Thursday, April 17, 2014

ಆತ್ಮೀಯ ಕನ್ನಡ ಬಂಧುಗಳೇ
ಇಂದು ನಾವಿರುವುದು ಭಾರತ ಮಾತೆಯ ಹೆಮ್ಮೆಯ ಕನ್ನಡ ನಾಡಿನಲ್ಲಿ, ಪ್ರಕೃತಿಯ ಸೊಬಗಿನ ಗಂಧದ ನಾಡು, ನಾವು ಆಡುವ ನುಡಿ ಅತಿ ಹೆಚ್ಚು  ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡ ನುಡಿ, ಪುರಾತನ ದ್ರಾವಿಡ ಭಾಷೆಗಳಲ್ಲೊಂದಾದ ಹೆಮ್ಮಯ ನಮ್ಮ ಕನ್ನಡ ಭಾಷೆ, ಬಂಧುಗಳೇ ಸಾವಿರಾರು ವರ್ಷಗಳ ಹಿಂದೆ ನಮ್ಮನಾಳಿದ ಅರಸರ ಮಾತೃ ಭಾಷೆ, ಭಾಷಾ ಸಾಹಿತ್ಯದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ನಮ್ಮ ಹೆಮ್ಮೆಯ ಕನ್ನಡ ಭಾಷೆ, ಪ್ರಪಂಚದಲ್ಲಿ ಮೊಟ್ಟ ಮೊದಲ ಭಾರಿಗೆ ಶಬ್ದಕೋಶ ಹೊಂದಿದ್ದು ಕ್ರಿ.ಶ, ೬ ನೇಶತಮಾನದಲ್ಲಿ ನಮ್ಮನಾಳಿದ ಗ್ರೀಕ್ ರ ಆಡಳಿತ ಭಾಷೆಯಾಗಿತ್ತು, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಹೆಮ್ಮಯ ಭಾಷೆ ಇಂದು ಅಧೋಗತಿಗೆ ಬಂದಿದೆ  ಬಂಧುಗಳೇ ಇದಕ್ಕೆ ಅಕ್ಷರಃ ನಾವೇ ಕಾರಣರು ಅಂದರೆ ತಪ್ಪಾಗಲಾರದು, ಜಾಗತಿಕ ನೆಪದಲ್ಲ ನಮ್ಮ ಸಂಸ್ಕೃತಿಯನ್ನಷ್ಟೆ ಅಲ್ಲದೆ ನಮ್ಮ ಭಾಷೆಯನ್ನು ಕೂಡ ನಾವು ಕಡೆಗೆಣಿಸಿದ್ದೇವೆ, ಹಂತ ಹಂತವಾಗಿ ಕಡೆಗೆಣಿಸಿ ಕೊನೆಗೊಮ್ಮೆ ಸಂಪೂರ್ಣ ನಾಶವಾದಗ ಪಶ್ಚಾತಪ ಪಡುವಂತ ಪರಿಸ್ಥಿತಿ ನಮ್ಮದಾಗಿಲಿದೆ. ಬಂಧುಗಳೇ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಜೀವನ ಶೈಲಿ ಬದಲಾಗಿದೆ, ನಮ್ಮ ವೇಷ ಭೂಷಣ ಗಳು ಬದಲಾಗಿದೆ ಇದಕ್ಕೆಲ್ಲ ಆ ಸಂಸ್ಕೃತಿಯ ಮೇಲಿನ ಅತಿಯಾದ ವ್ಯಾಮೋಹ,

ಬಂಧುಗಳೇ ನಮ್ಮ ಭಾರತದ ಇತಿಹಾಸವೇ ಹೀಗೆ ನಮ್ಮದನ್ನು ಮರೆತು ನಮ್ಮದ್ದಲ್ಲದ್ದನ್ನು ಪ್ರೀತಿಸುವ ನಾವು ಕೊನೆಗೊಮ್ಮೆ ನಮ್ಮದಕ್ಕೆ ಹೋರಾಡುವಂತ ಪರಿಸ್ಥಿತಿ,ಇದಕ್ಕೆ ನಮ್ಮ ಕನ್ನಡನಾಡು ಹೊರತಾಗಿಲ್ಲ.

