Sunday, August 28, 2011

ಭ್ರಷ್ಟಾಚಾರಿ ವಿರೋದಿ ಅಣ್ಣಾ ಮತ್ತು ಹೆಗಡೆ


1947 ಆಗಸ್ಟ 15 ಮಧ್ಯ ರಾತ್ರಿ ಅಖಂಡ ಭಾರತಕ್ಕೆ ಪರಕೀಯರ ಆಳ್ಬಿಕೆಯಿಂದ ಸ್ವತಂತ್ರ ಪಡೆದ ದಿನ, ಪರಕೀಯರ ದಬ್ಬಾಳಿಕೆಯಿಂದ ಬೇಸತ್ತ ಭಾರತ ಸ್ವತಂತ್ರ ಭಾರತವಾಯಿತು, ಅಲ್ಲಿಯ ತನಕ ಭಾರತದ ಮೇಲೆ ಪರಕೀಯರ ಆಕ್ರಮಣ ನಿರಂತರವಾಗಿ ನಡೆಯುತಿತ್ತು, ಭಾರತದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಂದ ವಿದೇಶಿಯರು ನಿದಾನವಾಗಿ ಇಲ್ಲೆ ನೆಲೆಯೂರಿ ನಮ್ಮನ್ನೇ ತುಳಿದು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದರು ಇದಕ್ಕೆ ಇದ್ದ ಒಂದೇ ಒಂದು ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ, ಪ್ರಾಂತ್ಯ ಪ್ರಾಂತ್ಯಗಳ ಮೇಲಿನ ಅಸಾಮಾಧಾನ ತಮ್ಮ ತಮ್ಮಲ್ಲೇ ಕಚ್ಚಾಟದ ಪ್ರತಿಫಲವೇ ಪರಕೀಯರ ಆಳ್ವಿಕೆ .
1857 ದೇಶಭಕ್ತಿಯ ಪರಮಾಧಿಯ ಕಾಲ ವಿದೇಶಿಗರ ಆಳ್ವಿಕೆಯ ವಿರುದ್ಧ ಸಿಡೆದೆದ್ದ ಭಾರತ ಪುತ್ರರು ನಿರಂಂತರವಾಗಿ ಹೋರಾಡಿ ಕೊನೆಗೆ 1947 ರ ಆಗಸ್ಟ್ 15 ರ ಮಧ್ಯ ರಾತ್ರಿ ಸ್ವತಂತ್ರ ತಂದು ಕೊಟ್ಟರು ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದರು, ಅಖಂಡ ದೇಶದೆಲ್ಲಡೆ ವಂದೇ ಮಾತರಂ, ಜೈ ಭಾರತ್ ಮಾತಾ ಕೀ ಮೊಳಗಿತು, ಅಂದಿನಿಂದ ಭಾರತ ವಿಶ್ವದೆಲ್ಲಡೆ ಶಾಂತಿ ಸಂದೇಶವನ್ನು ಮತ್ತೊಮ್ಮೆ ಸಾರಿತು, ಪ್ರಪಂಚಕ್ಕೆ ಅಹಿಂಸಾ ತತ್ವ ಹೇಳಿಕೊಟ್ಟ ಮೊಟ್ಟ ಮೊದಲ ರಾಷ್ಟ್ರವಾಯಿತು, ಅಹಿಂಸಾವಾದಿ ಮೋಹನ್ ದಾಸ್ ಕರಮಚಂದ್ ಗಾಂಧಿ ಭಾರತದ ಪಿತಾಮಹನಾಗಿ ಮಹಾತ್ಮ ರಾದರು.
