Thursday, April 17, 2014

ಹುಡುಗ ಹುಡುಗಿಗೆ ಸ್ನೇಹವಾಯಿತು..
ಎಸ್ಸೆಮ್ಮೆಸ್ ಗಳ ಸಾಗರವೇ ಹರಿಯಿತು..
ಪ್ರೀತಿಸಿಕೊಂಡರು. ಇಬ್ಬರ ನಂಬರ್ ಬ್ಯುಸಿಯಾಯಿತು..
ಮದುವೆಯಾದರು.. ಇವಾಗ ಇಬ್ಬರ ಮೊಬೈಲ್ ನಲ್ಲಿ currency ಇಲ್ಲವಂತೆ
-----------------------------------------------------------------------------------
"ನೀ ಹೇಗಿದ್ದರೂ ನಂಗೆ ಇಷ್ಟ ಕಣೆ" ಅನ್ನುತ್ತಿದ್ದ ಗಂಡ.. ಇವಾಗ "ನಿಮ್ಮಮ್ಮ ಡುಮ್ಮಿ ಆಗಿಬಿಟ್ಟಿದಾಳೆ" ಅಂಥಾ ಮಗಳ ಎದುರು ಮೂದಲಿಸ್ತಾ ಇದಾನೆ...
-----------------
ಅಹಿಂಸಾವಾದಿ ಸುಬ್ಬಾ ಶಾಸ್ತ್ರಿಗಳು, ತಮಗೆ ತೊಂದರೆ ನೀಡುತ್ತಿದ್ದ ಸೊಳ್ಳೆಗಳನ್ನು ಒಂದೊಂದನ್ನೇ ಹಿಡಿದು, ಹಿಸುಕಿ, ಸಾಯಿಸಿ ಸಂಭ್ರಮಿಸಿದರು
------------------
1) ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//

ಅವನು S.S.L.C. ಯಲ್ಲಿ
Rank ತಗೊಂಡ
ಕಾರಣ, ಅವನು
ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ
ಫೇಲ್ ಆದ
ಕಾರಣ,
ಅವಳು ಯಾರೋ
ಪ್ರತಿಭಾ ಅಂತಾ!!!
--------------
2) ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//

ಅವನು ಹೇಳಿದ್ದು
ಇಷ್ಟೇ,
I LOVE YOU ಗಾಯಿತ್ರಿ..

ಆಗಿದ್ದು ಇಷ್ಟೇ..
ಮುಖದ ಮೇಲೆ ಗಾಯ THREE!!
------------
3) ಪ್ರೀತಿಸುವ ಮೊದಲು
ಪ್ರೀತಿಯ ಆಳ ನೋಡು.. //ವ್ಹಾ ವ್ಹಾ//

ಪ್ರೀತಿಸುವ ಮೊದಲು ಪ್ರೀತಿಯ
ಆಳ ನೋಡು..

ನಂಬಿಕೆ ಬರದಿದ್ರೆ,
ಮುಂಗಾರು ಮಳೆ FILM ನೋಡು..
-------------------------------
ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ

ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..

ಮರ್ಯಾದೆಯಿಂದ ತಂದುಕೊಡು...!!
------------------------------
5) ನುಡಿದರೆ,
ಮುತ್ತಿನ
ಹಾರದಂತಿರಬೇಕು //ವ್ಹಾ ವ್ಹಾ//

ನುಡಿದರೆ,
ಮುತ್ತಿನ
ಹಾರದಂತಿರಬೇಕು.

ಕುಡಿದರೆ,
ಮನೆಯವರಿಗೆ
ಅನುಮಾನ ಬಾರದಂತಿರಬೇಕು...
---------------------------------
ಹೃದಯದ ಗಾಯಕ್ಕೆ
ಇಲ್ಲಾ
ಮುಲಾಮ್ //ವ್ಹಾ ವ್ಹಾ//

ಹೃದಯದ ಗಾಯಕ್ಕೆ
ಇಲ್ಲಾ ಮುಲಾಮ್....

ಅದಕ್ಕೆ
ಮದುವೆ ಆಗಲಿಲ್ಲಾ
'ಅಬ್ದುಲ್ ಕಲಾಮ್'
-------------------------------
8) ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ /ವಾ..ವಾ../

ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ.....

ಅದೇ ಕಲ್ಲಿನಿಂದ
ಶಿಲ್ಪಿಯನ್ನು ಕೆತ್ತಿದರೆ,
ಕೊಲೆ...../ವಾ..ವಾ.//
----------------------------------
9) ನನ್ನ ಮೊಟ್ಟ ಮೊದಲ ಹುಡುಗಿ ನಿಶಾ
ಹತ್ತಿಸಿದಳು ತಲೆಗೆ ಅವಳದೇ ನಶಾ..

ಕೈಕೊಟ್ಟಾನ ನನ್ನ ಪಾಲಿಗೆ ಉಳಿದದ್ದು ವಿಷ!!
ಆದರೆ, ಈಗ ನಾನು ಬದುಕಿರಲು ಕಾರಣ,
ಅವಳ ತಂಗಿ ಉಷಾ!!!


10)ಮಗುವಿನ ನಗು
ಸತ್ತವರನ್ನು ಬದುಕಿಸುತ್ತೆ /ವಾ.ವಾ/
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ,
ಕಾಲೇಜ್ ಕನ್ಯೆಯ ನಗು
ಬದುಕಿರುವವರನ್ನೂ ಸಾಯಿಸುತ್ತೆ,, /ವಾ..ವಾ//

Moral:- ಕೂಸ್ ನ ನಂಬಿದ್ರೂ.. ಪೀಸ್ ನ ನಂಬಬಾರದು.

ಕೈ ಕೆಸರಾದರೆ.....


ಕೈ ತೊಳ್ಕೊ..

ಅಷ್ಟು ಗೊತ್ತಾಗಲ್ವ..?? ಅದನ್ನು
ನನ್ ಮೆಸೇಜ್ ನೋಡೇ ತಿಳ್ಕೊಬೇಕಾ?
ನಿಂಗೆ ಯಾವಾಗ ಬುದ್ಧಿ ಬರುತ್ತೋ.. ಆ ಪರಮಾತ್ಮನಿಗೇ ಗೊತ್ತು.
-----------------------------------------------------------------------
ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,
-------------------------------------
ಪಿನ್ ಚುಚ್ಚಿದರೆ ರಕ್ತ ಯಾಕೆ ಬರುತ್ತೆ????