ಕನ್ನಡ ನಾಡಿನಲ್ಲಿ ಅಪ್ರತಿಮ ವೀರರು, ಸಾಹಿತ್ಯ ಪ್ರೇಮಿಗಳು, ದೇಶ ಪ್ರೇಮಿಗಳು, ಕವಿಗಳು, ಕಲೆಗಾರರು, ಜನಿಸಿದ್ದಾರೆ ಹಲವಾರು ಸಾಧನೆಗಳನ್ನು ಮಾಡಿದ್ದಾರೆ, ಸಾವಿರಾರು ವರ್ಷಗಳ ಇತಿಹಾಸವಿದೆ ಆದರೆ ಇತ್ತೀಚಿಗೆ ನಮ್ಮ ಕನ್ನಡದ ಗತಿ ದೇವರೆ ಬಲ್ಲ.

ನಮಗೆ ನಮ್ಮ ಕನ್ನಡ ಭಾಷೆ ಬಿಟ್ಟು ಬೇರೆಲ್ಲ ಭಾಷೆ ಬೇಕು. ತಮಿಳುನಾಡಿನಲ್ಲಿ ತಮಿಳಿಗೆ ಅಗ್ರ ಸ್ಥಾನ, ಅಂದ್ರದಲ್ಲಿ ತೆಲುಗು ಭಾಷೆಗೆ ಅಗ್ರ ಸ್ಥಾನ, ಮಲಾಯಳಿಗಳ ಭಾಷಾ ಪ್ರೇಮಕ್ಕೆ ಬೇರೆ ಯಾರು ಸಾಟಿಯಿಲ್ಲ ಅದರೆ ನಮ್ಮ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಕೊನೆಯ ಸ್ಥಾನ ಅದೂ ನಮ್ಮಿಂದಲೇ, ಬೇರೆ ಭಾಷಿಕರಿಗೆ ಕನ್ನಡ ಕಲಿಸುವುದು ಅಥವಾ ಕಲಿಯುವ ವಾತವರಣ ಕಲ್ಪಿಸುವುದು ಬಿಟ್ಟು ನಾವು ಅವರವರ ಭಾಷೆಯಲ್ಲಿ ಮಾತನಾಡಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದೇವಿ,

ಕನ್ನಡ ಭಾಷೆಯ ಇಂದಿನಿ ಈ ಸ್ಥಿತಿಗೆ ನಮ್ಮ ಕನ್ನಡ ಚಲನಚಿತ್ರಗಳ ಪಾತ್ರ ಹೆಚ್ಚು ಎನ್ನುವುದು ನನ್ನ ಅಭಿಪ್ರಾಯ, ತಮಿಳುನಾಡು, ಆಂದ್ರ ಮತ್ತು ಕೇರಳದಲ್ಲಿ ನಮ್ಮ ಕನ್ನಡ ಚಲನಚಿತ್ರಗಳ ಪ್ರದರ್ಶನ ಅವರವರ ಭಾಷೆಗೆ ತರ್ಜುಮೆಗೊಂಡು ಪ್ರದರ್ಶಿತವಾಗುತ್ತದೆ. ಅಲ್ಲಿಯೂ ನಮ್ಮ ಕನ್ನಡದ ಪ್ರಖ್ಯಾತ ನಟ ನಟಿಯರ ಅಭಿಮಾನಿಗಳಿದ್ದಾರೆ, ಆದರೆ ನಮ್ಮ ರಾಜ್ಯದಲ್ಲಿ  ಬೇರೆ ಭಾಷೆಯ ಚಿತ್ರಗಳು ಮೂಲ ಭಾಷೆಯಲ್ಲೇ ಪ್ರದರ್ಶಿತಾವಾಗುತ್ತವೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ಕನ್ನಡ ತರ್ಜುಮೆಯಾಗುವುದಿಲ್ಲ ಇದಕ್ಕೆ ನಮ್ಮ ಪ್ರಜ್ನಾವಂತರು ಹೇಳುವುದು ಇದರಿಂದ ನಮ್ಮ ಸಂಸ್ಕೃತಿಗೆ ದಕ್ಕೆಯಾಗಿತ್ತದೆ ಅಂತ, ಬಂಧುಗಳೆ ಬೇರೆ ರಾಜ್ಯಗಳಲ್ಲಿ ನಮ್ಮ ಕನ್ನಡದ ನಟ ನಟಿಯರ ಅಭಿಮಾನಿಗಳು ಅಲ್ಲಿನ ಭಾಷೆಯನ್ನು ಮಾತನಾಡುತ್ತಾರೆ ಅದಕ್ಕೆ ಅವರು ಹೇಳುವುದು ನನ್ನ ಮೆಚ್ಚಿನ ನಟ ನಮ್ಮ ಭಾಷೆಯಲ್ಲಿ ಮಾತನಾಡುತ್ತಾರೆ ಅಂತ, ಅದೇ ರೀತಿ ನಮ್ಮ ರಾಜ್ಯದಲ್ಲಿ ಬೇರೆ ಭಾಷೆಯ ನಟರ ಅಭಿಮಾನಿಗಳು ನಮ್ಮ ಕನ್ನಡ ಮರೆತು ನಟನ ಚಿತ್ರ ಭಾಷೆಯಲ್ಲಿ ಮಾತನಾಡುತಾರೆ ಇದಕ್ಕೂ ಇವರು ಹೇಳುವುದು ನಮ್ಮ ನೆಚ್ಚಿನ ನಟನ ಭಾಷೆ ನಮಗೆ ಇಷ್ಟ ಅಂತ, ಇದರಿಂದ ಚಿತ್ರಗಳನ್ನು ಡಬ್ ಮಾಡಿವುದರಿಂದ ಆಗದ ಸಂಸ್ಕೃತಿ ಏನು? ಡಬ್ ಮಾಡದೆ ಮೂಲ ಭಾಷೆ ಚಿತ್ರದಿಂದ ಆದ ಪ್ರಯೋಜನವೇನು?