65 ವರ್ಷಗಳಲ್ಲಿನ ಭಾರತದ ಸಾಧನೆ ಹಲವಾರು ಕ್ಷೇತ್ರಗಳ ಯಶಸ್ವಿ ಸಾಧಿಸಿದ್ದರು ಭ್ರಷ್ಟಾಚಾರದಲ್ಲಿ ಅತ್ಯದ್ಭುತ ಸಾದನೆ ಮಾಡಿದೆ ಎನ್ನುವುದು ಅತ್ಯಂತ ದುಃಖದ ವಿಚಾರ, ಸಾಂಪ್ರದಾಯಕ ಸಮಾಜದಲ್ಲಿನ ನಾಚಿಕೆ ವಿಷಯ, ಹಂತ ಹಂತವಾಗಿ ಭ್ರಷ್ಟಾಚಾರ ಹೆಮ್ಮರವಾಗಿ, ಪೆಡಂಭೂತವಾಗಿ ಪ್ರಜಾಪ್ರಭುತ್ವದಲ್ಲ್ಲಿ ತನ್ನ ಸ್ಥಾನವನ್ನು ಪಡೆಯಿತು, ನಮನ್ನಾಳುವ ಪ್ರಜಾಪ್ರಭುತ್ವದ ಪ್ರತಿನಿಧಿಗಳಿಂದ ಅಡಳಿತ ನಡೆಸುವ ಅಧಿಕಾರಿಗಳವರಗೆ ಸ್ವೇಚ್ಛಾರವಾಗಿ ಭ್ರಷ್ಟಾಚಾರ ರುದ್ರ ನರ್ತನ ಮಾಡಿತ್ತು,
ಭಾರತದಂತಹ ಸಂಪದ್ಭರಿತ ರಾಷ್ಟ್ರದಲ್ಲಿ ಭ್ರಷ್ಟಾಚಾರ ಅತ್ಯಂತ ಕೆಟ್ಟದಾದ ನಾಗರೀಕ ಸಮಾಜ ಬಂಧುಗಳು ನಾಚಿಕೆ ಪಡುವಂತಹ ಹೇಯ ಪದ್ದತಿಯೇ ಸರಿ, ನಮನ್ನಾಳುವ ಪ್ರತಿನಿಧಿಗಳು ತಮ್ಮ ಬುದ್ಧಿವಂತಿಕೆಯಿಂದ ಆಗಾಗ ಇದರ ಬಗ್ಗೆ ಮಾರುದ್ದದ ಭಾಷಣಗಳನ್ನು ಸಾರ್ವಜನಿಕವಾಗಿ ನೀಡಿ ತಮ್ಮ ಬುದ್ದಿವಂತಿಕೆ ಮೆರೆದರೆ ವಿನಃ ಇದರ ವಿರುದ್ದ ಪ್ರಾಮಾಣಿಕ ಹೋರಾಟ ಮಾಡಲಿಲ್ಲ
ಬಂಧುಗಳೇ ಪ್ರಕೃತಿಯ ನೈಸರ್ಗಿಕ ಸಹಜ ನಿಯಮವೊಂದಿದೆ ಯಾವುದೆ ವಸ್ತುವಾಗಲಿ, ಕ್ರಿಯೆಯಾಗಲಿ, ಪದ್ಧತಿಯಾಗಲಿ ಸೃಷ್ಠಿಯಾದ ಮೇಲೆ ನಾಶವೂ ಅಗಬೇಕು ಇದು ವೈಜ್ನಾನಿಕ ಸಿದ್ಧಾಂತವೂ ಹೌದು, ಅಂತೆಯೇ ನಮ್ಮ ಭ್ರಷ್ಟಾಚಾರವೂ ನಾವಾಗಿಯೇ ಸೃಷ್ಠಿಸಿದ್ದು ನಮ್ಮಿಂದಲೇ ನಾಶವಾಗಬೇಕು ಇದಕ್ಕೆ ಸಾಕಷ್ಟು ಅವಕಾಶಗಳು ನೀಡಿಲಾಯಿತು, ಸುಧಾರಣೆ ಮಾತ್ರ ಶೂನ್ಯ, ಕೆಲವೂ ಇಲಾಖೆಗಳಿಗೆ ಭ್ರಷ್ಟಾಚಾರದ ಪರಮಾಧಿಕಾರದ ಇಲಾಖೆ ಅಂತ ಪಟ್ಟವನ್ನು ಸಹ ಕಟ್ಟಲಾಯಿತು, ಆದರೆ ನಾಚಿಗೇಡಿನ ಅಧಿಕಾರಿಶಾಹಿ ವರ್ಗ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ಸಾರ್ವಜನಿಕವಾಗಿ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುಕೊಂಡು ಬರುತಿತ್ತು, ನೀಡಲಾದ ಅವಕಾಶಗಳೆಲ್ಲವೂ ಮುಗಿಯುತ್ತಾ ಬಂತು
ಬಂಧುಗಳೆ ಮಹಾಭಾರತದ ಒಂದು ಪ್ರಸಂಗ : ಮಹಾಭಾರತದ ಸೂತ್ರದಾರನೆನಿಸಿದ ಶ್ರೀಕೃಷ್ಣ ಪರಮಾತ್ಮ ಶಿಶುಪಾಲನಿಗೆ ನೂರು ತಪ್ಪುಗಳನ್ನು ಮನ್ನಿಸುವ ಮತ್ತು ಅದರ ನಂತರದ ತಪ್ಪಿಗೆ ತಕ್ಕ ಶಿಕ್ಷೆ ವಿಧಿಸಿವನೆಂದು ಹೇಳಿದ್ದ ಅದರಂತೆ ಶಿಶುಪಾಲನ ನೂರು ತಪ್ಪುಗಳ ನಂತರ ನೂರ ಒಂದನೇಯ ತಪ್ಪಿಗೆ ಮೃತ್ಯುವೆ ಅವನಿಗೆ ಶಿಕ್ಷೆಯಾಗಿ ಕಾದಿತ್ತು. ಶ್ರೀಕೃಷ್ಣನ ಸೋದರ ಮಾವ ಕಂಸನ ದಬ್ಭ್ಭಾಳಿಕೆ ,ನೀಚ ಕೃತ್ಯಗಳು, ಹಿಂಸಾ ಪ್ರವೃತ್ತಿಯೇ ಅವನನ್ನು ಮೃತ್ಯುವಿನೆಡೆಗೆ ನೂಕಿತು, ನಮಗೆಲ್ಲ ಗೊತ್ತಿರುವಂತೆ ದೇವರು (ಶ್ರೀ ವಿಷ್ಣು ಪರಮಾತ್ಮ) ದುಷ್ಟ ಸಂಹಾರಕ್ಕೆ ಶಿಶ್ಟರ ರಕ್ಷಣೆ ಗೆ ಭೂಮಿ ಮೇಲೆ ದಶಾವತಾರವೆತ್ತಿದ ಅನ್ನುವ ಸಂಗತಿ, ಆಗಾಗ ನಮ್ಮಲ್ಲಿ ಇದಕ್ಕೆ ಒಮ್ಮತವೂ ಇರಲಿಲ್ಲ ಕಾರಣ ಆ ದೇವರು ತನ್ನ ದಶಾವಾತರವನ್ನು ಭೂಮಿ ಮೇಲೆ ಅಂದರೆ ಅದೂ ಭಾರತದಲ್ಲೇ ಯಾಕೆ ಅವತರಿಸಬೇಕು? ನಮ್ಮ ಭರತ ಖಂಡದಲ್ಲಿ ಅಷ್ಟೊಂದು ದುಷ್ಟರಿದ್ದರೇ?, ನಾಗರಿಕ ಬಂದುಗಳೇ ಇತ್ತಿಚಿನ ನಮ್ಮ ಭಾರತ ವ್ಯವಸ್ಥೆ, ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ, ಅನೀತಿ , ಹಿಂಸೆ, ದೌರ್ಜನ್ಯ, ಭ್ರಷ್ಟಾಚಾರ, ಮೋಸ, ಧಗ, ವಂಚನೆ ಇವೆಲ್ಲವನ್ನು ನೋಡುತಿದ್ದರೆ ಆ ದೇವರು ಹತ್ತು ಅವತಾರ ಅವತರಿಸಿ ದುಷ್ಟರನ್ನು ಮಟ್ಟ ಹಾಕಿರಲು ಬಹುದು ಅನ್ನಿಸುತ್ತದೆ,