ಯಾರು ಚುಚ್ಚಿದರು ಅಂತಾ ನೋಡೋಕೆ ಬರುತ್ತೆ..
--------------------------------------------------
ಮುಂಗಾರು ಮಳೆ ಬಂದಿದೆ..
ನಿಂಗೆ ತುಂಬಾ ಖುಶಿ ಅಲ್ವಾ..?
ಮಳೆ ಬರುವಾಗ ಹೊರಗೆ ಹೋಗಬೇಕು, ನೀರಲ್ಲಿ ಆಡಬೇಕು, ಕುಣೀಬೇಕು
ಅಂತೆಲ್ಲಾ ಅನ್ಸುತ್ತೆ ಅಲ್ವಾ....???
ಎಲ್ಲಾ ಕಪ್ಪೆಗೂ ಹೀಗೇ ಆಗುತ್ತೆ...


ಕಾಡು ಬೆಳೆಸಿ, ನಾಡು ಉಳಿಸಿ
ನೀರು ಉಳಿಸಿ, ಬೆಳೆ ಬೆಳೆಸಿ
ಮೆಸೇಜ್ ಕಳಿಸಿ, Friendship ಬೆಳೆಸಿ,. ಇಲ್ಲಾ ಅಂದ್ರೆ,
ತಲೆ ಬೋಳಿಸಿ, ಕೊಬ್ರಿ ಎಣ್ಣೆ ಉಳಿಸಿ.

ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು
ನೀನೇ ನನ್ನ ಟಾಟಾ ಬಿರ್ಲಾ.. /ವಾ..ವಾ../
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಲು
ನೀನೇ ನನ್ನ ಟಾಟಾ ಬಿರ್ಲಾ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು
ಟಾಟಾ ಬರ್ಲಾ.... /ವಾ..ವಾ/
---------------------------------------
ಕಳಬೇಡ ಕೊಲಬೇಡ
CALL ಮಾಡಲು ಮರೀಬೇಡ,
MISS CALL ಕೊಡಬೇಡ
SMS ಕಳಿಸಲು ಮರಿಬೇಡ..
ಇದೇ ನನ್ನ ಸುದ್ದಿ
ಬರಲಿ ನಿಂಗೆ ಒಳ್ಳೆ ಬುದ್ಧಿ
ಮೊಬೈಲ್ ಸಂಗಮದೇವಾ....
-----------------------------------
18)ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ...
ಅವಳ ಒಂದು ಕಣ್ಣು
ಎಷ್ಟು ಸುಂದರವಾಗಿತ್ತೆಂದರೆ..
ಅವಳ ಇನ್ನೊಂದು ಕಣ್ಣು
ಆ ಕಣ್ಣನ್ನೇ ನೋಡುತ್ತಿದ್ದು....
-----------------------------
LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು" /ವಾ..ವಾ//

LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು"

LOVE ಮಾಡಿ
ಕೈ ಕೊಟ್ರೆ..... "ನಿಮ್ಹಾನ್ಸು" /ವಾ..ವಾ//
-----------------------------
5)ರೋಗಿ:- ಸಾರ್ ನೆನ್ನೆಯಿಂದ ತುಂಬಾ ಹೊಟ್ಟೆ ನೂವು ಸಾರ್..
ವೈದ್ಯ:- ಗ್ಯಾಸ್ ಇದೆಯಾ...??
ರೋಗಿ:- ಇಲ್ಲಾ ಸಾರ್.. ಬುಕ್ ಮಾಡಿ ಹದಿನೈದು ದಿನ ಆಯ್ತು.. ಇನ್ನೂ ಬಂದಿಲ್ಲಾ.
------------------------------------------
ತುಟಿಯಿಂದ ಸ್ಪರ್ಶಿಸಿದ ಆ ಅನುಭವ ಇನ್ನೂ ಇದೆ.
ಕಣ್ಣುಗಳಲ್ಲಿ ಬಂದ ನೀರು ಇನ್ನೂ ಇದೆ,
ಉಸಿರಿನಲ್ಲಿ ಬಂದ ಬೆಂಕಿ ಇನ್ನೂ ಇದೆ...
ಯಾಕೆ ಹೇಳಿ..????
ತಿಂದಿದ್ದು ಹಸಿ ಹಸಿ ಮೆಣಸಿನಕಾಯಿ..!!!
------------
10) ಇದನ್ನು ಕಳಿಸಿದವರು:-
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ...!!
------------
ಒಮ್ಮೆ ಸರ್ದಾರ್ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ.. "ಮನೇಲಿ ಇವತ್ತು ಯಾರೂ ಇರಲ್ಲಾ.. ಸರಿಯಾಗಿ ಹತ್ತು ಗಂಟೆಗೆ ಮನೆಗೆ ಬಾ"
ಅವಳು ತನ್ನ ತಂದೆ ತಾಯಿಯ ಕಣ್ಣು ತಪ್ಪಿಸಿ ಕಷ್ಟಪಟ್ಟು ಅವನ ಮನೆಗೆ ಬಂದು ನೋಡಿದಳು.. ಅವನು ಹೇಳಿದ್ದು ನಿಜವಾಗಿತ್ತು..
ಅವರ ಮನೆಯಲ್ಲಿ ಯಾರೂ ಇರಲಿಲ್ಲಾ.. ಮನೆಗೆ ಬೀಗ ಹಾಕಿತ್ತು.
--------------------------
12)ಇದನ್ನು ಕಳಿಸಿದವರು:-

ಇಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಅಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//

ಆದರೆ, ಅವಳಪ್ಪ ಹೇಳಿದ
ಇದೇ ನಿಂಗೆ "ಲಾಸ್ಟ್ ವಾರ್ನಿಂಗ್"
--------------
ತ್ರಿಕಾಲ ಸತ್ಯ:-
ಒಬ್ಬಳು ಹುಡುಗಿ ರಸ್ತೆ ದಾಟುವಾಗ, ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಹುಶಾರಾಗಿ ಹೋಗಿ"
ಆದರೆ, ಒಬ್ಬ ಹುಡುಗ ರಸ್ತೆ ದಾಟುವಾಗ ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಯಾಕೋ ಲೋಫರ್..!! ಸಾಯೋಕೆ ನನ್ನ ಗಾಡೀನೇ ಬೇಕಾ ನಿಂಗೆ..??
-----------
ಅವಳು ನನ್ನ ತಿರುಗಿ ನೋಡಿದಳು
ನಾನೂ ಅವಳ ತಿರುಗಿ ನೋಡಿದೆ,
ಅವಳು ಮತ್ತೆ ತಿರುಗಿ ನೋಡಿದಳು
ನಾನೂ ಮತ್ತೆ ತಿರುಗಿ ನೋಡಿದೆ..
ಯಾಕೆಂದರೆ,
ಇಬ್ಬರಿಗೂ INTERNAL EXAM ನಲ್ಲಿ
ಉತ್ತರ ಗೊತ್ತಿರಲಿಲ್ಲಾ...

