು ಗುಂಡಿಟ್ಟು ಕೊಂದರು
1909 ಅಗಸ್ಟ್ 17 ರಂದು ಗಲ್ಲುಗೇರಿಸಲಾಯಿತು
ಚಾಪೆಕರ್ ಸಹೋದರರು:
1897 ರ ಜನವರಿ 22 ರಂದು ಬಂಗಾಳದ ಪ್ಲೇಗ್ ಅಧಿಕಾರಿಯನ್ನು ಗುಂಡಿಟ್ಟೂ ಕೊಂದರು
ಇವರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು
ಬರೀಂದ್ರ ಕುಮಾರ್ ಘೊಷ್:
ಯುಗಾಂತರ ಪತ್ರಿಕೆ ಮತ್ತು ಭವಾನಿ ಮಂದಿರ ಪುಸ್ತಕವನ್ನು ಪ್ರಕಟಿಸಿದರು
ರಾಶ್ ಬಿಹಾರಿ ಬೋಸ್:
1912 ಡಿಸೆಂಬರ್ 23 ವೈಸ್ ರಾಯ್ ಲಾರ್ಡ್ ಹಾರ್ಡಿಂಜ್ ರ ಮೇಲೆ ಬಾಂಬ್ ದಾಳಿ
1942 ರಲ್ಲಿ ಬ್ಯಾಂಕಾಕ್ ನಲ್ಲಿ ಇಂಡಿಯಾ ಇಂಡಿಪೆಂಡೆಂಟ್ ಸ್ಥಾಪನೆ
ಲಾಲ್ ಹರ್ ದಯಾಳ್;
ಪಂಜಾಬಿನ ಕ್ರಾಂತಿಕಾರಿ , ಹರ್ದ್ ಚಳುವಳಿಯ ಸ್ಥಾಪಕ
1911 ರಲ್ಲಿ ಹರ್ದ್ ಪತ್ರಿಕೆಯ ಸ್ಥಾಪನೆ ಮತ್ತು ಪ್ರಕಟನೆ
ರಾಂ ವಿನಾಬ್ ಬಿಸ್ಮಿಲ್ಲಾ:
ಶಹಾ ಪುರದ ಕ್ರಾಂತಿಕಾರಿ ಮತ್ತು ಕಾಕೋರಿ (1925 ರಲ್ಲಿ ಲಕ್ನೋ ರೈಲನ್ನು ಸರಪಲಿ ಎಳೆದು ನಿಲಿಸಿದ)ಪ್ರಕರಣದ ರುವಾರಿ
ಅಝಾದ್ ಚಂದ್ರಶೇಖರ್:
1912ಡಿಸೆಂಬರ್ 26 ರಂದು ಬ್ರೀಟೀಶ್ ರ ವಿರುದ್ದ ದ ದಂಗೆಯಲ್ಲಿ ಬ್ರೀಟೀಶ್ ಅಧಿಕಾರಿ ಮೇಲೆ ಕಲ್ಲೆಸೆದರು
ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಸಂಘದ ಸದಸ್ಯ
ಲಾಲಲಜಪತ್ ರಾಯ್:
1928 ರಲ್ಲಿ ಕಾನ್ಫುರದಲ್ಲಿ ಹಿಂದುಸ್ಥಾನ್ ರಿಪಬ್ಲಿಕ ಅಸೋಸಿಯೇಷನ್ ಸ್ಥಾಪನೆ
ಭಗತ್ ಸಿಂಗ್ :
ಪಂಜಾಬ್ ನ ಪುರುಷ ಸಿಂಹ ಮತ್ತು ಕ್ರಾಂತಿ ಕಾರಿ ಕಿಡಿ
ನವಜಾತ ಭಾರತ ಸಭಾದ ಸ್ಥಾಪಕ
1928 ಡಿಸೆಂಬರ್ 17 ರಮ್ದು ಸ್ಯಾಂಡರ್ ನನ್ನು ಗುಂಡಿಟ್ಟು ಕೊಂದನು
ಇನ್ಕ್ವಿಲಾಬ್ ಜಿಂದಾಬಾದ್ ( ಕ್ರಾಂರಿ ಚಿರಾಯುವಾಗಲಿ ) ಎಂದು ಘೋಷಣೆ ಮಾಡಿದನು
1931 ಮಾರ್ಚ್ 31 ರಂದು ರಾಜ್ ಗುರು ರವರ ಜೊತೆ ಇವರನ್ನು ಲಹೋರ್ ನಲ್ಲಿ ಗಲ್ಲಿಗೇರಿಸಲಾಯಿತು
ಸುಭಾಷ್ ಚಂದ್ರ ಬೋಸ್ :
ಕ್ರಾಂತಿಕರಿಗಳಲ್ಲಿ ಶ್ರೇಷ್ಠರು ಮತ್ತು " ನೇತಾಜಿ"
1897 ರಲ್ಲಿ ಒರಿಸ್ಸಾದ ಕಟಕ್ ನಲ್ಲಿ ಜನನ
ತಂದೆ: ಜಾನಕಿನಾಥ ಬೋಸ್
ತಾಯಿ: ಪ್ರಭಾವತಿ
INA ( Indian National Army) ಸ್ಥಾಪಕರು
1943 ರಲ್ಲಿ ಸಿಂಗಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ ಸ್ಥಾಪಕದು
1938 ರ ಹರಿಪುರ ಮತ್ತು 1939ರ ಪ್ರಥಮ ಕಾಂಗ್ರೇಸ್ ಅಧ್ಯಕ್ಷರು
ಘೋಷಣೆ: ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಕೊಡುತ್ತೇನೆ
1992 ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಯಿತು