Thursday, April 17, 2014

          ಕನ್ನಡ ನಾಡು
ಕೈ ಮುಗಿದು ನಮಿಸಿ ಇದು ಕನ್ನಡದ ನಾಡು
ಕವಿ ಕಲಿಗಳು ಹುಟ್ಟಿ ಬೆಳದೆ ಹೆಮ್ಮೆಯ ಕಲಿನಾಡು
ಶ್ರೀಗಂಧದ ಕಂಪುಳ್ಳ ಚೆಂದದ ಸಿರಿ ನಾಡು
ಸಿರಿವಂತಿಕೆ ಚಿನ್ನ ಬೆಳೆವ ಚಿನ್ನದ ಕರು ನಾಡು

ಕಸ್ತೂರಿಯ ಕಂಪು ನಮ್ಮ ಕನ್ನಡದ ಭಾಷೆ
          ಕೋಟಿ ಕೋಟಿ ಜನರ ಮದ್ಯೆ ಗುನುಗುವ ಈ ಭಾಷೆ
          ಶತಮಾನದ ಇತಿಹಾಸದ ಶ್ರೇಷ್ಠವಾದ ಭಾಷೆ
        ಸೀಮೆ ದಾಟಿ ಮೆರೆಯುತ್ತಿರುವ ಸಿರಿವಂತದ ಭಾಷೆ

ಜ್ನಾನಪೀಠ ಹೆಚ್ಚು ಪಡೆದ ಭಾಷೆ ನಮ್ಮ ಕನ್ನಡ
ಜ್ನಾನ ದಾಹ ಇಂಗಿಸುವ ದೇಶ ಭಾಷೆ ಕನ್ನಡ
ಜಾತಿ ಕುಲವ ಮೆಟ್ಟಿ ಮೆರೆವ ಭವ್ಯ ಭಾಷೆ ಕನ್ನಡ
ಜವರಾಯನ ಹಿಮ್ಮೆಟ್ಟಿಸುವ ಧೈರ್ಯಭಾಷೆ ಕನ್ನಡ

ಸರ್ವಜ್ನನ ಸತ್ವದ ಸಿರಿ ಸಾರ್ವಭೌಮ ನಾಡು
ಬಸವಣ್ಣನ ಬಾವೈಕ್ಯದ ಬಾಂಧವ್ಯದ ನಾಡು
ಹೆಸರಿನಲ್ಲಿ ಕರುಣೆಯುಳ್ಳ ಕನ್ನಡ ಸಿರಿ ನಾಡು
ಉಸಿರಾಯಿತು ನಮ್ಮೆಲ್ಲರ ಹೆಮ್ಮೆಯ ಕರುನಾಡು

ಕುವೆಂಪು ಕಂಡ ನಾಡು ಕರುನಾಡ ಕನ್ನಡ ನಾಡು
ನಾಕುತಂತಿ ಮೀಟುತಿರುವ ಬೇಂದ್ರೆಯ ಸಿರಿನಾಡು
ಮೂಕಜ್ಜಿಯು ಕನಸು ಕಂಡ ಕಾರಂತರ ನಾಡು
ಕನ್ನಡವೇ ಆಸ್ತಿಯೆಂದ ಮಾಸ್ತಿಯ ಮಹಾನಾಡು
ಭರತಮಾತೆ ತಿಲಕತೊಟ್ಟ ಗೋಕಾಕರ ನಾಡು
ಸಾಹಿತ್ಯದ ಸಿರಿಹೊತ್ತ ಮೂರ್ತಿಯ ಸವಿನಾಡು
ಸಮಗ್ರತೆಯ ಸಫಲವಾದ ಗಿರೀಶರ ಗಿರಿನಾಡು
ಚಂದ್ರನನ್ನೇ ಶೇಖರಿಸಿದ ಚಂದದ ಸಿರಿನಾಡು

ಕಾವೇರಿ ಹರಿಯುತ್ತಿರುವ ಪುಣ್ಯಭೂಮಿ ನಮ್ಮದು
ಕಾವಿತೊಟ್ಟ ಋಷಿಮುನಿಗಳ ಸ್ವರ್ಗ ಭೂಮಿ ನಮ್ಮದು
ದಿಟ್ಟ ದೀರ ಯೋದರಗಳ ಯೋಗ ಭೂಮಿ ನಮ್ಮದು
ದಿಕ್ಕು ದೆಸೆಗೆ ಕರುಣೆ ತೋರೋ ದಿವ್ಯ ಭೂಮಿ ನಮ್ಮದು
ಬಂಗಾರವ ಬೆಳೆಯಿತ್ತಿರುವ ಸ್ವರ್ಣ ಭೂಮಿ ನಮ್ಮದು
ಭಾವೈಕ್ಯದಿ ಮೆರೆತ್ತಿರುವ ಭವ್ಯ ಭೂಮಿ ನಮ್ಮದು
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014

No comments:

Post a Comment