---------
ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ..
ಹೊಟ್ಟೆ ಎಲ್ಲಾ ಉರುದೋಯ್ತು... /ವಾ..ವಾ//
---------------
18)ಇದನ್ನು ಕಳಿಸಿದವರು :- ಜ್ಞಾನಮೂರ್ತಿ (ಭಕ್ತ)(ಬೆಂಗಳೂರು)

ಆಂಗ್ಲ ಭಾಷೆಯಲ್ಲಿ:- GOOD NIGHT
ಹಿಂದಿ ಭಾಷೆಯಲ್ಲಿ:- SHUBHA RAATHRI
ಉರ್ದು ಭಾಷೆಯಲ್ಲಿ:- SHABBA KHAIR
ಜರ್ಮನ್ ಭಾಷೆಯಲ್ಲಿ:- GUTEN NIGHT
ಸ್ಪ್ಯಾನಿಶ್ ಭಾಷೆಯಲ್ಲಿ:- VILLA VE DURE


ನನ್ನ ಸ್ಟೈಲ್:- " ಬಿದ್ಕ ಹೋಗಲೇ...."
------------------
ನೀವು ನಿಮ್ಮದೇ ಆದ ಸ್ಟೈಲ್ ನಲ್ಲಿ ಮಾತನಾಡಿರಿ
ನಿಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡಿರಿ..
ನಿಮ್ಮದೇ ಆದ ದಾರಿಯಲ್ಲಿ ನಡೆಯಿರಿ.....

ಆಗ ಜನರು ಹೇಳುವರು..

"ಗೂಬೆ ಮುಂಡೇದು.. ಯಾರ್ ಮಾತೂ ಕೇಳಲ್ಲಾ...."
------------------
ಸರ್ದಾರ್:- ಏನಮ್ಮಾ, ನಿನ್ನ ಗಂಡ ಚನ್ನಾಗಿದಾನಾ??
ಅವಳು:- ಏನ್ ಸ್ವಾಮಿ, ಏಕವಚನದಲ್ಲಿ ಮಾತಾಡುಸ್ತೀರಲ್ಲಾ...

ಸರ್ದಾರ್:- ಓಹ್.. ಏನಮ್ಮಾ, ನಿನ್ನ ಗಂಡಂದ್ರು ಚನ್ನಾಗಿದಾರಾ??
---------------
೧೪) ಇದನ್ನು ಕಳಿಸಿದವರು:-

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ /ವಾಹ್..ವಾಹ್/

ಭಿಕ್ಷುಕರಿಗೆ
ದುಡ್ಡು ಕೊಟ್ರೆ ಪುಣ್ಯ....

Mosquito ಗೆ
ಬ್ಲಡ್ ಕೊಟ್ರೆ,
ಚಿಕನ್ ಗುನ್ಯಾ,,,, /ವಾಹ್ ವಾಹ್.../

--------------
ಪೋಲೀಸ್ ಪೇದೆ:- ನೆನ್ನೆ ಜೈಲಿನಲ್ಲಿ ಕೈದಿಗಳು ರಾಮಾಯಣ ನಾಟಕ ಮಾಡಿದರು.
ಜೈಲರ್:- ಅದಕ್ಕೇನೀಗಾ???
ಪೋಲೀಸ್ ಪೇದೆ:- ನೆನ್ನೆ ಸಂಜೀವಿನಿ ತರಕೆ ಹೋದ ಹನುಮಂತ ಇನ್ನೂ ಬಂದಿಲ್ಲಾ..
------------
SENT ಮೆಸೇಜ್‍ನ ಅರ್ಥ


ತಿಮ್ಮ : ಲೋ, ಈ SENT Message ಅಂದ್ರೆ ಏನೋ ?

ಪುಂಡ : ಅಹಾ ತೋರಿಸಿದ್ಯಲ್ಲಾ ನಿನ್ನ ಬುದ್ದಿವಂತಿಕೆಯನ್ನ !

SENT Message ಅಂದ್ರೆ 'ಸುಗಂಧವಾದ ಮೆಸ್ಸೇಜ್' ಅಂತ !!
------
ಅಮಲಾವೃತ ಕೀಚಕ ಕ೦ಟಕ ಪಾತಕ
ನೀಚ ಕಿರಾತಕ ಘಾತುಕನು
ಅಮಲಾಧಿತ ಲೋಚನ ಲೋಟಪತೆ
ವಿಜಯ್ ಮಲ್ಯ ಖೊಡೆ ಕೃತ ತೈಲಪತೆ

ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು
ನಿನ್ನ ಲಿವರಿಗೆ ಪವರಿಗೆ ಡೇ೦ಜರಿದು
ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡು ಕಣೋ
ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ

ಉಗಿತೀನ್ ಒದಿತೀನ್ ಹೊಡಿತೀನ್ ಬಡಿತೀನ್
ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ
ಪ್ರತಿ ನೈಟು ನೀ ಟೈಟು ದಿನಾ ಬರಿ ಫೈಟು
ಇದ್ಯಾರದು ಫೇಟು ಇದೇನು ವ್ಯಥೆ

ಪಾಪಿಷ್ಟ ಅನಿಷ್ಟ ಕನಿಷ್ಟ ನೀ ದುಷ್ಟ
ನೀ ಕಷ್ಟ ನೀ ಭ್ರಷ್ಟ ಸ್ಯಾಡಿಷ್ಟ ಕಣೋ
ನಿನ್ನ ವೈಫಿಗೆ ಲೈಫಿಗೆ ಚೊ೦ಬು ಕಣೋ
ನಿನ್ನ ಕೊನೆಯ ಸವಾರಿಗೆ ಬೊ೦ಬು ಕಣೋ

ನಿನಗ೦ ಸುಲಭ೦ ಸುಕೃತ೦ ಸರಸ೦
ಸತಿಗು೦ ಸುತಗು೦ ಸ್ವಗೃಹ೦ ನರಕ೦
ಸತತ೦ ಕಲಹ೦ ನಿರುತ೦ ವಿರಸ೦
ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸ೦ ಟ್ರಬಲ್ ಸ೦

