Tuesday, October 4, 2022

ಜೋಕ್ಸ್ (ಹಾಸ್ಯ)

ಜೋಕ್ಸ್

********


ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ


ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.?


ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.


😂😝😜😂😝😜


ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?  


ಅಪ್ಪ:ಅದು ನಿಂಗೆ ಹೇಗೆ ಗೊತ್ತು?  


ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ಕಿತ್ತು ನೋಡ್ತಿದ್ದೀನಿ..****😉😜😜😝😛😂😂😂


*ಡಾಕ್ಟರ್*: ಬನ್ನಿ ಉಮೇಶ್.. ಏನ್ ಸಮಾಚಾರ?


*ಉಮೇಶ್*: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ... ಯಾಕೋ ತಲೆ ಭಾರ..


*ಡಾಕ್ಟರ್*: ಡ್ರಿಂಕ್ಸ್ ಮಾಡ್ತೀರಾ?


*ಉಮೇಶ್*: ಹೂಂ... ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ...😜


ಹೆಂಡ್ತಿ : ರೀ ಈ ಸರಿ ವರಲಕ್ಷ್ಮಿ ಹಬ್ಬಕ್ಕೆ ಹೆಣ್ಮಕ್ಕಳಿಗೆ ಅರಿಶಿಣ ಕುಂಕುಮದ ಜೊತೆ ಇನ್ನೇನು ಕೊಡಲಿ..


ಗಂಡ : ನನ್ ನಂಬರ್ ಕೊಡು

😂😜😝😜


ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..

ಇದಕ್ಕೆ ಒಂದು ಉದಾಹರಣೆ ಕೊಡು?


ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ..‌..😀😀😀😀😀😀😀😀😀😀


ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ

ಕುರ್ ಕುರ್

ಕುರ್ ಕುರ್


ಮೊಬೈಲ್ ಟಾರ್ಚ್ ಮೂಲಕ

ನೋಡಿದಾಗ ಹತ್ತಿರದ

ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ

ಚಿಪ್ಸ್ ತಿನ್ನುತ್ತಿದ್ದ..

ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ 


*ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* 


ಎಂಚಿ ಸಾವು ಮಾರೆ😃😃


ಇಬ್ಬರು ಹುಚ್ಚರು ಟೆರೇಸ್ ಮೇಲೆ ಮಲಗಿದ್ದರು.ಮಳೆ ಬರಲಾರಂಬಿಸಿತು,

ಮೊದಲ ಹುಚ್ಚ :- ನಡಿ ಕೆಳಗೆ ಹೋಗಿ ಮಲಗೋಣ, ಆಕಾಶ ತೂತಾಗಿದೆ.

(ಅಷ್ಟರಲ್ಲಿ ಆಕಾಶ ಮಿಂಚತೋಡಗಿತು) 

ಎರಡನೇ ಹುಚ್ಚ :-ಇಲ್ಲೇ ಮಲಗೋ ವೆಲ್ಡಿಂಗ್ ಮಾಡೋರುಬಂದ್ರು,,,,,,,,!

😂😂😂😀😀😀


ಟೀಚರ್: 1869ರಲ್ಲಿ ಏನಾಯ್ತು?

ವಿದ್ಯಾರ್ಥಿ: ಗಾಂಧೀಜಿ ಹುಟ್ಟಿದರು.

ಟೀಚರ್:very gud.. 1873ರಲ್ಲಿ ಏನಾಯ್ತು?

ವಿದ್ಯಾರ್ಥಿ: ಗಾಂಧೀಜಿಗೆ ನಾಲ್ಕು ವರ್ಷ ತುಂಬಿತು😂😂😂😂😂


ಹೆಡ್ಮಾಸ್ಟರ್ : ಐನ್ಸ್ಟೀನ್  ಯಾರು ?

ಸ್ಟೂಡೆಂಟ್:  ಗೊತ್ತಿಲ್ಲ  ಸರ್ .

ಹೆಡ್ಮಾಸ್ಟರ್ : ಗಮನ  ಸ್ಟಡೀಸ್  ಕಡೆ  ಇರ್ಲಿ , ಆಗ  ಎಲ್ಲಾ  ಗೊತ್ತಾಗುತ್ತೆ .

ಸ್ಟೂಡೆಂಟ್ : ನಿಮಗೆ  ರಮೇಶ  ಯಾರು  ಅಂತ  ಗೊತ್ತಾ  ?

ಹೆಡ್ಮಾಸ್ಟರ್ : ಗೊತ್ತಿಲ್ಲ .