ಇಂತಹ ಭ್ರಷ್ಟ ವ್ಯಸ್ಥೆಯನ್ನು ನೋಡಲು ಆ ದೇವರನ್ನೆ ಹನ್ನೊಂದನೇ ಅವತಾರದಲ್ಲಿ ಭೂಮಿಗೆ ಇಳಿದು ಬಾ ಅಂತ ಬೇಡಿಕೊಳ್ಳುವ ಕಾಲ ಸನ್ನಿಹಿತವಾಗ್ಗಿತ್ತು ಅಂತ ಕಾಣುತ್ತೆ ಅವನ ಹನ್ನೋಂದನೆ ಅವತಾರ ಅಣ್ಣಾ ಹಜಾರೆ ಎಂದರೆ ತಪ್ಪಾಗಲಾರದು
74 ವರ್ಷದ ವಯೋವೃದ್ಧ, ಕೃಶ ದೇಹ, ಶಾಂತಿಯ ಸಂಕೇತದ ಅಪ್ಪಟ ಭಾರತೀಯ ವೇಷ ಭೂಷಣ, ತಲೆಯ ಮೇಲೆ ಪ್ರಪಂಚಕ್ಕೆ ಶಾಂತಿ, ಅಹಿಂಸಾ ಸಂದೇಶ ನೀಡಿದ ಗಾಂಧಿ ಟೋಪಿ, ಮುಖದ ಮೇಲೆ ಸಾಧನೆ ಗುರಿ ಮುಟ್ಟುವ ಆತ್ಮವಿಶ್ವಾಸದ ಮಂದಹಾಸದ ಮುಗುಳ್ನಗೆಯ ಬಿಡಿಗಾಸಿನ ದಾಸಯ್ಯನ ಒಂದೇ ಒಂದು ಕೂಗು ಭ್ರಷ್ಟ ಪ್ರಜಾಪ್ರಭುತ್ವಕ್ಕೆ ಕರೆಗಂಟೆಯಾಗಿ ಇಡೀ ಭಾರತವನ್ನೆ ತಟ್ಟಿ ಎಬ್ಬಿಸಿತು, ಭ್ರಷ್ಟಾಚಾರ ವಿರೋಧಿಗಳ ಕಿವಿಗಳಲ್ಲಿ ಅಣ್ಣಾರವರ ಕೂಗು ಪ್ರತಿದ್ವನಿಸಿತು ನರ ನಾಡಿಗಳಲ್ಲಿ ಕಂಪಿಸಿದವು, ರಾಷ್ಟ್ರದಾದ್ಯಂತ ಬೆಂಬಲ ವ್ಯಕ್ತವಾಯಿತು ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿವ ಮಟ್ಟಿಗೆ ರೋಸಿ ಹೋಗಿದ್ದ ಮುಗ್ಧ ಭಾರತೀಯರು ನಾಡಿನಾಧ್ಯಂತ ತಂಡೋಪತಂಡವಾಗಿ ರಾಷ್ಟ್ರರಾಜಧಾನಿಯತ್ತು ಧಾವಿಸಿದರು ಅಣ್ಣಾರ ಭ್ರಷ್ಟಚಾರ ವಿರೋಧಿ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ತಾವು ಅವರ ಜೊತೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು, 12 ದಿನಗಳ ಪ್ರಜಾಪ್ರತಿನಿಧಿಗಳ ನಾಟಕೀಯ ಬೆಳವಣಿಗೆ ಅಣ್ಣಾರ ಅಛಲ ನಿರ್ಧಾರದ ಮುಂದೆ ಏನು ಮಾಡಲಾಗಲಿಲ್ಲ ಒಂದು ಹಂತದಲ್ಲಿ ಬಲಪ್ರಯೋಗಕ್ಕೂ ಮುಂದಾಗಿದ್ದ ಆಡಳಿತ ಸರ್ಕಾರ ಕೊನೆಗೆ ಅಣ್ಣಾಗೆ ಸೋತು ಶರಣಾಗಿ ಮಸೂದೆ ಮಂಡನೆಯ ನಿರ್ಧಾರ ತಳೆಯಿತು.