ಇನ್ನೂ ನಮ್ಮ ಪತ್ರಿಕೆಗಳು ಇದಕ್ಕೆ ಹೊರತಾಗಿಲ್ಲ ಮೂಲ ಮತ್ತು ಸ್ವಚ್ಚ ಕನ್ನಡವನ್ನು ಹುಡಕಬೇಕಾಗಿದೆ, ಇತ್ತೀಚಿಗೆ ನಮ್ಮ ಕನ್ನಡದ ಪ್ರಖ್ಯಾತ ಕನ್ನಡ ದಿನ ಪತ್ರಿಕೆಯೊಂದರಲ್ಲಿ ಮಾಂಸ  ಮಟನ್ ಆಗಿದೆ ವಿದ್ಯುತ್ ಕರಂಟ್ ಆಗಿದೆ. ಬಂಧುಗಳೆ ಹೀಗೆ ಹಂತ ಹಂತದಲ್ಲಿ ಕನ್ನಡೀಗರಾದ ನಾವೇ ಕನ್ನಡವನ್ನು ಕಡೆಗೆಣಿಸುತ್ತಿದ್ದೆವಿ.

ನಾಲಿಗೆ ಸೀಳ್ಸಿ ನರಕಕ್ಕಿಳಿಸಿ ಬಾಯ್ ಹೊಲ್ದಾಕಿದ್ರು ಮೂಗನಲ್ಲಿ ಕನ್ನಡ ಪದಗಳನಾಡ್ತೀನಿ ಅನ್ನುವ ರತ್ನನ ಪದಗಳು ಹೀಗೆ ಮರೆತು ಹೋಗಿದೆ, ರಾಷ್ಟ್ರಕವಿ ಕುವೆಂಪು ರವರ " ಕನ್ನಡ ಎನೆ ಕುಣೀದಾಡುವುದೆನ್ನದೆ ಕನ್ನಡ ಎನೆ ಕಿವಿ ನಿಮಿರುವುದು" ಈಗ ಇದಕ್ಕೆ ಬೆಲೇನೆ ಇಲ್ಲದಂತಾಗಿದೆ ಕನ್ನಡ ಭಾಷೆ ತೀರಾ ಅಸಡ್ಡೆಗೊಳಗಾಗಿದೆ, ಶಾಲಾ ಕಾಲೇಜುಗಳಲ್ಲಿ ಆಂಗ್ಲಭಾಷೆ ಕಡ್ಡಾಯವಾಗಿದೆ, ಕನ್ನಡ ಮಾತನಾಡಿದರೆ ದಂಡ ಕೊಡಬೇಕಾದ ಪರಿಸ್ಥಿತಿ ಒದಗಿಬಂದಿದೆ

