Thursday, April 17, 2014

ಬಾನಲಿ ಹಾರುವ ಬಣ್ಣದ ಗಿಳಿಯೇ
ಬಾಗಿಲ ಬಳಿಗೆ ನೀ ಬಾರೆ
ಅಮ್ಮನು ಕೊಟ್ಟ ಕಾಳನು ಕೊಡುವೆನು
ಹರುಷದಿ ಹತ್ತಿರ ಬಾ ಬಾರೆ
ತಮ್ಮನ ಜೊತೆಯಲ್ಲಿ ತಿಂಡಿಯ ತಿನಿಸುವೆ
ಒಮ್ಮೆಲೆ ಜಾರುತ ಬಳಿ ಬಾರೆ
ಹಸುರಿನ ರೆಕ್ಕೆಯ ಬಡಿಯುತ್ತಾ ಬಾರೆ
ಕೆಂಪನೆ ಕೊಕ್ಕನು ಸವರುತ್ತಾ ಬಾರೆ
ಬೆಳ್ಳಿಯ ಪಂಜರ ಬಳಿಯಲ್ಲಿಲ್ಲ
ಹೆದರದೆ ಹತ್ತಿರ ನೀ ಬಾರೆ
ತಿಂಡಿಯ ತಿಂದು ನೀರನು ಕುಡಿದು
ಪುರ್ರನೆ ಬಾನಿಗೆ ನೀ ಹಾರೆ
: - ಕಾವೆಂಶ್ರೀನಿವಾಸಮೂರ್ತಿ
   ಬೆಂಗಳೂರು
      ದಿನಾಂಕ : 25.03.2014




No comments:

Post a Comment