ಶೂರಾದಿಶೂರ೦ ಬೀರಾದಿಬೀರ೦ ಪೂರಾ ಶರೀರ೦
ಬರೀ ರ೦ ಬರೀ ರ೦
ಸೋಡಾ ದಿ ಪಾನ೦ ಸಿಗರೇಟು ಧೂಮ೦ ಶ೦ಖಾದಿ ವಾದ್ಯ೦
ಬಬ೦ ಬ೦ ಬಬ೦ ಬ೦

ದಿನಾ ಸ೦ಕಟೇಶ೦ ನೋ ಆಸ್ಕರ್ ನೊ ಟೆಲ್ಲರ್
ಭಯ೦ಭೀತಿ ಜೀರೋ ನೊ ಯ೦ಗರ್ ನೋ ಯಲ್ಡರ್
ಬಡಕ್ಕೊ೦ಡೆ ಮಗನೇ ಲಿಮಿಟ್ಟೋ ಲಿಮಿಟ್ಟು
ಕೇಳಲಿಲ್ಲ ಈಗ ವಾಮಿಟ್ಟೋ ವಾಮಿಟ್ಟು

ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಬಿದ್ದಿರುವೆ ಯಾಕೆ ಎದ್ದೇಳೊ ಪಾಪಿ ನಿನಗೆ ಇದೇ ಸುಪ್ರಭಾತ೦


೨. ಆಫೀಸಿಗೆ ಹೋಗುವಾಗ ಜಿಮ್ಮಿ ಯಾವಾಗಲೂ ತನ್ನ ಹ್ಯಾಂಡ್ ಬ್ಯಾಗಿನಲ್ಲಿ ತನ್ನ ಪತ್ನಿ ಸಿಮ್ಮಿಯ ಫೋಟೋ ಇಟ್ಟುಕೊಂಡು ಹೊಗುವುದನ್ನು ಗಮನಿಸಿದ ಸಿಮ್ಮಿ ಆತನ ಬಳಿ ಕೇಳಿದಳಂತೆ . ರೀ ಯಾಕ್ರೀ ನೀವು ದಿನಾಲು ನನ್ನ ಫೋಟೋ ಆಫೀಸಿಗೆ ತಗೊಂಡು ಹೋಗ್ತೀರಾ ?
ಇಲ್ಲ ಕಣೆ ಯಾವುದೇ ರೀತಿಯ ಕಷ್ಟ ಬಂದಾಗ ನಿನ್ನ ಫೋಟೋ ತೆಗೆದು ನೋಡುತ್ತೇನೆ . ನನಗೆ ಸಮಾಧಾನವಾಗುತ್ತದೆ ಎಂದನಂತೆ . ಸಂತಸಗೊಂಡ ಸಿಮ್ಮಿ ನೋಡಿ ನಾನು ಅಷ್ಟು ಗ್ರೇಟ್ ಆಲ್ವಾ . ಥ್ಯಾಂಕ್ಯೂ ರೀ ಅಂದಳಂತೆ .
ಜಿಮ್ಮಿ ಅಲ್ಲ ಕಣೆ ಕಷ್ಟ ಬಂದಾಗ ನಿನ್ನ ಫೋಟೋ ನೋಡಿ ಇಷ್ಟು ದೊಡ್ಡ ಕಷ್ಟ ನಾನು ಅನುಭವಿಸುತ್ತಿದ್ದೇನೆ . ಅದರ ಮುಂದೆ ಈ ಕಷ್ಟ ಯಾವ ಲೆಕ್ಕ ಎಂದು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ ಎಂದನಂತೆ .

ಸೆಂಡ್ ಆಫ್ ಕಮಿಟಿ... ರಿಸೆಪ್ಷನ್ ಕಮಿಟಿ ಆದಾಗ...

ಖ್ಯಾತ ಶಿಕ್ಷಣ ತಜ್ಞ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರು, ತಮ್ಮ ಸಾವಿನ ಬಳಿಕ ತಮ್ಮ ಅಂತ್ಯಕ್ರಿಯೆ ಹೇಗೆ ನಡೆಯಬೇಕು, ತಮ್ಮ ಅಂಗಾಂಗಗಳನ್ನು ಹೇಗೆ ದಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ತಾವೇ ನಿರ್ಧರಿಸಿ ತಮ್ಮ ಆತ್ಮೀಯರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿದ್ದರು.

ಆದರೆ, ಡಾ.ಎಚ್.ನರಸಿಂಹಯ್ಯ ಅವರಿಗೆ ಮೊದಲೇ ಸಮಿತಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದರು. ಆಗ ಎಚ್.ಎನ್. ಹೇಳಿದ್ದು ಏನು ಗೊತ್ತೆ... ಅಲ್ಲ ಇವರನ್ನು ಸೆಂಡ್‌ಆಫ್ ಕಮಿಟಿಗೆ ಮೆಂಬರ್ ಮಾಡಿದ್ರೆ, ನನಗಿಂತ ಮೊದಲೇ ಮೇಲೆ ಹೋಗಿ, ರಿಸೆಪ್‌ಷನ್ ಕಮಿಟಿ ರಚನೆ ಮಾಡಿದ್ದಾರೆ...

(ಈ ಘಟನೆ ಸ್ಮರಿಸಿಕೊಂಡವರು, ಡಾ. ಮಹೇಶ್ ಜೋಶಿ, ಹಿರಿಯ ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು)


ಜೋಕಿನ ಜೋಕು

ಗುಂಡನ ಬಾಸ್ ಗೆ ಜೋಕು ಹೇಳುವ ಚಪಲ. ಆದರೆ ಅವರಿಗೆ ಗೊತ್ತಿದ್ದು ಒಂದೇ ಒಂದು ಕೆಟ್ಟ ಜೋಕು. ಪದೇಪದೇ ಅದನ್ನೇ ಹೇಳುತ್ತಿದ್ದರು. ಆದರೂ ಗುಂಡ ಗಹಗಹಿಸಿ ನಗುತ್ತಿದ್ದ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಗುಂಡನನ್ನು  ಪಕ್ಕಕ್ಕೆ ಕರೆದು ಕೇಳಿದ್ರು. ಎನ್ ಸಾರ್  ಅಷ್ಟು ಜೋರಾಗಿ ನಕ್ತಾ ಇದ್ದೀರಿ. ಆ ಜೋಕು ಕೇಳಿದ್ರೆ ನಗೂನೇ ಬರಲ್ಲ? ಜೊತೆಗೆ ಅವನು ಹೇಳಿದ ಜೋಕೇ ಹೇಳ್ತಾ ಇದ್ದಾನೆ ಆದ್ರೂ  ನೀವು ನಕ್ತಾನೇ ಇದ್ದೀರಿ ಏಕೆ ಎಂದು ಪ್ರಶ್ನಿಸಿದರು.