ನಾಗರೀಕ ಬಂದುಗಳೇ! ಭಾರತದ ಅತ್ಯಂತ ಭ್ರಷ್ಟಚಾರ ರಾಜ್ಯಗಳಲ್ಲಿ ನಮ್ಮ ಕರುನಾಡು ಕರ್ನಾಟಕದ್ದು ಸಿಂಹಪಾಲು ಎನ್ನುವುದು ಅತ್ಯಂತ ಖೇದಕರ ಸಂಗತಿ, ಕರುಣೆಯುಳ್ಳ ಕನ್ನಡಿಗರು ಶಿಸ್ತು, ಸಮಯಪಾಲನೆ, ಶಾಂತಿ ಸಹನಗೆ ಹೆಸರಾದವರು ಅಂತೇಯೆ ಭ್ರಷ್ಟಾಚಾರದಲ್ಲಿ ತಾವು ಯಾರಿಗೇನು ಕಡಿಮೆಯಿಲ್ಲ ಎಂದು ತಮನ್ನು ತಾವೇ ಬೆನ್ನು ತಟ್ಟಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ರಾಷ್ಟ್ರದ ಕೆಲವೇ ಕೆಲವು ರಾಜ್ಯಗಳಲ್ಲಿರುವ ಲೋಕಾಯುಕ್ತ ಎಂಬ ಪ್ರಬಲ ಭ್ರಷ್ಟಾಚಾರ ಸಂಸ್ಥೆ ಸ್ಥಾಪಿಸಲು ಸಹ ಇದೆ ಕಾರಣ, ಲೋಕಾಯುಕ್ತರಾಗಿ ತಮ್ಮ ಶಿಸ್ತಿಗೆ ಹೆಸರಾದ ಲೋಕಾಯುಕ್ತ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಮೊಟ್ಟ ಮೊದಲ ಭಾರಿಗೆ ಭ್ರಷ್ಟ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದರೆ ಅವರ ನಂತರ ಬಂದ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಗಡೆಯವರು ಪ್ರಜಾಪ್ರತಿನಿಧಿಗಳಾದ ನಗರಸಭೆ, ಪುರಸಭೆ ಸದಸ್ಯರಿಂದ ಶಾಸಕ, ಮಂತ್ರಿಗಳಿಗೂ ತಮ್ಮ ಅಧಿಕಾರದ ಸಿಹಿ ತಿನ್ನಿಸಿದ್ದಷ್ಟೆ ಅಲ್ಲದೆ ರಾಜ್ಯದ ಪ್ರಥಮ ಪ್ರಜಾಪ್ರತಿನಿಧಿ ಮುಖ್ಯಮಂತ್ರಿಗೂ ಸಹ ಭ್ರಷ್ಟಾಚಾರದ ಬಿಸಿ ಮುಟ್ಟಿಸಿ ನ್ಯಾಯಾಲಯದ ಕಟ ಕಟೆಯಲ್ಲಿ ನಿಲ್ಲಿವಂತೆ ಮಾಡಿದರು.
ಸರಳ ಸಜ್ಜನಿಕೆಗೆ ಹೆಸರಾದ ಶ್ರೀ ಸಂತೋಷ್ ಹೆಗ್ಗಡೆಯವರು ಅಣ್ಣಾ ಹಜಾರೆಯವರ ಲೋಕಪಾಲ ಮಸೂದೆ ಹೋರ‍ಾಟದಲ್ಲಿ ಕೈ ಜೋಡಿಸಿದ್ದು ಕರ್ನಾಟಕದ ಭ್ರಷ್ಟಾಚಾರ ವಿರೋದಿಗಳಿಗೆ ಸ್ಪೂರ್ತಿದಾಯಕ 12 ದಿನಗಳ ಕಾಲ ಅಣ್ಣಾ ಹಜಾರೆಯವರಿಗೆ ಬೆಂಬಲವಾಗಿ ಉದ್ಯಾನ ನಗರಿಯ ಪ್ರೀಡಂ ಪಾರ್ಕ್ ನಲ್ಲಿ ನಿರಂತರವಾಗಿ ರಾಜ್ಯದಲ್ಲಿನ ಭ್ರಷ್ಟಚಾರ ವಿರೋಧಿಗಳಿಗೆ ಪ್ರೋತ್ಸಾಹ ನೀಡಿದ ಶ್ರೀ ಸಂತೋಷ್ ಹೆಗ್ಗಡೆಯವರು