ಸ್ಟೂಡೆಂಟ್ : ಗಮನ  ನಿಮ್ಮ  ಮಗಳ  ಕಡೆನೂ  ಇರ್ಲಿ . ಆಗ  ಎಲ್ಲಾ  ಗೊತ್ತಾಗುತ್ತೆ😂😂😂😂


ಟೀಚರ್ : ಎಲೆಕ್ಟ್ರಿಸಿಟಿ  ಇಲ್ಲದೆ  ಹೋಗಿದ್ರೆ , ಏನಾಗುತ್ತಿತ್ತು ?

ಪಪ್ಪು : ರಾತ್ರಿಯಲ್ಲಿ  ಕ್ಯಾಂಡಲ್  ಹಿಡ್ಕೊಂಡು  ಟಿವಿ   ನೋಡಬೇಕಾಗಿತ್ತು😂😂😂😂


ಬಸ್ ಸ್ಟಾಂಡಲ್ಲಿ ಕಾಲೇಜು ಹುಡುಗಿ ksrtcಬಸ್ ಗೆ ಹತ್ತಿ ಡ್ರೈವರ್ ಹತ್ತಿರ ಸ್ಟೈಲಾಗಿ ಕೇಳುತ್ತಾಳೆ "ಈ ಡಬ್ಬ ಯಾವಗ ಹೊರಡುವುದು "


ಡ್ರೈವರ್ "ಕಸ ಎಲ್ಲಾ ತುಂಬಿದ ಮೇಲೆ "

😜😜😜😜😜😜😜


ಬಾಯ್  : ಹಲೋ📞, ಪಮ್ಮಿ ಡಾರ್ಲಿಂಗ್ 💋... ಹೇಗಿದ್ದೀಯಾ ? ..............................

ಗರ್ಲ್  : ಯಾರಿದು   .

ಬಾಯ್  : ನಾನು ನಿನ್ ನ ಪ್ರಣಯಕಾಂತ!!..................

ಗರ್ಲ್  : ನೀನು   ದಿವ್ಯರಾಜ್ ತಾನೆ...

ಬಾಯ್  : ಹೌದು, ನಿನಗೇಗೆ ಗೊತ್ತು ?

ಗರ್ಲ್  : ನೀನು  ನಾರಾಯಣ ಹೆಗ್ಡೆ ಮಗ ತಾನೆ......,??

ಬಾಯ್  : ನಿನಗೆ ಹೆಗೋತ್ತು ??

ಗರ್ಲ್  : ನೀನು ರಂಗ ನ  ಮೊಮ್ಮಗ ತಾನೆ....?

ಬಾಯ್  : ಯಸ್  !! ಆದರೆ  ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು....😱?

ಗರ್ಲ್  : ಕಚ್ಡಾ ನನ್ನ ಮಗನೇ.... ನಿನ್ನಮ್ಮ ಕಣೋ ನಾನು 😡!!..

ನೀನು ಕುಡಿದು🍺🍻 'ಪಮ್ಮಿ' ಗೆ ಅಲ್ಲ, 'ಮಮ್ಮಿ'  ಗೆ ಫೋನ್  ಮಾಡಿದಿಯಾ 😂😂😉😉


ಗುಂಡ   ಕುಡಿದು ಮನೆಗೆ ಬಂದ...

ಅಪ್ಪನಿಗೆ ಅನುಮಾನ ಬರದಿರಲಿ ಎಂದು ಲ್ಯಾಪ್'ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...


ಅಪ್ಪ: ಕುಡಿದು ಬಂದಿದ್ದೀಯೇನೋ?

ಗುಂಡ: ಇಲ್ಲ ಅಪ್ಪ..!

ಅಪ್ಪ: ಮತ್ತೆ ಆ ಸೂಟ್'ಕೇಸ್ ಓಪನ್ ಮಾಡಿ ಏನೋ ಓದ್ತಾ ಇದೀಯಾ..?😂😂😂😂😂😂😂😂😂😂😂😂


ಟೀಚರ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.

ಗು0ಡ : Birla Cement ಮೇಡಮ್.

ಟೀಚರ : ಯಾಕೆ.

ಗು0ಡ : ಇದರಲ್ಲೀ ಜೀವ ಇದೆ.


ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?


ಪೋಲೀಸ್ : ಏನಂತ ?


ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!

 😆😆😬😁😬😆😆😬😁😬


ರಾತ್ರಿ ೨ ಗಂಟೆಗೆ ಕುಡಿದು ಬಂದ🥃ಗಂಡನನ್ನು ನೋಡಿದ ಹೆಂಡತಿ👩🏻😡 ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.


ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು🤣🤣🤣