ಗುಂಡ ಹೇಳಿದ ಏನ್ ಮಾಡ್ಲಿ ಸ್ವಾಮಿ, ಅವರು ನನ್ನ ಬಾಸ್. ನಾನು ಈಗ ನಗದೇ ಇದ್ರೆ ಅವರು ಮತ್ತೆ ಅದೇ ಜೋಕನ್ನು ಇನ್ನೂ ನಾಲ್ಕಾರು ಸಾರಿ ಹೇಳ್ತಾರೆ ಅದಕ್ಕೆ ವಿಧಿ ಇಲ್ಲದೆ ನಕ್ತಾನೇ ಇರ್ತೀನಿ.


ಪುಸ್ತಕ ಓದಿ ಸೊಸೆ ಮಾಡಿದ ಅಡುಗೆ...

ಮದುವೆಯಾಗಿ ಮನೆ ತುಂಬಿಸಿಕೊಂಡ ಸಾಫ್ಟ್‌ವೇರ್ ಸೊಸೆಗೆ ಅಡಿಗೆ ಮಾಡಕ್ಕೆ ಬರಲ್ಲ ಅಂತ ಅತ್ತೆ ದಿನಾ ದೂರುತ್ತಿದ್ರು. ಕೊನೆಗೊಂಡು ದಿನ ಸೊಸೆ ಒಂದು ಅಡುಗೆ ಪುಸ್ತಕ ತಂದು. ಅಡುಗೆ ಮಾಡಲು ಆರಂಭಿಸಿದಳು. ಚಪಾತಿ ಹಿಟ್ಟು ಕಲೆಸಿ, ಅದರ ಮೇಲೆ ದೇವರ ಗೂಡಲ್ಲಿದ್ದ ಗಂಟೆ ತೆಗೆದು ಇಟ್ಟಳು.

ಇದರಿಂದ ಸಿಡಿಮಿಡಿಗೊಂಡ ಅತ್ತೆ ಕೇಳಿದ್ರು. ಏನಮ್ಮ ದೇವರ ಪೂಜೆಗೆ ಬಾರಿಸೋ ಗಂಟೆನ ತೆಗೆದು ಚಪಾತಿ ಹಿಟ್ಟಿನ ಮೇಲೆಕೆ ಇಟ್ಟೆ. ನಿಮಗೆ ಒಂಚೂರೂ ಮಡಿ, ಮೈಲಿಗೆ ಇಲ್ಲ.

ಸೊಸೆ ಅಷ್ಟೇ ನಯವಾಗಿ ಉತ್ತರಕೊಟ್ಲು. ಪುಸ್ತಕದಲ್ಲಿ ಚಪಾತಿ ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ ಬರೆದಿದ್ದಾರೆ ಗೊತ್ತಾ....


ಅದಕ್ಕೆಲ್ಲಾ ಹೆದರಲ್ಲ

೭೫ ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ. ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ ೨೧ ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ.

ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!!! ತಾತ ಉತ್ತರ ಕೊಟ್ಟ ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಕ್ತೀನಿ.


ಅಮ್ಮನಿಗೆ ಮಗಳ ಸಜೆಷನ್

ಖ್ಯಾತ ಚಿತ್ರನಟಿಯೊಬ್ಬಳು ಸತತ ಹದಿನೆಂಟನೇ ಬಾರಿ ತನ್ನ ೧೮ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಈ ಶುಭ ಸಂದರ್ಭದಲ್ಲಿ ಆಕೆಯ ೧೮ ವರ್ಷದ ಮಗಳೊಂದು ಸಜೆಷನ್ ಕೊಟ್ಲು. ಮಮ್ಮಿ ಆಟ್‌ಲೀಸ್ಟ್ ನನಗಿಂತ ಒಂಬತ್ತು ತಿಂಗಳಾದ್ರೂ ನಿನ್ನ ವಯಸ್ಸು ಜಾಸ್ತಿ ಹೇಳು....


ಅರೇಂಜ್ ಲೋಕಲಿ...

ಅದೊಂದು ಹಳ್ಳಿಯ ಬ್ಯಾಂಕ್, ಸ್ಟಾಫ್ ಸಂಖ್ಯೆ ಕಡಿಮೆ. ಯಾರಾದರೂ ರಜೆ ಹೋದರೆ, ಬದಲಿ ವ್ಯವಸ್ಥೆ ಮಾಡುವುದು ವಾಡಿಕೆ. ಒಮ್ಮೆ ಒಬ್ಬ ಉದ್ಯೋಗಿಯ ಹೆಂಡತಿ ಕಾಯಿಲೆ ಮಲಗಿದರು. ಇಂಗ್ಲಿಷ್ ಅಷ್ಟಾಗಿ ಬಾರದ ಆತ ಕೂಡಲೆ ಹೆಡ್ ಆಫೀಸ್‌ಗೆ ಹೀಗೆ ಟೆಲಿಗ್ರಾಂ ಕೊಟ್ಟ... ಸಾರ್ ಮೈ ವೈಫ್ ಈಸ್ ಇಲ್. ಪ್ಲೀಸ್ ಅರೇಂಜ್ ಸಬ್‌ಸ್ಟಿಟ್ಯೂಟ್.. ಹೆಡ್ ಆಫೀಸ್‌ನಿಂದ ಟೆಲಿಗ್ರಾಂ ರಿಪ್ಲೆ ಬಂತು... ಅದರಲ್ಲಿ ಹೀಗೆ ಬರೆದಿತ್ತು... ಸಾರಿ... ಯು.. ಪ್ಲೀಸ್ ಅರೇಂಜ್ ಲೋಕಲಿ...