ಇನ್ನೂ ನಮ್ಮ ಕನ್ನಡ ಪರ ಸಂಘಟನೆಗಳು ಕೇವಲ ಹೆಸರಿಗೆ ಮಾತ್ರ ಇದೆ ಅನ್ನಿಸುತ್ತದೆ ಬಂಧುಗಳೇ ವಿಶ್ವದ ಯಾವುದೇ ಭಾಷೆಯಲ್ಲಿಲ್ಲದ ಕನ್ನಡ ಸಂಘಟನೆಗಳು ನಮ್ಮಲ್ಲಿವೆ ಕನ್ನಡಾಭಿವೃಧ್ಧಿ ಪ್ರಾಧಿಕಾರ, ಗಡಿನಾಡ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಭಾರತ ಕನ್ನಡ ಸಂಘ, ಹೊಯ್ಸಳ ಕನ್ನಡ ಸಂಘ, ಹೀಗೆ ಹಲವಾರು ಸಂಘಟೆನೆಗಳಿವೆ ಆದರೆ ಇವೆಲ್ಲವೂ ಕೇವಲ ನವಂಬರ್ ತಿಂಗಳಿಗೆ ಮೀಸಲು, ಕೇವಲ ನವಂಬರ್ ತಿಂಗಳಿನಲ್ಲಿ ಕನ್ನಡದ ಬಗ್ಗೆ ಮಾತನಾಡಿ ದೊಡ್ಡ ದೊಡ್ಡ ಭಾಷಣ ಬಿಗಿದು ತಿಂಗಳ ಮುಗಿಯುತ್ತಿದ್ದಂತೆ ತೆಪ್ಪಗಾಗುತ್ತದೆ ನಮ್ಮ ಕನ್ನಡ ಪ್ರೇಮ

ಬಂಧುಗಳೇ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಪ್ರಂಪಚದಲ್ಲಿ ವಿನಾಶದ ಅಂಚಿನಲ್ಲಿರುವ ಭಾಷೆಗಳಲ್ಲಿ ನಮ್ಮ ಕನ್ನಡವೂ ಎಂಬ ಅಘಾತಕಾರಿ  ವಿಷಯ ಬಹುಷಃ ನಮ್ಮ ಕನ್ನಡ ಬಂದುಗಳಿಗೆ ಗೊತ್ತಿರಲಿಕ್ಕಿಲ್ಲ ಅಥವಾ ಗೊತ್ತಿದ್ದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲ ನಮ್ಮ ಕನ್ನಡ ಬಂಧುಗಳು

ನನ್ನ ಅತ್ಮೀಯ ಕನ್ನಡ ಬಂಧುಗಳೇ ಏಳಿ ಎಚ್ಚರವಾಗಿ ಕುವೆಂಪು ಹೇಳೀದಂತೆ ಸತ್ತಂತಿಹರನು ಬಡಿದೆಬ್ಬಿಸು ಅನ್ನುವಂತೆ ನಿಮ್ಮನ್ನೀಗ ಬಡಿದೆಬ್ಬಿಸುವ ಅಗತ್ಯವಿಲ್ಲ ನಿಮಗೆ ನೀವೇ ಎದ್ದೇಳಿ ಕನ್ನಡಕ್ಕಾಗಿ ಎದ್ದು ನಿಲ್ಲಿ ಅದರ ಏಳಿಗೆಗಾಗಿ ಶ್ರಮಿಸಿ ಕನ್ನಡ ವಿರೋದಿಗಳನ್ನು ಪ್ರೀತಿಯಿಂದ ಗೆಲ್ಲಿ ಅವರಿಗೆ ಕನ್ನಡ ಕಲಿಸಿ, ಕನ್ನಡಿಗರೆ ಕನ್ನಡವನ್ನು ಉಳಿಸಬೇಡಿ ಬಳಿಸಿ ಹೆಚ್ಚು ಹೆಚ್ಚು ಬಳಿಸಿ ಹೆಮ್ಮರವಾಗಿ ಬೆಳಿಸಿ ಅಖಂಡ ಕರ್ನಾಟಕದಲ್ಲಷ್ಟೆ ಅಲ್ಲದೆ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕನ್ನಡವನ್ನು ಬೆಳಿಸಿ ಕನ್ನಡೇತರ ಸಹೋದರರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಿ , ಸಾವಿರಾರು ಮೈಲಿಗಳ  ಸಾಗರದಾಚೆ ನಮ್ಮ ಕನ್ನಡ ಬಂಧುಗಳ ಕನ್ನಡ ಪ್ರೇಮವನ್ನು ನೋಡೀ ಕಲಿಯಿರಿ
ಜೈಹಿಂದ್ ಜೈ ಕರ್ನಾಟಕ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014


No comments:

Post a Comment