ನಿಜವಾಗಲು "ಕರ್ನಾಟಕದ ಅಣ್ಣಾ" ಎಂದರೆ ಅತಿಶಯೋಕ್ತಿಯಾಗಲಾರದು. ಶ್ರೀಮಂತಿಕೆಯ ಸುಖದ ಸುಪ್ಪತ್ತಿಗೆಯ ಕುಟುಂಬದಿಂದ ಬಂದ ಶ್ರೀ ಸಂತೋಷ್ ಹೆಗ್ಗಡೆಯವರು ನ್ಯಾಯಮೂರ್ತಿಯಾಗಿ ಅವರು ಕೈಗೊಂಡ ನಿರ್ಧಾರಗಳು, ತೀರ್ಮಾನಗಳು ಪ್ರಶಂಸನೆಗೂ ನಿಲಕದ್ದು ಎಂದರೆ ತಪ್ಪಾಗಲಾರದು, ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಮಾನ್ಯ ಶ್ರೀ ಸಂತೋಷ್ ಹೆಗ್ಗಡೆಯವರು ತಮ್ಮ ಅಧಿಕಾರವಿಲ್ಲದ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಿನಾಮೆಯನ್ನು ಸಹ ಕೊಟ್ಟಿದ್ದರು, ಭ್ರಷ್ಟ ವ್ಯವಸ್ಥೆಯನ್ನು ಭ್ರಷ್ಟಚಾರವನ್ನು ತಡೆಗಟ್ಟಲು ಈ ಮೇಲೆ ಹೇಳಿದಂತೆ ಆ ದೇವರೆ ತನ್ನ ಹನ್ನೊಂದನೆ ಅವತಾರದ ಪ್ರತಿರೂಪವಾಗಿ ಶ್ರೀ ಸಂತೋಷ್ ಹೆಗ್ಗಡೆಯವರನ್ನು ಕರುನಾಡ ಕರ್ನಾಟಕಕ್ಕೆ ಕೊಟ್ಟಿದ್ದಾರೆ ಎನ್ನಬಹುದು,
ರಾಜ ರೋಷವಾಗಿ ಭ್ರಷ್ಟಚಾರದಲ್ಲಿ ತೊಡಗಿದ್ದವರಿಗೆ ಸಿಂಹಸ್ವಪ್ನವಾಗಿದ್ದ ಶ್ರೀ ಸಂತೋಷ್ ಹೆಗ್ಗಡೆಯವರು ಅತಿರಥ ಮಹಾರಥರೆಂದು ಕರೆಯಬಹುದಾದ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನು ನಿರಾಯಾಸವಾಗಿ ಶ್ರೀ ಕೃಷ್ಣನ ಜನ್ಮಸ್ಥಾನದ ದರ್ಶನ ಮಾಡಿಸಿದ್ದಾರೆ, ಲೂಟಿಯಾಗುತಿದ್ದ ರಾಷ್ಟ್ರದ ಸಂಪತ್ತಿನ ರಕ್ಷಿಸಿದ್ದಾರೆ ಲಂಚಾವಾತರವನ್ನು ಕಡಿತಗೊಳಿಸಿದ ಕೀರ್ತಿ ಶ್ರೀ ಸಂತೋಷ್ ಹೆಗ್ಗಡೆಯವರಿಗೆ ಸಲ್ಲುತ್ತದೆ.
ನಾಗರೀಕ ಬಂಧುಗಳೆ ಅತ್ಮೀಯ ಕನ್ನಡ ಕುವರರೆ ಶ್ರೀ ಸಂತೋಷ್ ಹೆಗ್ಗಡೆಯವರು ಈ ಹೋರಾಟಕ್ಕೆ ಬೆಂಬಲವಾಗಿ ನಿಂತು ಈ ಮೂಲಕ ಅಣ್ಣಾ ಹಜಾರೆಯವರ ಪ್ರಭಲ ಲೋಕಪಾಲ ಮಸೂದೆ ಜಾರಿಗ ಬರುವವರೆಗೆ ನಿರಂತರವಾಗಿ ಹೋರಾಡಿ ಭ್ರಷ್ಟರಹಿತ, ಮೋಸರಹಿತ, ವಂಚನೆರಹಿತ, ಭವಿಷ್ಯದ ಭದ್ರ ಭಾರತ ಕಟ್ಟೋಣ

ಜೈ ಹಿಂದ್, ಜೈ ಕರ್ನಾಟಕ

ಕಾ.ವೆಂ. ಶ್ರೀನಿವಾಸಮೂರ್ತಿ
ಕೋಲಾರ