ಎಲ್ಲಾ ಬಿಡ್ತೀನಿ

ಗುಂಡಾ ಒಂದೇ ಹುಡುಗೀನ ೫ ವರ್ಷದಿಂದ ಪ್ರೀತಿಸ್ತಾ ಇದ್ದ. ಕೊನೆಗೂ ಇಬ್ರೂ ಮದುವೆ ಆಗೋ ನಿರ್ಧಾರ ಮಾಡಿದ್ರು. ಆ ಹುಡುಗಿ ಕೇಳಿದ್ಲು. ನಾನು ನಿನ್ನ ಮದುವೆ ಆಗಕ್ಕೆ ಸಿದ್ಧ ಆದರೆ ನೀನು ಸಿಗರೇಟ್ ಸೇದೋದು ಬಿಡ್ತೀಯಾ? ಗುಂಡ ಓಕೆ ಎಂದ. ಕುಡಿಯೋದೂ ಬಿಡ್ತಾಯಾ ? ಗುಂಡ ವಿ ಇಲ್ಲದೆ ಸರಿ ಎಂದ. ಇಸ್ಪೀಟ್ ಆಡೋದು? ಖಂಡಿತಾ ಬಿಡ್ತೀನಿ ಅಂದ ಗುಂಡ. ಹುಡುಗಿ ಮತ್ತೆ ಕೇಳಿದ್ಲು ನನ್ನ ಮದುವೆ ಆಗಕ್ಕೆ ನೀನು ಇನ್ನೂ ಏನೇನು ಬಿಡ್ತೀಯಾ ? ಗುಂಡ ಹೇಳ್ದ ಮದ್ವೆ ಆಗೋ ಯೋಚನೇನೇ ಬಿಟ್ಟು ಬಡ್ತೀನಿ.



ಮಾರಾಟ

ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ?

ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್‌ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ.



ಈಗೆಷ್ಟೋ ಪರವಾಗಿಲ್ಲ

ಏಕೋಪಾಧ್ಯಾಯ ಶಾಲೆಗೆ ಇನ್‌ಸ್ಪೆಕ್ಟರ್ ಬಂದಿದ್ರು. ಆಗ ಆರನೇ ಕ್ಲಾಸಲ್ಲಿ ಗಣಿತ ಪಾಠ ನಡೀತಿತ್ತು. ಇನ್‌ಸ್ಪೆಕ್ಟರ್ ಕೇಳಿದ್ರು ಏನ್ರೀ ಮೇಸ್ಟ್ರೇ ಹೇಗೆ ಪಾಠ ಮಾಡಿದ್ದೀರಿ. ಮೇಸ್ಟ್ರಂದ್ರು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀನಿ ಸಾರ್. ಬೇಕಾದ್ರೆ ನೀವೇ ಪರೀಕ್ಷೆ ಮಾಡಿ..

ಓಕೆ. ಎಂದ ಇನ್‌ಸ್ಪೆಕ್ಟರ್ ಒಬ್ಬ ಹುಡುಗನ್ನ ಕೇಳಿದ್ರು ನಾಲ್ಕ ನಾಲ್ಕಿ ಎಷ್ಟು.? ಹುಡುಗ ಹೇಳಿದ ೧೬೦೦ ಸಾರ್. ಗಾಬರಿ ಆದ ಇನ್‌ಸ್ಪೆಕ್ಟರ್ ಮತ್ತೊಬ್ಬ ಹುಡುಗನ್ನ ಕೇಳಿದ್ರು ಎಂಟೆಂಟ್ನಿ ಎಷ್ಟೋ ? ಅವ ಹೇಳ್ದ ೬೪,೦೦೦ ಸಾರ್. ಸಿಟ್ಟಾದ ಇನ್‌ಸ್ಪೆಕ್ಟರ್ ಕೇಳಿದ್ರು ಇದೇ ಏನ್ರೀ ಮೇಸ್ಟ್ರೇ ನೀವು ಮಕ್ಳಿಗೆ ಹೇಳಿಕೊಟ್ಟಿರೋದು. ಎಲ್ಲಾ ಸಾವಿರಗಟ್ಲೇ ಹೇಳ್ತಾರಲ್ರೀ.

ಸಮಾಧಾನದಿಂದ ಮೇಸ್ಟ್ರು ಹೇಳಿದ್ರು. ಈಗೆಷ್ಟೋ ಪರವಾಗಿಲ್ಲ ಸಾರ್ ನಾನು ಬಂದ ಹೊಸದ್ರಲ್ಲಿ ಲಕ್ಷಗಟ್ಲೆ ಹೇಳ್ತಿದ್ರು. ನಾನು ಸಾವಿರಕ್ಕೆ ಇಳ್ಸಿದೀನಿ.

ನಾಟಕಕ್ಕೆ ಬರಲು ಕಾರಣ

ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು.  ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಿಂದೇ ಪರ್ವಾಗಿಲ್ಲ..

ಇಬ್ಬರು ಸ್ನೇಹಿತರು ಮಾತಾಡ್ತಾ ಇದ್ರು. ಒಬ್ಬ ಹೇಳ್ದಾ ನೋಡಯ್ಯಾ ಮೊನ್ನೆ ನಾನೂ ನನ್ನ ಹೆಂಡತಿ ಮನೆಗೆ ಬರೋವಾಗ ಸಣ್ಣ ಕಲ್ಲೊಂದು ನನ್ನ ಹೆಂಡತಿ ಕಣ್ಣಿಗೆ ಬಿತ್ತು. ಅದನ್ನ ತೆಗೆಸಕ್ಕೆ ಡಾಕ್ಟ್ರಗೆ ೧೦೦ ರುಪಾಯಿ ಖರ್ಚಾಯ್ತು.ಎರಡನೆಯವ ಹೇಳಿದ ನಿಂದೇ ಪರ್ವಾಗಿಲ್ಲ. ನಿನ್ನ ಹೆಂಡ್ತಿ ಕಣ್ಣಿಗೆ ಕಲ್ಲು ಬಿತ್ತು. ಆದರೆ, ನನ್ನ ಹೆಂಡತಿ ಕಣ್ಣಿಗೆ ರೇಷ್ಮೆ ಸೀರೆ ಬಿತ್ತು. ಅದನ್ನು ತೆಗಸಿಕೊಡಕ್ಕೆ ೫೦೦೦ ಖರ್ಚಾಯ್ತು.

ಯಾರನ್ನೂ ಮುಟ್ಟಲ್ಲ

ಗುಂಡ ಕಟಕಟೆಯಲ್ಲಿ ಸಾಕ್ಷಿ ಹೇಳಲು ಬಂದು ನಿಂತಿದ್ದ. ವಕೀಲರು ಕೋರ್ಟ್‌ನಲ್ಲಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ ಪ್ರಮಾಣ ಮಾಡು ಎಂದರು.

ಕೂಡಲೆ ಗುಂಡ ಹೇಳಿದ. ಬೇಡ ಸ್ವಾಮಿ. ಖಂಡಿತ ಬೇಡ. ನಾನು ಯಾರನ್ನೂ ಮುಟ್ಟಲ್ಲ. ಕಳೆದ ವರ್ಷ ಗೊತ್ತಿಲ್ದೆ ಆ ಲಕ್ಷ್ಮೀನ ಮುಟ್ಟಿ, ಪಂಚಾಯ್ತಿಲಿ ಛಡಿ ಏಟು ತಿಂದಿದ್ದೆ. ಇಲ್ಲಿ ನಾನು ಯಾವ ಗೀತನ್ನೂ ಮುಟ್ಟಲ್ಲ , ನನ್ನ ಬಿಟ್ಟು ಬಿಡಿ, ನಾನು ಹಳ್ಳಿಗೆ ಹೋಗ್ತೀನಿ ಅಂದ.

ನೆಂಟಸ್ಥನ

ಮೀನನ್ನ, ಕನಕ ಕೇಳಿದ್ಲು. ಆ ಕೊನೆ ಮನೆಗೆ ಹೊಸದಾಗಿ ಬಂದಿದ್ದಾರಲ್ಲ ಅವರು ನಿಮಗೆ ನೆಂಟ್ರಾಗಬೇಕಂತೆ ಹೇಗೆ? ಮೀನಾ ಹೇಳಿದ್ಲು... ಓ ಅದ. ಅವರ ಮನೆ ನಾಯಿ ಟಾಮೀನೂ, ನಮ್ಮನೆ ನಾಯಿ ಬ್ರೌನಿನೂ ಅವಳಿ ಜವಳಿ.

ಮನುಷ್ಯನ ಆಯಸ್ಸು - ಏಷ್ಟು - ಏನು?

ಸೃಷ್ಟಿಕರ್ತನಾದ ಬ್ರಹ್ಮದೇವ, ಸೃಷ್ಟಿ ಕಾರ್ಯ ಆರಂಭಿಸಿದ ಹೊಸತರಲ್ಲಿ ಮನುಷ್ಯನಿಗೆ, ಕತ್ತೆಗೆ, ನಾಯಿಗೆ ಹಾಗೂ ಗೂಬೆಗೆ ೪೦- ೪೦ ವರ್ಷ ವಯಸ್ಸು ನಿಗ ಮಾಡಿದನಂತೆ, ಗಾಬರಿಗೊಂಡ ಈ ಮೂರು ಪ್ರಾಣಿಗಳು ಬ್ರಹ್ಮನ ಬಳಗೆ ಡೆಲಿಗೇಷನ್ ಹೋಗಿ, ತಂದೆಯೇ ಮನುಷ್ಯನಿಗೆ ಮಾತು ಹೇಳಿಕೊಟ್ಟಿರುವೆ, ಬುದ್ಧಿ ಕೊಟ್ಟಿರುವೆ ಅವನಿಗೂ ನಮಗೂ ೪೦ -೪೦ ವರ್ಷ ವಯಸ್ಸು ಕೊಟ್ಟರೆ, ಅವನು ನಮ್ಮನ್ನು ಶೋಷಿಸುತ್ತಾನೆ. ದಯಮಾಡಿ ನಮ್ಮ ಅರ್ಧ ಆಯಸ್ಸು ಕಡಿಮೆ ಮಾಡು ಎಂದು ಕೋರಿದವಂತೆ.

ಬ್ರಹ್ಮ ಆಗಬಹುದು. ಆದರೆ ನಿಮ್ಮ ಅರ್ಧ ಆಯಸ್ಸನ್ನು ಮನುಷ್ಯ ತೆಗೆದುಕೊಂಡರೆ ಮಾತ್ರ ಅದು ಸಾಧ್ಯ ಎಂದನಂತೆ. ಪ್ರಾಣಿಗಳೆಲ್ಲ ಮನುಷ್ಯನನ್ನು ಕೋರಿದವಂತೆ.ಮನುಷ್ಯ ಓಕೆ ಎಂದ.

ಅಂದಿನಿಂದ ಕತ್ತೆ, ನಾಯಿ, ಗೂಬೆಗೆ ೨೦ ವರ್ಷವಷ್ಟೇ ಆಯಸ್ಸು. ಮನುಷ್ಯನಿಗೆ ನೂರು. ಅದಕ್ಕೆ ಮನುಷ್ಯ ೪೦ ವರ್ಷ ಮನುಷ್ಯನಾಗೇ ಬದುಕುತ್ತಾನೆ. ೪೦ರಿಂದ ೬೦ ವರ್ಷ ಕತ್ತೆಯದು, ಅದಕ್ಕೆ ಮನೆ ಕಟ್ಟಬೇಕು, ಮಗಳ ಮದುವೆ ಮಾಡಬೇಕು ಎಂದು ಕತ್ತೆಯಂತೆ ದುಡಿಯುತ್ತಾನೆ. ೬೦ರಿಂದ ೮೦ತ್ತು ನಾಯಿಯ ವಯಸ್ಸು, ರಿಟೈರ್ ಬೇರೆ ಆಗಿರುತ್ತಾನೆ, ಮಾಡಲು ಕೆಲಸ ಇಲ್ಲ ಹೀಗಾಗಿ ನಾಯಿಯಂತೆ ಅಲೆಯುತ್ತಾನೆ. ಇನ್ನು ೮೦ರಿಂದ ೧೦೦ ಗೂಬೆಯ ವಯಸ್ಸು, ಕೈಲಾಗದೆ ಮೂಲೆಯಲ್ಲಿ ಗೂಬೆಯಂತೆ ಕುಳಿತಿರುತ್ತಾನಂತೆ.

ಸ್ನೇಹಿತರು

ಖಾಸಗಿ ಟಿ.ವಿ ಚಾನೆಲ್‌ನಲ್ಲಿ ಕೋಟ್ಯಪತಿಯೊಬ್ಬರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಸಂದರ್ಶಕರು ಕೇಳಿದರು. ಬಡವರಾಗಿದ್ದ ನೀವು ಈಗ ಶ್ರೀಮಂತರಾಗಿದ್ದೀರಿ. ನೀವು ಬಡವರಾಗಿದ್ದಾಗ ಇದ್ದ ನಿಮ್ಮ ಹಳೆ ಸ್ನೇಹಿತರು, ಈಗ ಬಂದು ತೊಂದರೆ ಕೊಡುವುದಿಲ್ಲವೇ? ಶ್ರೀಮಂತ ಉತ್ತರಿಸಿದ. ಇಲ್ಲ. ನಾನು ಬಡವನಾಗಿದ್ದಾಗ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ.

ದೀರ್ಘಸೇವೆಯ ರಹಸ್ಯ

ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ.

ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೇಲಸ ಮಾಡ್ತಾ ಇರೋದು.
ಗುಂಡನ ಲಾಜಿಕ್ಕು...

ಗುಂಡ ಕನ್ನಡಕದಂಗಡಿಗೆ ಹೋದ. ಅಂಗಡಿಯವ ಹೇಳಿದ. ನೋಡಿ ಈ ಕನ್ನಡಕ ಹಾಕ್ಕೊಳ್ಳಿ ನೀವು ಏನು ಬೇಕಾದರೂ ಓದಬಹುದು. ಗುಂಡ ಕೇಳಿದ ಈ ಕನ್ನಡಕ ಹಾಕ್ಕೊಂಡ್ರೆ ಇಂಗ್ಲಿಷ್ ಓದಬಹುದಾ? ಅಂಗಡಿಯವ ಹೇಳಿದ, ಇಂಗ್ಲಿಷೇನು, ತೆಲುಗು, ತಮಿಳು, ಕನ್ನಡ ಯಾವ ಭಾಷೆ ಬೇಕಾದ್ರೂ ಓದಬಹುದು. ಗುಂಡ ಹೇಳಿದ ಅಯ್ಯೋ ದೇವ್ರೆ... ಈ ಕನ್ನಡಕ ಹಾಕ್ಕೊಂಡ್ರೆ ಅಷ್ಟೊಂದು ಭಾಷೆ ಓದಬಹುದಾ? ಹಾಗಾದ್ರೆ ನನಗೆ 6 ಕನ್ನಡಕ ಕೊಡಿ, ನಮ್ಮನೇಲಿ ಯಾರಿಗೂ ಓದಕ್ಕೆ, ಬರೆಯಕ್ಕೆ ಬರಕ್ಕಿಲ್ಲ....

ನಗಲು ಅವಕಾಶವನ್ನೇ ಕೊಡಲ್ಲ

ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್‌ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ.

ಕಪ್ಪಗೆ ಮಾಡು...

ಎಪ್ಪತ್ತು ವರ್ಷದ ಬೊಕ್ಕುತಲೆಯ ಬೋಡ ತೈಲ ಕಂಪನಿಯೊಂದರ ಹೊಸ ಕೇಶತೈಲ ಬಳಸಿದ. ಆತನ ತಲೆಯಲ್ಲಿ ನಾಲ್ಕು ಬಿಳಿ ಕೂದಲು ಮೊಳೆತೇ ಬಿಟ್ಟವು. ಬಹಳ ಸಂತೋಷದಿಂದ ನಾಲ್ಕು ಕೂದಲಿನ ಬೋಡ.. ಕಟ್ಟಿಂಗ್‌ಷಾಪ್‌ಗೆ ಹೋದ. ಈ ಬೋಡನ ನೋಡಿ ನಗು ತಡೆಯಲಾರದ ಕಟಿಂಗ್‌ಷಾಪ್ ಮಾಲಿಕ ಕೇಳ್ದ. ಏನ್ ತಾತಾ ನಾನು ಕೂದಲು ಎಣಿಸಬೇಕೋ ಅಥವಾ ಹೇರ್ ಸೆಟ್ಟಿಂಗ್ ಮಾಡಬೇಕೋ... ತಾತ ಹೇಳಿದ... ಎರಡೂ ಬೇಡ.. ನನ್ನ ಕೂದಲಿಗೆ ಡೈ ಮಾಡು.

ರೋಗಿಗಳ ಬಳಿಯೆಲ್ಲಾ ಒಂದೇ ಕಾದಂಬರಿ..

ಸಾಹಿತಿಯೊಬ್ಬರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ವಾರ್ಡಿನಲ್ಲಿ ಎಲ್ಲ ರೋಗಿಗಳ ಪಕ್ಕದಲ್ಲೂ ಇವರು ಬರೆದ ಕಾದಂಬರಿ ಇತ್ತು. ಇದನ್ನು ನೋಡಿ, ತೀವ್ರ ಆನಂದಗೊಂಡ ಸಾಹಿತಿ ವೈದ್ಯರನ್ನು ಕೇಳಿದರು. ಏನ್‌ಸಾರ್ ಈ ಆಸ್ಪತ್ರೇಲಿ ಎಲ್ಲರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದೆಯೇ.. ವೈದ್ಯರು ಹೇಳಿದರು. ಅದರ ಗುಟ್ಟೇ ಬೇರೆ. ಇವರೆಲ್ಲಾ ನಿದ್ದೇ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್‌ಲೆಟ್ ಕೊಟ್ರು ಇವರಿಗೆ ನಿದ್ದೇನೆ ಬರ್ತಿರಲಿಲ್ಲ. ಈ ಕಾದಂಬರಿ ಕೊಟ್ವಿ ನೋಡಿ ಎಲ್ಲರೂ ಐದೇ ನಿಮಿಷಕ್ಕೆ ನಿದ್ದೇ ಮಾಡ್ತಾರೆ...

ವೆರಿ ಅಕೇಶನಲಿ

ಹೈಫೈ ಹುಡುಗಿಯೊಬ್ಬಳು ಕಾಲೇಜಿಗೆ ಸೇರಲು ಅಪ್ಲಿಕೇಷನ್ ಭರ್ತಿ ಮಾಡುತ್ತಿದ್ದಳು. ನೇಮ್, ಅಡ್ರೆಸ್ ಫಿಲ್ ಮಾಡಿದ ಬಳಿಕ sex ಎಂದಿದ್ದ ಕಾಲಂನಲ್ಲಿ ಏನು ಬರೆಯಬೇಕು ಎಂದು ಯೋಚಿಸಿ, ಯೋಚಿಸಿ ಕೊನೆಗೆ ಹೀಗೆ ಬರೆದಳು. ವೆರಿ ಅಕೇಶನಲಿ.

ಅಭ್ಯಾಸಬಲ

ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.

ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ  ಕೆಳಗೆ ಇಳಿದು  ಸ್ವಲ್ಪ ದೂರ ತಳ್ಳಿ..  ಎಂಜಿನ್ ಆಫ್ ಆಗಿದೆ

ಪೆದ್ದ ಗುಂಡನ ತರ್ಕ

ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ.

ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್‌ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದುಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.

No comments:

Post a Comment